Love Affair: ಮಗಳ ಪ್ರೀತಿಗೆ ವಿರೋಧ, ಹೆತ್ತ ಮಗಳ ಗಂಟಲು ಕುಯ್ದು ಕೊಂದ ತಂದೆ

ತಂದೆಗೆ ಮಗಳಿಗೆ ಪ್ರಿಯಕರನಿರುವ ವಿಚಾರ ಗೊತ್ತಾಗಿತ್ತು. ಪ್ರೀತಿಗೆ ವಿರೋಧಿಸಿದ ತಂದೆ ಮಗಳ ರೂಮಿಗೆ ಹೋಗಿ ಆಕೆಯ ಗಂಟಲು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಲಕ್ನೋ(ಜು.16): ಪ್ರೀತಿ-ಪ್ರೇಮ (Love) ವಿಚಾರವಾಗಿ ಕ್ರೌರ್ಯಗಳು, ಕೊಲೆ, ವಂಚನೆಗಳು ನಡೆಯುವುದು ಹೊಸದೇನಲ್ಲ. ದೇಶದಲ್ಲಿ ಮರ್ಯಾದಾ ಹತ್ಯೆಗಳಿಗೂ (Honor Killing) ಬರವಿಲ್ಲ. ಇಂಥಹ ಬಹಳಷ್ಟು ಅಪರಾಧ ಸುದ್ದಿಗಳು ಬರುತ್ತಲೇ ಇರುತ್ತವೆ. ಇದೀಗ ಉತ್ತರ ಪ್ರದೇಶದಲ್ಲಿ (Uttar Pradesh) ಮಗಳು ಪ್ರೀತಿಸಿದ್ದಕ್ಕೆ ತಂದೆಯಿಂದಲೇ ಕೊಲೆಯಾಗಿರುವ (Murder) ಘಟನೆ ನಡೆದಿದೆ. ಶುಕ್ರವಾರ ಇಲ್ಲಿ ವ್ಯಕ್ತಿಯೊಬ್ಬ ತನ್ನ 19 ವರ್ಷದ ಮಗಳನ್ನು ಗಂಟಲು ಕುಯ್ದು ಕೊಲೆ ಮಾಡಿದ್ದಾನೆ. ವ್ಯಕ್ತಿಯೊಬ್ಬನೊಂದಿಗಿನ ಮಗಳ ಪ್ರೇಮ ಸಂಬಂಧದ ಕಾರಣಕ್ಕೆ ಕತ್ತು ಸೀಳಿ ಕೊಂದಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

ಮನೋಜ್ ರಾಥೋಡ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಅಪರಾಧಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೊಲೀಸ್ ಅಧೀಕ್ಷಕ (ಗ್ರಾಮೀಣ) ಅಖಿಲೇಶ್ ನಾರಾಯಣ್ ಅವರು, ರಾಥೋಡ್ ಅವರು ಇಟಾಹ್‌ನ ವ್ಯಕ್ತಿಯೊಂದಿಗೆ ತಮ್ಮ ಮಗಳು ರುಚಿಯ ಸಂಬಂಧದ ಬಗ್ಗೆ ತಿಳಿದುಕೊಂಡರು. ಅವರನ್ನು ಭೇಟಿಯಾಗದಂತೆ ಕೇಳಿಕೊಂಡರು. ಆದರೆ ಅವಳು ಮಗಳು ಈ ಸಲಹೆಯನ್ನು ಕೇಳಲಿಲ್ಲ.

ಮಗಳ ಕೋಣೆಗೆ ನುಗ್ಗಿ ಕೊಲೆ

ಇದರಿಂದ ಕೋಪಗೊಂಡ ರಾಥೋಡ್ ಶುಕ್ರವಾರ ಮನೆಯ ಮೇಲಿನ ಮಹಡಿಯಲ್ಲಿರುವ ಮಗಳ ಕೋಣೆಗೆ ನುಗ್ಗಿ ಆಕೆಯ ಕತ್ತು ಸೀಳಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದಿದ್ದಾರೆ.

ಮುತ್ತೈದೆಯಾಗಿದ್ದ ತಂಗಿಯನ್ನೇ ಕೊಂದ ಅಣ್ಣ

ತಂಜಾವೂರಿನ ಕುಂಭಕೋಣಂ ನಗರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಅಂತರ್ಜಾತಿ ವಿವಾಹದ ಕಾರಣಕ್ಕಾಗಿ ನವವಿವಾಹಿತರನ್ನು ವಧುವಿನ ಸಹೋದರ ಜೂನ್ 13 ರಂದು ಹತ್ಯೆಗೈದಿದ್ದಾರೆ. ನವದಂಪತಿಯನ್ನು ಹತ್ಯೆಗೈದ ಆರೋಪಿಗಳಾದ ಶಕ್ತಿವೇಲ್ ಮತ್ತು ಬಂಧು ರಂಜಿತ್ ನನ್ನು ಬಂಧಿಸಲಾಗಿದೆ.

24 ವರ್ಷದ ಶರಣ್ಯ 21 ವರ್ಷದ ಮೋಹನ್ ಲವ್

ಕುಂಭಕೋಣಂ ಬಳಿಯ ಚೋಳಪುರಂ ಮೂಲದ ದಲಿತ ಮಹಿಳೆ 24 ವರ್ಷದ ಶರಣ್ಯ ಚೆನ್ನೈನ ನಾಯ್ಕರ್ ಸಮುದಾಯದ 21 ವರ್ಷದ ಮೋಹನ್‌ನನ್ನು ಪ್ರೀತಿಸುತ್ತಿದ್ದಳು.
ಐದು ತಿಂಗಳ ಹಿಂದೆ, ಶರಣ್ಯ ಮೋಹನ್‌ನನ್ನು ಭೇಟಿಯಾಗಿ ಸ್ನೇಹ ಬೆಳೆಸಿದಳು. ಅವಳು ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ಚಿಕಿತ್ಸೆಗಾಗಿ ಚೆನ್ನೈನ ಆಸ್ಪತ್ರೆಗೆ ಕರೆದೊಯ್ದಿದ್ದಳು. ಅಲ್ಲಿ ಅವಳು ದಾದಿಯಾಗಿ ಕೆಲಸ ಮಾಡುತ್ತಿದ್ದಳು. ಮೋಹನ್ ಆಸ್ಪತ್ರೆಯಲ್ಲಿ ಶರಣ್ಯಳ ತಾಯಿಯ ಪಕ್ಕದ ಬೆಡ್‌ನಲ್ಲಿ ರೋಗಿಯೊಬ್ಬರ ಅಟೆಂಡರ್ ಆಗಿದ್ದರು.

ಇದನ್ನೂ ಓದಿ: Love Story: ನಯನತಾರಾ ಸಿನಿಮಾ ಥರಾನೇ ಇದೆ ಈ ಲವ್​ಸ್ಟೋರಿ! ಇಬ್ಬರ ಮೇಲೂ ಡೀಪ್ ಲವ್

ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ 28 ವರ್ಷದ ರಂಜಿತ್‌ನೊಂದಿಗೆ ಶರಣ್ಯ ಮದುವೆ ಮಾಡಲು ಕುಟುಂಬದವರು ಈಗಾಗಲೇ ನಿರ್ಧರಿಸಿದ್ದರಿಂದ, ಶರಣ್ಯ ಕಳೆದ ವಾರ ಮೋಹನ್ ಅವರನ್ನು ತನ್ನ ಮನೆಯವರಿಗೆ ತಿಳಿಸದೆ ವಿವಾಹವಾದರು.

ಮನೆಗೆ ಭೋಜನಕ್ಕೆ ಆಹ್ವಾನಿಸಿದ ಶರಣ್ಯ ಸಹೋದರ

ಇದರ ನಂತರ, ಶರಣ್ಯ ಅವರ ಸಹೋದರ ಶಕ್ತಿವೇಲ್ ಅವರಿಗೆ ಮದುವೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಭರವಸೆ ನೀಡಿದರು. ನವವಿವಾಹಿತರನ್ನು ಕೊಲ್ಲುವ ಉದ್ದೇಶದಿಂದ ಅವರ ಮನೆಗೆ ಊಟಕ್ಕೆ ಆಹ್ವಾನಿಸಿದ್ದಾರೆ. ಮನೆಯವರು ಒಪ್ಪಿಕೊಂಡಿದ್ದಾರೆ ಎಂದು ನಂಬಿದ ನವವಿವಾಹಿತರು ಜೂನ್ 13 ರಂದು ಶರಣ್ಯ ಅವರ ತವರು ಕುಂಭಕೋಣಂಗೆ ಆಗಮಿಸಿದ್ದರು. ಇದಾದ ನಂತರ, ಶರಣ್ಯ ಅವರ ಸಹೋದರ ಶಕ್ತಿವೇಲ್ ಮತ್ತು ಸಂಬಂಧಿಕರಾದ ರಂಜಿತ್ ನವವಿವಾಹಿತರು ರಾತ್ರಿ ಊಟ ಮಾಡಿ ಮನೆಯಿಂದ ಹೊರಬಂದ ನಂತರ ಅವರನ್ನು ಕಡಿದು ಕೊಂದರು.

ಇದನ್ನೂ ಓದಿ: Honour Killing: ಪಿರಿಯಾಪಟ್ಟಣದಲ್ಲಿ ಮರ್ಯಾದಾ ಹತ್ಯೆ; ಪೋಷಕರಿಂದಲೇ ಹತಳಾದ ಅಪ್ರಾಪ್ತ ಮಗಳು

ಮೃತದೇಹ ವಶಕ್ಕೆ ಪಡೆದ ಪೊಲೀಸರು

ಈ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರ ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತಲೆಮರೆಸಿಕೊಂಡಿದ್ದ ಶಕ್ತಿವೇಲ್ ಮತ್ತು ರಂಜಿತ್ ರಾತ್ರಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ತಂಜಾವೂರು ಎಸ್ಪಿ ಪ್ರಕಾರ, ಆರೋಪಿಗಳನ್ನು ರಕ್ಷಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ವಿಷಯದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗಿದೆ.
Published by:Divya D
First published: