Lavato Highway Toilets: ಹೈವೇಯಲ್ಲಿ ಸ್ವಚ್ಛ ಟಾಯ್ಲೆಟ್ ಕಟ್ಟಲು ಲಕ್ಷ ಲಕ್ಷ ಸಂಬಳದ ಕೆಲಸ ಬಿಟ್ಟ ಯುವಕ

Clean Toilet: ಎಲ್ಲೋ ಪ್ರಯಾಣ ಮಾಡುವಾಗ ಸ್ವಚ್ಛವಾದ ಟಾಯ್ಲೆಟ್ ಸಮಸ್ಯೆ ಎಲ್ಲರೂ ಎದುರಿಸುತ್ತಾರೆ. ಮಹಿಳೆಯರು, ಮಕ್ಕಳೂ ಇದ್ದಾಗ ಇದು ನಿಜಕ್ಕೂ ದೊಡ್ಡ ಸಮಸ್ಯೆ. ಈ ಸಮಸ್ಯೆ ಅರಿತ ವ್ಯಕ್ತಿಯೊಬ್ಬರು ಲಕ್ಷ ಸಂಪಾದಿಸುತ್ತಿದ್ದ ಜಾಬ್​ಗೆ ಟಾಟಾ ಬಾಯ್ ಬಾಯ್ ಹೇಳಿ ಟಾಯ್ಲೆಟ್ ಕಟ್ಟೋ ಕೆಲಸ ಶುರು ಮಾಡಿದ್ದಾರೆ.

ಲೆವೆಟೋ ಟಾಯ್ಲೆಟ್​ನ ಒಳಾಂಗಣ

ಲೆವೆಟೋ ಟಾಯ್ಲೆಟ್​ನ ಒಳಾಂಗಣ

  • Share this:
ಬೆಂಗಳೂರು(ಜು.27): ಎಲ್ಲಾದರೂ ಪ್ರಯಾಣಿಸಿ, ಆದರೆ ಟಾಯ್ಲೆಟ್ (Toilets) ಸಿಗೋದು ಭಾರೀ ಕಷ್ಟ. ಟಾಯ್ಲೆಟ್ ಸಿಕ್ಕಿದರೂ ಶುಚಿಯಾದ ಟಾಯ್ಲೆಟ್ ಸಿಗೋದು ನಿಜಕ್ಕೂ ದೊಡ್ಡ ಸವಾಲು. ವಿಶೇಷವಾಗಿ ಮಹಿಳೆಯರು, ಮಕ್ಕಳು ಪ್ರಯಾಣಿಸುವಾಗ ಟಾಯ್ಲೆಟ್ ಸಮಸ್ಯೆ ತುಂಬಾ ಕಾಮನ್. ಇದೀಗ ಸ್ವಚ್ಛ ಟಾಯ್ಲೆಟ್​​ಗಾಗಿ ಬೆಂಗಳೂರು  (Bengaluru) ವ್ಯಕ್ತಿಯೊಬ್ಬರು ತನ್ನ ಜಾಬ್​ಗೆ ಟಾಟಾ ಬಾಯ್ ಬಾಯ್ ಹೇಳಿದ್ದಾರೆ. ಭಾರತದಲ್ಲಿ ರೋಡ್​ ನೆಟ್​ವರ್ಕ್​ ಸುಧಾರಣೆ ಮತ್ತು ರಸ್ತೆಗಳ ಗುಣಮಟ್ಟದಿಂದ ಈಗ ಜನ ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಬಯಸುತ್ತಾರೆ. ತಮ್ಮ ವೈಯಕ್ತಿಕ ವಾಹನಗಳಲ್ಲಿ ರಸ್ತೆಯ ಮೂಲಕ ಪ್ರಯಾಣಿಸುವವರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವೂ ಕಂಡುಬಂದಿದೆ. ರಸ್ತೆ ಪ್ರಯಾಣ ಕೈಗೊಳ್ಳುವ ಜನರ ಸಂಖ್ಯೆಯ ಹೆಚ್ಚಳವು ಉದ್ಯಮಿಗಳು ಹೆದ್ದಾರಿಗಳಲ್ಲಿ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಲು ಕಾರಣವಾಗಿದೆ. ಆಹಾರದ ವಿಷಯದಲ್ಲಿ, ಆಯ್ಕೆಗಳು ಹೆಚ್ಚುತ್ತಿವೆ.

ಆದರೂ ಒಂದು ಸಮಸ್ಯೆ ಉಳಿದಿದೆ. ಹೆದ್ದಾರಿಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಮತ್ತು ವಿಶ್ರಾಂತಿ ಕೊಠಡಿಗಳ ಕೊರತೆಯಿದೆ ಎಂದು ಜನರು ದೂರುತ್ತಾರೆ. ವಿಕಲಾಂಗರಿಗೆ ಇದು ಇನ್ನೂ ದೊಡ್ಡ ಸವಾಲು. ಇಂಥಹ ಸಂದರ್ಭದಲ್ಲಿ Lavato ಬಹಳ ಆಹ್ಲಾದಕರವಾದ ಅನುಭವವನ್ನು ನೀಡುತ್ತದೆ.

ಟಾಯ್ಲೆಟ್​ನಲ್ಲಿಯೇ ಬ್ಯುಸಿನೆಸ್

Lavato ಒಂದು ಪಾವತಿ ಮಾಡಿ ಬಳಸುವ ಶೌಚಾಲಯವಾಗಿದೆ. ಆದರೆ, Lavato ಅನ್ನು ಸರ್ಕಾರ ಅಥವಾ NGO ಸ್ಥಾಪಿಸಿಲ್ಲ. ಇದು ನವೀನ್ ಸಿಂಗ್ ಅವರ ವ್ಯಾಪಾರ ಉದ್ಯಮವಾಗಿದೆ.

ಮಾರ್ಕೆಟಿಂಗ್ ಎಕ್ಸ್​ಪರ್ಟ್​

ನವೀನ್ ಅವರು ಮಾರ್ಕೆಟಿಂಗ್ ವೃತ್ತಿಪರರಾಗಿದ್ದು, ಅವರು ಲಾವಾಟೊವನ್ನು ಸ್ಥಾಪಿಸುವ ಮೊದಲು ರಿಲಯನ್ಸ್ ಪೆಟ್ರೋಲಿಯಂ, ಐಸಿಐಸಿಐ ಬ್ಯಾಂಕ್, ಅಮೇರಿಕನ್ ಎಕ್ಸ್‌ಪ್ರೆಸ್ ಗ್ರೂಪ್ ಆಫ್ ಕಂಪನಿಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರು ಐಐಎಂ ಬೆಂಗಳೂರಿನಿಂದ ಕಾರ್ಯನಿರ್ವಾಹಕ ಜನರಲ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂ (ಇಜಿಎಂಪಿ) ಆಗಿ ಕೆಲಸ ಮಾಡಿದ್ದಾರೆ.

ಹೆದ್ದಾರಿಗಳಲ್ಲಿ ಶೌಚಾಲಯಗಳ ಕೊರತೆಯು ಒಂದು ದೊಡ್ಡ ಸಮಸ್ಯೆಯಾಗಿದೆ. ರಸ್ತೆಯಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದೆ. ಆದರೂ ನಿಮಗೆ ಯೋಗ್ಯವಾದ ಶೌಚಾಲಯ ಸಿಗುತ್ತಿಲ್ಲ. ನಾನು ಈ ನೋವಿನ ಬಿಂದುವನ್ನು ನಿಭಾಯಿಸಲು ಹೊರಟಿದ್ದೇನೆ ಎಂದಿದ್ದಾರೆ.

ಅವರು ಮೊದಲ ಔಟ್ಲೆಟ್ ಅನ್ನು ಸ್ಥಾಪಿಸಿದರು. 2018ರಲ್ಲಿ ಮೊದಲ ಶೌಚಾಲಯ ಆರಂಭಿಸಿದರು.

ಇದನ್ನೂ ಓದಿ: Power Bill: ಒಂದೇ ತಿಂಗಳಲ್ಲಿ 3419 ಕೋಟಿ ಬಿಲ್! ಶಾಕ್‌ಗೆ ಒಳಗಾಗಿ ಆಸ್ಪತ್ರೆ ಸೇರಿದ ಮನೆ ಯಜಮಾನ!

ಈ ಸ್ಥಳದ ಕುರಿತು ಜನರೂ ಉತ್ತಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಸಂಬಂಧಿಕರಿಂದ ಈ ಟಾಯ್ಲೆಟ್ ಕುರಿತು ತಿಳಿದು ಈ ಟಾಯ್ಲೆಟ್​ಗೆ ಬಂದ ಜನ ನಿಜಕ್ಕೂ ಇದು ಉತ್ತಮ ಟಾಯ್ಲೆಟ್, ಶುಚಿಯಾಗಿದೆ, ಹಿರಿಯ ನಾಗರಿಕರಿಗೆ ಬಳಸಲು ಸುಲಭವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. ಅದೇ ರೀತಿ ಮಹಿಳೆ ಮಕ್ಕಳಿಗೆ ಅತ್ಯಂತ ಸೌಲಭ್ಯ ನೀಡುವ ಈ ಟಾಯ್ಲೆಟ್​ ನಿಜಕ್ಕೂ ಪ್ರಯಾಣಿಕರಿಗೆ ಅಗತ್ಯವಾಗಿದೆ. ಇಂಥಹ ಆರಂಭಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದಿದ್ದಾರೆ.

ಬಹಳಷ್ಟು ಜನರು ಇದನ್ನು ಪ್ರೋತ್ಸಾಹಿಸುವಂತೆ ಕೇಳಿಕೊಂಡಿದ್ದು ಈ ಟಾಯ್ಲೆಟ್ ಬಳಕೆಯೂ ಒಂದು ಉತ್ತಮ ಅನುಭವ ಎಂದು ಹೇಳಿದ್ದಾರೆ. ಶುಚಿತ್ವಕ್ಕೆ ಹೆಚ್ಚಿನ ಕಾಳಜಿ ನೀಡುತ್ತಿದ್ದು, ವಿಶೇಷವಾಗಿ ಕೊರೋನಾ ಸಮಯದಲ್ಲಿ ಹೆಚ್ಚಿನ ಹೈಜೀನ್ ನೀಡಿದ್ದು ಇದು ಜನರ ಮೆಚ್ಚುಗೆಗೆ ಕರಣವಾಗಿದೆ.

ರಸ್ತೆಯಲ್ಲಿ ನಿಂತು ತಿನ್ನಬೇಕಿಲ್ಲ

ಬಹಳಷ್ಟು ಜನರು ಪ್ರಯಾಣಿಸುವಾಗ ತಮ್ಮದೇ ಆಹಾರ ತಯಾರಿಸಿಕೊಂಡು ಹೋಗುತ್ತಾರೆ. ಒರಗಿನ ಆಹಾರವನ್ನು ಅವಾಯ್ಡ್ ಮಾಡಲು ಬಯಸುವವರು ಊಟವನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ನೀವು ಬಾಕ್ಸ್ ತೆಗೆದುಕೊಂಡು ಹೋದರೂ ಅದನ್ನು ತಿನ್ನಲು ಸೂಕ್ತವಾಗ ಸ್ಥಳ ಸಿಗುವುದಿಲ್ಲ. ಆದರೆ ಇಲ್ಲಿ ಅಂಥಹ ಪ್ರಯಾಣಿಕರಿಗೆ ಕುಟುಂಬ ಸಮೇತ ಕುಳಿತು ಊಟ ಮಾಡುವ ಅವಕಾಶವೂ ಇದೆ. ಜನರು ಆರಾಮವಾಗಿ ಬಂದು ತಮ್ಮ ಊಟ ಮಾಡಬಹುದು.

ಇದನ್ನೂ ಓದಿ:Bengaluru To Mumbai: ಬೆಂಗಳೂರಿನಿಂದ ಮುಂಬೈ ಪ್ರಯಾಣ ಇನ್ನಷ್ಟು ಸಲೀಸು!

ರಸ್ತೆ ಬದಿ ಕಾರು ನಿಲ್ಲಿಸಿ ಮಲಗಬೇಕಿಲ್ಲ

ಪ್ರಯಾಣಿಸುವಾಗ ನೀವು ಸುಸ್ತಾಗುತ್ತೀರಿ. ಸ್ವಲ್ಪ ಕಾರು ನಿಲ್ಲಿಸಿ ಮಲಗೋಣ ಎಂದು ಕೊಳ್ಳುತ್ತೀರಿ. ಅಥವಾ ಬೈಕ್ ನಿಲ್ಲಿಸಿ ಮೊಬೈಲ್ ಬಳಸುತ್ತೀರಿ. ಆದರೆ ಇದು ಅಪಾಯಕಾರಿ, ಹಾಗೆಯೇ ಬಿಸಿಲಿನಲ್ಲಂತೂ ತುಂಬಾ ಕಷ್ಟದ ಕೆಲಸ. ಅಂಥಹ ಸಂದರ್ಭದಲ್ಲಿ ನೀವು ಆರಾಮವಾಗಿ ನಿಮ್ಮ ವಾಹನವನ್ನು ನಿಲ್ಲಿಸಿ ಇಲ್ಲಿ ರೆಸ್ಟ್ ಮಾಡಬಹುದು. ಮಲಗಲು ಸುಸಜ್ಜಿತವಾದ ಹಾಸಿಗೆ ವ್ಯವಸ್ಥೆಯೂ ಇಲ್ಲಿದೆ.
Published by:Divya D
First published: