• Home
  • »
  • News
  • »
  • national-international
  • »
  • Harassment: ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಬ್ಯಾಗ್‌ನಲ್ಲಿ ತುಂಬಿ ಕಾಡಿಗೆ ಬಿಟ್ಟ ಪಾಪಿ! ಅಲ್ಲಿ ಮುಂದಾಗಿದ್ದೇ ಬೇರೆ!

Harassment: ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಬ್ಯಾಗ್‌ನಲ್ಲಿ ತುಂಬಿ ಕಾಡಿಗೆ ಬಿಟ್ಟ ಪಾಪಿ! ಅಲ್ಲಿ ಮುಂದಾಗಿದ್ದೇ ಬೇರೆ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಆ ಪಾಪಿ ಏನೂ ಅರಿಯದ ಬಾಲಕಿ ಮೇಲೆ ಮೃಗದಂತೆ ಎರಗಿದ್ದಲ್ಲದೇ, ಆಕೆಯನ್ನು ಬ್ಯಾಗ್‌ನಲ್ಲಿ (ತುಂಬಿ, ದಟ್ಟಾರಣ್ಯಕ್ಕೆ ಕರೆದುಕೊಂಡು ಹೋಗಿ, ಆ ಬ್ಯಾಗ್ ಸಮೇತ ಆಕೆಯನ್ನು ಬಿಟ್ಟು, ಏನೂ ಆಗಿಯೇ ಇಲ್ಲ ಎನ್ನುವಂತೆ ತನ್ನ ಊರಿಗೆ ವಾಪಸ್ ಬಂದಿದ್ದಾನೆ. ಹಾಗೆ ಬಂದವ ನಾನಿನ್ನು ತಪ್ಪಿಸಿಕೊಂಡೆ ಅಂತ ಖುಷಿಯಿಂದ ಮನೆಗೆ ಹೋಗಿದ್ದಾನೆ. ಆದರೆ ಆಗ ಅವನಿಗೆ ಅಲ್ಲಿ ಬಿಗ್ ಶಾಕ್ ಕಾದಿತ್ತು!

ಮುಂದೆ ಓದಿ ...
  • Share this:

    ಅಸ್ಸಾಂ: ಕಾಮುಕನೊಬ್ಬ ಅಪ್ರಾಪ್ತ ಬಾಲಕಿ (Miner Girl) ಮೇಲೆ ಅತ್ಯಾಚಾರ ಮಾಡಿದ್ದಾನೆ. ಸಾಲದ್ದಕ್ಕೆ ಆಕೆಯನ್ನು ಕೊಲ್ಲುವ (Murder) ಉದ್ದೇಶದಿಂದ, ರಾಕ್ಷಸನಂತೆ ವರ್ತಿಸಿದ್ದಾನೆ. ಏನೂ ಅರಿಯದ ಬಾಲಕಿ ಮೇಲೆ ಮೃಗದಂತೆ ಎರಗಿದ್ದಲ್ಲದೇ, ಆಕೆಯನ್ನು ಬ್ಯಾಗ್‌ನಲ್ಲಿ (Bag) ತುಂಬಿ, ದಟ್ಟಾರಣ್ಯಕ್ಕೆ (Forest) ಕರೆದುಕೊಂಡು ಹೋಗಿ, ಆ ಬ್ಯಾಗ್ ಸಮೇತ ಆಕೆಯನ್ನು ಬಿಟ್ಟು, ಏನೂ ಆಗಿಯೇ ಇಲ್ಲ ಎನ್ನುವಂತೆ ತನ್ನ ಊರಿಗೆ (Village) ವಾಪಸ್ ಬಂದಿದ್ದಾನೆ. ಹಾಗೆ ಬಂದವ ನಾನಿನ್ನು ತಪ್ಪಿಸಿಕೊಂಡೆ ಅಂತ ಖುಷಿಯಿಂದ ಮನೆಗೆ (Home) ಹೋಗಿದ್ದಾನೆ. ಆದರೆ ಆಗ ಅವನಿಗೆ ಅಲ್ಲಿ ಬಿಗ್ ಶಾಕ್ (Big Shock) ಕಾದಿತ್ತು! ಇದೀಗ ಆ ಪಾಪಿ ಪೊಲೀಸರ (Police) ಅತಿಥಿಯಾಗಿದ್ದಾನೆ.


    ಅಸ್ಸಾಂನಲ್ಲಿ ನಡೆಯಿತು ಮಾನಗೇಡಿ ಕೃತ್ಯ


    ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಆಘಾತಕಾರಿ ಹಾಗೂ ಮಾನಗೇಡಿ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ. 26 ವರ್ಷದ ಯುವಕನೊಬ್ಬ ಅಪ್ರಾಪ್ತ ಬಾಲಕಿಯನ್ನು ತನ್ನ 'ಗೆಳತಿ' ಎಂದು ಹೇಳಿಕೊಂಡು ಅಪಹರಣ ಮಾಡಿದ್ದಾನೆ. ಸಾಲದ್ದಕ್ಕೆ ಆಕೆ ಮೇಲೆ ಅತ್ಯಾಚಾರವನ್ನೂ ನಡೆಸಿದ್ದಾನೆ. ಬಳಿಕ ಈ ಪಾಪಿ ಆಕೆಯ ಕೊಲೆಗೂ ಯತ್ನಿಸಿದ್ದಾನೆ. ಇದೀಗ ಬಾಲಕಿಯ ಮನೆಯವರು ಪೊಲೀಸರಿಗೆ ನೀಡಿದ ದೂರಿನ ನಂತರ ಆ ಪಾಪಿ ಸಿಕ್ಕಿಬಿದ್ದಿದ್ದಾನೆ.


    man molested the girl stuffed her in a bag and left her in the forest
    ಬಂಧಿತ ಆರೋಪಿ


    ಬೇರೆಯವರೊಂದಿಗೆ ದುರ್ಗಾ ಪೂಜೆಗೆ ಹೋಗಿದ್ದಕ್ಕೆ ಕೋಪ


    ಆರೋಪಿಯನ್ನು 26 ವರ್ಷದ ಸಂಜಯ್ ತೇಲಿ ಅಂತ ಗುರುತಿಸಲಾಗಿದೆ. ಈತ ಕ್ಯಾಚಾರ್ ಜಿಲ್ಲೆಯ ಚಹಾ ತೋಟದ ಕೆಲಸಗಾರನಾಗಿದ್ದು, ಈ ಅಪ್ರಾಪ್ತ ಬಾಲಕಿ ಹಾಗೂ ಆರೋಪಿ ಯುವಕ ಮೊದಲಿನಿಂದಲೂ ಪರಿಚಯಸ್ಥರು. ಆ ಅಪ್ರಾಪ್ತ ಬಾಲಕಿ ಅಕ್ಟೋಬರ್ 3 ರಂದು ಬೇರೊಬ್ಬರೊಂದಿಗೆ ಊರಿನಲ್ಲಿ ದುರ್ಗಾ ಪೂಜೆಯ ಮಂಟಪಕ್ಕೆ ಹೋಗಿದ್ದಳಂತೆ. ಆದರೆ ಆಕೆ ಬೇರೆಯವರೊಂದಿಗೆ ಹೋಗಿದ್ದಕ್ಕೆ ಈ ಯುವಕ ಕೋಪಗೊಂಡಿದ್ದಾನೆ ಎನ್ನಲಾಗಿದೆ.


    ಇದನ್ನೂ ಓದಿ: Anti Hindu Activity: ಸೀರೆ ಉಟ್ಟ ಮಹಿಳೆಯರ ಮೇಲೆ ದಾಳಿ; ಅಮೆರಿಕದಲ್ಲಿ‌ ಹೆಚ್ಚಿದ ಹಿಂದೂ ವಿರೋಧಿ ಚಟುವಟಿಕೆ


    ಅತ್ಯಾಚಾರ ಮಾಡಿ, ಕೊಲೆಗೆ ಯತ್ನ


    ಆಕೆಯ ಮೇಲೆ ಸಿಟ್ಟಾದ ಯುವಕ ದುರ್ಗಾ ಪೂಜೆಗೆ ಅಂತ ಊರಿನ ಮಂಟಪದ ಬಳಿ ಹೋಗಿದ್ದಾಗ ಆಕೆಯನ್ನು ಅಪಹರಣ ಮಾಡಿದ್ದಾನೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆಯೊಯ್ದು ಅತ್ಯಾಚಾರ ಮಾಡಿದ್ದಾನೆ. ಬಳಿಕ ಆಕೆಯ ಕೊಲೆಗೂ ಯತ್ನಿಸಿದ್ದಾನೆ. ಆ ಪಾಪಿ ಆ ಅಪ್ರಾಪ್ತ ಬಾಲಕಿಯ ಕತ್ತು ಸೀಳಲು ಯತ್ನಿಸಿ, ಬ್ಯಾಗ್ ಒಂದರಲ್ಲಿ ತುಂಬಿದ್ದಾನೆ. ಅಲ್ಲೇ ಉಸಿರು ಕಟ್ಟಿ ಸಾಯಲಿ ಎಂಬ ಉದ್ದೇಶದಿಂದ ದಟ್ಟ ಕಾಡಿನ ಮಧ್ಯೆ ತಂದು, ಬ್ಯಾಗ್ ಸಮೇತ ಎಸೆದಿದ್ದಾನೆ.


    ಕಾಡಿನಿಂದ ತಪ್ಪಿಸಿಕೊಂಡು ಬಂದ ಬಾಲಕಿ


    ಆದರೆ ಆ ಬಾಲಕಿ ಅದೃಷ್ಟ ಚೆನ್ನಾಗಿತ್ತು ಅಂತ ಕಾಣಿಸುತ್ತದೆ. ಅತ್ಯಾಚಾರ, ಕೊಲೆ ಯತ್ನ ನಡೆದು, ಗಂಭೀರವಾಗಿ ಗಾಯಗೊಂಡರೂ ಆಕೆ ಆ ದಟ್ಟಾರಣ್ಯದಿಂದ ಅದು ಹೇಗೋ ಬಚಾವಾಗಿ ತನ್ನ ಮನೆಗೆ ಬಂದಿದ್ದಾಳೆ. ಅಕ್ಟೋಬರ್ 3ರಂದು ನಾಪತ್ತೆಯಾಗಿದ್ದ ಆಕೆ, ಒಂದು ದಿನದ ಬಳಿಕ ಅಂದರೆ ಅಕ್ಬೋಬರ್ 4ರಂದು ಮನೆಗೆ ವಾಪಸ್ ಬಂದಿದ್ದಾಳೆ. ಮನೆಗೆ ಬಂದಾಗ ಆಕೆಯ ಬಟ್ಟೆಗಳು ಹರಿದು ಚಿಂದಿಯಾದವು. ಗಂಭೀರ ಗಾಯಗಳಿಂದ ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಳು ಅಂತ ಕುಟುಂಬದ ಸದಸ್ಯರು ತಿಳಿಸಿದ್ದಾರೆ.


    ಇದನ್ನೂ ಓದಿ: Accident: ಭೀಕರ ಅಪಘಾತ; ಧಗಧಗನೇ ಹೊತ್ತಿ ಉರಿದ ಬಸ್, 11 ಮಂದಿಯ ಸಾವು


    ಬಾಲಕಿ ಹೇಳಿಕೆ ಪಡೆದು ಆರೋಪಿ ಬಂಧನ


    ಅತ್ಯಾಚಾರ ಹಾಗೂ ಗಂಭೀರ ದಾಳಿಗೆ ಒಳಗಾದ ಅಪ್ರಾಪ್ತ ಬಾಲಕಿ ಈಗ ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಆಕೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇನ್ನು ಮನೆಯವರು ನೀಡಿದ ದೂರಿನ ಅನ್ವಯ ಆರೋಪಿ ಯುವಕನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

    Published by:Annappa Achari
    First published: