HOME » NEWS » National-international » MAN GETS RS 2 LAKH PARKING FINE AFTER BUYING GRANDSON MCDONALDS MEAL FOR RS 200 STG LG

ಮ್ಯಾಕ್​ಡೊನಾಲ್ಡ್​​​​ನಲ್ಲಿ 200 ರೂ.ಊಟ ಕೊಳ್ಳಲು ಹೋಗಿ 2 ಲಕ್ಷ ದಂಡ ಕಟ್ಟಿದ ಅಜ್ಜ...!; ಏಕೆ ಗೊತ್ತಾ?

ತನ್ನ ಮೊಮ್ಮಗನಿಗಾಗಿ ಕಾಯುತ್ತಲೇ ಅಲ್ಲಿ 2 ಗಂಟೆಗಳಿಗಿಂತಲೂ ಹೆಚ್ಚು ಕಾಲ ನಿದ್ದೆ ಹೋಗಿದ್ದಾನೆ. ಆದರೆ ಅಲ್ಲಿದ್ದಿದ್ದು ಕೇವಲ 2 ಗಂಟೆ ಮಾತ್ರ ಉಚಿತ ಪಾರ್ಕಿಂಗ್, ಆ ಸಮಯವನ್ನು ಮೀರಿದರೆ ಅಲ್ಲಿ ದಂಡ ಕಟ್ಟಬೇಕಾಗುತ್ತದೆ. ಇದು ಬಾಬೇಜ್​​ಗೆ ತಿಳಿದಿರಲಿಲ್ಲ. ಹೀಗೆ 17 ನಿಮಿಷ ಹೆಚ್ಚುವರಿಯಾಗಿ ಈ ತಾತ ಅಲ್ಲಿ ತನ್ನ ಕಾರ್ ಪಾರ್ಕ್ ಮಾಡಿದ್ದಾನೆ. ಇದಾದ ಮೇಲೆ ತನ್ನ ಮಗನನ್ನು ಕರೆದುಕೊಂಡು ಮನೆಗೆ ತೆರಳಿದಾಗ ಅವರಿಗೆ ಆಘಾತ ಕಾದಿತ್ತು.

news18-kannada
Updated:February 23, 2021, 1:02 PM IST
ಮ್ಯಾಕ್​ಡೊನಾಲ್ಡ್​​​​ನಲ್ಲಿ 200 ರೂ.ಊಟ ಕೊಳ್ಳಲು ಹೋಗಿ 2 ಲಕ್ಷ ದಂಡ ಕಟ್ಟಿದ ಅಜ್ಜ...!; ಏಕೆ ಗೊತ್ತಾ?
ಮೊಮ್ಮಗ-ತಾತ
  • Share this:
ಮ್ಯಾಕ್​ ಡೊನಾಲ್ಡ್​​ ಹೆಸರು ಕೇಳದವರು ಯಾರಿದ್ದಾರೆ ಹೇಳಿ? ಅದರಲ್ಲೂ ನಗರಗಳಲ್ಲಿ ವಾಸಿಸುವ ಜನರಿಗೆ ಮ್ಯಾಕ್​ ಡೊನಾಲ್ಡ್​​​ ಎಂದರೆ ಎಲ್ಲಿಲ್ಲದ ಪ್ರೀತಿ. ಮ್ಯಾಕ್​ ಡೊನಾಲ್ಡ್​​ ಎಷ್ಟೇ ದೂರವಿದ್ದರೂ ಅಲ್ಲಿಗೆ ಹೋಗಿ ಆಹಾರ ತಿನ್ನದೇ ಇದ್ದರೆ ಸಮಾಧಾನ ಇರುವುದಿಲ್ಲ. ಆದರೆ ಇಲ್ಲೊಬ್ಬರು ತನ್ನ ಮೊಮ್ಮಗನಿಗೆ ಮ್ಯಾಕ್​​ ಡೊನಾಲ್ಡ್ ಊಟ ಕೊಡಿಸೋಕೆ ಹೋಗಿ ಪಜೀತಿಗೆ ಸಿಲುಕಿದ ಘಟನೆ ಇಂಗ್ಲೆಂಡ್​​ನಲ್ಲಿ ನಡೆದಿದೆ.

ಇಂಗ್ಲೆಂಡ್​​ನ ಲುಟಾನ್​​ನಲ್ಲಿ ನೆಲೆಸಿರುವ 75 ವರ್ಷದ ಜಾನ್ ಬಾಬೇಜ್ ಎನ್ನುವ ವ್ಯಕ್ತಿ ತನ್ನ ಮೊಮ್ಮಗನಿಗೆ ಒಂದೊಳ್ಳೆ ಊಟ ಕೊಡಿಸಬೇಕು ಎಂದು ಪ್ಲಾನ್ ಮಾಡಿದ್ದಾನೆ. ಆ ಪ್ಲಾನ್ ಪ್ರಕಾರ, ಮ್ಯಾಕ್​​ ಡೊನಾಲ್ಡ್​​​ಗೆ ಊಟ ತರೋಕೆ ಅಂತ ತನ್ನ ಮೊಮ್ಮಗನನ್ನೂ ಕರೆದುಕೊಂಡು ಹೋಗಿದ್ದಾನೆ. ಕಾರ್​​ನಲ್ಲಿ ಬಂದ ಆತ ಅದನ್ನು ಪಾರ್ಕಿಂಗ್​​ನಲ್ಲಿ ಬಿಟ್ಟು ಬಂದು, 200 ರೂ. ಕೊಟ್ಟು ಒಂದು ಊಟ ಖರೀದಿ ಮಾಡಿದ್ದಾನೆ.

ಅದೇ ಸಮಯದಲ್ಲಿ ತನ್ನ ಮೊಮ್ಮಗ ಅಲ್ಲಿ ಸಿಕ್ಕ ಸ್ನೇಹಿತರ ಜೊತೆಗೆ ಆಟ ಆಡೋಕೆ ಹೋಗಿದ್ದಾನೆ. ಇನ್ನೇನು ಮೊಮ್ಮಗ ಬರುತ್ತಾನೆ ಅಂತ ಈ ವೃದ್ಧ ಕಾರ್ ಪಾರ್ಕಿಂಗ್ ಸ್ಥಳಕ್ಕೆ ಬಂದು ಅಲ್ಲಿಯೇ ನಿದ್ದೆ ಹೋಗಿದ್ದಾನೆ. ಇತ್ತ ಮೊಮ್ಮಗ ಬರುವುದು ತಡವಾಗಿದೆ. ಅಲ್ಲದೇ ಉಚಿತ ಪಾರ್ಕಿಂಗ್ ಇದ್ದಿದ್ದರಿಂದ ಏನೂ ಸಮಸ್ಯೆ ಇಲ್ಲವೆಂದು ಬಾಬೇಜ್ ತಿಳಿದಿದ್ದ.

ಹೀಗೆ ತನ್ನ ಮೊಮ್ಮಗನಿಗಾಗಿ ಕಾಯುತ್ತಲೇ ಅಲ್ಲಿ 2 ಗಂಟೆಗಳಿಗಿಂತಲೂ ಹೆಚ್ಚು ಕಾಲ ನಿದ್ದೆ ಹೋಗಿದ್ದಾನೆ. ಆದರೆ ಅಲ್ಲಿದ್ದಿದ್ದು ಕೇವಲ 2 ಗಂಟೆ ಮಾತ್ರ ಉಚಿತ ಪಾರ್ಕಿಂಗ್, ಆ ಸಮಯವನ್ನು ಮೀರಿದರೆ ಅಲ್ಲಿ ದಂಡ ಕಟ್ಟಬೇಕಾಗುತ್ತದೆ. ಇದು ಬಾಬೇಜ್​​ಗೆ ತಿಳಿದಿರಲಿಲ್ಲ. ಹೀಗೆ 17 ನಿಮಿಷ ಹೆಚ್ಚುವರಿಯಾಗಿ ಈ ತಾತ ಅಲ್ಲಿ ತನ್ನ ಕಾರ್ ಪಾರ್ಕ್ ಮಾಡಿದ್ದಾನೆ. ಇದಾದ ಮೇಲೆ ತನ್ನ ಮಗನನ್ನು ಕರೆದುಕೊಂಡು ಮನೆಗೆ ತೆರಳಿದಾಗ ಅವರಿಗೆ ಆಘಾತ ಕಾದಿತ್ತು.

ಚಿಕ್ಕಬಳ್ಳಾಪುರ ಜಿಲೆಟಿನ್​ ಸ್ಪೋಟ ಪ್ರಕರಣ; ಹೈಕೋರ್ಟ್​​ ನ್ಯಾಯಾಧೀಶರಿಂದ ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಕಾರ್ ಪಾರ್ಕಿಂಗ್ ಸಂಸ್ಥೆ ಹೈವೇ ಪಾರ್ಕಿಂಗ್ ಈ ಕುರಿತು ತಾತನ ಮನೆಗೆ ನೋಟಿಸ್ ಕಳುಹಿಸಿದೆ. ಆದರೆ ಅದು ಯಾವುದೋ ಒಂದು ಬೇರೆ ವಿಳಾಸಕ್ಕೆ ಹೋಗಿ ತಲುಪಿದೆ. ಹೀಗಾಗಿ ದಂಡ ಮತ್ತಷ್ಟು ಹೆಚ್ಚಾಗಿದೆ. ಕೊನೆಗೆ ಇಂಗ್ಲೆಂಡ್​​ನಲ್ಲಿನ ಸಾಲ ಸಂಗ್ರಹ ಮಾಡುವ ಸಂಸ್ಥೆ ಡಿಸಿಬಿಎಲ್ ಅಧಿಕಾರಿಗಳು ಮನೆಗೆ ಬಂದು 2 ಲಕ್ಷ ದಂಡ ಪಾವತಿಸಬೇಕು ಎಂದಾಗ ಬಾಬೇಜ್ ಮತ್ತು ಅವರ ಪತ್ನಿ ಆಘಾತಕ್ಕೊಳಗಾಗಿದ್ದಾರೆ.

ಈ ಕುರಿತು ದಂಡ ಸಂಗ್ರಹ ಮಾಡುವ ಅಧಿಕಾರಿಗಳು ಮೊದಲೇ ಕೋರ್ಟ್ ನಿಂದ ಅನುಮತಿ ಪಡೆದಿದ್ದರು ಎನ್ನಲಾಗಿದೆ. ಕೊನೆಗೆ ಬೇರೆ ವಿಧಿಯಲ್ಲಿದೇ ತಾತ ದಂಡ ಪಾವತಿಸಿದ್ದಾನೆ. 200 ರೂ. ಮೆಕ್ಡೊನಾಲ್ಡ್ ಊಟ ತರೋಕೆ ಹೋಗಿ ಪಾಪ 2 ಲಕ್ಷ ದಂಡ ಪಾವತಿಸಿ ಈ ತಾತ ಸುದ್ದಿಯಾಗಿದ್ದಾನೆ.
Youtube Video

ಹೀಗೆ ಮ್ಯಾಕ್​ ಡೊನಾಲ್ಡ್​​​ ಅನೇಕ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈ ಹಿಂದೆಯೂ ಒಂದು ಘಟನೆ ನಡೆದಿತ್ತು. ಅಗತ್ಯವಿರುವಷ್ಟು ಕೆಚಪ್ ನೀಡಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಮ್ಯಾಕ್​ ಡೊನಾಲ್ಡ್​ ವ್ಯವಸ್ಥಾಪಕನಿಗೆ ಥಳಿಸಿದ್ದಳು. ನಂತರ ಮಹಿಳೆಯನ್ನು ಬಂಧಿಸಲಾಗಿತ್ತು.
Published by: Latha CG
First published: February 23, 2021, 12:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories