Human Sacrifice: ಗಂಡು ಮಗು ಹುಟ್ಟಿದ್ದಕ್ಕೆ ಹರಕೆಯಂತೆ ನರಬಲಿ; ಅಮಾಯಕ ಕುರಿಗಾಯಿಯ ಕಗ್ಗೊಲೆ

ರಾಮ್‍ಲಾಲ್‍ಗೆ ಗಂಡು ಮಗುವಿನ ಮೇಲೆ ವ್ಯಾಮೋಹ ಇತ್ತಂತೆ. ತನಗೆ ಗಂಡು ಮಗು ಜನಿಸಿದ್ರೆ ನರಬಲಿ ಕೊಡುತ್ತೇನೆ ಎಂದು ತನ್ನೂರಿನ ಗ್ರಾಮ ದೇವತೆ ಬಳಿ ಹರಕೆ ಕಟ್ಟಿದ್ನಂತೆ. ಅಂತೆಯೇ ಆತನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹರಕೆ ತೀರಿಸಲು ಕುರಿ ಕಾಯುತ್ತಿದ್ದ 19 ವರ್ಷದ ದಿವ್ಯಾಂಶ್ ಕೋಲ್ ಎಂಬಾತನನ್ನು ಕೊಡಲಿಯಿಂದ ಕತ್ತರಿಸಿ ದೇವಿಗೆ ನರಬಲಿ ಕೊಟ್ಟಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಪಂಚ ಎಷ್ಟೇ ಮುಂದುವರೆದ್ರೂ, ಜನ ಮಾತ್ರ ಗಂಡು ಮಗುವಿನ ಮೇಲಿನ ವ್ಯಾಮೋಹ ಬಿಟ್ಟಿಲ್ಲ. ನಮಗೆ ಗಂಡು ಮಗು (Boy baby) ಬೇಕು. ನಮ್ಮ ವಂಶ ಉದ್ಧಾರ ಮಾಡೋರು ಯಾರು? ನಮ್ಮ ಆಸ್ತಿ ನೋಡಿಕೊಳ್ಳೋಕೆ ಒಂದು ಗಂಡು ಮಗು ಬೇಕು. ನಮ್ಮನ್ನು ಕೊನೆಗಾಲದಲ್ಲಿ ನೋಡಿಕೊಳ್ಳುವವನು ಅವನೇ ಎಂದು ಗಂಡು ಮಗುಗಾಗಿ ಪರಿತಪಿಸುತ್ತಾರೆ. ಅದೆಷ್ಟೋ ಜನ ದೇವರ ಬಳಿ ಹರಕೆಗಳನ್ನು ಕಟ್ಟಿಕೊಳ್ಳುತ್ತಾರೆ. ಹರಕೆ ಕಟ್ಟಿದ್ರೆ ಅದು ಬೇರೆಯವರಿಗೆ ತೊಂದರೆ ಆಗಬಾರದು. ಆದ್ರೆ ಮಧ್ಯಪ್ರದೇಶದ (Madya Pradesh) ರೇವಾ ಜಿಲ್ಲೆಯ ಬೇಧೋವಾ ಗ್ರಾಮದ ನಿವಾಸಿ ಗಂಡು ಮಗು ಬೇಕು ಎಂದು ದೇವಿ (goddess) ಬಳಿ ಹರಕೆ ಕಟ್ಟಿದ್ದ. ಗಂಡು ಮಗು ಜನಿಸಿದ್ದಕ್ಕೆ (Birth) ಅಮಾಯಕ ಕುರಿಗಾಯಿಯನ್ನು ನರಬಲಿ (Human Sacrifice) ಕೊಟ್ಟಿದ್ದಾನೆ.

ಗಂಡು ಮಗು ಹುಟ್ಟಿದ್ದಕ್ಕೆ ಕುರಿಗಾಯಿ ನರಬಲಿ!
ಮಧ್ಯಪ್ರದೇಶದ ರೇವಾ ಜಿಲ್ಲೆಯ ಬೇಧೋವಾ ಗ್ರಾಮದ ನಿವಾಸಿ 32 ವರ್ಷದ ರಾಮ್‍ಲಾಲ್‍ಗೆ ಮೊದಲೇ 3 ಹೆಣ್ಣು ಮಕ್ಕಳಿದ್ದವು. ಆತನಿಗೆ ಗಂಡಿನ ಮೇಲೆ ವ್ಯಾಮೋಹ. ತನಗೆ ಗಂಡು ಮಗು ಜನಿಸಿದ್ರೆ ನರಬಲಿ ಕೊಡುತ್ತೇನೆ ಎಂದು ತನ್ನೂರಿನ ಗ್ರಾಮ ದೇವತೆ ಬಳಿ ಹರಕೆ ಕಟ್ಟಿದ್ನಂತೆ. ಅಂತೆಯೇ ಆತನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹರಕೆ ತೀರಿಸಲು ಕುರಿ ಕಾಯುತ್ತಿದ್ದ 19 ವರ್ಷದ ದಿವ್ಯಾಂಶ್ ಕೋಲ್ ಎಂಬಾತನನ್ನು ಕೊಡಲಿಯಿಂದ ಕತ್ತರಿಸಿ ದೇವಿಗೆ ನರಬಲಿ ಕೊಟ್ಟಿದ್ದಾನೆ.

ತನ್ನ ಹರಕೆಗಾಗಿ ಅಮಾಯಕನ ಕೊಂದ ಪಾಪಿ!
ರಾಮ್‍ಲಾಲ್ ಗಂಡು ಮಗು ಹುಟ್ಟಿದಾಗಿನಿಂದಲೂ ದೇವಿಗೆ ಹರಕೆ ತೀರಿಸಬೇಕು ಎಂದು ಅಂದುಕೊಂಡಿರುತ್ತಾನೆ. ಯಾರನ್ನಾದರೂ ಬಲಿ ಕೊಟ್ಟು ದೇವಿಯನ್ನು ಸಮಾಧಾನ ಪಡಿಸಬೇಕು. ಇಲ್ಲ ಅಂದ್ರೆ ತನಗೆ ಕೆಟ್ಟದ್ದಾಗುತ್ತೆ ಅಂತ ನರಬಲಿಗಾಗಿ ಹುಡುಕುತ್ತಿರುತ್ತಾನೆ. ಅಂತೆಯೇ ಜುಲೈ 6ರಂದು ದಿವ್ಯಾಂಶ್ ಕೋಲ್ ತನ್ನ ಪಾಡಿಗೆ ತಾನು ಕುರಿ ಮೇಯಿಸಿಕೊಂಡು ಇರುತ್ತಾನೆ. ಆತನನ್ನು ನೋಡಿದ ರಾಮ್‍ಲಾಲ್ ಸ್ವಲ್ಪ ಸಹಾಯ ಮಾಡುತ್ತಿಯಾ ಎಂದು ಕೇಳಿ ದೇವಸ್ಥಾನದ ಒಳಗೆ ಕರೆದುಕೊಂಡು ಹೋಗುತ್ತಾನೆ. ಆತ ದೇಗುಲದ ಒಳಗೆ ಬರುತ್ತಿದ್ದಂತೆ ಕೊಚ್ಚಿ ದೇವಿಗೆ ನರಬಲಿ ನೀಡುತ್ತಾನೆ.

ಇದನ್ನೂ ಓದಿ: Friend Murder: ಇನ್‍ಸ್ಟಾಗ್ರಾಂನಲ್ಲಿ ಯುವತಿ ವಿಚಾರವಾಗಿ ಸ್ನೇಹಿತರ ನಡುವೆ ಕಿರಿಕ್, ಮುಂದಾಗಿದ್ದು ದುರಂತ!

ಆರೋಪಿ ರಾಮ್‍ಲಾಲ್ ಸಿಕ್ಕಿಬಿದ್ದಿದ್ದು ಹೇಗೆ?
ಪಾಪಿ ರಾಮ್‍ಲಾಲ್ ದಿವ್ಯಾಂಶ್‍ನನ್ನು ನರಬಲಿ ಕೊಟ್ಟ ನಂತರ ಆತನನ್ನು ದೇವಸ್ಥಾನದಲ್ಲಿ ದೇವಿಯ ಕೆಳಗೆ ಹೂತು ಹಾಕಿರುತ್ತಾನೆ. ಇತ್ತ ದಿವ್ಯಾಂಶ್ ಪೋಷಕರು ದಿವ್ಯಾಂಶ್‍ನನ್ನು ಹುಡುತ್ತಿರುವಾಗ ದೇವಿಯ ಕೆಳಗೆ ಮೃತದೇಹ ಸಿಕ್ಕಿದೆ. ಆಗ ಪೊಲೀಸರು ಬಂದು ತನಿಖೆ ನಡೆಸಿದ್ದಾರೆ. ಕೊನೆ ಬಾರಿ ದಿವ್ಯಾಂಶ್, ರಾಮ್‍ಲಾಲ್ ಜೊತೆಗಿದ್ದದ್ದು ತಿಳಿಯುತ್ತೆ. ಆಗ ರಾಮ್‍ಲಾಲ್‍ನನ್ನು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗುತ್ತೆ.

ಶಾಸ್ತ್ರದ ಪ್ರಕಾರ ನರಬಲಿ ಕೊಡಬೇಕು ಅಂತಿತ್ತಂತೆ!
ತನಿಖೆ ನಡೆಸುತ್ತಿದ್ದ ಪೊಲೀಸರು ರಾಮ್‍ಲಾಲ್‍ನನ್ನು ವಿಚಾರಣೆ ನಡೆಸಿದಾನ, ಮೊದಲು ಕೊಂದಿದ್ದು ತಾನಲ್ಲ ಎಂದು ಹೇಳಿದ್ದಾನೆ. ತೀವ್ರ ತನಿಖೆ ನಂತರ ಸತ್ಯ ಬಾಯ್ಬಿಟ್ಟಿದ್ದಾನೆ. ನನಗೆ ಮೂರು ಹೆಣ್ಣು ಮಕ್ಕಳಿದ್ವು. ಗಂಡು ಮಗು ಬೇಕೆಂದು ದೇವಿಯ ಬಳಿ ಹರಕೆ ಕಟ್ಟಿದ್ದೆ. ಆದ್ರೆ ಶಾಸ್ತ್ರದ ಪ್ರಕಾರ ಗಂಡು ಮಗು ಹುಟ್ಟಬೇಕೆಂದ್ರೆ ದೇವಿಗೆ ಯುವಕನ್ನು ಬಲಿ ಕೊಡಬೇಕೆಂದು ಇತ್ತಂತೆ. ಅದಕ್ಕೆ ಬಲಿ ಕೊಟ್ಟೆ ಎಂದು ಪೊಲೀಸರ ಮುಂದೆ ಹೇಳಿದ್ದಾನೆ.

ಇದನ್ನೂ ಓದಿ: Hubballi Crime News: ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದನೆ; ಮಗನಿಗೆ ಚಾಕುವಿನಿಂದ ಇರಿದ ಅಪ್ಪ

ತನ್ನ ವಂಶ ಬೆಳೆಯಬೇಕು ಎಂದು ಬೇರೆಯವರ ವಂಶದ ಕುಡಿಯನ್ನು ಕೊಂದು ಹಾಕಿದರೆ ಹೇಗೆ. ಈಗ ದಿವ್ಯಾಂಶ್‍ನನ್ನು ಕಳೆದುಕೊಂಡ ಪೋಷಕರು ಮನೆಗೆ ಆಧಾರವಗಿದ್ದವ ಮಗ ಇಲ್ಲ. ನಮಗೆ ಯಾರು ದಿಕ್ಕು ಎಂದು ಕಂಗಾಲಾಗಿದ್ದಾರೆ. ದಿನವೂ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೇ ರಾಮ್‍ಲಾಲ್‍ಗೆ ಕಠಿಣ ಶಿಕ್ಷೆಯಗಬೇಕು ಎಂದು ಆಗ್ರಹಿದ್ದಾರೆ.
Published by:Savitha Savitha
First published: