ಕೊಲೆಗೈದು ಠಾಣೆ ಮುಂದೆಯೇ Dead Body ಎಸೆದ ಭೂಪ..! ಮುಂದೇನು ಆಯ್ತು ಗೊತ್ತೇ?

ಜಿಲ್ಲಾಧಿಕಾರಿ ಕಚೇರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಸಮೀಪದಲ್ಲಿರುವ ಕೊಟ್ಟಾಯಂ ಪೂರ್ವ ಪೊಲೀಸ್ ಠಾಣೆಯ ಮುಂದೆ ಜೋಮನ್ ಕೆ ಜೋಸ್ ಬಾಬುವನ್ನು ಕೊಲೆ ಮಾಡಿ ಶವವನ್ನು ಠಾಣೆ ಎದುರು ಎಸೆದು ಜೋಸ್ ಪರಾರಿಯಾಗಲು ಯತ್ನಿಸಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇವನು ಅಂತಿಂತ ಕ್ರಿಮಿನಲ್ (Criminal) ಅಲ್ಲ. ಪೊಲೀಸ್, ಕಾನೂನು ಎಂಬ ಭಯನೇ ಇಲ್ಲದಂತೆ ವರ್ತಿಸಿದ್ದಾನೆ. ಈತನ ಭಂಡ ಧೈರ್ಯ ಹೇಗಿದೆ ಅಂದ್ರೆ ಕೊಲೆ (Murdered) ಮಾಡಿ ಶವವನ್ನು ತಂದು ಸ್ವತ: ಪೊಲೀಸ್ ಠಾಣೆ(Police Station) ಮುಂದೆ ತಂದು ಎಸೆದು ಹೋಗಿದ್ದಾನೆ. ಹೌದು ಯುವಕನನ್ನು ಹತ್ಯೆಗೈದು ಡೆಡ್ (Dead Body) ಬಾಡಿಯನ್ನು ಪೊಲೀಸ್ ಸ್ಟೇಷನ್ ಮುಂದೆ ಎಸೆದಿರುವ (Thrown) ಘಟನೆಯೊಂದು ನಡೆದಿದೆ. ಹಾಗಾದರೆ ಎಲ್ಲಿದು ಪ್ರಕರಣ, ಯಾರು ಆ ಕ್ರಿಮಿನಲ್ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಠಾಣೆಯ ಮುಂದೆ ಬಿಸಾಡಲಾಗಿದೆ
ಕೊಟ್ಟಾಯಂ: ಕ್ರಿಮಿನಲ್ ಪ್ರಕರಣಗಳ ಆರೋಪಿಯೊಬ್ಬ, 19 ವರ್ಷದ ಯುವಕನನ್ನು ಅಪಹರಿಸಿ, ಕೊಲೆ ಮಾಡಿ, ಶವವನ್ನು ಹೊತ್ತು ತಂದು ಪೊಲೀಸ್ ಠಾಣೆ ಎದುರು ಎಸೆದು ಹೋಗಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಮುತ್ತಂಬಲಂ ನಿವಾಸಿ ಶಾನ್ ಬಾಬು ಎಂದು ಗುರುತಿಸಲಾಗಿದೆ. ಯುವಕನೊಬ್ಬನನ್ನು ಕೊಲೆ ಮಾಡಿ ಪೊಲೀಸ್ ಠಾಣೆಯ ಮುಂದೆ ಬಿಸಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ದ್ಯಾವಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ 40 ವರ್ಷದ ಜೋಮನ್ ಕೆ ಜೋಸ್ ಈ ಕೃತ್ಯ ಮಾಡಿರುವುದಾಗಿ ಪ್ರಾಥಮಿಕವಾಗಿ ತಿಳಿದು ಬಂದಿದೆ.

ಜೋಮನ್ ಕೆ ಜೋಸ್ ಎಂಬಾತ ಶಾನ್ ಬಾಬು ಎಂಬ ಯುವಕನನ್ನು ಅಪಹರಿಸಿ ಕೊಲೆಗೈದಿದ್ದಾನೆ ಎಂಬ ಆರೋಪದ ಮೇಲೆ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಬಾಬು ಅವರನ್ನು ಮಂಗಳವಾರ ರಾತ್ರಿ ಜೋಸ್ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Heart attack: ಚಲಿಸುತ್ತಿದ್ದ ಬಸ್‌ನಲ್ಲಿಯೇ CPR ಚಿಕಿತ್ಸೆ ನೀಡಿ ಯುವಕನ ಜೀವ ಉಳಿಸಿದ ನರ್ಸ್..!

ಡ್ರಗ್ಸ್‌ ಅಮಲು
ಜಿಲ್ಲಾಧಿಕಾರಿ ಕಚೇರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಸಮೀಪದಲ್ಲಿರುವ ಕೊಟ್ಟಾಯಂ ಪೂರ್ವ ಪೊಲೀಸ್ ಠಾಣೆಯ ಮುಂದೆ ಜೋಮನ್ ಕೆ ಜೋಸ್ ಬಾಬು ವನ್ನು ಕೊಲೆ ಮಾಡಿ ಶವವನ್ನು ಠಾಣೆ ಎದುರು ಎಸೆದು ಜೋಸ್ ಪರಾರಿಯಾಗಲು ಯತ್ನಿಸಿದ್ದಾನೆ.

ಆದರೆ, ಡ್ರಗ್ಸ್‌ ಅಮಲಿನಲ್ಲಿದ್ದ ಜೋಸ್ ಓಡಿಹೋಗಲು ಆಗದೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನೂ ಪೊಲೀಸರು ಕೂಡಲೇ ಬಾಬುವನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆ ವೇಳೆಗಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು.

ಹೊಡೆದು ಕೊಲೆ
ಕೊಲೆಯಾದ ರಾತ್ರಿಯೇ ತನ್ನ ಮಗನನ್ನು ಮನೆಯಿಂದ ಹೊರಗೆ ಬರುವಂತೆ ಹೇಳಿ ಜೋಸ್ ಎಂಬಾತ ಆಟೋರಿಕ್ಷಾದಲ್ಲಿ ಅಪಹರಿಸಿದಾಗ ತಾನು ಪೊಲೀಸರಿಗೆ ದೂರು ನೀಡಿದ್ದೆ ಎಂದು ಮೃತ ದುರ್ಧೈವಿ ಬಾಬು ಅವರ ತಾಯಿ ತಿಳಿಸಿದ್ದಾರೆ.

ದೂರು ಪಡೆದ ಪೊಲೀಸರು ಬಾಬುವನ್ನು ಹುಡುಕಿದ್ದಾರೆ. ಆದರೆ ಆ ದಿನ ಬಾಬು ಪೊಲೀಸರಿಗೆ ಸಿಗಲಿಲ್ಲ. ಪ್ರಾಥಮಿಕ ತನಿಖೆಗಳು ಕೊಟ್ಟಾಯಂ ಪಟ್ಟಣದಲ್ಲಿರುವ ವಿವಿಧ ಡ್ರಗ್ ದಂಧೆಗಳ ನಡುವಿನ ತೀವ್ರ ಪೈಪೋಟಿ ಕೊಲೆಗೆ ಕಾರಣವೆಂದು ಹೇಳಲಾಗಿದೆ. ಆರೋಪಿ ಜೋಸ್‌ ಬಾಬುವನ್ನು ಕಬ್ಬಿಣದ ರಾಡ್ ಮತ್ತು ಮರದ ದಿಮ್ಮಿಗಳಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Farming: ನಗರ ಕೃಷಿ ಉತ್ತೇಜನಕ್ಕೆ Vertical Garden structure ವಿತರಿಸಿದ ಕೇರಳ ಸರ್ಕಾರ

ಸಾಮಾಜಿಕ ಚಟುವಟಿಕೆಗಳ ವಿರೋಧಿ ತಡೆ ಕಾಯ್ದೆ
ಈ ಹಿಂದೆ ಕೂಡ ಕೇರಳದಲ್ಲಿ ಆರೋಪಿ ಜೋಸ್‌ ಮೇಲೆ ಹಲವು ಪ್ರಕರಣಗಳು ದಾಖಲೆಯಾಗಿವೆ. ಕೆಲವು ತಿಂಗಳ ಹಿಂದಷ್ಟೇ ಸರಣಿ ಅಪರಾಧಿ ಜೋಸ್‌ ಮೇಲೆ ಕೇರಳ ಸಾಮಾಜಿಕ ಚಟುವಟಿಕೆಗಳ ವಿರೋಧಿ ತಡೆ ಕಾಯ್ದೆ (KAAPA) ಅನ್ನು ದಾಖಲಿಸಲಾಗಿತ್ತು ಮತ್ತು ಕೊಟ್ಟಾಯಂ ಜಿಲ್ಲೆ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು.

ಆದರೆ ಮತ್ತೆ ಕೊಟ್ಟಾಯಂಗೆ ಹಿಂದಿರುಗಿದ ಜೋಸ್, ತನ್ನ ಗ್ಯಾಂಗ್ ಅನ್ನು ಮರುಸಂಘಟಿಸಲು ಬಯಸಿದ್ದ. ಆ ಪ್ರದೇಶದಲ್ಲಿ ಇದ್ದ ಇತರ ಗ್ಯಾಂಗ್‌ಗಳ ಬಗ್ಗೆ ಬಾಬು ಮಾಹಿತಿ ಸಂಗ್ರಹಿಸಿದ್ದ ಕಾರಣ, ಬಾಬುವನ್ನು ಜೋಸ್ ಅಪಹರಿಸಿ ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನೂ ಆರೋಪಿಯನ್ನು ಈಗಾಗ್ಲೆ ವಶಕ್ಕೆ ತೆಗೆದುಕೊಂಡಿದ್ದು, ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ.
Published by:vanithasanjevani vanithasanjevani
First published: