Viral Video: ಊರೊಳಗೆ ಬಂದ ಆನೆಯ ಬಾಲ ಜಗ್ಗಿದ ಯುವಕ; ನೋವಿನಿಂದ ಘೀಳಿಟ್ಟ ಗಜರಾಜ ಮಾಡಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಪಶ್ಚಿಮ ಬಂಗಾಳದ ವಿಡಿಯೋವೊಂದು ವೈರಲ್ ಆಗಿದ್ದು, ಗ್ರಾಮದೊಳಗೆ ಬಂದ ಆನೆಯ ಬಾಲವನ್ನು ಎಳೆದು, ಅದಕ್ಕೆ ಹಿಂಸೆ ನೀಡುತ್ತಿರುವುದನ್ನು ವಿಡಿಯೋ ಮಾಡಿಕೊಳ್ಳಲಾಗಿದೆ.

ಆನೆಯ ಬಾಲ ಜಗ್ಗುತ್ತಿರುವ ಯುವಕ

ಆನೆಯ ಬಾಲ ಜಗ್ಗುತ್ತಿರುವ ಯುವಕ

  • Share this:
ಪ್ರಾಣಿಗಳೆಂದರೆ ಕೆಲವರಿಗೆ ಇಷ್ಟ, ಇನ್ನು ಕೆಲವರಿಗೆ ಭಯ. ಆ ಭಯದಿಂದಲೇ ಹಲವು ಜನ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಾರೆ, ಅವುಗಳಿಗೆ ಹಿಂಸೆ ನೀಡುತ್ತಾರೆ. ಆದರೆ, ಮೂಕಪ್ರಾಣಿಗಳು ತಿರುಗಿಬಿದ್ದರೆ ಏನಾಗುತ್ತದೆ? ಆ ಪ್ರಾಣಿಗಳನ್ನು ಹಿಂಸೆ ಮಾಡುವುದು ಸರಿಯಾ? ಎಂದು ಒಮ್ಮೆ ಕೂಡ ಯಾರೂ ಯೋಚಿಸುವುದಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಪಶ್ಚಿಮ ಬಂಗಾಳದ ವಿಡಿಯೋವೊಂದು ವೈರಲ್ ಆಗಿದ್ದು, ಗ್ರಾಮದೊಳಗೆ ಬಂದ ಆನೆಯ ಬಾಲವನ್ನು ಎಳೆದು, ಅದಕ್ಕೆ ಹಿಂಸೆ ನೀಡುತ್ತಿರುವುದನ್ನು ವಿಡಿಯೋ ಮಾಡಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳದ ಈ ವಿಡಿಯೋ ಬಗ್ಗೆ ಟ್ವಿಟ್ಟರ್​ನಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ರೀತಿ ಮುಂದೊಂದು ದಿನ ಮನುಷ್ಯರಿಗೂ ಹಿಂಸೆ ನೀಡುವಂತಾದರೆ ನಮ್ಮ ಪರಿಸ್ಥಿತಿ ಹೇಗಿರಬಹುದು? ಎಂದು ಹಲವರು ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ: 60 ವರ್ಷದ ಮಹಿಳೆಗೆ ತಾಳಿ ಕಟ್ಟಿದ 20ರ ಯುವಕ; ಇದು ರಾಂಗ್ ​ನಂಬರ್​ನಿಂದ ಶುರುವಾದ ಲವ್ ಸ್ಟೋರಿ!

ಗ್ರಾಮದಲ್ಲಿರುವ ಜಮೀನಿಗೆ ಬಂದ ಆನೆಯ ಬಾಲವನ್ನು ಯುವಕನೋರ್ವ ಗಟ್ಟಿಯಾಗಿ ಹಿಡಿದು ಎಳೆದಿದ್ದಾನೆ. ನೋವಿನಿಂದ ಘೀಳಿಡುತ್ತಾ ಆನೆ ಓಡತೊಡಗಿದೆ. ಅದನ್ನು ಇನ್ನೋರ್ವ ವಿಡಿಯೋ ಮಾಡಿಕೊಳ್ಳುತ್ತಿದ್ದಾನೆ. ಆನೆಯಿಂದ ಆ ಯುವಕನಿಗೆ ಏನಾದರೂ ತೊಂದರೆಯಾಗಬಹುದು ಎಂದು ಊರಿನವರು ಸುತ್ತಲೂ ದಪ್ಪನೆಯ ದೊಣ್ಣೆ ಹಿಡಿದು ನಿಂತಿದ್ದಾರೆ. ವಿನಾಕಾರಣ ಆನೆಯ ಬಾಲವನ್ನು ಜಗ್ಗಿ ವಿಡಿಯೋ ಮಾಡಿಕೊಂಡ ಯುವಕರ ವಿರುದ್ಧ ಟ್ವಿಟ್ಟರ್​ನಲ್ಲಿ ಆಕ್ರೋಶ ಕೇಳಿಬಂದಿದೆ.
First published: