• Home
 • »
 • News
 • »
 • national-international
 • »
 • ತೀರ್ಥಯಾತ್ರೆಗೆ ಹೋಗಿ ನಾಪತ್ತೆ: ನಾಗಾಲ್ಯಾಂಡ್​ನಲ್ಲಿ ಅಲೆಯುತ್ತಿದ್ದ ತಮಿಳಿಗ; 8 ವರ್ಷದ ಬಳಿಕ ಮರಳಿ ಗೂಡಿಗೆ

ತೀರ್ಥಯಾತ್ರೆಗೆ ಹೋಗಿ ನಾಪತ್ತೆ: ನಾಗಾಲ್ಯಾಂಡ್​ನಲ್ಲಿ ಅಲೆಯುತ್ತಿದ್ದ ತಮಿಳಿಗ; 8 ವರ್ಷದ ಬಳಿಕ ಮರಳಿ ಗೂಡಿಗೆ

ಳೀಯ ಭಾಷೆ ಸೇರಿದಂತೆ ಹಿಂದಿ, ಇಂಗ್ಲಿಷ್​ ಅನ್ನು ಕೂಡ ಮಾತನಾಡಲು ಬಾರದ ಹಿನ್ನಲೆ ಗ್ರಾಮಸ್ಥರು ಅವರನ್ನು ಪೊಲೀಸ್​ ಠಾಣೆಗೆ ಕರೆದು ತಂದರು.

ಳೀಯ ಭಾಷೆ ಸೇರಿದಂತೆ ಹಿಂದಿ, ಇಂಗ್ಲಿಷ್​ ಅನ್ನು ಕೂಡ ಮಾತನಾಡಲು ಬಾರದ ಹಿನ್ನಲೆ ಗ್ರಾಮಸ್ಥರು ಅವರನ್ನು ಪೊಲೀಸ್​ ಠಾಣೆಗೆ ಕರೆದು ತಂದರು.

ಳೀಯ ಭಾಷೆ ಸೇರಿದಂತೆ ಹಿಂದಿ, ಇಂಗ್ಲಿಷ್​ ಅನ್ನು ಕೂಡ ಮಾತನಾಡಲು ಬಾರದ ಹಿನ್ನಲೆ ಗ್ರಾಮಸ್ಥರು ಅವರನ್ನು ಪೊಲೀಸ್​ ಠಾಣೆಗೆ ಕರೆದು ತಂದರು.

 • Share this:

   ಎಂಟು ವರ್ಷದ ಹಿಂದೆ ತೀರ್ಥಯಾತ್ರೆಗೆ ಹೋಗಿ ಕಾಣೆಯಾಗಿದ್ದ ತಮಿಳುನಾಡು ಮೂಲದ ವ್ಯಕ್ತಿ ಕಡೆಗೆ ನಾಗಲ್ಯಾಂಡ್​ನಲ್ಲಿ ಪತ್ತೆಯಾಗಿದ್ದಾರೆ. ತಮಿಳುನಾಡಿನ ಪುದುಕ್ಕೊಟ್ಟೈನಿಂದ ಉತ್ತರ ಭಾರತಕ್ಕೆ ತೀರ್ಥಯಾತ್ರೆಗೆ ಬಂದಿದ್ದ  ಮಾರವೇಲ್​ ನಾಪತ್ತೆಯಾಗಿದ್ದರು. ಅವರು ಕಾಣೆಯಾದ ಕುರಿತು ದೂರು ಕೂಡ ದಾಖಲಿಸಲಾಗಿತ್ತು. ಈ ಘಟನೆ ನಡೆದು 8 ವರ್ಷಗಳ ಬಳಿಕ ಅವರು ನಾಗಾಲ್ಯಾಂಡ್​ನಲ್ಲಿ ಅಲೆದಾಡುತ್ತಿರುವುದು ಕಂಡು ಬಂದಿದೆ. ಇವರನ್ನು ಪತ್ತೆ ಹಚ್ಚಿದ ​ ಪೊಲೀಸರು, ನ್ಯಾಗಾಲ್ಯಾಂಡ್ ತಮಿಳು ಸಂಘ ಸಹಾಯದಿಂದ ತಮಿಳಿನಾಡಿನ ಪುದುಕ್ಕೊಟ್ಟೈಗೆ ವಾಪಸ್​ ಕಳುಹಿಸಿದ್ದಾರೆ. ನ. 5ರಂದು ನಾಗಲ್ಯಾಂಡ್​ನ ಪೆರೆನ್​ ಜಿಲ್ಲೆಯ ಅಥಿಬಂಗ್​ನ ಬೊಂಗ್ಕೊಲಾಂಗ್​ ಗ್ರಾಮದಲ್ಲಿ ಇವರು ತಿರುಗಾಡುತ್ತಿದ್ದರು. ಇಲ್ಲಿನ ಸ್ಥಳೀಯ ಭಾಷೆ ಸೇರಿದಂತೆ ಹಿಂದಿ, ಇಂಗ್ಲಿಷ್​ ಅನ್ನು ಕೂಡ ಮಾತನಾಡಲು ಬಾರದ ಹಿನ್ನಲೆ ಗ್ರಾಮಸ್ಥರು ಅವರನ್ನು ಪೊಲೀಸ್​ ಠಾಣೆಗೆ ಕರೆದು ತಂದರು. ಇಲ್ಲಿ ಪೊಲೀಸರು ಸ್ಥಳೀಯ ತಮಿಳು ಭಾಷೆ ಬಲ್ಲವರ ಸಹಾಯದಿಂದ ಗುರುತು ಪತ್ತೆ ಹಚ್ಚಿದರು.


  ಕುಮಾರ್​ವೇಲ್​ ಮಾಹಿತಿ ಪಡೆದ ನಾಗಾಲ್ಯಾಂಡ್​ ಪೊಲೀಸರು ಬಳಿಕ ಪುದುಕ್ಕೊಟ್ಟೈ ಜಿಲ್ಲಾ ಪೊಲೀಸರೊಂದಿಗೆ ಸಂಪರ್ಕಿಸಿ ಮಾಹಿತಿ ಪಡೆದರು. ಈ ವೇಳೆ ಕುಮಾರ್​ವೇಲ್​ ನಾಪತ್ತೆಯಾಗಿರುವ ಸಂಗತಿ ತಿಳಿದು ಬಂದಿದೆ. ಇದಾದ ಬಳಿಕ ಅವರನ್ನು ವಾಪಸ್ಸು ಕಳುಹಿಸುವ ವ್ಯವಸ್ಥೆಗೆ ಮುಂದಾದರು.  ಇಲ್ಲಿನ ಸ್ಥಳೀಯ ವೃದ್ಧಾಶ್ರಮಕ್ಕೆ ಅವರನ್ನು ದಾಖಲಿಸಿ, ಮರಳಿ ಮನೆಗೆ ಸೇರಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದರು.


  ಇದಾದ ತಿಂಗಳೊಳಗೆ ಅವರನ್ನು ಊರಿಗೆ ಕಳುಹಿಸಲು ಅಗತ್ಯ ವವಸ್ಥೆ ಮಾಡಲಾಯಿತು.
  ನಾಗಾಲ್ಯಾಂಡ್​ನ ತಮಿಳು ಸಂಗಮ್​ ಜೊತೆಗೆ ಎರಡು ರಾಜ್ಯಗಳ ಪೊಲೀಸರ ಸಮನ್ವಯದಿಂದಾಗಿ ಕುಮಾರ್​ವೇಲ್​ ಕಡೆಗೂ ತಮ್ಮ ಕುಟುಂಬವನ್ನು ಸೇರಿದ್ದಾರೆ. ಡಿ. 11ರಂದು ತಮಿಳು ಸಂಘಮ್​ ಸಲಹೆಗಾರ ಕಣ್ಣನ್​ ಜೊತೆ ಪುದುಕ್ಕೊಟ್ಟೈ ಜಿಲ್ಲೆಯ ಪೊಲೀಸರಿಗೆ ಅವರನ್ನು ಒಪ್ಪಿಸಲಾಗಿದೆ

  Published by:Seema R
  First published: