Matrimonial Siteನಲ್ಲಿ IPS ವರ ಸಿಕ್ಕಿಯೇ ಬಿಟ್ಟಿದ್ದ, ಆದರೆ ಕಾದಿತ್ತು ದೊಡ್ಡ ದೋಖಾ!

ಮಹಿಳೆಯರನ್ನು ವಂಚಿಸಲು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಐಪಿಎಸ್ ಅಧಿಕಾರಿ ಎಂದು ನಕಲಿ ಪ್ರೊಫೈಲ್ ಸೃಷ್ಟಿಸಿದ ಆರೋಪದ ಮೇಲೆ 26 ವರ್ಷದ ವ್ಯಕ್ತಿಯನ್ನು ಸಾಕಿ ನಾಕಾ ಪೊಲೀಸರು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂಬೈ: ಈಗ ಎಲ್ಲವೂ ಆನ್​​ಲೈನ್​ಮಯ (Online). ಮದುವೆಗೆ (Marriage) ವಧ-ವರರ ಹುಡುಕಾಟವೂ ಆನ್​​ಲೈನ್​ನಲ್ಲೇ ನಡೆಯುತ್ತಿದೆ. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ (Matrimonial Site) ಗಂಡು ನೋಡುವ, ಹೆಣ್ಣು ನೋಡುವ ಕೆಲಸ ಭರ್ಜರಿಯಾಗಿಯೇ ನಡೆಯುತ್ತಿದೆ. ಅದೇ ರೀತಿ ವಂಚನೆಗಳು ಕೂಡ ಇಷ್ಟೇ ಸುಲಭವಾಗಿ ಆಗುತ್ತಿವೆ ಎನ್ನಬಹುದು. ಇದಕ್ಕೆ ತಾಜಾ ಉದಾಹರಣೆಯಂತಿದೆ ಈ ಪ್ರಕರಣ. ತಾನು ಐಪಿಎಸ್​ ಅಧಿಕಾರಿ ಎಂದು ಪೋಸ್​ ಕೊಟ್ಟು ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ ನಕಲಿ ಅಧಿಕಾರಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಮಹಿಳೆಯರನ್ನು ವಂಚಿಸಲು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಐಪಿಎಸ್ ಅಧಿಕಾರಿ ಎಂದು ನಕಲಿ ಪ್ರೊಫೈಲ್ ಸೃಷ್ಟಿಸಿದ ಆರೋಪದ ಮೇಲೆ 26 ವರ್ಷದ ವ್ಯಕ್ತಿಯನ್ನು ಸಾಕಿ ನಾಕಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿಯಂತೆ ಪೋಸ್ ನೀಡಿದ್ದಾನೆ. ಸಾಲದಕ್ಕೆ ತನ್ನ ತಂದೆ ನಿವೃತ್ತ ಸೇನಾಧಿಕಾರಿ ಎಂದು ಹೇಳಿಕೊಂಡಿದ್ದಾನೆ, ನಂತರ ಅವನು ಮದುವೆಗಾಗಿ ಮಹಿಳೆಯರನ್ನು ಸಂಪರ್ಕಿಸಿ ಅವರನ್ನು ವಂಚಿಸಿದ ನಂತರ ತಪ್ಪಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲೂ ನಕಲಿ ಫೋಟೋಗಳು

ಬಂಧಿತ ಆರೋಪಿಯನ್ನು ಅಭಿಜಿತ್ ಘಡ್ವೆ ಎಂದು ಗುರುತಿಸಲಾಗಿದ್ದು, ಘಾಟ್‌ಕೋಪರ್‌ನಲ್ಲಿರುವ ಆತನ ನಿವಾಸದಿಂದ ಬಂಧಿಸಲಾಗಿದೆ. ಘಡ್ವೆ ತನ್ನ ಮ್ಯಾಟ್ರಿಮೋನಿಯಲ್ ಪ್ರೊಫೈಲ್‌ನಲ್ಲಿ ಐಪಿಎಸ್ ಲೋಗೋದ ಫೋಟೋಗಳನ್ನೂ ಪೋಸ್ಟ್ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರನ್ನು ವಂಚಿಸಲು ಇದೇ ರೀತಿಯ ಫೋಟೋಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾನೆ. ಸಾಕಿ ನಾಕಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ನವೆಂಬರ್‌ನಲ್ಲಿ ಆರೋಪಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ 26 ವರ್ಷದ ಮಹಿಳೆಯನ್ನು ಸಂಪರ್ಕಿಸಿದರು. ತಾನು ಐಪಿಎಸ್ ಅಧಿಕಾರಿ ಎಂದು ಹೇಳಿದ್ದಾನೆ. ಅವರು ಸತಾರಾದಲ್ಲಿ ಸ್ಟ್ರಾಬೆರಿ ಫಾರ್ಮ್ ನಡೆಸುತ್ತಿರುವಾಗ ಅವರ ತಂದೆ ಮಾಜಿ ಆರ್ಮಿ ಮ್ಯಾನ್ ಎಂದು ಹೇಳಿದ್ದಾನೆ.

ಇದನ್ನೂ ಓದಿ: Viral Video: ಮೆಟ್ರೋದಲ್ಲಿ ಯುವಕನ ಕೆನ್ನೆಗೆ ಪಟಾರನೇ ಬಾರಿಸಿದ ಯುವತಿ! ವಿಡಿಯೋ ನೋಡಿ

ಹಣ ಪಡೆದು ವಂಚನೆ

ಇಬ್ಬರೂ ತಿಂಗಳುಗಳ ಕಾಲ ಚಾಟ್ ಮಾಡಿದ್ದಾರೆ. ನಂತರ ಘಡ್ವೆ ಇಂಟರ್ ಗ್ಲೋಬ್ ಏವಿಯೇಷನ್ ​​ಲಿಮಿಟೆಡ್ ಕಂಪನಿಯಲ್ಲಿ ಮ್ಯಾನೇಜ್‌ಮೆಂಟ್ ಆಫೀಸರ್ ಕೆಲಸಕ್ಕೆ ಸಹಾಯ ಮಾಡಬಹುದೆಂದು ಹೇಳಿಕೊಂಡರು. ನಂತರ 73,900 ರೂ.ಗಳನ್ನು ತೆಗೆದುಕೊಂಡಿದ್ದಾರೆ. ನಂತರ ಗುರುತಿನ ಚೀಟಿ ಮತ್ತು ನಕಲಿ ನೇಮಕಾತಿ ಪತ್ರವನ್ನು ನೀಡಿದ್ದಾರೆ. ನಂತರ, ದಾಖಲೆಗಳು ನಕಲಿ ಎಂದು ಮಹಿಳೆ ಅರಿತುಕೊಂಡಾಗ ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದರು. ವಂಚನೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ನಂತರ ಪೊಲೀಸರು ಆರೋಪಿಯನ್ನು ಘಾಟ್‌ಕೋಪರ್‌ನಲ್ಲಿರುವ ಅವರ ನಿವಾಸದಲ್ಲಿ ಪತ್ತೆಹಚ್ಚಿ  ಬಂಧಿಸಿದ್ದಾರೆ.

ಮತ್ತೊಂದು ವಂಚನೆ ಪ್ರಕರಣ

ಗುಂಟೂರು ಜಿಲ್ಲೆ ಬೇತಪುಡಿಯ ವ್ಯಕ್ತಿಯೊಬ್ಬ 11 ಮಹಿಳೆಯರನ್ನು (11 Women) ಮದುವೆಯಾಗಿದ್ದಾನೆ.  ಅಡಪ ಶಿವಶಂಕರ್ ಬಾಬು ಎಂಬಾತನಿಗೆ 11 ಪತ್ನಿಯರು (11 Wives). ಹೈಲೈಟ್ ಏನೆಂದರೆ, ಏಳು ಮಹಿಳೆಯರು ಹೈದರಾಬಾದ್‌ನ (Hyderabad) ಕೊಂಡಾಪುರದ ಅಕ್ಕಪಕ್ಕದಲ್ಲಿಯೇ ಇದ್ದಾರೆ. ಶಿವಶಂಕರ್ ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಅವರ ಜೊತೆ ಸಂಸಾರ ನಡೆಸುತ್ತಾನೆ. ಹಗಲು ರಾತ್ರಿ ಪಾಳಿಗಳ ಕೆಲಸವಿರುವಂತಹ ದೊಡ್ಡ ಸಂಸ್ಥೆಯಲ್ಲಿ ತನಗೆ ಕೆಲಸವಿದೆ ಎಂದು ಹೇಳಿ ಮದುವೆಗೆ ಒಪ್ಪಿಸುತ್ತಾನೆ. ಆಘಾತಕಾರಿ ಸಂಗತಿಯೆಂದರೆ, ಹೆಚ್ಚಿನ ಮಹಿಳೆಯರು ಸುಶಿಕ್ಷಿತರಾಗಿದ್ದಾರೆ. ಇಬ್ಬರು ಮಹಿಳೆಯರು ಶಿವಶಂಕರ್ ವಂಚನೆ ಬಗ್ಗೆ ಬಹಿರಂಗಪಡಿಸಿದ್ದಾರೆ. ಶಿವಶಂಕರ್ ಮಹಿಳೆಯರಿಂದ ಲಕ್ಷಗಟ್ಟಲೆ ಹಣ ಪಡೆದು ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಅವನು ತನ್ನ ಫೋನ್ ಅನ್ನು ಆಫ್ ಮಾಡುತ್ತಾನೆ. ನಂತರ ಎಂದಿಗೂ ಕಾಣಿಸುವುದಿಲ್ಲ. ಸುಮಾರು 60 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನವನ್ನು ಅವರಿಗೆ ನೀಡಿರುವುದಾಗಿ ಮಹಿಳೆಯರು ಬಹಿರಂಗಪಡಿಸಿದ್ದಾರೆ. ಶಿವಶಂಕರ್ ಕೂಡ ಎಪಿ ಸಚಿವರೊಬ್ಬರ ಸಂಬಂಧಿ ಎಂದು ಹೇಳಿ ವಂಚಿಸಿದ್ದಾರೆ.
Published by:Kavya V
First published: