Fact check: ಜಿಂಕೆ ಎಂದುಕೊಂಡು ವ್ಯಕ್ತಿಗೆ ತಗುಲಿದ ಗುರಿ? ಇಲ್ಲಿದೆ ಸತ್ಯಾಸತ್ಯತೆ!

ಈ ಲೇಖನದ ಪ್ರಕಾರ ಅಮೆರಿಕಾದ ದಕ್ಷಿಣ ಕರೋಲಿನಾದ 31 ವರ್ಷದ ವಿಲಿಯಂ ಟೆನೆನ್​ಬಮ್ ಅವರನ್ನು ಜಿಂಕೆ ವ್ಯಕ್ತಿಯೆಂದು ಗುರುತಿಸಲಾಗಿದೆ. ಡಾ. ಅಲೆಕ್ಸಾಂಡರ್ ಪಿಶ್ಟಾಕಿ ಈ ವ್ಯಕ್ತಿಗೆ ಬುಲೆಟ್​ ಅನ್ನು ತೆಗೆದಿದ್ದಾರೆ ಎಂದು ತಿಳಿಸಿದೆ.

ಜಿಂಕೆ ರೀತಿ ವೇಷ ಹಾಕಿಕೊಂಡಿದ್ದ ವ್ಯಕ್ತಿ

ಜಿಂಕೆ ರೀತಿ ವೇಷ ಹಾಕಿಕೊಂಡಿದ್ದ ವ್ಯಕ್ತಿ

 • Share this:

  ತೀರಾ ಇತ್ತೀಚೆಗೆ ಮಾನವ ಆಕಾರದ ಜಿಂಕೆಯ ಎರಡು ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿತ್ತು. "ಟ್ರಾನ್ಸ್-ಜಾತಿಯ ಮನುಷ್ಯ" ಎಂದು ಹೇಳುವಂತಹ ವ್ಯಕ್ತಿಯೊಬ್ಬನ ಮೇಲೆ ಬೇಟೆಗಾರರು ಗುಂಡು ಹಾರಿಸಿದ್ದರು ಎನ್ನುವ ವಿಷಯವನ್ನು ಒಳಗೊಂಡ ಪೋಸ್ಟ್​ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.


  ಸುದ್ದಿ ರೂಪದಲ್ಲಿದ್ದ ಈ ವರದಿ ಅಮೆರಿಕಾದ ವ್ಯಕ್ತಿಯನ್ನು ಚಾಪರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ವರದಿ ಮಾಡಿತ್ತು.


  ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ಈ ರಹಸ್ಯವನ್ನು ಬೇಧಿಸಿತು. ಆ ಮೂಲಕ ಇದೊಂದು ಸ್ಕ್ರೀನ್ ಶಾಟ್ ವಿಡಂಬನೆಯ ಲೇಖನವಾಗಿದೆ ಎನ್ನುವ ನಿಜಾಂಶವನ್ನು ಬಹಿರಂಗ ಮಾಡಿದೆ.
  ಕೀ ವರ್ಡ್ಸ್​ ನೆರವಿನಿಂದ ಅಕ್ಟೋಬರ್ 30, 2020 ರಲ್ಲಿ ಮೊದಲು "ವರ್ಲ್ಡ್ ನ್ಯೂಸ್ ಡೈಲಿ ರಿಪೋರ್ಟ್" ಎಂಬ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದ್ದ ಲೇಖವನ್ನು ಪತ್ತೆ ಹಚ್ಚಲಾಗಿತ್ತು. 'ಇಲ್ಲಿ ಸತ್ಯಗಳು ಅಪ್ರಸ್ತುತ' ಎನ್ನುವ ಟ್ಯಾಗ್​ಲೈನ್ ಒಳಗೊಂಡ ವೆಬ್​ಸೈಟ್ ಇದಾಗಿತ್ತು.


  ಈ ಲೇಖನದ ಪ್ರಕಾರ ಅಮೆರಿಕಾದ ದಕ್ಷಿಣ ಕರೋಲಿನಾದ 31 ವರ್ಷದ ವಿಲಿಯಂ ಟೆನೆನ್​ಬಮ್ ಅವರನ್ನು ಜಿಂಕೆ ವ್ಯಕ್ತಿಯೆಂದು ಗುರುತಿಸಲಾಗಿದೆ. ಡಾ. ಅಲೆಕ್ಸಾಂಡರ್ ಪಿಶ್ಟಾಕಿ ಈ ವ್ಯಕ್ತಿಗೆ ಬುಲೆಟ್​ ಅನ್ನು ತೆಗೆದಿದ್ದಾರೆ ಎಂದು ತಿಳಿಸಿದೆ. ಅಲ್ಲದೇ ವೆಬ್​ಸೈಟ್​ನ ಹಕ್ಕು ನಿರಾಕರಣೆ ವಿಭಾಗವು ಸ್ಪಷ್ಟವಾಗಿ ಒಂದು ಅಂಶವನ್ನು ಉಲ್ಲೇಖಿಸಿದೆ. ಇಲ್ಲಿ ಪ್ರಕಟವಾಗುವ ಲೇಖನಗಳು ಕಾಲ್ಪನಿಕವಾಗಿದೆ. ಈ ಜಿಂಕೆ ವ್ಯಕ್ತಿಯ ಲೇಖನವೂ ಸೇರಿದಂತೆ ಎಲ್ಲಾ ಆರ್ಟಿಕಲ್​ಗಳ ಅಡಿಯಲ್ಲೂ ಇದೇ ರೀತಿ ಬರೆದುಕೊಂಡಿದೆ.


  ಯಾರು ಈ ನಿಗೂಢ ಮನುಷ್ಯ?


  ಇದಿಷ್ಟೇ ಅಲ್ಲದೇ ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ಬಳಸಿಕೊಂಡು ಮತ್ತಷ್ಟು ಮಾಹಿತಿ ಕಲೆ ಹಾಕಿದೆ. ಲೇಖನದಲ್ಲಿರುವ ಜಿಂಕೆ ಮನುಷ್ಯನ ಚಿತ್ರವನ್ನು ಬಳಸಿಕೊಂಡ ಯೂಟೂಬ್ ವಿಡಿಯೋವನ್ನು ಹುಡುಕಿದೆ.
  ಈ ವಿಡಿಯೋವನ್ನು 2018 ರಲ್ಲಿ ಅಪ್​ಲೋಡ್ ಮಾಡಲಾಗಿದೆ. ಬಾಡಿ ಆರ್ಟ್​​​ನಲ್ಲಿ ನೈಪುಣ್ಯತೆಯನ್ನು ಪಡೆದಿರುವ ಹ್ಯೂಮನಿಮಲ್ಸ್ ಎನ್ನುವ ಲಂಡನ್ ಮೂಲದ ಸ್ಟುಡಿಯೋ ಇದನ್ನು ಅಪಲೋಡ್ ಮಾಡಿದೆ.


  ಹ್ಯೂಮನಿಮಲ್ಸ್​ ವೆಬ್ ಸೈಟ್ ಪ್ರಕಾರ ಕಾರ್ಯಕ್ರಮಗಳಿಗೆ ನೈಜಪ್ರಾಣಿಗಳಂತೆ ಕಾಣುವಂತೆ ಪರಿಣತಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ವೆಬ್​ಸೈಟ್​ನಲ್ಲಿ ಶ್ವೇತಾಶ್ವ, ನರಿ ಸೇರಿದಂತೆ ಹಲವು ಪ್ರಾಣಿಗಳಂತೆ ಕಾಣುವ ಮನುಷ್ಯರ ಬಾಡಿ ಆರ್ಟ್​ಗಳನ್ನು ಕಾಣಬಹುದಾಗಿದೆ.


  ಅಷ್ಟೇ ಅಲ್ಲದೇ ವರ್ಲ್ಡ್ ನ್ಯೂಸ್ ಡೈಲಿ ರಿಪೋರ್ಟ್ ಲೇಖನದ ಪ್ರಕಾರ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಡಾ. ಪಿಶ್ಟಾಕಿ ಅವರ ಚಿತ್ರವನ್ನು ಪತ್ತೆ ಹಚ್ಚಲಾಗಿದ್ದು. ಇದು ಎಬಿಸಿ 7 ಸುದ್ದಿ ವಾಹಿನಿಯ ಸಂದರ್ಶನದಿಂದ ತೆಗೆದ ಸ್ಕ್ರೀನ್‌ಗ್ರಾಬ್. ಕ್ಯಾಲಿಫೋರ್ನಿಯಾದ ಮೆಂಡ್ ಅರ್ಜೆಂಟ್ ಕೇರ್​ ನ ಇ ಆರ್ ತಜ್ಞ ಡಾ. ಆಂಥೋನಿ ಕಾರ್ಡಿಲ್ಲೊ ಅವರು ಕೋವಿಡ್ 19 ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್​ ಬಗ್ಗೆ ವಿವರಿಸುತ್ತಿರುವ ದೃಶ್ಯವಾಗಿದೆ.


  ಇದನ್ನೂ ಓದಿ: ರಾಹುಲ್ ದ್ರಾವಿಡ್‍ಗೆ ಕ್ರಿಕೆಟ್ ಬಗ್ಗೆ ಎಲ್ಲವೂ ತಿಳಿದಿದೆ: ಪೃಥ್ವಿ ಶಾ

  ಒಟ್ಟಿನಲ್ಲಿ ಈ ಸುದ್ದಿಯೂ ಒಂದು ವಿಡಂಬನೆಯ ಲೇಖನವಾಗಿದೆ. ಕಾಲ್ಪನಿಕ ಕಥೆಗಳ ಪ್ರಕಟಕ್ಕೆ ಖ್ಯಾತಿ ಗಳಿಸಿರುವ ವೆಬ್​ಸೈಟ್​​ನ ಕೊಡುಗೆಯಾಗಿದೆ. ಈ ಮೊದಲು ರಾಯಿಟರ್ಸ್ ಸಹ ಈ ರೀತಿಯ ಹಕ್ಕನ್ನು ನಿರಾಕರಣೆ ಮಾಡಿತ್ತು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: