• Home
 • »
 • News
 • »
 • national-international
 • »
 • ವ್ಯಾಲೆಂಟೈನ್ಸ್ ಡೇಗೆ ಪ್ರೇಯಸಿಗೆ ಖುಷಿ ಪಡಿಸಲು ಹೋದವನಿಗೆ ಕಾದಿತ್ತು ಶಾಕ್!

ವ್ಯಾಲೆಂಟೈನ್ಸ್ ಡೇಗೆ ಪ್ರೇಯಸಿಗೆ ಖುಷಿ ಪಡಿಸಲು ಹೋದವನಿಗೆ ಕಾದಿತ್ತು ಶಾಕ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತನ್ನ ಗೆಳತಿಯನ್ನು ಖುಷಿ ಪಡಿಸಲು ಹೋಗಿ ಜಪಾನ್ನಲ್ಲೊಬ್ಬ ಪ್ರೇಮಿ ಎಡವಟ್ಟು ಮಾಡಿಕೊಂಡಿದ್ದಾನೆ.

 • Share this:

  ವ್ಯಾಲೆಂಟೈನ್ಸ್ ಡೇಗಾಗಿ ಪ್ರೇಮಿಗಳು ವರ್ಷವಿಡೀ ಕಾಯುತ್ತಿರುತ್ತಾರೆ. ಈ ವೇಳೆ ತನ್ನ ಗೆಳತಿಯರನ್ನು, ಪ್ರೀತಿ ಪಾತ್ರರಿಗೆ ಖುಷಿ ಪಡಿಸಲು ಹೊರಗೆ ಕರೆದುಕೊಂಡು ಹೋಗುವುದು ಮಾಮೂಲಿ. ಇದೇ ರೀತಿ, ತನ್ನ ಗೆಳತಿಯನ್ನು ಖುಷಿ ಪಡಿಸಲು ಹೋಗಿ ಜಪಾನ್ನಲ್ಲೊಬ್ಬ ಪ್ರೇಮಿ ಎಡವಟ್ಟು ಮಾಡಿಕೊಂಡಿದ್ದಾನೆ. ವೈನ್ ಆರ್ಡರ್ ಮಾಡುವ ವೇಳೆ ಅದರ ಬೆಲೆಯನ್ನು ಸರಿಯಾಗಿ ಲೆಕ್ಕ ಹಾಕದೆ ಕುಡಿದಿದ್ದಾರೆ. ನಂತರ ಬಿಲ್ ನೋಡಿ ಶಾಕ್ ಆಗಿದ್ದು, ತನಗೆ ಹಾಗೂ ತನ್ನ ಬ್ಯಾಂಕ್ ಅಕೌಂಟ್​ಗಾದ ನಷ್ಟದ ಕತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಆದರೂ, ಹೆಚ್ಚು ಬೇಸರಪಡದೆ ತನ್ನ ಮೆದುಳಿಗೆ ಮಂಕು ಕವಿದಿತ್ತು ಎಂದು ಹೇಳಿಕೊಂಡು ಬಿಲ್ ಕೊಟ್ಟು ಬಂದೆ ಎಂದೂ ಬರೆದಿದ್ದಾನೆ.


  ಕಳೆದ ಎರಡು ವರ್ಷಗಳಿಂದ ಜಪಾನ್​ನಲ್ಲಿ ವಾಸಿಸುತ್ತಿರುವ ಭೂಪ ಪ್ರೇಮಿಗಳ ದಿನಾಚರಣೆಯಂದು ತನ್ನ ಗೆಳತಿಯನ್ನು ಕರೆದುಕೊಂಡು ಊಟಕ್ಕೆ ಹೋಗಿದ್ದಾನೆ. ನಾನು ಹೆಚ್ಚು ಹಣವನ್ನು ಸುಖಾಸುಮ್ಮನೆ ಖರ್ಚು ಮಾಡಲ್ಲ ಎಂದು ಹೇಳಿಕೊಂಡಿರುವ ಈತ ವೈನ್​ ಒಂದಕ್ಕೆ ಭಾರೀ ಬೆಲೆ ತೆತ್ತು ಬಂದಿದ್ದಾನೆ.


  ಈ ಹೋಟೆಲ್ನಲ್ಲಿ ಯಾವ ವೈನ್ ಚೆನ್ನಾಗಿರುತ್ತದೆ ಎಂಬುದರ ಕುರಿತು ವೇಟರ್ ಅನ್ನು ಆತ ಸಲಹೆ ಕೇಳಿದ್ದಾನೆ. ಆದರೆ ವೇಟರ್ ಹೇಳಿದ ವೈನ್​ಗಳು ದುಬಾರಿಯೆಂದು ಪರಿಗಣಿಸಿ, ಅಂತಿಮವಾಗಿ 2013ರಲ್ಲಿ ಮಾಡಿದ ಅಮ್ಯೂಸ್ ಬೌಚೆ ಎಂಬ ಬ್ರ್ಯಾಂಡ್ ಅನ್ನು ಆಯ್ಕೆ ಮಾಡಿದ್ದಾನೆ. ಆ ವೈನ್​ಗೆ 60 ಪೌಂಡ್ ಆಗುತ್ತದೆಂದು ತಿಳಿದು ಆರ್ಡರ್ ಮಾಡಿದ್ದಾರೆ. ಆದರೆ, ಕುಡಿದು ಎಂಜಾಯ್ ಮಾಡಿದ ಬಳಿಕವೇ ಗೊತ್ತಾಗಿದ್ದು, ಅದಕ್ಕೆ ಸುಮಾರು 600 ಪೌಂಡ್ ಆಗಿದೆ ಎಂದು. ನಂತರ ಬಿಲ್ ನೋಡಿ ಶಾಕ್ ಆದರೂ, ಹೆಚ್ಚು ತಲೆ ಕೆಡಿಸಿಕೊಳ್ಳದೆ ಹೋಟೆಲ್​ನ ಬಿಲ್ ಕೊಟ್ಟು ಬಂದಿದ್ದಾರೆ.


  ತನ್ನ ಈ ಕತೆಯನ್ನು ರೆಡ್ಡಿಟ್ ಎಂಬ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವುದು ಹೀಗೆ..


  ''ನಾನು ಈಗ ಸುಮಾರು ಎರಡು ವರ್ಷಗಳಿಂದ ಜಪಾನ್​ನಲ್ಲಿ ವಾಸಿಸುತ್ತಿದ್ದೇನೆ ಮತ್ತು ಸುಮಾರು ಆರು ತಿಂಗಳಿನಿಂದ ಹುಡುಗಿಯೊಬ್ಬರನ್ನು ಪ್ರೀತಿಸುತ್ತಿದ್ದೇನೆ. ಇಂದು ಪ್ರೇಮಿಗಳ ದಿನವಾದ್ದರಿಂದ, ನಾನು ರೆಸ್ಟೋರೆಂಟ್ನಲ್ಲಿ ಊಟಕ್ಕೆ ಟೇಬಲ್ ಬುಕ್ ಮಾಡಿದ್ದೆ. ಸಾಮಾನ್ಯವಾಗಿ ನಾನು ಈ ರೀತಿ ಮಾಡಲ್ಲ, ಕಡಿಮೆ ಖರ್ಚಿನಲ್ಲೇ ಮಜಾ ಮಾಡುತ್ತೇನೆ. ಆದರೆ, ನಾವಿಬ್ಬರೂ ಅಪರೂಪಕ್ಕೆ ಒಳ್ಳೆಯ ಬಟ್ಟೆ ಹಾಕಿಕೊಂಡು ಒಳ್ಳೆಯ ಹೋಟೆಲ್​ಗೆ ಹೋಗಲು ನಿರ್ಧರಿಸಿದೆವು.''


  ''ಎರಡು ಕೋರ್ಸ್ ಊಟ ಮಾಡಿದರೂ ಹೆಚ್ಚು ಖರ್ಚಾಗಿರಲಿಲ್ಲ. ಆದರೆ, ಡ್ರಿಂಕ್ಸ್ ಆರ್ಡರ್ ಮಾಡುವ ಸಮಯ ಬಂದಾಗಲೇ ಎಡವಟ್ಟು ಆಯಿತು. ರೊಮ್ಯಾಂಟಿಕ್ ಡಿನ್ನರ್ ಹಿನ್ನೆಲೆ ವೈನ್ ಕುಡಿಯಲು ನಿರ್ಧರಿಸಿದೆವು. ನಾನು ವೈನ್ ತಜ್ಞನಂತೆ ನಟಿಸದಿರಲು ಮತ್ತು ಈ ರೀತಿಯ ವಿಷಯಕ್ಕೆ ಬಂದಾಗ ಸರ್ವರ್ಗಳನ್ನು ಅವರ ಶಿಫಾರಸುಗಾಗಿ ಕೇಳಲು ನಾನು ಬಹಳ ಹಿಂದಿನಿಂದಲೂ ನಿರ್ಧರಿಸಿದ್ದೇನೆ. ನಮ್ಮ ವೇಟರ್ ಈ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು. ಅವರು 16,000 ಯೆನ್ ಅಥವಾ 160 ಡಾಲರ್ ಬೆಲೆ ರೇಂಜ್​ನ ವೈನ್ ಬಗ್ಗೆ ಹೇಳಿದರು. ಆದರೆ, ಅವುಗಳು ದುಬಾರಿ ಎಂದು ನಾನು ಭಾವಿಸಿ, 80 ಡಾಲರ್ನ ವೈನ್ ಅನ್ನು ಆಯ್ಕೆ ಮಾಡಿದೆ. ಇದು ಉತ್ತಮ ವೈನೇ ಎಂದು ಕೇಳಿದೆ. ಅದಕ್ಕೆ ವೇಟರ್ "ಓಹ್, ಅದು ತುಂಬಾ ಒಳ್ಳೆಯ ವೈನ್, ಸರ್" ಎಂದರು. ನಂತರ ಅದನ್ನು ಆರ್ಡರ್ ಮಾಡಿದೆ.


  ಇದನ್ನೂ ಓದಿ: ಮದ್ಯ ಸೇವನೆಗೆ ಅಡ್ಡಿ ಎಂದು ಕೊಡಗಿನಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆಯಲು ಹಿಂದೇಟು


  ನಂತರ 10 ನಿಮಿಷ ನನ್ನ ಗೆಳತಿ ವೈನ್ ಆರ್ಡರ್ ಮಾಡುವ ಪ್ರಕ್ರಿಯೆಯ ಬಗ್ಗೆ ತಮಾಷೆ ಮಾಡಿದಳು. ಅಗ್ಗದ ವೈನ್ ಆಯ್ಕೆ ಮಾಡಿದ್ದಕ್ಕೆ ಅವಳು ನನ್ನನ್ನು ಗೇಲಿ ಮಾಡುತ್ತಿದ್ದಾಳೆಂದು ನಾನು ಭಾವಿಸಿದೆ. ಬಳಿಕ ವೈನ್ ಅನ್ನು ನಮಗೆ ನೀಡಲಾಯಿತು ಮತ್ತು ಅದು ನಿಜವಾಗಿಯೂ ಚೆನ್ನಾಗಿತ್ತು ಎಂದು ನಾವಿಬ್ಬರೂ ಒಪ್ಪಿದೆವು. ವೈನ್ ಕುಡಿಯುತ್ತಿರುವ ವೇಳೆಯೂ ನನ್ನ ಗೆಳತಿ ತಮಾಷೆ ಮಾಡುತ್ತಿದ್ದಳು. ಆ ವೈನ್​ಗೆ 80,000 ಯೆನ್. ಅದರೂ 80,000 ಡಾಲರ್ ಆಗಲಿಕ್ಕಿಲ್ಲ ಎಂದು ತಮಾಷೆ ಮಾಡಿದಳು.


  ಆಗ ನನಗೆ ನಿಜಾಂಶ ಗೊತ್ತಾಯಿತು. ಅದಕ್ಕೆ 80 ಡಾಲರ್ ಅಲ್ಲ, ಹತ್ತಿ ಹತ್ತಿರ 800 ಡಾಲರ್ ಆಗುತ್ತದೆ. ನನ್ನ ಬುದ್ಧಿಗೆ ಮಂಕು ಕವಿದಿತ್ತು ಎಂದುಕೊಂಡೆ. ಅವಳು ಅತಿರೇಕದ ಬೆಲೆಯ ಬಗ್ಗೆ ಕಾಳಜಿಯನ್ನು ತೋರಿಸುತ್ತಿದ್ದಳು. ಆದರೂ, ನಾನು ಅದರ ಬಗ್ಗೆ ಚಿಂತಿಸಬೇಕಾಗಿಲ್ಲ, ಮತ್ತು ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ, ಆದರೆ ನನ್ನ ಬ್ಯಾಂಕ್ ಖಾತೆ ಇಂದು ರಾತ್ರಿ ಖಂಡಿತವಾಗಿಯೂ ಹೆಚ್ಚು ಬರಿದಾಗಿದೆ.'' ಎಂದು ಹೇಳಿಕೊಂಡಿದ್ದಾನೆ.


  ಅಲ್ಲದೆ, ಬಿಲ್ ಬಂದಾಗ ನಾನು ಮಾನಸಿಕವಾಗಿ ನನ್ನನ್ನು ಸಿದ್ಧಪಡಿಸಬೇಕಾಗಿತ್ತು. ಆದರೂ, ನಾನು ಮುಂದಿನ 10 ವ್ಯಾಲೆಂಟೈನ್ ಡೇ ಗಳಲ್ಲಿ ಕೇವಲ ನಲ್ಲಿಯ ನೀರು ಕುಡಿಯಬೇಕಾಗುತ್ತದೆ ಎಂದು ನನ್ನ ಗೆಳತಿಗೆ ಹೇಳಿದೆ. '' ಎಂದು ಹೇಳಿಕೊಂಡಿದ್ದಾನೆ.


  ರೆಡ್ಡಿಟ್​ನಲ್ಲಿನ ಅನುಭವವನ್ನು ಹಂಚಿಕೊಂಡ ನಂತರ, ನೆಟ್ಟಿಗರು ಅದಕ್ಕೆ ನಾನಾ ವಿಧದ ಕಾಮೆಂಟ್​ಗಳನ್ನು ಮಾಡಿದ್ದಾರೆ.

  Published by:Sushma Chakre
  First published: