• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Crime: ಖಾಸಗಿ ವಿಡಿಯೋ ಮಾಡಿ ಹಣಕ್ಕಾಗಿ ಮಹಿಳೆಯಿಂದ ಬ್ಲಾಕ್​ಮೇಲ್​! ಕತ್ತು ಕೊಯ್ದು ಬರ್ಬರವಾಗಿ ಕೊಂದ ​ಯುವಕ

Crime: ಖಾಸಗಿ ವಿಡಿಯೋ ಮಾಡಿ ಹಣಕ್ಕಾಗಿ ಮಹಿಳೆಯಿಂದ ಬ್ಲಾಕ್​ಮೇಲ್​! ಕತ್ತು ಕೊಯ್ದು ಬರ್ಬರವಾಗಿ ಕೊಂದ ​ಯುವಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾಜಿಕ ಜಾಲತಾಣದ (Social Media) ಮೂಲಕ ಪರಿಚಯವಾಗಿದ್ದ ಮಹಿಳೆ ಕೆಲವು ಆಡಿಯೋ ಹಾಗೂ ವಿಡಿಯೋಗಳನ್ನು ತನ್ನ ಬಳಿ ಇಟ್ಟಿಕೊಂಡು ಹಣಕ್ಕಾಗಿ ಬ್ಲಾಕ್​ ಮೇಲ್ ಮಾಡುತ್ತಿದ್ದಳು ಎನ್ನಲಾಗಿದೆ.

  • Share this:

ಭೋಪಾಲ್: ಮಧ್ಯಪ್ರದೇಶದ (Madhya Pradesh) ಬೇತುಲ್ ಜಿಲ್ಲೆಯ 26 ವರ್ಷದ ವ್ಯಕ್ತಿಯೊಬ್ಬ ತನ್ನನ್ನು ಬ್ಲಾಕ್​ಮೇಲ್ (Blackmail) ಮಾಡಿ ಹಣ ವಸೂಲಿ ಮಾಡುತ್ತಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆ (Murder) ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದ (Social Media) ಮೂಲಕ ಪರಿಚಯವಾಗಿದ್ದ ಮಹಿಳೆ ಕೆಲವು ಆಡಿಯೋ ಹಾಗೂ ವಿಡಿಯೋಗಳನ್ನು ತನ್ನ ಬಳಿ ಇಟ್ಟಿಕೊಂಡು ಹಣಕ್ಕಾಗಿ ಬ್ಲಾಕ್​ ಮೇಲ್ ಮಾಡುತ್ತಿದ್ದಳು ಎನ್ನಲಾಗಿದೆ. ಅಲ್ಲದೆ ಆರೋಪಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗದಂತೆ ಪದೇ ಪದೇ ತಡೆಯುತ್ತಿದ್ದಿದ್ದರಿಂದ ಆರೋಪಿ ಕೋಪದಲ್ಲಿ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.


ಕೊಳದ ಬಳಿ ಪತ್ತೆಯಾಗಿದ್ದ ಶವ


ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಮುಲ್ತಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿ ವಾರ್ಡ್‌ನ ನಾಕಾ ರಸ್ತೆಯಲ್ಲಿ ಬುಧವಾರ ರಾತ್ರಿ ಸಿಮ್ರಾನ್ ಶೇಖ್ (26) ಎಂಬುವವರ ಶವ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಆಕೆಯ ಕುತ್ತಿಗೆಯಲ್ಲಿ ಚೂಪಾದ ಆಯುಧದಿಂದ ಹಲ್ಲೆ ಮಾಡಿರುವ ಗಾಯ ಪತ್ತೆಯಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಚೌಧರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.


ಸಿಸಿಟಿವಿಯಲ್ಲಿ ದೃಶ್ಯಾವಳಿ ಆಧಾರದ ಮೇಲೆ ಆರೋಪಿ ಸೆರೆ


ಮಹಿಳೆ ಶವ ಸಿಕ್ಕಿದ್ದ ಸ್ಥಳದ ಅಕ್ಕಪಕ್ಕದಲ್ಲಿ ಸಿಸಿಟಿವಿ ದೃಶ್ಯಾವಳಿಯನ್ನು ಸಂಗ್ರಹಿಸಿದ ಪೊಲೀಸರು ಸನೀಫ್​ ಮಲಿಕ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಸಿಮ್ರಾನ್ ಸ್ಕೂಟರ್​ನಲ್ಲಿ ಹೋಗುತ್ತಿದ್ದಾಗ ಆರೋಪಿ ಆಕೆಯ ಮೇಲೆ ದಾಳಿ ಮಾಡಿದ್ದಾನೆ. ಪೊಲೀಸರು ಆಕೆಯ ಮೊಬೈಲ್​ನಿಂದ ಕೆಲವು ಆಡಿಯೋ ಮತ್ತು ವಿಡಿಯೋ ಕ್ಲಿಪ್​ಗಳನ್ನು ಸಂಗ್ರಹಿಸಿದ್ದಾರೆ.


ಇದನ್ನೂ ಓದಿ:  Manipur Violence: ಮಣಿಪುರದಲ್ಲಿ ಪ್ರತಿಭಟನೆ ವೇಳೆ ಭುಗಿಲೆದ್ದ ಹಿಂಸಾಚಾರ! 8000ಕ್ಕೂ ಹೆಚ್ಚು ಜನರ ಸ್ಥಳಾಂತರ


ಬ್ಲಾಕ್​ಮೇಲ್ ಮಾಡುತ್ತಿದ್ದಕ್ಕೆ ಬೇಸತ್ತು ಕೊಲೆ


ಪೊಲೀಸರ ಮಾಹಿತಿಯ ಪ್ರಕಾರ, ಕೊಲೆಯಾಗಿರುವ ಸಿಮ್ರಾನ್​, ಆರೋಪಿ ಮಲಿಕ್​ನನ್ನು ಕೆಲವು ಖಾಸಗಿ ವಿಡಿಯೋಗಳನ್ನು ಬಹಿರಂಗ ಪಡಿಸುವುದಾಗಿ ಬೆದರಿಸುತ್ತಿದ್ದಳು ಎನ್ನಲಾಗಿದೆ. ಜೊತೆಗೆ ಮಲಿಕ್​ ಬೇರೆ ಮಹಿಳೆಯನ್ನು ವಿವಾಹವಾಗುವುದನ್ನು ತಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಫೇಸ್​ಬುಕ್​ನಲ್ಲಿ ಪರಿಚಯ


ತಾನು ಮೊದಲು ಫೇಸ್‌ಬುಕ್‌ನಲ್ಲಿ ಶೇಖ್‌ಳನ್ನು ಭೇಟಿಯಾಗಿದ್ದೆ ಮತ್ತು ಶೀಘ್ರದಲ್ಲೇ ಇಬ್ಬರು ಸ್ನೇಹಿತರಾದರು. ನಂತರ ಆಕೆ ಕೆಲವು ಖಾಸಗಿ ಕ್ಲಿಪ್‌ಗಳನ್ನು ಬಳಸಿಕೊಂಡು ನನ್ನನ್ನು ಹಣ ನೀಡುವಂತೆ ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದಳು. ಬುಧವಾರವೂ 5,000ಕ್ಕೆ ಬೇಡಿಕೆ ಇಟ್ಟಿದ್ದಳು ಎಂದು ಮಲಿಕ್ ಪೊಲೀಸರಿಗೆ ತಿಳಿಸಿದ್ದಾನೆ


ಸದ್ಯ ಮಲಿಕ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಪಿ ಹೇಳಿದರು.


ಇದನ್ನೂ ಓದಿ: Shocking News: ಸೋಲೊ ಟ್ರಿಪ್​ಗೆ ಹೊರಟ ಬಾಲಕಿ ಕಿಡ್ನಾಪ್​! 4 ತಿಂಗಳಲ್ಲಿ 2 ಬಾರಿ ಮಾರಾಟ, ತಪ್ಪಿಸಿಕೊಂಡು ಬಂದದ್ದೇ ರೋಚಕ


ಯುವಕನನ್ನು ಕೊಂದ ಮದ್ಯವೆಸನಿ ಮಹಿಳೆ


ಊರಿನಲ್ಲಿ ಹಬ್ಬವಿದ್ದ ಕಾರಣ, ಹೊಸ ಬಟ್ಟೆ ಖರೀದಿಗಾಗಿ ಸ್ನೇಹಿತನ ಜೊತೆ ಬೆಳಗಾವಿ ನಗರಕ್ಕೆ ಆಗಮಿಸಿದ್ದ ಯುವಕನನ್ನು ಮದ್ಯವೆಸನಿ ಮಹಿಳೆಯೊಬ್ಬಳು ಚಾಕುವಿನಿಂದ ಇರಿದು ಕೊಂದಿರುವ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ನಿವಾಸಿಯಾದ ನಾಗರಾಜ್ ರಾಗಿ ಪಾಟೀಲ್(25) ಎಂಬಾತನ ಮೃತ ದುರ್ದೈವಿ. ಈತನನ್ನು ಬೆಳಗಾವಿಯ ಕಂಗ್ರಾಳಿ ಕೆ ಹೆಚ್ ಗ್ರಾಮದ ನಿವಾಸಿಯಾಗಿರುವ ಜಯಶ್ರೀ ಪವಾರ್ ಎಂಬಾಕೆ ಕೊಲೆ ಮಾಡಿದ್ದಾಳೆ.


ರಸ್ತೆಯಲ್ಲಿ ನಿಂತಿದ್ದ ನಾಗರಾಜುವಿನ ಬಳಿ ಬಂದ ಆಕೆ ಮೊಬೈಲ್ ಕೊಡು ಎಂದಿದ್ದಾಳೆ, ಆಗ ನಾಗರಾಜ್ ಯಾವ ಮೊಬೈಲ್ ಎಂದು ಪ್ರಶ್ನೆ ಮಾಡಿದ್ದಾನೆ. ಅಷ್ಟಕ್ಕೆ ಕೈಯಲ್ಲಿದ್ದ ಚಾಕುವಿನಿಂದ ನಾಗರಾಜುವಿನನ ಎದೆಗೆ ಚುಚ್ಚಿದ್ದಾಳೆ. ಕುಸಿದು ಬಿದ್ದ ನಾಗರಾಜ್​ನನ್ನು ಸ್ನೇಹಿತರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ನಾಗರಾಜ್ ಮೃತಪಟ್ಟಿದ್ದಾರೆ.


ಆರೋಪಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು


ಇನ್ನು ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಮಹಿಳೆಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿ ಜಯಶ್ರೀ ಪವಾರ್ ಮದ್ಯವ್ಯಸನಿ ಎಂಬುದು ಗೊತ್ತಾಗಿದೆ. ಇನ್ನು ಮರಣೋತ್ತರ ಪರೀಕ್ಷೆ ಬಳಿಕ ನಾಗರಾಜ್ ಮೃತದೇಹವನ್ನು ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮಕ್ಕೆ ಸ್ಥಳಾಂತರಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

top videos
    First published: