ದೂರವಿರುವ ದುಷ್ಮನ್(Enemy)ನ ಬೇಕಾದರೇ ನಂಬಬಹುದು. ಹತ್ತಿರವಿದ್ದುಕೊಂಡೇ ನಗುಮುಖ ತೋರಿಸಿ ಮೋಸ ಮಾಡುವವರನ್ನ ನಂಬಬಾರದು ಎಂದು ಎಲ್ಲ ಹೇಳುತ್ತಾರೆ. ನಾವು ನಂಬಿದವರೇ ನಮಗೆ ನಂಬಿಕೆ ದ್ರೋಹ(Cheating) ಬಗೆಯುತ್ತಾರೆ. ಇಂತಹ ಘಟನೆಗಳು ಪ್ರತಿದಿನ ಬೆಳಕಿಗೆ ಬರುತ್ತಲೇ ಇರುತ್ತವೆ. ದೆಹಲಿ(Delhi)ಯಲ್ಲಿ ಇಂತಹದ್ದೆ ಒಂದು ಘಟನೆ ಜರುಗಿದೆ. ಮಗುವನ್ನು ನೋಡಿಕೊಳ್ಳಲು ಕೆಲಸಕ್ಕೆ ಸೇರಿಸಿಕೊಂಡಿದ್ದವನೇ, ಆ ಮಗುವನ್ನ ಕಿಡ್ನಾಪ್(Kidnap) ಮಾಡಿ ಹಣಕ್ಕೆ ಡಿಮ್ಯಾಂಡ್(Demand) ಇಟ್ಟಿದ್ದ. ಅದು ಬರೋಬ್ಬರಿ ಒಂದು ಕೋಟಿ ಹತ್ತು ಲಕ್ಷಕ್ಕೆ ಆತ ಡಿಮ್ಯಾಂಡ್ ಮಾಡಿದ್ದ. ತಾವೇ ಆತನ ಒಳ್ಳೆಯ ಗುಣಗಳನ್ನು ನೋಡಿ ಮಗುವನ್ನು ನೋಡಿಕೊಳ್ಳಲು ಕೆಲಸ ಕೊಟ್ಟವರು, ಇದೀಗ ಆತನಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಉಂಡ ಮನೆಗೆ ದ್ರೋಹ ಬಗೆಯಲು ಹೋದ ಆತ ಪೊಲೀಸರ ಅತಿಥಿಯಾಗಿದ್ದಾನೆ. ಹಣದ ಆಸೆಗೆ ಬಿದ್ದು, ದುಡುಕಿ ತಪ್ಪು ಮಾಡಿ ಈಗ ಜೈಲು ಸೇರಿದ್ದಾನೆ. ತನ್ನ ಭವಿಷ್ಯವನ್ನ ತನ್ನ ಕೈಯಾರೆ ಹಾಳು ಮಾಡಿಕೊಂಡಿದ್ದಾನೆ.
ಮನೆಗೆಲಸದವನಿಂದಲೇ ಮಗು ಕಿಡ್ನಾಪ್
ದೆಹಲಿಯ ಗಾಂಧಿನಗರದ ಸುಭಾಷ್ ಮೊಹೊಲ್ಲಾ ಏರಿಯಾದಲ್ಲಿ ವಾಸಿಸುತ್ತಿರುವ ಕುಟುಂಬವೊಂದು ತಮ್ಮ ಮಗುವನ್ನು ನೋಡಿಕೊಳ್ಳುವ ಕೆಲಸವನ್ನು ಪರಿಚಯಸ್ಥ ವ್ಯಕ್ತಿಗೆ ಕೊಟ್ಟಿದ್ದರು. ಒಂದು ತಿಂಗಳ ಹಿಂದೆ ಮೋನು ಎಂಬಾತನಿಗೆ ಮಗು ನೋಡಿಕೊಳ್ಳುವ ಕೆಲಸವನ್ನು ನೀಡಿದ್ದರು. ಆದರೆ ಮೋನು ಕೇವಲ 9 ದಿನಗಳ ಕಾಲ ಕೆಲಸವನ್ನು ಮಾಡಿ ಕಡಿಮೆ ಸಂಬಳ ಎಂದು ಬಿಟ್ಟು ಹೋಗಿದ್ದ. ಬಳಿಕ ಆರು ದಿನಗಳ ಹಿಂದೆ ಮಗುವಿನ ಕುಟುಂಬಸ್ಥರು ಮತ್ತೆ ಮೋನುಗೆ ಕರೆ ಮಾಡಿ ಕೆಲಸಕ್ಕೆ ಬರುವಂತೆ ಹೇಳಿದ್ದರು.
ಇದನ್ನು ಓದಿ:
ಸಿನಿಮೀಯ ರೀತಿಯಲ್ಲಿ Kidnap: ಪೊಲೀಸರ ವಶದಲ್ಲಿ ಭರ್ಜರಿ-KGF ಸಿನಿಮಾ ಖ್ಯಾತಿಯ ಕಲಾವಿದ
ಸಂಬಳ ಹೆಚ್ಚಿಗೆ ಕೊಟ್ಟು ವಾಪಸ್ ಕರೆಸಿದ್ದರು
ಸಂಬಳ ಕಡಿಮೆ ಎಂದು ಕೆಲಸ ಬಿಟ್ಟು ಹೋಗಿದ್ದ ಮೋನುವನ್ನ ಮತ್ತೆ ಹೆಚ್ಚಿನ ಸಂಬಳಕ್ಕೆ ಮಗುವಿನ ತಾಯಿ ಕರೆಸಿದ್ದಳು. ಮೋನು ಕೆಲಸ ಬಿಟ್ಟು ಹೋದಾಗ 7 ವರ್ಷದ ಮಗುವಿಗೆ ಬೇಜಾರಾಗಿತ್ತು ಎಂಬ ಕಾರಣಕ್ಕೆ ಆತನನ್ನು ವಾಪಸ್ ಕರೆಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಮೋನು, ಮಗುವನ್ನ ಆಟವಾಡಿಸಲು ಒಂದಷ್ಟು ದೂರು ವಾಕಿಂಗ್ಗೆ ಕರೆದುಕೊಂಡು ಹೋಗಿ ಬರುವುದಾಗಿ ತಾಯಿ ಬಳಿ ಹೇಳಿದ್ದ. ಈತನನ್ನ ನಂಬಿದ್ದ ತಾಯಿ ಮಗುವನ್ನು ಮೋನು ಜತೆ ಕಳಿಸಿಕೊಟ್ಟಿದ್ದರು.
ಐದೇ ನಿಮಿಷದಲ್ಲಿ ಮಗು ಕಿಡ್ನಾಪ್
ಮಗುವನ್ನ ಜತೆಗೆ ಕರೆದುಕೊಂಡು ಹೋದ ಮೋನು, 5 ನಿಮಿಷಗಳ ಬಳಿಕ ಮಗುವಿನ ತಾಯಿ ಫೋನ್ಗೆ ಕರೆಮಾಡಿದ್ದ. 1.10 ಕೋಟಿ ಹಣ ಕೊಟ್ಟರೆ ಮಾತ್ರ ನಿಮ್ಮ ಮಗ ಮನೆಗೆ ಬರುತ್ತಾನೆ. ಇಲ್ಲವಾದರೆ ಆತನನ್ನು ಮರೆತುಬಿಡಿ ಎಂದು ಬೆದರಿಸಿದ್ದ. ಮೊದಲು ಮೋನು ಹೇಳಿದ್ದನ್ನ ಕೇಳಿ ತಮಾಷೆ ಎಂದುಕೊಂಡಿದ್ದರು. ಬಳಿಕ ಮತ್ತೆ ಫೋನ್ ಮಾಡಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ.ಎಷ್ಟೇ ಹೊತ್ತು ಕಾದರೂ ಇಬ್ಬರು ಮನೆಗೆ ಬರಲಿಲ್ಲ. ಇದರಿಂದ ಗಾಬರಿಗೊಂಡ ಮಗುವಿನ ಕುಟುಂಬಸ್ಥರು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು.
ಇದನ್ನು ಓದಿ:
ಎಣ್ಣೆ ಪಾರ್ಟಿ ಮಾಡೋಣ ಬಾ ಅಂತ ಸ್ನೇಹಿತನನ್ನೇ ಕಿಡ್ನಾಪ್ ಮಾಡಿದ್ದ ಐನಾತಿ ಗ್ಯಾಂಗ್
ಮೂರು ಗಂಟೆಯಲ್ಲಿ ಖಾಕಿ ಬಲೆಗೆ ಬಿದ್ದ ಕಿಡ್ನಾಪರ್
ದೂರು ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು, ಏರಿಯಾ ಫುಲ್ ಸರ್ಚ್ ಮಾಡಿದ್ದಾರೆ . 3 ಗಂಟೆಗಳ ಸತತ ಕಾಯಾಚರಣೆ ನಡೆಸಿದರು. ಬಳಿಕ ಆತ ಮಗು ಜತೆ ಗೋಕುಲ್ಪುರ್ ಮೆಟ್ರೋ ಸ್ಟೇಷನ್ ಬಳಿ ಇರುವ ಮಾಹಿತಿ ಸಿಕ್ಕಿದೆ. ಕೂಡಲೇ ಸ್ಥಳಕ್ಕೆ ಹೋದ ಪೊಲೀಸರು ಆತನನ್ನ ವಶಕ್ಕೆ ಪಡೆದಿದ್ದಾರೆ. ಸುರಕ್ಷಿತವಾಗಿ ಮಗುವನ್ನು ರಕ್ಷಿಸಿ ಕುಟುಂಬಸ್ಥರಿಗೆ ನೀಡಿದ್ದಾರೆ. ಇದಕ್ಕೆ ಹೇಳುವುದು ನಂಬಿದವರೇ ಹೆಚ್ಚು ದ್ರೋಹ ಬಗೆಯುತ್ತಾರೆ ಎಂದು. ಕೆಲಸ ನೀಡುವ ಮೊದಲು ಆತನ ಹಿನ್ನಲೆ ವಿಚಾರಸಿದ್ದರೆ ಈ ರೀತಿ ಘಟನೆ ನಡೆಯುತ್ತಿರಲಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ