Weird Crime News: ಯುವತಿಯ ಪೃಷ್ಠ ಭಾಗಕ್ಕೆ ವೀರ್ಯ ತುಂಬಿದ ಇಂಜೆಕ್ಷನ್ ಚುಚ್ಚಿದ ವ್ಯಕ್ತಿಗೆ 10 ವರ್ಷ ಜೈಲು

Weird Crime News 2021: ಕಳೆದ ಫೆಬ್ರವರಿ ತಿಂಗಳಲ್ಲಿ ಮೇರಿಲ್ಯಾಂಡ್​ನ ಕ್ರಿಸ್ಟೋಫರ್ಸ್​ ಫೈನ್​ ಫುಡ್ಸ್​ ಗ್ರಾಸರಿ ಅಂಗಡಿಯಲ್ಲಿ ಮಹಿಳೆ ಶಾಪಿಂಗ್​ಗೆ ಬಂದಿದ್ದರು. ಶಾಪಿಂಗ್​ ಮುಗಿಸಿ, ಖರೀದಿಸಿದ ವಸ್ತುಗಳನ್ನು ಕಾರಿನಲ್ಲಿ ಹಾಕಿಕೊಂಡು ಶಾಪಿಂಗ್​ ಕಾರ್ಟ್​ ಅನ್ನು ವಾಪಸ್​ ಕೊಡುತ್ತಿದ್ದರು

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    Crime News: ಮಹಿಳೆಯೊಬ್ಬರ ಪೃಷ್ಠಭಾಗಕ್ಕೆ ವೀರ್ಯ ತುಂಬಿದ ಇಂಜೆಕ್ಷನ್​ ಚುಚ್ಚಿದ ಪ್ರಕರಣ ಸಂಬಂಧ ಅಮೆರಿಕಾದ ಮೇರಿಲ್ಯಾಂಡ್​ನ ವ್ಯಕ್ತಿಯೊಬ್ಬನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ವರದಿಗಳ ಪ್ರಕಾರ 52 ವರ್ಷದ ಬೈರನ್​ ಸ್ಟೀಮನ್​ ಎಂಬಾತ ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಮಹಿಳೆಗೆ ಇಂಜೆಕ್ಷನ್​ ಚುಚ್ಚಿದ್ದ. ಮಹಿಳೆ ಮೊದಲು ಸಿಗರೇಟ್​ನಿಂದ ಸುಟ್ಟಿರಬಹುದು ಎಂದುಕೊಂಡಿದ್ದರಂತೆ, ಆದರೆ ನಂತರ ನೋವು ವಿಪರೀತವಾದಾಗ ವೈದ್ಯರ ಬಳಿ ತೆರಳಿದರು. ಅಲ್ಲಿ, ಇಂಜೆಕ್ಷನ್​ ಚುಚ್ಚಿರುವ ಬಗ್ಗೆ ಪತ್ತೆಯಾಗಿತ್ತು. ನಂತರ ಮಹಿಳೆ ಪ್ರಕರಣ ದಾಖಲಸಿದ್ದರು.

    ಕಳೆದ ಫೆಬ್ರವರಿ ತಿಂಗಳಲ್ಲಿ ಮೇರಿಲ್ಯಾಂಡ್​ನ ಕ್ರಿಸ್ಟೋಫರ್ಸ್​ ಫೈನ್​ ಫುಡ್ಸ್​ ಗ್ರಾಸರಿ ಅಂಗಡಿಯಲ್ಲಿ ಮಹಿಳೆ ಶಾಪಿಂಗ್​ಗೆ ಬಂದಿದ್ದರು. ಶಾಪಿಂಗ್​ ಮುಗಿಸಿ, ಖರೀದಿಸಿದ ವಸ್ತುಗಳನ್ನು ಕಾರಿನಲ್ಲಿ ಹಾಕಿಕೊಂಡು ಶಾಪಿಂಗ್​ ಕಾರ್ಟ್​ ಅನ್ನು ವಾಪಸ್​ ಕೊಡುತ್ತಿದ್ದರು. ಈ ವೇಳೆ ಆಪಾದಿತ ಥಾಮಸ್​ ಬೈರನ್​ ಸ್ಟೀಮನ್​ ಮಹಿಳೆಗೆ ಢಿಕ್ಕಿ ಹೊಡೆದ. ಮಹಿಳೆಯ ಪೃಷ್ಠ ಭಾಗಕ್ಕೆ ಉರಿಯ ಅನುಭವವಾಗಿತ್ತು. ಮಹಿಳೆ ಜಗಳವಾಡಿ ತನ್ನ ಪಾಡಿಗೆ ಹೊರಟರು. ಆಕೆಯ ಪ್ರಕಾರ ವ್ಯಕ್ತಿಯ ಕೈಲಿದ್ದ ಸಿಗರೇಟ್​ ಅಚಾನಕ್ಕಾಗಿ ತಾಗಿರಬಹುದು ಎಂದುಕೊಂಡಿದ್ದರು. ಆದರೆ ಕಾರು ಹತ್ತಿ ಹೊರಟ ನಂತರ ವಿಪರೀತ ನೋವಾಗಿದೆ. ಮನೆಗೆ ಹೋಗಿ ಮತ್ತೆ ನೋಡಿಕೊಂಡಾಗ ಸುಟ್ಟಲಕ್ಷಣ ಕಾಣಿಸಿಲ್ಲ. ನಂತರ ಆಸ್ಪತ್ರೆಗೆ ಹೋಗಿ ತೋರಿಸಿದಾಗ, ಯಾವುದೋ ಒಂದು ದ್ರವ ಪದಾರ್ಥ ಇಂಜೆಕ್ಟ್​ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಂತರ ಚಿಕಿತ್ಸೆ ನೀಡಿ ದ್ರವವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ನಂತರ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಅಪರಿಚಿತ ವ್ಯಕ್ತಿ ಶಾಪಿಂಗ್​ ಮಾಲ್​ನ ಪಾರ್ಕಿಂಗ್​ ಲಾಟ್​ನಲ್ಲಿ ಢಿಕ್ಕಿ ಹೊಡೆದ, ಅದಾದ ನಂತರ ನೋವು ಆರಂಭವಾಗಿದೆ ಎಂದು ದೂರು ನೀಡಿದರು. ಪಾರ್ಕಿಂಗ್​ ಲಾಟ್​ನ ಸಿಸಿಟಿವಿ ಪರಿಶೀಲಿಸಿದಾಗ, ವ್ಯಕ್ತಿಯ ಮುಖ ಮತ್ತು ಆತನ ಕಾರ್​ ನಂಬರ್​ ಪೊಲೀಸರಿಗೆ ಸಿಕ್ಕಿದೆ. ಆತನನ್ನು ಹುಡುಕಿ ಹೋದಾಗ, ಮನೆಯಲ್ಲಿ ಮತ್ತು ಆತನ ಕಾರ್​ನಲ್ಲಿ ಹಲವು ಇಂಜೆಕ್ಷನ್​ ಸಿರಿಂಜ್​ಗಳು ಪತ್ತೆಯಾದವು. ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಯಿತು, ಎಂದು ಬ್ಯುಸಿನೆಸ್​ ಇನ್​ಸೈಡರ್​ ವರದಿ ಮಾಡಿದೆ.

    ಆತನ ಬಳಿಯಿದ್ದ ಸಿರಿಂಜ್​ನಲ್ಲಿ ಏನಿದೆ ಎಂದು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ, ಅದರಲ್ಲಿ ವೀರ್ಯ ಇರುವುದು ಪತ್ತೆಯಾಗಿದೆ. ಆ ವೀರ್ಯ ಸ್ಟೀಮನ್​ನದ್ದೇ ಎಂದು ಡಿಎನ್​ಎ ಪರೀಕ್ಷೆಯಲ್ಲಿ ಧೃಢವಾಗಿದ್ದು, ಪೊಲೀಸರು ಸ್ಟೀಮನ್​ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದರು.

    ಸ್ಟೀಮನ್​ ಇದೇ ರೀತಿ ಹಲವು ಮಹಿಳೆಯರಿಗೆ ವೀರ್ಯ ತುಂಬಿರುವ ಇಂಜೆಕ್ಷನ್​ ಚುಚ್ಚಿದ್ದ ಎಂದೂ ತನಿಖೆ ವೇಳೆ ತಿಳಿದುಬಂದಿದೆ. ಸ್ಟೀಮನ್​ ಈ ರೀತಿ ಮಾಡುವುದರಿಂದ ವಿಕೃತ ಖುಷಿ ಅನುಭವಿಸುತ್ತಿದ್ದ ಎನ್ನಲಾಗಿದೆ. ಈಗ ಸ್ಟೀಮನ್​ಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, ಮನಃಪರಿವರ್ತನೆ ಆಗಿರುವ ಲಕ್ಷಣ ಕಾಣಿಸಿದರೆ ಐದು ವರ್ಷ ಶಿಕ್ಷೆ ಕಡಿಮೆಯಾಗುವ ಸಾಧ್ಯತೆಯಿದೆ. ಜತೆಗೆ ಆತನ ಮಾನಸಿಕ ಆರೋಗ್ಯದ ಬಗ್ಗೆಯೂ ವಿಚಾರಣೆಯಾಗಬೇಕು ಎಂದು ಕೋರ್ಟ್​​ ಅಭಿಪ್ರಾಯಪಟ್ಟಿದೆ. ಜೈಲು ಶಿಕ್ಷೆಯ ನಂತರವೂ ಆತ ಸರಿ ಹೋಗದಿದ್ದರೆ, ಸೂಕ್ತ ಮಾನಸಿಕ ಚಿಕಿತ್ಸೆಯನ್ನು ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

    ಪಿಎಫ್​ ಹಣಕ್ಕಾಗಿ ತಾಯಿ ಹೆಣವನ್ನೇ ಮುಚ್ಚಿಟ್ಟ:

    ಇನ್ನೊಂದು ಪ್ರಕರಣದಲ್ಲಿ ಯುವಕನೊಬ್ಬ ತನ್ನ ತಾಯಿಯನ್ನು ಕೊಲೆ ಮಾಡಿ, ತಿಂಗಳು ತಿಂಗಳು ಬರುವ ಮಾಶಾಸನದ ಹಣಕ್ಕಾಗಿ, ಹೆಣವನ್ನು ಫ್ರಿಜ್​ನಲ್ಲಿ ಮುಚ್ಚಿಟ್ಟ ಘಟನೆ ನಡೆದಿತ್ತು. ಆಸ್ಟ್ರೇಲಿಯಾದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
    Published by:Sharath Sharma Kalagaru
    First published: