Love Affair: ಹೆಂಡತಿಯನ್ನು ಮನೆಯಲ್ಲೇ ಬಿಟ್ಟು ಅವಳ ಬೆಸ್ಟ್ ಫ್ರೆಂಡ್​ ಜೊತೆ ಹನಿಮೂನ್ ಹೋದ ಗಂಡ !

Love Affair: ಇಲ್ಲೊಬ್ಬ ಭೂಪ ದಿನಗಟ್ಟಲೆ ತನ್ನ ಹೆಂಡತಿಯ ಜೊತೆಗೆ ಹನಿಮೂನ್ ಹೋಗಲು ಪ್ಲಾನಿಂಗ್ ಮಾಡಿದ್ದ. ಆದರೆ ನಂತರ ಹನಿಮೂನ್ ಹೋಗಿದ್ದು ಮಾತ್ರ ಹೆಂಡತಿಯ ಬೆಸ್ಟ್ ಫ್ರೆಂಡ್ ಜೊತೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Extramarital Affair: ಗಂಡ ಹೆಂಡತಿ ನಡುವೆ ವೈಮನಸ್ಯ ಉಂಟಾಗೋದು, ಅದರಿಂದ ವಿಚ್ಛೇದನದವರಗೆ ಮಾತು ಮುಂದುವರೆಯೋದು ಎಲ್ಲಾ ಸರ್ವೇ ಸಾಮಾನ್ಯ ಎನ್ನುವಂತಾಗಿಬಿಟ್ಟಿದೆ. ಅನೇಕ ಸಲ ಇಬ್ಬರಲ್ಲಿ ಒಬ್ಬರಿಗೆ ವಿಚ್ಛೇದನ ಇಷ್ಟವಿಲ್ಲದಿದ್ದರೂ ಮತ್ತೊಬ್ಬರ ಒತ್ತಾಯಕ್ಕೆ ಮಣಿದು ಬೇರೆಯಾಗಲೇಬೇಕಾಗುತ್ತದೆ. ಅನೇಕ ವರ್ಷಗಳವರಗೆ ಇದೇ ವಿಚಾರಕ್ಕಾಗಿ ಕೋರ್ಟಿನಲ್ಲಿ ಕಾದಾಡಿದವರೂ ಸಾಕಷ್ಟಿದ್ದಾರೆ. ಆದರೆ ಹೀಗೆ ವೈಮನಸ್ಯವಿದ್ದಾಗ ನೇರವಾಗಿ ಹೇಳಿ ವಿಚಾರ ಮುಗಿಸಿಕೊಳ್ಳುವುದು ಒಳ್ಳೆಯದು. ಅದನ್ನು ಬಿಟ್ಟು ಕದ್ದು ಮುಚ್ಚಿ ಅನೈತಿಕ ಸಂಬಂಧ ಇರಿಸಿಕೊಂಡು ಎಲ್ಲರಿಗೂ ಇರಿಸುಮುರಿಸು ಉಂಟಾಗಿ ನಂತರ ರಂಪ ರಾಮಾಯಣ ಮಾಡಿಕೊಳ್ಳುವ ಅವಶ್ಯಕತೆಯಾದರೂ ಏನಿರುತ್ತದೆ? ಈಗ ಇಂಥದ್ದೇ ಒಂದು ಪ್ರಕರಣ ತಡವಾಗಿ ತಿಳಿದಿದೆ. ಇಲ್ಲೊಬ್ಬ ಭೂಪ ದಿನಗಟ್ಟಲೆ ತನ್ನ ಹೆಂಡತಿಯ ಜೊತೆಗೆ ಹನಿಮೂನ್ ಹೋಗಲು ಪ್ಲಾನಿಂಗ್ ಮಾಡಿದ್ದ. ಆದರೆ ನಂತರ ಹನಿಮೂನ್ ಹೋಗಿದ್ದು ಮಾತ್ರ ಹೆಂಡತಿಯ ಬೆಸ್ಟ್ ಫ್ರೆಂಡ್ ಜೊತೆ. ಇಲ್ಲಿ ಪತಿ ಮತ್ತು ತನ್ನದೇ ಆಪ್ತ ಗೆಳತಿ ಇಬ್ಬರಿಂದಲೂ ಮೋಸಹೋಗಿದ್ದು ಮಾತ್ರ ಹೆಂಡತಿಯೇ.

ಅವರಿಬ್ಬರೂ ಮದುವೆಯಾಗಿ ನಾಲ್ಕೂವರೆ ವರ್ಷಗಳಾಗಿದ್ದವು. ಇಬ್ಬರ ನಡುವೆ ಎಲ್ಲವೂ ಚೆನ್ನಾಗೇ ಇತ್ತು. ನಾನಾ ಕಾರಣಗಳಿಂದ ಅವರಿಗೆ ಹನಿಮೂನ್ ಗೆ ಹೋಗೋಕೆ ಸಾಧ್ಯವಾಗಿರಲಿಲ್ಲ. ತಮಗಿಬ್ಬರಿಗೂ ಬಹಳ ಇಷ್ಟವಾದ ಆದರೆ ಬಲು ದುಬಾರಿಯಾದ ಹೋಟೆಲೊಂದರಲ್ಲಿ ಡಿಸ್ಕೌಂಟ್ ಇತ್ತು. ಇದನ್ನು ಗಮನಿಸಿ ಇಬ್ಬರೂ ಅಲ್ಲಿಗೇ ಹನಿಮೂನ್​ಗೆ ಹೋಗೋಣ ಎಂದು ಡಿಸೈಡ್ ಮಾಡಿದ್ರು. ಆ ಹೋಟೆಲ್, ಅದರ ಸುತ್ತಮುತ್ತಲಿನ ಸ್ಥಳ, ತಾವು ಮಾಡಬೇಕಾದ ಖರ್ಚು ಎಲ್ಲವನ್ನೂ ದಿನಗಟ್ಟಲೆ ಚರ್ಚೆ ಮಾಡಿದ್ರು. ಅಂದು ಬೆಳಗ್ಗೆ ಬಹಳ ಖುಷಿಯಿಂದಲೇ ಮಾತನಾಡುತ್ತಾ ಇಬ್ಬರೂ ತಂತಮ್ಮ ಕಚೇರಿಗಳಿಗೆ ತೆರಳಿದ್ರು. ಸಂಜೆ ಮನೆಗೆ ಬಂದ ಕೂಡಲೇ ಬುಕಿಂಗ್ ಮಾಡಿ ಆ ವೀಕೆಂಡ್​ನಲ್ಲೇ ಟ್ರಿಪ್ ಹೊರಡೋದು ಅಂತ ಡಿಸೈಡ್ ಮಾಡಿದ್ರು.

ಇದನ್ನೂ ಓದಿ: 39 ವರ್ಷದ ವ್ಯಕ್ತಿಯೊಂದಿಗೆ 80 ವರ್ಷದ ಅಜ್ಜಿ ಬ್ರೇಕಪ್; ಹೊಸ ಬಾಯ್​​​ಫ್ರೆಂಡ್ ಬೇಕಾಗಿದ್ದಾನೆ!

ಆದ್ರೆ ಸಂಜೆ ಮನೆಗೆ ಬಂದ ಹೆಂಡತಿಗೆ ಭಾರೀ ಶಾಕ್ ಕಾದಿತ್ತು. ಗಂಡ ಯಾಕೋ ವಿಚಿತ್ರವಾಗಿ ಆಡುತ್ತಿದ್ದಾನೆ ಎನಿಸಿತ್ತು. ಸರಿಯಾಗಿ ಮುಖ ಕೊಟ್ಟು ಮಾತನಾಡುತ್ತಲೂ ಇರ್ಲಿಲ್ಲ. ಇದೇನಾಯ್ತು ಇವನಿ, ಬೆಳಗ್ಗೆ ಆಫೀಸಿಗೆ ಹೋಗುವಾಗ ಸರಿಯಾಗೇ ಇದ್ದನಲ್ಲಾ ಎಂದುಕೊಂಡಿದ್ದಾಳಾಕೆ. ಇನ್ನೇನು ಅಂದುಕೊಂಡಂತೆ ಹೋಟೆಲ್ ಬುಕಿಂಗ್ ಮಾಡೋಣ ಎಂದರೆ ತನಗೆ ಡಿವೋರ್ಸ್ ಬೇಕು ಎಂದುಬಿಟ್ಟಿದ್ದಾನೆ ಗಂಡ ! ಆ ಮಾತು ಕೇಳಿ ಆಕೆ ಮೂರ್ಛೆ ಹೋಗೋದೊಂದು ಬಾಕಿ. ಧಿಡೀರನೆ ಏನಾಯ್ತು, ಏನಾದ್ರೂ ಸಮಸ್ಯೆಯಾ... ನನ್ನಿಂದ ತಪ್ಪಾಯ್ತಾ ಎಂದೆಲ್ಲಾ ಆಕೆ ಎಷ್ಟೇ ಕೇಳಿದರೂ ಆತ ಸರಿಯಾಗಿ ಉತ್ತರಿಸಿಲ್ಲ. ನಮ್ಮ ನಡುವೆ ಸಾಮರಸ್ಯ ಇಲ್ಲ, ಬೇರೆಯಾಗೋಣ ಎಂದಷ್ಟೇ ಹೇಳಿದ್ದಾನೆ. ಬದುಕೇ ಮುಗಿದಂತೆ ಭಾಸವಾಗಿದೆ ಆಕೆಗೆ.

ಇದೆಲ್ಲಾ ಆಗಿ ಕೆಲ ದಿನಗಳಾದಾಗ ಧಿಡೀರನೆ ಆಕೆಯ ಪತಿ ಕಾಣೆಯಾಗಿದ್ದಾನೆ. ಬೇಸರ ತೋಡಿಕೊಳ್ಳಲು ತನ್ನ ಬೆಸ್ಟ್ ಫ್ರೆಂಡ್​ಗೆ ಕರೆ ಮಾಡಿದ್ರೆ ಆಕೆಯ ಫೋನ್ ಕೂಡಾ ಸಿಗದಂತಾಗಿದೆ. ಆಶ್ಚರ್ಯ ಎನಿಸಿದರೂ ಸುಮ್ಮನಿದ್ದ ಆಕೆ ಉಳಿದ ಗೆಳೆತಿಯರನ್ನು ಭೇಟಿಯಾಗಲು ತೆರಳಿದ್ದಾಳೆ. ಆಗ ಅವರು ಈ ವಿಚಾರವನ್ನು ತಿಳಿಸಿದ್ದಾರೆ. ಆಕೆಯ ಅತ್ಯಾಪ್ತ ಗೆಳತಿಯ ಜೊತೆ ಪತಿ ಹನಿಮೂನ್​ಗೆ ಹೋಗಿದ್ದ, ಮತ್ತು ಪತ್ನಿಯ ಜೊತೆ ಸೇರಿ ಹುಡುಕಿದ್ದ ಹೋಟೆಲ್​ನಲ್ಲೇ ಉಳಿದುಕೊಂಡಿದ್ದರು ಎನ್ನುವ ವಿಚಾರ ತಿಳಿದು ಆಕೆಗೆ ಬರಸಿಡಿಲು ಬಡಿದಂತಾಗಿದೆ. ಈ ಬಗ್ಗೆ ವಿಚಾರಿಸಿದ್ರೆ ಯಾರೂ ಸರಿಯಾಗಿ ಮಾತನಾಡಲೇ ಇಲ್ಲ ಎಂದು ಮಹಿಳೆ ಬೇಸರಿಸಿಕೊಂಡಿದ್ದಾರೆ.

ಇದೆಲ್ಲಾ ಆಗಿ ಈಗ ಸಾಕಷ್ಟು ಸಮಯವಾಗಿದೆ. ಈಗ ದಂಪತಿಯ ವಿಚ್ಛೇದನವಾಗಿ ಆಕೆ ಕೂಡಾ ತನ್ನ ಬದುಕಿನಲ್ಲಿ ಇದೊಂದು ಕಹಿ ಘಟನೆ ಎನ್ನುವಂತೆ ಮರೆತುಬಿಟ್ಟಿದ್ದಾಳೆ. ಪತಿ ಮತ್ತು ಗೆಳತಿ ಏನಾದರು, ಮದುವೆಯಾದರಾ ಎನ್ನುವ ಯಾವ ವಿಚಾರವನ್ನೂ ಆಕೆ ತಿಳಿಸಿಕೊಳ್ಳಲು ಆಸಕ್ತಿ ಇಲ್ಲ ಎಂದಿದ್ದಾರೆ.
Published by:Soumya KN
First published: