ಪುಣೆ: ವ್ಯಕ್ತಿಯೋರ್ವನನ್ನು ಹುಚ್ಚ ಎಂದು ಕರೆದರು: ಆತ ಕೋಪಿಸಿಕೊಂಡಿದ್ದಕ್ಕೆ ಕೊಂದೆ ಬಿಟ್ಟರು

ಗುರುವಾರ ಆರೋಪಿಗಳು ಮತ್ತೆ ಆತನನ್ನು ಚುಡಾಯಿಸಲು ಆರಂಭಿಸಿದನು. ಮೃತ ಮನೋಜ್​ ಕಸಬೆಯು ಈ ರೀತಿ ಕರೆಯ ಬೇಡಿ ಎಂದು ವಿರೋಧ ವ್ಯಕ್ತಪಡಿಸಿದ್ದಾನೆ. ವಿರೋಧದ ಹೊರತಾಗಿಯೂ ಆರೋಪಿಗಳು ಅಪಹಾಸ್ಯ ಮುಂದುವರಸಿದ್ದಾರೆ. ನಂತರ ಮನೋಜ್​ ಸಿಟ್ಟಿಗೆದ್ದಿದ್ದಾನೆ.

 • Share this:
  ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್‌ವಾಡ್ ಟೌನ್‌ಶಿಪ್‌ನಲ್ಲಿ ವ್ಯಕ್ತಿಯೋರ್ವನನ್ನು "ಹುಚ್ಚ" ಎಂದು ಏಳು ಜನರ ಗುಂಪೊಂದು ಅಣಕಿಸಿದೆ. ಇದರಿಂದ ಕೋಪಗೊಂಡ ವ್ಯಕ್ತಿಯು ಸಿಟ್ಟಿಗೆದ್ದಿದ್ದಾನೆ.  ನಂತರ ಹುಚ್ಚ ಎಂದು ಕರೆಸಿಕೊಂಡ 25 ವರ್ಷದ ವ್ಯಕ್ತಿಯನ್ನು ಏಳು ಜನರು ಸೇರಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿಗಳು ಆಗಸ್ಟ್ 5 ರಂದು ಮಿಲಿಂದ್ ನಗರ ಪ್ರದೇಶದಲ್ಲಿ ಬಿದಿರಿನ ತುಂಡುಗಳು, ಸ್ಟಂಪ್‌ಗಳು ಮತ್ತು ಕುರ್ಚಿಯಿಂದ ವ್ಯಕ್ತಿಯ ಮೇಲೆ ದಾಳಿ ಮಾಡಿ ಈ ಹೀನ ಕೃತ್ಯ ಎಸಗಿದ್ದಾರೆ.

  "ಆರೋಪಿಗಳು ಮನೋಜ್ ಕಸಬೆ ಅವರನ್ನು ದಿನಂಪ್ರತಿ ಚುಡಾಯಿಸುತ್ತಿದ್ದರು ಮತ್ತು ಆತನನ್ನು 'ಹುಚ್ಚ' ಎಂದು ಪದೇ, ಪದೇ ಕರೆದು, ಅಣಕಿಸುತ್ತಿದ್ದರು. ಗುರುವಾರ ಆರೋಪಿಗಳು ಮತ್ತೆ ಆತನನ್ನು ಚುಡಾಯಿಸಲು ಆರಂಭಿಸಿದನು. ಮೃತ ಮನೋಜ್​ ಕಸಬೆಯು ಈ ರೀತಿ ಕರೆಯ ಬೇಡಿ ಎಂದು ವಿರೋಧ ವ್ಯಕ್ತಪಡಿಸಿದ್ದಾನೆ. ವಿರೋಧದ ಹೊರತಾಗಿಯೂ ಆರೋಪಿಗಳು ಅಪಹಾಸ್ಯ ಮುಂದುವರಸಿದ್ದಾರೆ. ನಂತರ ಮನೋಜ್​ ಸಿಟ್ಟಿಗೆದ್ದಿದ್ದಾನೆ, ಆಗ ಏಳು ಜನರು ಸೇರಿ  ಆತನನ್ನು ಪ್ಲಾಸ್ಟಿಕ್ ಕುರ್ಚಿ, ಬಿದಿರಿನ ಕಡ್ಡಿಗಳು ಮತ್ತು ಸ್ಟಂಪ್‌ಗಳಿಂದ ಹೊಡೆಯಲು ಆರಂಭಿಸಿದರು. ಕಸಬೆ ಗಂಭೀರವಾಗಿ ಗಾಯಗೊಂಡರು ಮತ್ತು ನಂತರ ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಇದನ್ನೂ ಓದಿ: ಕೊರೋನಾ ಆತಂಕ: ಆಗಸ್ಟ್​ 15ರಬಳಿಕ ಜಾರಿಯಾಗಲಿದೆ ಕಠಿಣ ನಿಯಮ; ದೇವಸ್ಥಾನ ಬಂದ್​ ಸಾಧ್ಯತೆ

  ಏಳು ಜನರ ವಿರುದ್ಧ ಸೆಕ್ಷನ್ 302 (ಕೊಲೆ) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಇತರ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ, ಅವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

  ಇದನ್ನೂ ಓದಿ: ಅಮೇರಿಕಾದಲ್ಲಿ ಐಸಿಯು ಹಾಸಿಗೆ ಬಿಕ್ಕಟ್ಟು: ಆಸ್ಟಿನ್​ ನಗರದ 24 ಲಕ್ಷ ಜನರಿಗೆ ಖಾಲಿ ಇರುವುದು 6 ಬೆಡ್​ಗಳು ಮಾತ್ರ!!

  ಅಮಾಯಕ ವ್ಯಕ್ತಿಯನ್ನು ಹೀಗೆ ಸುಮ್ಮನೆ ಅವಮಾನಿಸಿ ಪ್ರಾಣ ತೆಗೆದಿರುವ ಈ ಕೃತ್ಯ ನಿಜಕ್ಕೂ ನಮಗೆ ಘಾಸಿ ಉಂಟು ಮಾಡಿದೆ. ಈ ರೀತಿಯ ಅನಗತ್ಯ, ಕ್ಷುಲ್ಲಕ ವಿಚಾರಗಳಿಗೆ ಕೊಲೆಯಂತಹ ಅಪರಾದ ಪ್ರಕರಣಗಳು ಇತ್ತೀಚೆಗೆ ತೀರಾ ಹೆಚ್ಚುತ್ತಿವೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: