• Home
  • »
  • News
  • »
  • national-international
  • »
  • Crime News: ಸರಸಕ್ಕೆ ಒಪ್ಪದ ಪತ್ನಿಯನ್ನು ಇಟ್ಟಿಗೆಯಿಂದ ಹೊಡೆದು ಸಾಯಿಸಿದ ಗಂಡ! ನಾಲ್ಕು ವರ್ಷದ ಮಗು ತೆರೆದಿಟ್ಟಿತು ಅಪ್ಪನ ಪಾಪ ಕೃತ್ಯ!

Crime News: ಸರಸಕ್ಕೆ ಒಪ್ಪದ ಪತ್ನಿಯನ್ನು ಇಟ್ಟಿಗೆಯಿಂದ ಹೊಡೆದು ಸಾಯಿಸಿದ ಗಂಡ! ನಾಲ್ಕು ವರ್ಷದ ಮಗು ತೆರೆದಿಟ್ಟಿತು ಅಪ್ಪನ ಪಾಪ ಕೃತ್ಯ!

ಮೃತ ಮಹಿಳೆ

ಮೃತ ಮಹಿಳೆ

ಶುಕ್ರವಾರ ರಾತ್ರಿ ಸಂಭೋಗಕ್ಕೆ ಪಂಕಜ್​ ಕರೆದಿದ್ದಾನೆ. ಆದರೆ ಇದಕ್ಕೆ ಇಶಾ ದೇವಿ ನಿರಾಕರಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ಭಾರೀ ಜಗಳವಾಗಿದೆ. ಕೊನೆಗೆ ಮಾತಿಗೆ ಮಾತು ಬೆಳೆದು, ಹೊರಗಿದ್ದ ಇಟ್ಟಿಗೆ ಎತ್ತಿಗೆಕೊಂಡು ಬಂದ ಪಂಕಜ್​ ಪತ್ನಿ ತಲೆಗೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಆಕೆಯ ಮುಖಕ್ಕೆ ನಿರಂತರವಾಗಿ ಇಟ್ಟಿಗೆಯಿಂದ ಹೊಡೆದಿದ್ದಾನೆ.  ನಂತರ ಶವವನ್ನು ಮನೆಯ ಸಮೀಪದಲ್ಲಿದ್ದ ತೋಟವೊಂದಕ್ಕೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ.

ಮುಂದೆ ಓದಿ ...
  • Share this:

ಪಾಟ್ನಾ: ಸಂಭೋಗ ನಡೆಸಲು ನಿರಾಕರಿಸಿದ ಪತ್ನಿ (Wife) ಮೇಲೆ ಇಟ್ಟಿಗೆಯಿಂದ ಪತಿಯೊಬ್ಬ (Husband) ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿರುವ (Murder) ಘಟನೆ ಬಿಹಾರದಲ್ಲಿ (Bihar) ನಡೆದಿದೆ. ಶುಕ್ರವಾರ ತಡರಾತ್ರಿ ರಾಜ್ಯದ ಭಾಗಲ್ಪುರ (Bhagalpur) ಜಿಲ್ಲೆಯ ನಾಥನಗರ (Nathanagar) ಮಧುಸೂದನ್ಪುರ ಪೊಲೀಸ್ ಠಾಣೆ ವ್ಯಾಪ್ತಿ ರಾಘೋಪುರ ಟಿಕಾರ್​ನಲ್ಲಿ (Raghopur Tikar) ಘಟನೆ ವರದಿಯಾಗಿದೆ. ಮೃತ ದುರ್ದೈವಿಯನ್ನು ಇಶಾ ದೇವಿ (26) ಎಂದು ಗುರುತಿಸಲಾಗಿದೆ. ಕೃತ್ಯದ ನಂತರ ಪತಿ, ಆರೋಪಿ ಪಂಕಜ್ ಯಾದವ್ ಪರಾರಿಯಾಗಿದ್ದು, ಇದೀಗ ಆತನಿಗಾಗಿ ಪೊಲೀಸರು (Police) ಹುಡುಕಾಟ ನಡೆಸುತ್ತಿದ್ದಾರೆ.


ಅಪ್ಪ ಅಮ್ಮನನ್ನು ಕೊಂದರು, ಸಾಕ್ಷಿ ಹೇಳಿದ ಅಂಬೆಗಾಲಿಡುವ ಮಗು


ಈ ಪ್ರಕರಣ ಕುರಿತಂತೆ 4 ವರ್ಷದ ಮಗು ಪ್ರತಿಕ್ರಿಯೆ ನೀಡಿದ್ದು, ತಂದೆಯೇ ತಾಯಿಯನ್ನು ಕೊಂದಿರುವುದಾಗಿ ತಿಳಿಸಿದೆ. ಅಪ್ಪ ಅಮ್ಮನನ್ನು ಕೊಂದರು. ಅಪ್ಪ ಅಮ್ಮನೊಂದಿಗೆ ಜಗಳವಾಡಿ ಅವರನ್ನು ರಾತ್ರಿ ಹೊಡೆಯುತ್ತಿದ್ದರು ಎಂದು  ಅಂಬೆಗಾಲಿಡುವ ಮಗು ಕೊಲೆ ಘಟನೆಯ ಬಗ್ಗೆ ವಿವರಿಸಿದೆ. ಅಲ್ಲದೇ ಕೆಲ ತಿಂಗಳಿನಿಂದ ನನ್ನ ಅಳಿಯ ಮತ್ತು ಮಗಳು ಇಬ್ಬರು ಯಾವುದೋ ವಿಚಾರವಾಗಿ ಆಗಾಗ ಜಗಳ ಆಡುತ್ತಿದ್ದರು. ನಿನ್ನೆ ರಾತ್ರಿ ಕೂಡ ಇಬ್ಬರು ಜಗಳ ಆಡುತ್ತಿದ್ದರು. ಈ ವೇಳೆ ಕೋಪ ವಿಕೋಪಕ್ಕೆ ತಿರುಗಿ ಇಟ್ಟಿಗೆಯಿಂದ ಪತ್ನಿ ತಲೆಯನ್ನು ಜಜ್ಜಿ ಕೊಂದಿದ್ದಾನೆ ಎಂದು ಮೃತ ಮಹಿಳೆ ತಾಯಿ ಹೇಳಿದ್ದಾರೆ.


Nearly 31,000 complaints of crimes committed against women were received by the NCW in 2022
ಸಾಂದರ್ಭಿಕ ಚಿತ್ರ


ಸಂಭೋಗಕ್ಕೆ ನಿರಾಕರಿಸಿದ ಪತ್ನಿ ಮೇಲೆ ಇಟ್ಟಿಗೆಯಿಂದ ಹಲ್ಲೆ


ಶುಕ್ರವಾರ ರಾತ್ರಿ ಸಂಭೋಗಕ್ಕೆ ಪಂಕಜ್​ ಕರೆದಿದ್ದಾನೆ. ಆದರೆ ಇದಕ್ಕೆ ಇಶಾ ದೇವಿ ನಿರಾಕರಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ಭಾರೀ ಜಗಳವಾಗಿದೆ. ಕೊನೆಗೆ ಮಾತಿಗೆ ಮಾತು ಬೆಳೆದು, ಹೊರಗಿದ್ದ ಇಟ್ಟಿಗೆ ಎತ್ತಿಗೆಕೊಂಡು ಬಂದ ಪಂಕಜ್​ ಪತ್ನಿ ತಲೆಗೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಆಕೆಯ ಮುಖಕ್ಕೆ ನಿರಂತರವಾಗಿ ಇಟ್ಟಿಗೆಯಿಂದ ಹೊಡೆದಿದ್ದಾನೆ.  ನಂತರ ಶವವನ್ನು ಮನೆಯ ಸಮೀಪದಲ್ಲಿದ್ದ ತೋಟವೊಂದಕ್ಕೆ ಎಸೆದು ಸ್ಥಳದಿಂದ ಪರಾರಿಯಾಗಿದ್ದಾನೆ.


ಮಹಿಳೆ ಶವ ಕಂಡು ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ


ಬೆಳಗ್ಗೆ ಸ್ಥಳೀಯರು ತೋಟದಲ್ಲಿ ಮಹಿಳೆ ಶವ ನೋಡಿದ್ದಾರೆ. ಮಹಿಳೆ ಮುಖ ವಿರೂಪವಾಗಿರುವುದನ್ನು ಕಂಡು ಬೆಚ್ಚಿಬಿದ್ದ ಜನ ಪೊಲೀಸರಿಹಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಧುಸೂದನಪುರ ಎಸ್ಎಚ್ಒ ಮಹೇಶ್​ ಕುಮಾರ್​ ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಅಲ್ಲದೇ ಡಿಎಸ್​ಪಿ ಅಜಯ್ ಕುಮಾರ್ ಚೌಧರಿ ಕೂಡ ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಶೀಘ್ರವೇ ಬಂಧಿಸುವಂತೆ ಮಧುಸೂದನಪುರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ


Nearly 31,000 complaints of crimes committed against women were received by the NCW in 2022
ಸಾಂಧರ್ಭಿಕ ಚಿತ್ರ


ಮಗು ಮತ್ತು ಅತ್ತೆ ಹೇಳಿಕೆ ಆಧಾರದ ಮೇಲೆ ಆರೋಪಿ ವಿರುದ್ಧ ದೂರು


ಮಗು ಮತ್ತು ಅತ್ತೆಯ ಹೇಳಿಕೆ ಪಡೆದ ಪೊಲೀಸರು, ಹೇಳಿಕೆ ಆಧಾರದ ಮೇಲೆ ದೂರು ದಾಖಲಿಸಿದ್ದಾರೆ. ಅಲ್ಲದೇ ಆರೋಪಿ ಬಂಧಿಸಲು ವಿಶೇಷ ತಂಡ ರಚಿಸಿದ್ದಾರೆ. ಜೊತೆಗೆ ಕೆಲವು ಸ್ಥಳೀಯರಿಂದಲೂ ಮತ್ತು ಮಹಿಳೆಯ ಸಂಬಂಧಿಕರಿಂದಲೂ ಪೊಲಿಸರು ಹೇಳಿಕೆ ಪಡೆದುಕೊಂಡಿದ್ದಾರೆ.


ಇದೇ ರೀತಿ ಮಹಾರಾಷ್ಟ್ರದಲ್ಲೊಂದು ಪ್ರಕರಣ


ಇದೇ ರೀತಿ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಲೈಂಗಿಕ ಸಂಭೋಗಕ್ಕೆ ಅವಕಾಶ ನೀಡಲಿಲ್ಲ ಮತ್ತೋರ್ವ ವ್ಯಕ್ತಿ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದನು. ಅಲ್ಲದೇ ಪತ್ನಿ ಶವವನ್ನು ಸೋಯಾಬೀನ್ ಗದ್ದೆಯಲ್ಲಿ ಸುಟ್ಟು ಸಾಕ್ಷಿ ನಾಶಪಡಿಸಲು ಯತ್ನಿಸಿದ್ದನು. ಮಾಯಾ ಸಂಜಯ್ ಸಾಖ್ರೆ ಮೃತ ಮಹಿಳೆಯಾಗಿದ್ದು, ಆರೋಪಿ ಪತಿಯನ್ನು ಸಂಜಯ್ ಸಾಖ್ರೆ ಎಂದು ಗುರುತಿಸಲಾಗಿತ್ತು. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

Published by:Monika N
First published: