• Home
  • »
  • News
  • »
  • national-international
  • »
  • ಹೆತ್ತ ತಾಯಿಯನ್ನೇ ಕೊಂದು ಪೀಸ್​ ಪೀಸ್​ ಮಾಡಿದ ಮಗ ಫ್ರಿಡ್ಜ್​ನಲ್ಲಿಟ್ಟು ಬೇಯಿಸಿ ತಿಂದ!

ಹೆತ್ತ ತಾಯಿಯನ್ನೇ ಕೊಂದು ಪೀಸ್​ ಪೀಸ್​ ಮಾಡಿದ ಮಗ ಫ್ರಿಡ್ಜ್​ನಲ್ಲಿಟ್ಟು ಬೇಯಿಸಿ ತಿಂದ!

ಅಲ್ಬರ್ಟೊ

ಅಲ್ಬರ್ಟೊ

ಗರಗಸ ಬಳಸಿ ಆಕೆಯ ದೇಹವನ್ನು ಪೀಸ್​ ಪೀಸ್​ ಮಾಡಿದ್ದಾನೆ. ನಂತರ ಪ್ಲಾಸ್ಟಿಕ್​ ಬಾಕ್ಸ್​ನಲ್ಲಿ ತುಂಬಿಟ್ಟು ಫ್ರಿಡ್ಜ್​ನಲ್ಲಿ ಇಟ್ಟಿದ್ದಾನೆ. ವಾರಗಟ್ಟಲೆ ಫ್ರಿಡ್ಜ್​ನಲ್ಲಿ ತಾಯಿಯ ಮಾಂಸ ಇಟ್ಟುಕೊಂಡಿದ್ದಲ್ಲದೆ. ಅದರಿಂದ ಅಡುಗೆ ಮಾಡಿ ತಿಂದಿದ್ದಾನೆ.

  • Share this:

    ತಾಯಿ ದೇವರಿಗೆ ಸಮಾನ. ಅಂತವಳಿಗೆ ಕಷ್ಟ, ನೋವು ಬರಬಾರದೆಂದು ಎಲ್ಲಾ ಮಕ್ಕಳು ಆಶಿಸುತ್ತಾರೆ. ಆದರೆ ಇಲ್ಲೊಬ್ಬ ನರರಾಕ್ಷಸ ಮಗ ತಾಯಿಯನ್ನೇ ಕೊಂದು ಆಕೆಯ ದೇಹವನ್ನು ತುಂಡರಿಸಿದ್ದಾನೆ. ಅಷ್ಟು ಮಾತ್ರವಲ್ಲ, ಫ್ರಿ್ಡ್ಜ್​ನಲ್ಲಿಟ್ಟು ಬೇಯಿಸಿ ತಿಂದಿದ್ದಾನೆ.


    ಸ್ಪೇನ್​ನಲ್ಲಿ ಈ ಘಟನೆ ನಡೆದಿದೆ. ಹೆತ್ತ ತಾಯಿಯನ್ನು ಕೊಂದ ಪಾಪಿ ಮಗ ಇದೀಗ ಜೈಲು ಸೇರಿದ್ದಾನೆ. 15 ವರ್ಷ ಶಿಕ್ಷೆ ಅನುಭವಿಸುತ್ತಿದ್ದಾನೆ.


    ಸ್ಪೇನ್​ನ ವೆಂಟಾಸ್​ನ ಅಲ್ಬರ್ಟೊ ಎಂಬಾತನಿಗೆ ತಾಯಿಯ ಮೇಲೆ ಅದೇನು ಸಿಟ್ಟಿತ್ತೋ ಏನೋ. 2019ರಲ್ಲಿ ಅಲ್ಬರ್ಟೊ ತನ್ನ ತಾಯಿಯನ್ನು ಕೊಂದಿದ್ದಾನೆ. ನಂತರ ಗರಗಸ ಬಳಸಿ ಆಕೆಯ ದೇಹವನ್ನು ಪೀಸ್​ ಪೀಸ್​ ಮಾಡಿದ್ದಾನೆ. ನಂತರ ಪ್ಲಾಸ್ಟಿಕ್​ ಬಾಕ್ಸ್​ನಲ್ಲಿ ತುಂಬಿಟ್ಟು ಫ್ರಿಡ್ಜ್​ನಲ್ಲಿ ಇಟ್ಟಿದ್ದಾನೆ. ವಾರಗಟ್ಟಲೆ ಫ್ರಿಡ್ಜ್​ನಲ್ಲಿ ತಾಯಿಯ ಮಾಂಸ ಇಟ್ಟುಕೊಂಡಿದ್ದಲ್ಲದೆ. ಅದರಿಂದ ಅಡುಗೆ ಮಾಡಿ ತಿಂದಿದ್ದಾನೆ.


    ಅಲ್ಬರ್ಟೊ ತಾಯಿಯ ಸ್ನೇಹಿತೆಯೊಬ್ಬರು ಈ ಬಗ್ಗೆ ಅನುಮಾನ ಬಂದು ದೂರು ನೀಡಿದ್ದಾರೆ. ದೂರಿನ ಆಧಾರ ಪೊಲೀಸರು ಆತನ ಮನೆಗೆ ಬಂದಾಗ ಆತನ ಕೃತ್ಯ ಕಣ್ಣೆದುರಿಗೆ ಕಂಡಿದೆ. ತಕ್ಷಣವೇ ಆತನನ್ನು ಬಂಧಿಸಿದ್ದು, ಮಾಂಸಗಳನ್ನು ವಶ ಪಡಿಸಿಕೊಂಡಿದ್ದಾರೆ.


    ನಂತರ ಅಲ್ಬರ್ಟೊನನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಗಿದೆ. ಅಲ್ಬರ್ಟೊ ಪರ ವಕೀಲರು ಆತ ಮಾನಸಿಕ ಅಸ್ವಸ್ಥ ಎಂದು ಸಾವೀತು ಪಡಿಸಲು ಪ್ರಯತ್ನಿಸಿದಾದರು ಆದು ಸಾಧ್ಯವಾಗಲಿಲ್ಲ. ಕೊನೆಗೆ 15 ವರ್ಷ 5 ತಿಂಗಳ ಶಿಕ್ಷೆಯನ್ನು ಹೊತ್ತುಕೊಂಡು ಜೈಲು ಸೇರಿದ್ದಾನೆ ಅಲ್ಬರ್ಟೊ. ಒಟ್ಟಿನಲ್ಲಿ ಪಾಪಿ ಮಗ ಮಾಡಿದ ತಪ್ಪಿಗೆ ಜೈಲು ಕಂಬಿ ಎಣಿಸುತ್ತಿದ್ದಾನೆ.

    Published by:Harshith AS
    First published: