ಸ್ಮಾರ್ಟ್​ಫೋನ್​ ಬಳಸುವ ಮುನ್ನ ಎಚ್ಚರ; 1.89 ಕೋಟಿ ಕಳೆದುಕೊಂಡವನ ಮೊಬೈಲ್​ನಲ್ಲಿತ್ತು 6 ಮಿಸ್​ಕಾಲ್!

ಸಿಮ್​ ಸ್ವಾಪಿಂಗ್​ ಮೂಲಕ ಓಟಿಪಿ ಪಡೆದು, ಬ್ಯಾಂಕ್​ ಅಕೌಂಟ್​ನಲ್ಲಿರುವ ಹಣವನ್ನು ದೋಚುವುದು ಆಧುನಿಕ ಕಾಲದ ದರೋಡೆಕಾರರ ಕೈಚಳಕ. ಈ ಬಗ್ಗೆ ನಿಮಗೆಷ್ಟು ಗೊತ್ತು?

sushma chakre | news18
Updated:January 4, 2019, 5:56 PM IST
ಸ್ಮಾರ್ಟ್​ಫೋನ್​ ಬಳಸುವ ಮುನ್ನ ಎಚ್ಚರ; 1.89 ಕೋಟಿ ಕಳೆದುಕೊಂಡವನ ಮೊಬೈಲ್​ನಲ್ಲಿತ್ತು 6 ಮಿಸ್​ಕಾಲ್!
ಪ್ರಾತಿನಿಧಿಕ ಚಿತ್ರ
sushma chakre | news18
Updated: January 4, 2019, 5:56 PM IST
ಇತ್ತೀಚೆಗೆ ಅಂತರ್ಜಾಲದ ಮೂಲಕ ಅಮಾಯಕರ ಹಣ ದೋಚುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಫೋನ್​ ಮಾಡಿ ಬ್ಯಾಂಕ್​ನಿಂದಲೋ, ಮೊಬೈಲ್​ ಕಂಪನಿಯಿಂದಲೋ ಮಾತನಾಡುತ್ತಿರುವುದಾಗಿ ತಿಳಿಸಿ ನಮ್ಮ ಖಾಸಗಿ ಮಾಹಿತಿ ಪಡೆದು ನಾಮ ಹಾಕುವವರು ಹೆಚ್ಚಾಗಿದ್ದಾರೆ. ಅದೇರೀತಿ, ಮುಂಬೈನ ಉದ್ಯಮಿಯೂ ಯಾಮಾರಿದ್ದು, ಬರೋಬ್ಬರಿ 1.86 ಕೋಟಿ ರೂ. ಕಳೆದುಕೊಂಡಿದ್ದಾರೆ!

ಸ್ಮಾರ್ಟ್​ಫೋನ್​ಗಳು ಬಂದಮೇಲೆ ನಮ್ಮ ಎಷ್ಟೋ ಕೆಲಸಗಳು ಸುಲಭವಾಗಿವೆ ಎಂದು ನಾವಂದುಕೊಳ್ಳುತ್ತೇವೆ. ಆದರೆ, ಅದರೊಂದಿಗೆ ಅಪಾಯವನ್ನೂ ನಾವು ಮೈಮೇಲೆ ಎಳೆದುಕೊಂಡಿದ್ದೇವೆ ಎಂಬುದು ಕಹಿ ಅನುಭವವಾದ ನಂತರವೇ ಗೊತ್ತಾಗುವುದು.
ಮುಂಬೈ ಮೂಲದ ಟೆಕ್ಸ್​ಟೈಲ್ ಉದ್ಯಮಿಯ ಸಿಮ್​ ಸ್ವಾಪ್​ ಮಾಡಿ (ಆತನ ಸಿಮ್​ ಮೇಲೆ ಹಿಡಿತ ಸಾಧಿಸಿ) ಅನಾಮಧೇಯರು 1.86 ಕೋಟಿ ರೂ. ದೋಚಿಕೊಂಡಿದ್ದಾರೆ. ರಾತ್ರಿ 11.44ರಿಂದ 1.58ರೊಳಗೆ 6 ಮಿಸ್​ ಕಾಲ್​ ಇರುವುದನ್ನು ನೋಡಿ ಅನುಮಾನಗೊಂಡ ಆ ಉದ್ಯಮಿ ಈ ಮಾಹಿತಿಯನ್ನು ಸೈಬರ್​ ಪೊಲೀಸರಿಗೆ ತಿಳಿಸಿದ್ದಾರೆ. ಅದನ್ನು ಬಳಸಿ ಕಳ್ಳರನ್ನು ಪತ್ತೆಹಚ್ಚಲು ಹೊರಟ ಪೊಲೀಸರಿಗೆ ಆ ಮಿಸ್​ಕಾಲ್​ಗಳು ಯುಕೆಯಿಂದ ಬಂದಿತ್ತು ಎಂಬುದು ಗೊತ್ತಾಗಿದೆ. ಅದಾದ ಮಾರನೇ ದಿನವೇ ಉದ್ಯಮಿಯ ಫೋನ್​ ಕೆಲಸ ಮಾಡುವುದು ನಿಲ್ಲಿಸಿ ಸ್ವಿಚ್​ ಆಫ್​ ಆಗಿದೆ.

ಇದನ್ನೂ ಓದಿ: ನಾಲಿಗೆ ಕ್ಲೀನ್​ ಮಾಡುವ ಭರದಲ್ಲಿ ಟೂತ್​​ಬ್ರಶ್​ ನುಂಗಿದ ಭೂಪ!

ಇದರಿಂದ ಆಶ್ಚರ್ಯಚಕಿತನಾದ ಉದ್ಯಮಿ ತನ್ನ ನೆಟ್​ವರ್ಕ್​ ಕಂಪನಿಯ ಸರ್ವಿಸ್​ ಪ್ರೊವೈಡರ್​ ಬಳಿ ವಿಚಾರಿಸಿದಾಗ ನಿನ್ನೆ ರಾತ್ರಿ ನೀವೇ ಕರೆ ಮಾಡಿ ಮನವಿ ಮಾಡಿದ್ದರಿಂದ ನಿಮ್ಮ ಸಿಮ್​ ಕಾರ್ಡ್​ ಬ್ಲಾಕ್​ ಮಾಡಿದ್ದೇವೆ ಎಂದು ತಿಳಿಸಿದರು. ಆದರೆ, ಆತ ಯಾವುದೇ ಮನವಿ ಮಾಡಿರಲಿಲ್ಲ ಎಂದು ಹೇಳಿದ್ದರಿಂದ ಹೊಸ ಸಿಮ್​ ನೀಡಲಾಯಿತು.
ಆ ಉದ್ಯಮಿಯ ಬ್ಯಾಂಕ್​ ಅಕೌಂಟ್​ನಿಂದ 15 ನಾನಾ ಖಾತೆಗಳಿಗೆ ಹಣ ಜಮಾ ಆಗಿತ್ತು. ಆದರೆ, ಈ ವಿಷಯ ಉದ್ಯಮಿಗೆ ಗೊತ್ತಾಗಲೇ ಇಲ್ಲ. ವಂಚಕರು ಆ ಉದ್ಯಮಿಯ ಸಿಮ್​ ಕಾರ್ಡ್​ ಬ್ಲಾಕ್​ ಮಾಡಿಸಿದ್ದರಿಂದ ಬ್ಯಾಂಕ್​ ಅಕೌಂಟ್​ಗೆ ಸಂಬಂಧಿಸಿದ ಯಾವುದೇ ಮೆಸೇಜ್​ಗಳು ಬಂದಿರಲಿಲ್ಲ. ಹೀಗಾಗಿ, ಆತನ ಖಾತೆಯಲ್ಲಿದ್ದ ಹಣವನ್ನು ದೋಚಿಕೊಂಡಿದ್ದು ಆತನಿಗೆ ತಿಳಿಯುವಾಗ ತಡವಾಗಿಬಿಟ್ಟಿತ್ತು.

ಇದನ್ನೂ ಓದಿ: ಮ್ಯಾಗಿ ಪ್ರಿಯರೇ ಎಚ್ಚರ; ಯಮ್ಮಿ ನ್ಯೂಡಲ್ಸ್​ನಲ್ಲಿದೆ ಸೀಸದ ಅಂಶ, ಸುಪ್ರೀಂ​ ಮುಂದೆ ಒಪ್ಪಿಕೊಂಡ ನೆಸ್ಲೆ
Loading...

ಆತನ ಕಂಪನಿಯ ಉದ್ಯೋಗಿ ಫಂಡ್​ ಟ್ರಾನ್ಸ್​ಫರ್​ ಮಾಡಲು ಬ್ಯಾಂಕ್​ಗೆ ಹೋದಾಗ ಆ ಉದ್ಯಮಿಯ ಅಕೌಂಟ್​ನಲ್ಲಿದ್ದ ಹಣದಲ್ಲಿ ತೀವ್ರ ಇಳಿಕೆಯಾಗಿರುವುದು ತಿಳಿದುಬಂದಿತು. ನಂತರ ತನ್ನ ಮೊಬೈಲ್​ ಸ್ವಿಚ್​ಆಫ್​ ಆಗಿದ್ದು, ಸಿಮ್​ ಬ್ಲಾಕ್​ ಆಗಿದ್ದು ಹಾಗೂ ಬ್ಯಾಂಕ್​ನಲ್ಲಿದ್ದ ಹಣ ಕಡಿಮೆಯಾದ ಬಗ್ಗೆ ಒಂದಕ್ಕೊಂದು ತಳುಕು ಹಾಕಿದ ಉದ್ಯಮಿಗೆ ತನಗಾದ ಮೋಸದ ಅರಿವಾಗಿದೆ. ತಕ್ಷಣ ಅವರು ಮುಂಬೈನ ಸೈಬರ್​ ಕ್ರೈಮ್​ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಬೆಟರ್​ ಇಂಡಿಯಾ ವೆಬ್​ಸೈಟ್​ ವರದಿ ಮಾಡಿದೆ.

ಇದು ಸಿಮ್​ ಸ್ವಾಪ್​ ಪ್ರಕರಣ ಎಂದು ಅರಿತ ಸೈಬರ್​ ಕ್ರೈಮ್​ ಪೊಲೀಸರು ಆ ಪ್ರಕರಣದ ಬೆನ್ನತ್ತಿ ಹೋದರು. ಆಗ ವಂಚಕರು ಆ ಉದ್ಯಮಿಯ ಬ್ಯಾಂಕ್​ ಅಕೌಂಟ್​ ಮಾಹಿತಿ, ಕ್ರೆಡಿಟ್​ ಕಾರ್ಡ್​ ನಂಬರ್ ಮುಂತಾದ ಖಾಸಗಿ ಮಾಹಿತಿಯನ್ನು ಪಡೆದು, ಸಿಮ್​ ಕಾರ್ಡ್​ ಅನ್ನು ಹ್ಯಾಕ್​ ಮಾಡಿ, ಅದಕ್ಕೆ ಬಂದ ಓಟಿಪಿ ಮೂಲಕ ಉದ್ಯಮಿಯ ಬ್ಯಾಂಕ್​ ಖಾತೆಯ ಹಣವನ್ನು ತಮ್ಮ ಅಕೌಂಟಿಗೆ ಹಾಕಿಕೊಂಡಿರುವ ಸಂಗತಿ ಬಯಲಾಗಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ 65ರ ಮಹಿಳೆ; ಇದೆಲ್ಲ ಅಲ್ಲಾಹ್ ಪವಾಡ ಎಂದ 80 ವರ್ಷದ ತಂದೆ!

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕುಳಿತಲ್ಲಿದ್ದಲೇ ಎಲ್ಲ ಸೌಲಭ್ಯವನ್ನು ಪಡೆಯಬಹುದು ಎಂಬುದು ಎಷ್ಟು ಸತ್ಯವೋ ಅದೇ ರೀತಿ ಕುಳಿತಲ್ಲಿಂದಲೇ ಯಾರಿಗೆ ಬೇಕಾದರೂ ಪಂಗನಾಮ ಹಾಕಬಹುದು ಎಂಬುದು ಕೂಡ ಅಷ್ಟೇ ಸತ್ಯ. ಹಾಗಾಗಿ, ನಿಮ್ಮ ಫೋನ್​ನಲ್ಲಿ ಏನಾದರೂ ಅನುಮಾನಾಸ್ಪದ ಸಂಗತಿಗಳು ಕಂಡುಬಂದರೆ ಅಥವಾ ನಿಮ್ಮ ಸಿಮ್​ ಇದ್ದಕ್ಕಿದ್ದಂತೆ ಬ್ಲಾಕ್​ ಆದರೆ ನಿಮ್ಮ ಸರ್ವಿಸ್​ ಪ್ರೊವೈಡರ್​ಗೆ ಮಾಹಿತಿ ನೀಡಿ ತಕ್ಷಣವೇ ಅದನ್ನು ಆ್ಯಕ್ಟಿವೇಟ್​ ಮಾಡಿಸಿಕೊಳ್ಳಿ. ನಿಮ್ಮ ಅಕೌಂಟ್​ನಿಂದ ಹಣ ಕಡಿಮೆಯಾದ ಬಗ್ಗೆ ತಿಳಿದುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.

First published:January 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ