Crime News: ಅನ್ನ ಮಾಡದ್ದಕ್ಕೆ ಹೆಂಡತಿಯನ್ನು ಹೊಡೆದು ಕೊಂದ!

23 ವರ್ಷದ ವ್ಯಕ್ತಿಯೊಬ್ಬ  ಅನ್ನ ಬೇಯಿಸಲಿಲ್ಲ ಎಂಬ ಕಾರಣಕ್ಕೆ 20 ವರ್ಷದ ಪತ್ನಿಯನ್ನು ಮರದ ಕೋಲಿನಿಂದ ಹೊಡೆದು ಕೊಂದಿದ್ದಾನೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂದು ಮಾತೇನೋ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಗಳ ಶುರುವಾಗುವುದೂ ಗೊತ್ತಾಗುವುದಿಲ್ಲ, ಮುಗಿಯುವ ಸೂಚನೆ ಕಾಣುವುದು ಇಲ್ಲ. ಬಹಳಷ್ಟು ದಂಪತಿ (Couple) ಕ್ಷುಲ್ಲಕ ಕಾರಣಗಳಿಗಾಗಿ (Silly Reasons) ಜಗಳ ಮಾಡಿಕೊಳ್ಳುವ ಬಹಳಷ್ಟು ಘಟನೆ ದಿನನಿತ್ಯ ವರದಿಯಾಗುತ್ತವೆ. ಇವುಗಳಲ್ಲಿ ಬಹಳಷ್ಟು ಪ್ರಕರಣಗಳು ಕೊಲೆ (Murder), ಆತ್ಮಹತ್ಯೆಯಲ್ಲಿ ಕೊನೆಯಾಗುತ್ತವೆ. ಇಂಥದ್ದೇ ಒಂದು ಘಟನೆಯಲ್ಲಿ ಯುವ ದಂಪತಿ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಕೊನೆಯಾಗಿದೆ. ಅನ್ನಕ್ಕಾಗಿ (Rice) ಪತಿ ಜಗಳ ಮಾಡಿ ಹೆಂಡತಿಯನ್ನೇ ಹೊಡೆದು ಕೊಂದಿದ್ದಾನೆ.

ಭಿವಾಂಡಿ ಥಾಣೆಯ ಭಿವಂಡಿಯಲ್ಲಿ ಮಂಗಳವಾರ ರಾತ್ರಿ 23 ವರ್ಷದ ವ್ಯಕ್ತಿಯೊಬ್ಬ  ಅನ್ನ ಬೇಯಿಸಲಿಲ್ಲ ಎಂಬ ಕಾರಣಕ್ಕೆ 20 ವರ್ಷದ ಪತ್ನಿಯನ್ನು ಮರದ ಕೋಲಿನಿಂದ ಹೊಡೆದು ಕೊಂದಿದ್ದಾನೆ.  23 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನಿಜಾಂಪುರದ ಖೋನಿ ಗ್ರಾಮದ ಬಲರಾಮ್ ಚೌಧರಿ ಚಾಲ್ ನಿವಾಸಿ ಮತ್ತು ಸ್ಕ್ರ್ಯಾಪ್ ಡೀಲರ್ ಎಂದು ಗುರುತಿಸಲಾಗಿದೆ.

ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿ

ವಾಘಮಾರೆ ಒಂದು ವರ್ಷದ ಹಿಂದೆ ಜ್ಯೋತ್ಸ್ನಾಳನ್ನು ಮದುವೆಯಾಗಿದ್ದರು. ಸಣ್ಣಪುಟ್ಟ ವಿಚಾರಗಳಿಗೆ ದಂಪತಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಎಂದು ನಿವಾಸಿಗಳು ತಿಳಿಸಿದ್ದಾರೆ.

ಅನ್ನ ಇರಲಿಲ್ಲ ಎಂದು ಶುರುವಾ್ಯ್ತು ಜಗಳ

ಪ್ರಕರಣದ ತನಿಖಾಧಿಕಾರಿ ಪೊಲೀಸ್ ಇನ್ಸ್‌ಪೆಕ್ಟರ್ ಅತುಲ್ ಲಾಂಬೆ, “ಆರೋಪಿ ಮಂಗಳವಾರ ಮನೆಗೆ ಹೋಗಿ ಅನ್ನದ ವಿಚಾರದಲ್ಲಿ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಕ್ಷಣಾರ್ಧದಲ್ಲಿ, ಅವರು ಸಾಯುವವರೆಗೂ ಮರದ ಕೋಲಿನಿಂದ ಅವಳನ್ನು ಹೊಡೆಯಲು ಪ್ರಾರಂಭಿಸಿದರು. ಗದ್ದಲದಿಂದ ನೆರೆಹೊರೆಯವರು ಮಧ್ಯಪ್ರವೇಶಿಸಿದರು. ಆದರೆ ಅವರಿಗೆ ಜ್ಯೋತ್ಸ್ನಾ ರಕ್ತದ ಮಡುವಿನಲ್ಲಿ ಕಂಡುಬಂದರು. ಅವರು ಆರೋಪಿಗಳನ್ನು ಹಿಡಿದಿಟ್ಟು, ನಮಗೆ ಕರೆ ಮಾಡಿ ಮಾಹಿತಿ ನೀಡಿದರು ಎಂದಿದ್ದಾರೆ.

ಇದನ್ನೂ ಓದಿ: Bail Denied: 10 ಜನ ಯಾತ್ರಿಗಳ ಫೇಕ್ ಎನ್​ಕೌಂಟರ್, 34 ಪೊಲೀಸರಿಗೆ ಜಾಮೀನು ನಿರಾಕರಣೆ!

ಮೃತದೇಹದ ಮರಣೋತ್ತರ ಪರೀಕ್ಷೆಯಲ್ಲಿ ಮೃತರ ತಲೆ, ಹೊಟ್ಟೆ ಮತ್ತು ಬೆನ್ನುಮೂಳೆಯಲ್ಲಿ ಅನೇಕ ಗಾಯಗಳಾಗಿರುವುದು ತಿಳಿದುಬಂದಿದೆ.

ಮಟನ್ ಸಾರಿಗಾಗಿ ಕಾಲ್

ಮಧ್ಯ ರಾತ್ರಿ ಕಂಟ್ರೋಲ್ ರೂಂಗೆ ಕಾಲ್ ಮಾಡಿದ ನವೀನ್‌ ಎಂಬಾತನನ್ನು ಮರುದಿನ ಮನೆಗೇ ಬಂದು ಪೊಲೀಸರು ಅರೆಸ್ಟ್ ಮಾಡಿದ್ದರೆ. ಅಷ್ಟಕ್ಕೂ 100 ನಂಬರ್‌ಗೆ ಕಾಲ್ ಮಾಡಿ ಆತ ದೂರು ಕೊಟ್ಟಿದ್ದು ತನ್ನ ಹೆಂಡತಿ ಬಗ್ಗೆ!

ಒಂದಲ್ಲ, 6 ಬಾರಿ ಕಾಲ್ ಮಾಡಿ ಪೊಲೀಸರಿಗೆ ಟಾರ್ಚರ್

ಹೇಳಿ ಕೇಳಿ ಈ ನವೀನ್ ಕುಡುಕನಾಗಿದ್ದ. ಕಂಠ ಪೂರ್ತಿ ಮದ್ಯ ಕುಡಿದು, ಮಧ್ಯರಾತ್ರಿ ಪೊಲೀಸರಿಗೇ ಟಾರ್ಚರ್ ಕೊಟ್ಟಿದ್ದ. ಒಂದಲ್ಲ, ಎರಡಲ್ಲ, 6 ಬಾರಿ ಪೊಲೀಸ್ ಕಂಟ್ರೋಲ್ ರೂಂಗೆ ಕಾಲ್ ಮಾಡಿ ಕಿರಿಕಿರಿ ಮಾಡಿದ್ದ. ನನ್ನ ಹೆಂಡತಿಯನ್ನು ನೀವು ಅರೆಸ್ಟ್ ಮಾಡಲೇ ಬೇಕು ಅಂತ ವಾದ ಮಾಡಿದ್ದ. ಆತನ ದೂರು ಕೇಳಿ ಪೊಲೀಸರೇ ಒಮ್ಮೆ ದಂಗಾಗಿದ್ದರು.

ಇದನ್ನೂ ಓದಿ: Bail Denied: 10 ಜನ ಯಾತ್ರಿಗಳ ಫೇಕ್ ಎನ್​ಕೌಂಟರ್, 34 ಪೊಲೀಸರಿಗೆ ಜಾಮೀನು ನಿರಾಕರಣೆ!

ಮಟನ್ ಕರ್ರಿ ಮಾಡಿಲ್ಲ ಅಂತ ಗೋಳಾಡಿದ ಕುಡುಕ!ಅಷ್ಟಕ್ಕೂ ನವೀನ್ ಆರ್ ಆರು ಬಾರಿ ಪೊಲೀಸ್ ಕಂಟ್ರೋಲ್ ರೂಂಗೆ ಕಾಲ್ ಮಾಡಿ ದೂರು ಕೊಟ್ಟಿದ್ದು ತನ್ನ ಹೆಂಡತಿ ಬಗ್ಗೆ. ಅದೂ ಆಕೆ ಮಟನ್ ಕರ್ರಿ ಮಾಡುತ್ತಿಲ್ಲ, ನಾನು ಕೇಳಿದಾಗಲೆಲ್ಲ ನಾನ್ ವೆಜ್ ಮಾಡುತ್ತಿಲ್ಲ ಅಂತ ದೂರು ಕೊಟ್ಟಿದ್ದ. ನನಗೆ ಅನ್ಯಾಯವಾಗಿದೆ, ನನಗೆ ನ್ಯಾಯ ಕೊಡಿಸಿ, ಆಕೆಯನ್ನು ಅರೆಸ್ಟ್ ಮಾಡಿ ಅಂತ ಗೋಳಾಡಿದ. ಪೊಲೀಸರು ಎಷ್ಟು ಬುದ್ಧಿವಾದ ಹೇಳಿದ್ರೂ ಕೇಳೇ ಇಲ್ಲ.

ಮರುದಿನ ಮನೆಗೇ ಹೋಗಿ ಅರೆಸ್ಟ್ ಮಾಡಿದ ಪೊಲೀಸರು

ಮರುದಿನ ಬೆಳ್ಳಂಬೆಳಗ್ಗೆಯೇ ಆತನ ಮನೆ ಬಾಗಿಲು ಬಡಿದ ಪೊಲೀಸರು, ಆತನನ್ನು ಅರೆಸ್ಟ್ ಮಾಡಿ, ಠಾಣೆಗೆ ಕರೆ ತಂದಿದ್ದಾರೆ. ಆಗ ವಿಪರೀತ ಕುಡಿದಿದ್ದ ನವೀನ್, ಠಾಣೆಗೆ ಬಂದರೂ ಅದೇ ನಶೆಯಲ್ಲಿದ್ದ. ಆಗ ಹೆಂಡತಿಯನ್ನು ಕರೆಸಿ ಕೇಳಿದಾಗ ಈತನ ಕಲ್ಯಾಣ ಗುಣ ಗೊತ್ತಾಗಿದೆ. ಈತ ವಿಪರೀತ ಕುಡಿದು, ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
Published by:Divya D
First published: