ಉತ್ತರಾಖಂಡ್ನ ನೈನಿತಾಲ್ನಲ್ಲಿ ಜೂನ್ ತಿಂಗಳಿನಲ್ಲಿ , ತನ್ನ ಹೆಂಡತಿಯನ್ನು ಬೆಟ್ಟದ ಮೇಲಿಂದ ತಳ್ಳಿ ಕೊಂದಿರುವ ಆರೋಪದ ಮೇಲೆ 24 ವರ್ಷದ ಸೇಲ್ಸ್ಮೆನ್ ಅನ್ನು ಪೋಲೀಸರು ಬಂಧಿಸಿದ್ದಾರೆ. ದಾಬ್ರಿ ಪೊಲೀಸ್ ಸ್ಟೇಷನ್ನ ಒಂದು ತಂಡ ಆ ಜಾಗದಲ್ಲಿ ಶವದ ಶೋಧದಲ್ಲಿ ನಿರತವಾಗಿದೆ. ರಜೆಯ ನೆಪದಲ್ಲಿ ಹೆಂಡತಿಯನ್ನು ನೈನಿತಾಲ್ಗೆ ಕರೆದುಕೊಂಡು, ಬಳಿಕ ಅವಳು ಓಡಿ ಹೋಗಿದ್ದಾಳೆ ಎಂದು ಕುಟುಂಬದವರಿಗೆ ಹೇಳಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಕಳೆದ ವರ್ಷ ಜುಲೈ 14 ರಂದು, 29 ವರ್ಷದ ಮಹಿಳೆಯೊಬ್ಬಳು, ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು. “ಅವಳ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು. ಆರೋಪಿಯನ್ನು ಆಗಸ್ಟ್ 8ರಂದು ಬಂಧಿಸಿ ತಿಹಾರ್ ಜೈಲ್ಗೆ ಕಳಿಸಲಾಗಿತ್ತು. ಕೆಲವು ದಿನಗಳ ನಂತರ ತಾನು ದೂರನ್ನು ಹಿಂಪಡೆಯುವುದಾಗಿ ಆಫಿಡವಿಟ್ ಸಲ್ಲಿಸಿದ ಮಹಿಳೆ, ಆರೋಪಿಯನ್ನು ಮದುವೆ ಆಗುವುದಾಗಿ ಹೇಳಿದ್ದಳು. ಆರೋಪಿಗೆ ಅಕ್ಟೋಬರ್ 10ರಂದು ಜಾಮೀನು ಸಿಕ್ಕಿತು ಮತ್ತು ಆತ ಆಕೆಯನ್ನು ಮದುವೆಯಾದ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಪೊಲೀಸರು ಹೇಳಿರುವ ಪ್ರಕಾರ, ಆ ದಂಪತಿ ಯಾವಾಗಲೂ ಜಗಳವಾಡುತ್ತಿದ್ದರು.
“ಆತ ಆಕೆಯೊಂದಿಗೆ ಸಣ್ಣ ಕಾರಣಗಳಿಗೆ ಜಗಳವಾಡಿದ್ದ ಮತ್ತು ಆಕೆ ಜೂನ್ 7ರಂದು ತವರು ಮನೆಗೆ ಮರಳಿದ್ದಳು. ಜೂನ್ 11ರಂದು ಅವನು ಅವಳನ್ನು ಸಂಪರ್ಕಿಸಿ, ಉತ್ತರಾಖಂಡ್ಗೆ ಬರುವಂತೆ ಕರೆದಿದ್ದ. ಆದರೆ ಆಕೆಯ ತಾಯಿ ಅವಳನ್ನು ಕಳುಹಿಸಲು ಒಪ್ಪಿರಲಿಲ್ಲ. ಅವನು ಅವಳಿಗೆ ಸರಿಯಾಗಿ ಊಟ ಮತ್ತು ನೀಡುತ್ತಿರಲಿಲ್ಲ ಹಾಗೂ ಒಮ್ಮೆ ಬೆದರಿಕೆಯನ್ನೂ ಹಾಕಿದ್ದ ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ” ಎಂದಿರುವ ಪೊಲೀಸ್ ಅಧಿಕಾರಿ, ಅಂತಿಮವಾಗಿ ಅವನು ತನ್ನ ಹೆಂಡತಿಯ ಮನ ಒಲಿಸುವಲ್ಲಿ ಸಫಲನಾಗಿದ್ದ ಮತ್ತು ಆಕೆ ಜೂನ್ 11ರಂದು ಆತನೊಂದಿಗೆ ಅವರ ಮನೆಗೆ ಮರಳಿದ್ದಳು.
ಜೂನ್ 11ರಂದು ಆಕೆಯ ಹೆತ್ತವರು ಅವಳನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ, ಆಕೆ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದರು. “ಸಂತ್ರಸ್ತೆಯ ಫೋನ್ ಸ್ವಿಚ್ ಆಫ್ ಆಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದರು. ಆಕೆಯ ಗಂಡನನ್ನು ಸಂಪರ್ಕಿಸಿದಾಗ, ಆಕೆ ತನ್ನೊಂದಿಗೆ ಉತ್ತರಾಖಂಡ್ಗೆ ಬಂದಿದ್ದಳು. ಬಳಿಕ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ ಎಂದು ಆತ ತಿಳಿಸಿದ್ದಾಗಿ ಅವಳ ಪೋಷಕರು ಪೊಲೀಸರಿಗೆ ಹೇಳಿದ್ದಾರೆ. ಅವನು ಕೂಡ ಆಕೆಗೆ ಫೋನ್ ಮಾಡಲು ಪ್ರಯತ್ನಿಸಿದ್ದು, ಸಂಪರ್ಕ ಸಿಕ್ಕಿಲ್ಲ ಎಂದಿದ್ದಾನೆ” ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ