Crime News : ಟವೆಲ್​ ಕೊಡೋದು ಲೇಟ್​ ಆಗಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿರಾಯ!

Crime News : ಸ್ನಾನ ಮುಗಿದ ಮೇಲೆ ಟವೆಲ್(Towel)​ ನೀಡಲು ಪತ್ನಿ ತಡ ಮಾಡಿದ್ದಕ್ಕೆ ಹೆಂಡತಿಯನ್ನು ಕೊಲೆ ಮಾಡಿದ್ದಾನೆ.  ಟವೆಲ್​ ಕೊಡಲು ಲೇಟ್(Late)​ ಮಾಡಿದ್ದಕ್ಕೆ ಸಲಿಕೆ(Shovel)ಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಗಂಡ -ಹೆಂಡತಿ(Husband And Wife) ನಡುವೆ ಜಗಳ(Fights)ವಾಗುವುದು ಕಾಮನ್​(Common), ಸಂಸಾರದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಸದಾ ಇರುತ್ತವೆ. ಈ ಗಲಾಟೆ, ಜಗಳ ಇಲ್ಲದಿದ್ದರೇ ಜೀವನ ಬೋರ್(​Bore) ಆಗಿಬಿಡುತ್ತೆ. ಗಂಡ - ಹೆಂಡತಿ ಜಗಳ ಊಟ ಮಾಡಿ ಮಲಗೋ ತನಕ ಅಂತ ದೊಡ್ಡವರು ಹೇಳುತ್ತಾರೆ. ಕೆಲವೊಂದು ಘಟನೆಗಳನ್ನು ನೋಡಿದರೆ, ನಿಜಕ್ಕೂ ಭಯ ಹುಟ್ಟಿಸುತ್ತೆ. ಸಣ್ಣ, ಪುಟ್ಟ ವಿಚಾರಕ್ಕೆ ಕೊಲೆ(Murder)ಯೇ ನಡೆದು ಹೋಗಿರುತ್ತೆ. ಇಲ್ಲೂ ಅಷ್ಟೆ ಗಂಡನೊಬ್ಬ ತುಂಬ ಸಣ್ಣ ವಿಷಯಕ್ಕೆ ಹೆಂಡತಿಯನ್ನೇ ಹತ್ಯೆಗೈದಿದ್ದಾನೆ. ಸ್ನಾನ ಮುಗಿದ ಮೇಲೆ ಟವೆಲ್(Towel)​ ನೀಡಲು ಪತ್ನಿ ತಡ ಮಾಡಿದ್ದಕ್ಕೆ ಹೆಂಡತಿಯನ್ನು ಕೊಲೆ ಮಾಡಿದ್ದಾನೆ.  ಟವೆಲ್​ ಕೊಡಲು ಲೇಟ್(Late)​ ಮಾಡಿದ್ದಕ್ಕೆ ಸಲಿಕೆ(Shovel)ಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಪತ್ನಿ ಕೊನೆಯುಸಿರೆಳೆದಿದ್ದಾರೆ. ದಾಂಪತ್ಯದಲ್ಲಿ ಬಿರುಕು ಮೂಡುವುದು ಸಹಜ, ಆದರೆ ಈ ರೀತಿಯ ಘಟನೆಗಳು ನಡೆದಾಗ ನಿಜವಾಗಲೂ ಭಯ ಹುಟ್ಟಿಸುತ್ತೆ. ಜೀವಕ್ಕೆ ಬೆಲೆಯೆ ಇಲ್ವಾ ಎಂದು ಅನ್ನಿಸುತ್ತೆ. ಅಷ್ಟರ ಮಟ್ಟಿಗೆ ಕೋಪ(Angry)ದಲ್ಲಿ ಮನುಷ್ಯ ಮೃಗದ ರೀತಿ ವರ್ತಿಸುತ್ತಾನೆ. ಕೋಪದ ಕೈಗೆ ಬುದ್ಧಿ ಕೊಟ್ಟು, ಪತ್ನಿಯನ್ನೇ ಕೊಂದು ಬಿಟ್ಟಿದ್ದಾನೆ. 

ಸಲಿಕೆಯಿಂದ ಪತ್ನಿ ತಲೆಗೆ ಹೊಡೆದ ಪತಿ

ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯ ಕಿರ್ನಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹೀರಾಪುರ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. 50 ವರ್ಷದ ವ್ಯಕ್ತಿ ರಾಜಕುಮಾರ್ ಬಹೆ, ಎಂಬಾತ, ತನ್ನ ಪತ್ನಿ 45 ವರ್ಷದ ಪುಷ್ಪಾ ಬಾಯಿ ಯನ್ನು ಕೊಂದಿದ್ದಾನೆ. ಅರಣ್ಯ ಇಲಾಖೆಯ ದಿನಗೂಲಿ ನೌಕರ ರಾಜಕುಮಾರ್ ಕೆಲಸ ಮಾಡುತ್ತಿದ್ದರು. ಪ್ರತಿದಿನ ಕೆಲಸ ಮುಗಿಸಿ ಮನೆಗೆ ಬಂದು ಸ್ನಾನ ಮಾಡುತ್ತಿದ್ದರು. ಕಳೆದ ಶನಿವಾರ ಸಂಜೆಯೂ ಇದೇ ರೀತಿ ನಡೆದಿದೆ. ಸ್ನಾನ ಮುಗಿದ ಬಳಿಕ ಟವೆಲ್ ನೀಡುವಂತೆ ಹೆಂಡತಿಯನ್ನು ಕೇಳಿದ್ದಾರೆ. ಪತ್ನಿ ಪುಷ್ಪಾ ಬಾಯಿ ಕೂಡಲೇ ಟವೆಲ್​ ತರಲು ತಡ ಮಾಡಿದ್ದಾಳೆ. ಇಷ್ಟಕ್ಕೆ ಸಿಟ್ಟಿಗೆದ್ದ ಪತಿ ಆಕೆಯ ತಲೆಗೆ ಸಲಿಕೆಯಿಂದ ಹಲ್ಲೆ ಮಾಡಿದ್ದಾನೆ.

ಇದನ್ನು ಓದಿ : ಲವರ್​ ಜೊತೆ ಹೋಟೆಲ್​ಗೆ ಎಂಟ್ರಿ ಕೊಟ್ಟ ಇನ್ಸ್​​ಪೆಕ್ಟರ್​ ; ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ

ಪಾತ್ರೆ ತೊಳೆಯುತ್ತಿದ್ದ ಪತ್ನಿ ಪುಷ್ಪಾ ಬಾಯಿ

ಪ್ರತಿದಿನ ಗಂಡ ಕೆಲಸದಿಂದ ಬಂದು ಸ್ನಾನ ಮಾಡುವ ಅಭ್ಯಾಸವಿತ್ತು. ಶನಿವಾರವೂ ಕೂಡ ಹೀಗೆ ಆಗಿದೆ. ಸ್ನಾನದ ನಂತರ ಗಂಡ ಟವೆಲ್​ ಕೇಳಿದ್ದಾನೆ. ಪತ್ನಿ ‘ಪಾತ್ರೆ ತೊಳೆಯುತ್ತಿದ್ದೇನೆ, ಸ್ವಲ್ಪ ಲೇಟ್ ಆಗುತ್ತೆ. ನೀವೇ ಅಲ್ಲೆ ಟವೆಲ್​ ಇದೆ ತೆಗೆದುಕೊಳ್ಳಿ’ ಎಂದು ಉತ್ತರಿಸಿದ್ದಳು. ಇಷ್ಟಕ್ಕೆ ಸಿಟ್ಟಿಗೆದ್ದ ಪತಿರಾಯ, ಗಂಡನಿಗೆ ಎದುರು ಮಾತನಾಡುತ್ತೀಯಾ ಎಂದು ಕೆಟ್ಟ ಪದಗಳಿಂದ ನಿಂದಿಸಿದ್ದಾನೆ. ಪತ್ನಿ ‘ಸಣ್ಣ ವಿಚಾರವನ್ನು ಇಷ್ಟು ದೊಡ್ಡದು ಮಾಡಬೇಡಿ ಬಿಟ್ಟುಬಿಡಿ’ ಎಂದು ಕೇಳಿದ್ದಾರೆ. ಅಲ್ಲೇ ಪಕ್ಕದಲ್ಲಿದ್ದ ಸಲಿಕೆ ತೆಗೆದುಕೊಂಡು ಜೋರಾಗಿ ಆಕೆಯ ತಲೆಗೆ ಹೊಡೆದಿದ್ದಾನೆ. ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನು ಓದಿ : ಹಣಕ್ಕಾಗಿ ಹುಡುಗ ಹುಡುಗಿಯರನ್ನು ಬೆತ್ತಲಾಗಿಸಿ ಅಶ್ಲೀಲ ವಿಡಿಯೋ ಮಾಡಿದ ಕಿಡಿಗೇಡಿಗಳು

ಜಗಳ ತಡೆಯಲು ಬಂದ ಮಗಳಿಗೆ ಬೆದರಿಕೆ

ಗಂಡ- ಹೆಂಡತಿ ಜಗಳವಾಗುತ್ತಿದ್ದಾಗ, ಮಗಳು ಕೂಡ ಬಂದಿದ್ದಾಳೆ. ‘ಈ ರೀತಿ ಜಗಳ ಮಾಡುವುದು ಸರಿಯಲ್ಲ. ಅಕ್ಕ ಪಕ್ಕದವರು ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಾರೆ. ದಯವಿಟ್ಟು ಜಗಳ ನಿಲ್ಲಿಸಿ’ ಎಂದು ಮನವಿ ಮಾಡಿಕೊಂಡಿದ್ದಾಳೆ. ಜಗಳ ತಡೆಯಲು ಬಂದ ತನ್ನ 23 ವರ್ಷದ  ಮಗಳ ಮೇಲೂ ಹಲ್ಲೆಗೆ ರಾಜಕುಮಾರ್​ ಯತ್ನಿಸಿದ್ದಾನೆ. ಈ ವೇಳೆ ಪತ್ನಿ ಪುಷ್ಪ ಬಾಯಿ ತಡೆಯಲು ಬಂದಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಸಲಿಕೆಯಿಂದ ರಭಸವಾಗಿ ಪತ್ನಿ ತಲೆಗೆ ಹೊಡೆದು, ಕೊಲೆ ಮಾಡಿದ್ದಾನೆ. ಬಳಿಕ ನೆರೆಮನೆಯವರು ಬಂದು ಪತಿಯನ್ನು ಹಿಡಿದು ಪೊಲೀಸರಿಗೆ ಕರೆ ಮಾಡಿದ್ದಾರೆ. ಆರೋಪಿಯನ್ನು  ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಮತ್ತು ಇತರ ಸಂಬಂಧಿತ ನಿಬಂಧನೆಗಳ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
Published by:Vasudeva M
First published: