Viral News: ಮ್ಯಾಟ್ರಿ`ಮನಿ’ ನೋಡಿ ಆಕೆ ಮೀಟ್​ ಮಾಡಿದ್ಳು: ಈತ ಕಾರ್​​ನಲ್ಲೇ ಮ್ಯಾಟರ್​ ಮುಗಿಸಿ ಎಸ್ಕೇಪ್​!

Viral News: ಈತ ಹಾರಿಸಿದ ಕಲರ್​ ಕಲರ್​ ಕಾಗೆ ಕಥೆಯನ್ನು ನಿಜ ಎಂದು ನಂಬಿದ್ದಳು. ಈತ ಹೇಳುತ್ತಿರುವುದೆಲ್ಲ ನಿಜ ಎಂದುಕೊಂಡು ಮೀಟ್​ ಮಾಡಲು ಬಂದಿದ್ದಳು. ಆದರೆ ಆತ ಮದುವೆಯಾಗುವುದಾಗಿ ನಂಬಿಸಿ ಕಾರ್​​ನಲ್ಲ ಮ್ಯಾಟರ್ ಮುಗಿಸಿ ಎಸ್ಕೇಪ್​ ಆಗಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೋಸ ಹೋಗುವವರೂ ಎಲ್ಲಿಯವರೆಗೂ ಇರುತ್ತಾರೋ.. ಮೋಸ ಮಾಡುವವರು ಅಲ್ಲಿಯವರೆಗೂ ಇರುತ್ತಾರೆ. ಅದರಲ್ಲೂ ಪ್ರೀತಿ(Love), ಪ್ರೇಮ ನಾಟಕವಾಡಿ ಮೋಸ ಮಾಡುವವರ ಸಂಖ್ಯೆ ಹೆಚ್ಚು. ಎಲ್ಲ ಗೊತ್ತಿದ್ದರೂ ಈ ಹೆಣ್ಣು ಮಕ್ಕಳು ಮಾತ್ರ ಬುದ್ಧಿ ಕಲಿತಿಲ್ಲ ಹಿಂದೆ ಮುಂದೆ ನೋಡದೇ ನಂಬುತ್ತಾರೆ. ಮನಸ್ಸಿಗೆ ಮನಸೋತು ಮದುವೆ ಮಂಟಪ ಹತ್ತುವ ಹುಡುಗಿಯರಿಗಿಂತ, ಮೈಮಾಟಕ್ಕೆ ಮನಸೋತು ಮಸಣ ಸೇರುವ ಹೆಣ್ಣು ಮಕ್ಕಳೇ ಜಾಸ್ತಿ. ಹುಡುಗನ ಬಗ್ಗೆ ತಿಳಿದುಕೊಳ್ಳದೇ ಡೇಟಿಂಗ್(Dating)​ ಮಾಡುತ್ತಾರೆ. ಅದರಲ್ಲೂ ಈ ಮ್ಯಾಟ್ರಿಮನಿಯಲ್ಲಿ ಮೋಸ ಹೋಗುವವರ ಸಂಖ್ಯೆ ಇನ್ನೂ ಹೆಚ್ಚಿದೆ. ಇಲ್ಲೂ ಅಷ್ಟೇ ಮ್ಯಾಟ್ರಿಮನಿ(Matrimony) ಯಲ್ಲಿ ಮೂಲಕ ಪರಿಚಯವಾದ ಹುಡುಗಿಗೆ ಮೋಸ ಮಾಡಿದ ಆರೋಪದ ಮೇಲೆ 31 ವರ್ಷದ ವ್ಯಕ್ತಿಯನ್ನು ಪೊಲೀಸ(Police)ರು ವಶಕ್ಕೆ ಪಡೆದಿದ್ದಾರೆ. ಈತ ಹಾರಿಸಿದ ಕಲರ್​ ಕಲರ್​ ಕಾಗೆ ಕಥೆಗೆ ಆಕೆ ಫಿದಾ ಆಗಿ ಹೋಗಿದ್ದಳು. ಈತ ಹೇಳುತ್ತಿರುವುದೆಲ್ಲ ನಿಜ(Truth) ಎಂದು ನಂಬಿ ಬಂದಿದ್ದಳು. ಆದರೆ ಈತ ಮಾಡಿದ ಕೆಲಸ ಏನು ತಿಳಿದರೆ ನಿಮಗೂ ಕೋಪ ಬರುತ್ತೆ. ಸಾವಿರ ಸುಳ್ಳು ಹೇಳಿ ಒಂದು ಮದುವೆ(Marriage) ಮಾಡಬೇಕು ಅನ್ನೋ ಗಾದೆ ಕೇಳಿದ್ದೀರ. ಆದರೆ ಈತ ಹುಡಗಿಯನ್ನು ಬಿಳಿಸಿಕೊಳ್ಳಲು ಸುಳ್ಳು ಹೇಳಿದ್ದಾನೆ. ಮ್ಯಾಟ್ರಿಮನಿಯಲ್ಲಿ ತಾನೊಬ್ಬ ದೊಡ್ಡ ಸೇನಾ ಅಧಿಕಾರಿ(Defense Officer) ಅಂತ ಬಿಲ್ಡಪ್(Buildup)​ ಬೇರೆ ಕೊಟ್ಟಿದ್ದನಂತೆ. 

ಈತನ ಹಿಸ್ಟರಿಯೇ ಭಯಂಕರ!

ಪರಿಚಯವಾದ ವ್ಯಕ್ತಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇದಾದ ನಂತರ ಮೊಬೈಲ್  ನನ್ನ ನಂಬರ್ ಬ್ಲಾಕ್ ಮಾಡಿದ್ದ ಎಂದು ಹುಡುಗಿ ಆರೋಪಿಸಿದ್ದಾಳೆ. ಆರೋಪಿಯನ್ನು ಕರ್ನಾಟಕದ ಬೆಳಗಾವಿಯ  ಕುಂಪಟಗಿರಿ ನಿವಾಸಿ ಪ್ರಶಾಂತ ಭಾವರಾವ್ ಪಾಟೀಲ್ ಎಂದು ಗುರುತಿಸಲಾಗಿದೆ. ಮ್ಯಾಟ್ರಿಮನಿಯಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಂಪರ್ಕ ಸಾಧಿಸಿದ ನಂತರ ಅವನು ಈ ರೀತಿ ಅನೇಕ ಮಹಿಳೆಯರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬರುತ್ತಿದೆ.  ಈ ಹಿಂದೆಯೇ ಈತನ ಬಂಧನ ಮಾಡಲಾಗಿತ್ತು . 2018 ರಲ್ಲಿ ಸಶಸ್ತ್ರ ಪಡೆಗಳಿಂದ ತಲೆ ತಪ್ಪಿಸಿಕೊಂಡು ಅಲೆಯುತ್ತಿದ್ದ ಎಂದು ಸಿನ್ಹಗಡ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. 2018 ರಿಂದ ಈ ವರ್ಷದ ನವೆಂಬರ್ 20 ರವರೆಗೆ ಪುಣೆ, ಲಾತೂರ್ ಮತ್ತು ಅಹ್ಮದ್‌ನಗರದಲ್ಲಿ ಈತನ ಮೇಲೆ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಲಾಗಿದೆ.

ಇದನ್ನು ಓದಿ : Twitter CEO ಸ್ಥಾನಕ್ಕೆ ಜಾಕ್​​ ಡಾರ್ಸಿ ರಾಜೀನಾಮೆ: ಭಾರತ ಮೂಲದ ಪರಾಗ್​ ಅಗರ್ವಾಲ್​ ಹೊಸ ಬಾಸ್​!

ಮದುವೆ ಮಾತುಕತೆಗೆಂದು ಕರೆಸಿ ಕಾರ್​​ನಲ್ಲೇ ಸೆಕ್ಸ್!

ತಾನೊಬ್ಬ ಸೇನಾ ಅಧಿಕಾರಿ ಎಂದು ಆಸಾಮಿ ಯುವತಿಯ ಪರಿಚಯ ಮಾಡಿಕೊಂಡಿದ್ದಾನೆ.  ಅಲ್ಲಿಂದ ಮುಂದೆ ಇಬ್ಬರು ಭೇಟಿಯಾಗಿದ್ದು ಹುಡುಗಿಯನ್ನು ನಂಬಿಸಿ ಆಕೆ ಜತೆ ಲೈಂಗಿಕ ಸಂಪರ್ಕ ನಡೆಸಿದ್ದಾನೆ. ಇದಾದ ಮೇಲೆ ನಂಬರ್ ಬ್ಲಾಕ್ ಮಾಡಿದ್ದ ಎಂದು ಯುವತಿ ಆರೋಪಿಸಿದ್ದಾಳೆ. ನವೆಂಬರ್ 18 ರಂದು ಪುಣೆಯ ದಗ್ದುಶೇತ್ ಗಣಪತಿ ದೇವಸ್ಥಾನದಲ್ಲಿ ಹುಡುಗಿ ಮತ್ತು ಪಾಟೀಲ್ ಭೇಟಿಯಾಗಿದ್ದಾರೆ. ಈ ವೇಳೆ ಸೇನೆಯ ಸಮವಸ್ತ್ರದಲ್ಲಿ ಆಸಾಮಿ ಕಾಣಿಸಿಕೊಂಡಿದ್ದ.   ಅಲ್ಲಿಂದ ಮಾತುಕತೆಗೆಂಧು ಹತ್ತಿರದ ವಸತಿಗೃಹಕ್ಕೆ ಕರೆದುಕೊಂಡು ಹೋಗಿದ್ದಾನೆ. ಮದುವೆಯಾಗುವ ಭರವಸೆ ನೀಡಿದ್ದಾನೆ. ನಂತರ ಕಾರ್ ನಲ್ಲಿಯೇ ಒತ್ತಾಯಪೊರ್ವಕವಾಗಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಇದನ್ನು ಓದಿ : 2 ಟನ್​ ಹಣ್ಣು-ತರಕಾರಿ ಗುಳುಂ ಮಾಡಿದ ವಾನರ ಸೇನೆ, ಕೋತಿಗಳ ಹಬ್ಬದಲ್ಲಿ ಅವುಗಳದ್ದೇ ಸಾಮ್ರಾಜ್ಯ! ಫೋಟೋ ನೋಡಿ...

ಕೆಲಸ ಮುಗಸಿ ನಂಬರ್​ ಬ್ಲಾಕ್​ ಮಾಡಿದ ಭೂಪ!

ಇದಾದ ನಂತರ ನಂಬರ್ ಬ್ಲಾಕ್ ಮಾಡಿದ್ದು ಸಂಪರ್ಕಕ್ಕೆ ಸಿಗದೆ ಓಡಾಡುತ್ತಿದ್ದ.  ಯುವಕ ತನಗೆ ಮೋಸ ಮಾಡಿದ್ದು ಅಜ್ಞಾತವಾಗಿದ್ದಾನೆ ಎಂಬುದನ್ನು ಅರಿತ ಯುವತಿ ದೂರು ದಾಖಲಿಸಿದ್ದಾರೆ. ಎಷ್ಟೇ ಸಲ ಫೋನ್​ ಮಾಡಿದ್ದರೂ ರಿಸೀವ್​ ಮಾಡಿಲ್ಲವಂತೆ ಆಸಾಮಿ. ಮದುವೆಯಾಗವುದಾಗಿ ನಂಬಿಸಿ ಈ ರೀತಿ ಕೃತ್ಯ ಎಸಗಿರುವುದು ನಿಜಕ್ಕೂ ಖಂಡನೀಯ. ಇನ್ನು ಮುಂದೆಯಾದರೂ ಹೆಣ್ಣು ಮಕ್ಕಳು ನಿಮ್ಮ ನಿಮ್ಮ ಜಾಗ್ರತೆಯಲ್ಲಿ ಇರಿ.
Published by:Vasudeva M
First published: