Shocking News: ಛೇ! ಬೆಕ್ಕಿನ ಕೂಗಿಗೆ ಅಮಾಯಕ ಬಲಿ! ದಾರುಣ ಘಟನೆ ಬಯಲಿಗೆ

ಬೆಕ್ಕು ಪದೇ ಪದೇ ಕೂಗುತ್ತಿದ್ದರಿಂದ ಅಪ್ರಾಪ್ತನ ಕೋಪ ನೆತ್ತಿಗೇರಿತ್ತು. ಮಲಗಿದ್ದ ಆತ ಎದ್ದು ಬೆಕ್ಕನ್ನು ತಂದಿದ್ದ ಎಜಾಜ್ ಎಂಬಾತನ ಮನೆಗೆ ಹೋಗಿ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹೈದರಾಬಾದ್: ಬೆಕ್ಕಿನ ಕೂಗು ಕೆಲವರಿಗೆ ಆಪ್ಯಾಯಮಾನವಾಗಿದ್ದರೆ ಕೆಲವರಿಗೆ ಕಿರಿಕಿರಿ ತರುತ್ತದೆ. ಆದರೆ ಬೆಕ್ಕಿನ ಕೂಗಿನ (Cat's Noise) ಕಿರಿಕಿರಿಯಿಂದ ಓರ್ವ ವ್ಯಕ್ತಿಯೇ ಕೊಲೆ ಆದ ಭಯಂಕರ ಘಟನೆಯೊಂದು ಇದೀಗ ವರದಿಯಾಗಿದೆ.  ಸಿಟ್ಟಾದ ಅಪ್ರಾಪ್ತ ಬಾಲಕನೊಬ್ಬ ಸಾಕು ಬೆಕ್ಕಿನ ಮಾಲೀಕರನ್ನು ಸುಟ್ಟು ಹಾಕಿರುವ ವಿಚಿತ್ರ ಘಟನೆ ನಡೆದಿದೆ. ಸಂತ್ರಸ್ತೆ ಗುರುವಾರ ರಾತ್ರಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ. ಸಂತ್ರಸ್ತೆಯ ಸ್ನೇಹಿತ ಶನಿವಾರ ಹೈದರಾಬಾದ್ ನಗರದ (Hyderabad Crime News) ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಬೆಕ್ಕಿನ ಕೂಗಿನಿಂದ ಜೀವ ಬಿಟ್ಟ ಅತ್ಯಂತ ಭಯಂಕರ ಘಟನೆಯೊಂದು ಇಲ್ಲಿದೆ. 

  ವರದಿಗಳ ಪ್ರಕಾರ ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದಲ್ಲಿ ಹರೀಶ್ವರ್ ರೆಡ್ಡಿ ಅಲಿಯಾಸ್ ಚಿಂಟು (20) ಮತ್ತು ಇನ್ನೋರ್ವ 17 ವರ್ಷದ ಬಾಲಕ ವಾಸಿಸುತ್ತಿದ್ದರು.

  ಅಲ್ಲೆಲ್ಲೋ ತಿರುಗುತ್ತಿದ್ದ ಬೆಕ್ಕನ್ನು ಮನೆಗೆ ತಂದರು!
  20 ವರ್ಷದ ಎಜಾಜ್ ಹುಸೇನ್ ಮತ್ತು 20 ವರ್ಷದ ಅಸ್ಸಾಂ ಮೂಲದ ಬ್ರಾನ್ ಸ್ಟಿಲಿಂಗ್ ಸಹ ಅದೇ ಮನೆಯಲ್ಲಿ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಎಜಾಜ್ ಮತ್ತು ಬ್ರಾನ್ ಇಬ್ಬರೂ ತಮ್ಮ ಕೆಲಸ ಮುಗಿಸಿ ತಮ್ಮ ಮರಳಿ ಮನೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ದಾರಿ ತಪ್ಪಿ ತಿರುಗಾಡುತ್ತಿದ್ದ ಬೆಕ್ಕನ್ನು ಕಂಡು ಎತ್ತಿಕೊಂಡಿದ್ದರು. ಬೆಕ್ಕು ನಿರಂತರವಾಗಿ ಕೂಗುತ್ತಿತ್ತು.

  ಬಿಟ್ಟುಬಿಡದೇ ಕೂಗುತ್ತಿದ್ದ ಬೆಕ್ಕು
  ಈ ಬೆಕ್ಕನ್ನು ಮನೆಗೆ ತಂದಾಗ ನಿರಂತರವಾಗಿ ಕೂಗುತ್ತಿದ್ದ ಬೆಕ್ಕಿನಿಂದ ಹರೀಶ್ವರ್ ರೆಡ್ಡಿ ನಿದ್ರೆಗೆ ಭಂಗ ಬಂದಿತ್ತು. ಇದರಿಂದ ಹರೀಶ್ ರೆಡ್ಡಿ ತೀವ್ರ ಸಿಟ್ಟಿಗೆದ್ದಿದ್ದರು. ಹರೀಶ್ವರ್ ರೆಡ್ಡಿ ಜೊತೆಯೇ ಇದ್ದ ಅಪ್ರಾಪ್ತ ಬಾಲಕನಿಗೂ ಬೆಕ್ಕಿನ ಕೂಗು ಸಿಟ್ಟು ತಂದಿತ್ತು.

  ಬೆಕ್ಕು ಪದೇ ಪದೇ ಕೂಗುತ್ತಿದ್ದರಿಂದ ಅಪ್ರಾಪ್ತನ ಕೋಪ ನೆತ್ತಿಗೇರಿತ್ತು. ಮಲಗಿದ್ದ ಆತ ಎದ್ದು ಬೆಕ್ಕನ್ನು ತಂದಿದ್ದ ಎಜಾಜ್ ಎಂಬಾತನ ಮನೆಗೆ ಹೋಗಿ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.

  ಏಕೆ ಏನಾಗುತ್ತಿದೆ? ತಿಳಿಯುವ ಮುನ್ನ ಪ್ರಾಣ ಹೋಯಿತು
  ಏಕೆ ಏನಾಗುತ್ತಿದೆ ಎಂಬ ಅರಿವೆಯೇ ಇಲ್ಲದೇ ಇದ್ದ ಏಜಾಜ್​ಗೆ ಇದರಿಂದ ಗಂಭೀರವಾಗಿ ಸುಟ್ಟ ಗಾಯಗಳಾಗಿವೆ. ಏಜಾಜ್​ನನ್ನು ಚಿಕಿತ್ಸೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಗುರುವಾರ ರಾತ್ರಿ ಸುಟ್ಟಗಾಯಗಳಿಂದ ಮೃತಪಟ್ಟಿದ್ದಾರೆ.

  ಆರಂಭದಲ್ಲಿ ಹರೀಶ್ವರ್ ರೆಡ್ಡಿ ಅವರು ಎಜಾಜ್ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದಾರೆ ಎಂದು ಆರೋಪಿಗಳೊಂದಿಗೆ ಸುಳ್ಳು ದೂರು ದಾಖಲಿಸಿದ್ದಾರೆ. ನಂತರ ಮೃತನ ಸ್ನೇಹಿತ ಬ್ರಾನ್ ನೀಡಿದ ದೂರಿನ ಮೇರೆಗೆ ಪೊಲೀಸರಿಗೆ ಘಟನೆಯನ್ನು ತಿಳಿಸಿದ ಪೊಲೀಸರು ಬಾಲಕ ಮತ್ತು ಹರೀಶ್ವರ್ ರೆಡ್ಡಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

  ಇದನ್ನೂ ಓದಿ: Lumpy Skin Disease: ಜಾನುವಾರುಗಳಿಗೆ ಚರ್ಮ ಗಂಟುರೋಗದ ಕಂಟಕ! ಭಾರತದಲ್ಲಿ ಹೈನುಗಾರಿಕೆಯ ಭವಿಷ್ಯವೇನು?

  ಅಯ್ಯೋ ದುರ್ವಿಧಿಯೇ! ಏಡ್ಸ್, ಮಂಕಿಪಾಕ್ಸ್, ಕೊರೊನಾ ಎಲ್ಲಾ ಒಟ್ಟಿಗೇ ಬಂತು!
  ದುರಾದೃಷ್ಟ ಅನ್ನೋದು ಒಮ್ಮೆ ಬರೋಕೆ ಶುರು ಮಾಡಿದ್ರೆ ಹೇಗೆಲ್ಲಾ ಹುಡುಕಿ ಹುಡುಕಿಕೊಂಡು ಬರುತ್ತೆ ಅನ್ನೋದಕ್ಕೆ ತಾಜಾ ಉದಾಹರಣೆಯೊಂದು ವರದಿಯಾಗಿದೆ. ಇಟಲಿಯ ವ್ಯಕ್ತಿಯೋರ್ವನಿಗೆ ಒಂದೇ ಸಲಕ್ಕೆ ಮಂಕಿಪಾಕ್ಸ್ (Monkeypox) ಹೆಚ್​ಐವಿ (HIV) ಮತ್ತು ಕೊವಿಡ್ 19 (Covid-19) ತಗುಲಿಬಿಟ್ಟಿದೆ. ಇಟಲಿಯಲ್ಲಿರುವ ಅಮನ್‌ ಎಂಬಾತನಿಗೇ ಮಂಕಿಪಾಕ್ಸ್, ಎಚ್‌ಐವಿ ಮತ್ತು ಕೋವಿಡ್-19 ಒಂದೇ ಸಮಯದಲ್ಲಿ ಪಾಸಿಟಿವ್ ಬಂದಿರುವುದು. 36 ವರ್ಷದ ವಯಸ್ಸಿನ ಈ ವ್ಯಕ್ತಿಗೆ ಐದು ದಿನ ಸ್ಪೇನ್ ಪ್ರವಾಸ (Spain Trip) ಮಾಡಿದ್ದ. ಅಲ್ಲಿಂದ ಮರಳಿ ಮನೆಗೆ ಬಂದವನೇ ಜ್ವರ, ಕಂಟಲು ನೋವು ಎಂದು ಮಲಗಿಬಿಟ್ಟಿದ್ದ. ವೈದ್ಯರಿಗೆ ತೋರಿಸಿದಾಗ ಕೊರೊನಾ ಪರೀಕ್ಷೆ (Covid 19 Test) ಮಾಡಿಸಿದ. ಪರೀಕ್ಷೆಯಲ್ಲಿ ಪಾಸಿಟಿವ್ ಬಂತು.

  ಇದನ್ನೂ ಓದಿ: Bird Flu: ಮತ್ತೆ ವಕ್ಕರಿಸಿದ ಹಕ್ಕಿ ಜ್ವರ, 10,000 ಕ್ಕೂ ಅಧಿಕ ಬಾತುಕೋಳಿಗಳ ಮಾರಣ ಹೋಮ

  ಸರಿ, ಕೊವಿಡ್ ಬಂತು ಅಂದುಕೊಂಡು ಎರಡೇ ದಿನಕ್ಕೆ ಎಡಗೈಯಲ್ಲಿ ದದ್ದು ಕಾಣಿಸಿಕೊಂಡಿತು. ಅಲ್ಲದೇ ದೇಹದ ಇತರ ಭಾಗಗಳಲ್ಲಿ ಗುಳ್ಳೆಗಳು ಏಳಲಾರಂಭಿಸಿದವು. ಆ ಗುಳ್ಳೆಗಳು ನೋಯುತ್ತಿದ್ದವು.
  Published by:guruganesh bhat
  First published: