HOME » NEWS » National-international » MAN GETS BACK GOLD CHAIN LOST 14 YEARS AGO IN MUMBAI RAILWAY STATION DO YOU KNOW HOW STG SCT

ಮುಂಬೈನ ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರ 14 ವರ್ಷಗಳ ನಂತರ‌ ಮರಳಿ ಸಿಕ್ಕಿತು!; ಹೇಗೆ ಅಂತೀರಾ?

ನಿವೃತ್ತ ಉದ್ಯಮಿ ಸುರೇಶ್ ಸವಲಿಯಾ 2007ರಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ 22 ಗ್ರಾಂ ಚಿನ್ನದ ಚೈನ್‌ ಜತೆಗೆ ತನ್ನ ಹ್ಯಾಂಡ್‌ಬ್ಯಾಗ್‌ ಅನ್ನು ಕಳೆದುಕೊಂಡಿದ್ದರು. ಕಳುವಾದ 14 ವರ್ಷಗಳ ನಂತರ ರೈಲ್ವೆ ಪೊಲೀಸರು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಚಿನ್ನವನ್ನು ಹಸ್ತಾಂತರಿಸಿದ್ದಾರೆ.

news18-kannada
Updated:March 11, 2021, 1:38 PM IST
ಮುಂಬೈನ ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರ 14 ವರ್ಷಗಳ ನಂತರ‌ ಮರಳಿ ಸಿಕ್ಕಿತು!; ಹೇಗೆ ಅಂತೀರಾ?
ಸಾಂದರ್ಭಿಕ ಚಿತ್ರ
  • Share this:
ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವಾಗ ಅನೇಕ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್, ಲ್ಯಾಪ್‌ಟಾಪ್, ಹಣ ಮತ್ತು ಇತರೆ ವಸ್ತುಗಳನ್ನು ಕಳೆದುಕೊಳ್ಳುತ್ತಾರೆ. ಕಳ್ಳರು ಹಾಗೂ ಪಿಕ್‌ಪಾಕೆಟ್‌ ಮಾಡುವವರ ಹಾವಳಿ ಅಷ್ಟಿರುತ್ತದೆ. ಈ ಪೈಕಿ ಎಷ್ಟೋ ಜನ ದುರು ನೀಡಿದರೂ, ಕಳೆದುಹೋದ ಅಥವಾ ಕಳವು ಮಾಡಿದ ಹೆಚ್ಚಿನ ವಸ್ತುಗಳು ವಾಪಾಸ್‌ ಸಿಗೋದೇ ಇಲ್ಲ. ಆದರೆ, ಮಹಾರಾಷ್ಟ್ರದ ಮುಂಬೈನ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಕದ್ದ ಲ್ಯಾಪ್‌ಟಾಪ್‌ಗಳು, ಫೋನ್‌ಗಳು ಮತ್ತು 14 ಲಕ್ಷ ರೂಪಾಯಿ ಮೊತ್ತದ ಹಣವನ್ನು ಕಳೆದುಕೊಂಡವರಿಗೆ ವಾಪಸ್‌ ನೀಡಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಸ್ತುಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗಿದೆ. 34 ಪ್ರಯಾಣಿಕರು ಕಳೆದುಕೊಂಡಿದ್ದ ತಮ್ಮ  ವಸ್ತುಗಳನ್ನು ವಾಪಾಸ್ ಪಡೆದುಕೊಂಡಿದ್ದಾರೆ.

ಈ ಪೈಕಿ ಕಳೆದುಕೊಂಡಿದ್ದ ವಸ್ತುಗಳನ್ನು ಪಡೆದುಕೊಂಡವರಲ್ಲಿ ನಿವೃತ್ತ ಉದ್ಯಮಿ ಸುರೇಶ್ ಸವಲಿಯಾ ಅವರು ಸಹ ಒಬ್ಬರಾಗಿದ್ದರು. 2007ರಲ್ಲಿ ಅವರು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ 22 ಗ್ರಾಂ ಚಿನ್ನದ ಚೈನ್‌ ಜತೆಗೆ ತನ್ನ ಹ್ಯಾಂಡ್‌ಬ್ಯಾಗ್‌ ಅನ್ನು ಕಳೆದುಕೊಂಡಿದ್ದರು. ಇಷ್ಟು ವರ್ಷವಾದ್ರೂ ಸಿಗದ ಹಿನ್ನೆಲೆ ಅವರು ಅದನ್ನು ಮರಳಿ ಪಡೆಯುವ ಭರವಸೆಯನ್ನೇ ಬಿಟ್ಟಿದ್ದರು. ಆದರೆ, ಅವರ ಆಶ್ಚರ್ಯಕ್ಕೆ ಕಳುವಾದ 14 ವರ್ಷಗಳ ನಂತರ ರೈಲ್ವೆ ಪೊಲೀಸರು ಅಂತಾರಾಷ್ಟ್ರೀಯ ಮಹಿಳಾ ದಿನದಂದು ಚಿನ್ನವನ್ನು ಹಸ್ತಾಂತರಿಸಿದ್ದಾರೆ.

ಇನ್ನು, ಈ ಚೈನ್‌ ಅನ್ನು ಮಾರಾಟ ಮಾಡಲಾಗಿತ್ತು ಎಂದು ತಿಳಿದುಬಂದಿದ್ದು, ಈ ಹಿನ್ನೆಲೆ ಕಳ್ಳ ಸಿಕ್ಕ ನಂತರ, ಆ ಚೈನ್‌ ತೆಗೆದುಕೊಂಡಿದ್ದ ಆಭರಣಕಾರರನ್ನು ಹುಡುಕಲಾಗಿದೆ. ಆದರೆ, ಆ ಚೈನ್‌ ಅನ್ನು ಕರಗಿಸಿ ಚಿನ್ನದ ಬಿಸ್ಕೆಟ್‌ ಅನ್ನಾಗಿ ಮಾಡಲಾಗಿತ್ತು ಎಂದು ತಿಳಿದುಬಂದಿದೆ. ಇದನ್ನು ಪತ್ತೆಹಚ್ಚಿದ ರೈಲ್ವೆ ಪೊಲೀಸರು (ಜಿಆರ್‌ಪಿ) ನಿವೃತ್ತ ಉದ್ಯಮಿ ಸುರೇಶ್ ಸವಲಿಯಾ ಅವರಿಗೆ ವಾಪಸ್‌ ಮಾಡಿದೆ.

ಇದನ್ನೂ ಓದಿ: Karnataka South Africa Strain: ಕರ್ನಾಟಕದಲ್ಲೂ ದಕ್ಷಿಣ ಆಫ್ರಿಕಾ ವೈರಸ್ ಅಬ್ಬರ; ಶಿವಮೊಗ್ಗದ ವ್ಯಕ್ತಿಗೆ ಮೊದಲ ಸೋಂಕು ಪತ್ತೆ

ಇನ್ನೊಂದೆಡೆ, ಕಂಪ್ಯೂಟರ್‌ನಲ್ಲಿ ವ್ಯವಹಾರ ನಡೆಸುತ್ತಿರುವ ಮತ್ತೊಬ್ಬ ಉದ್ಯಮಿ ಶ್ರೀಪಾಲ್ ಜೈನ್ ಅವರ ಫೋನ್ ಕಳವು ಮಾಡಿದ ಎರಡೇ ದಿನಗಳಲ್ಲಿ ಪತ್ತೆಹಚ್ಚಲಾಗಿದೆ. ರೈಲು ನಿಲ್ದಾಣದಲ್ಲಿ ಅವರ ಫೋನ್‌ ಅನ್ನು ಪಿಕ್‌ ಪಾಕೆಟ್‌ ಮಾಡಲಾಗಿದ್ದು, ಈ ಬಗ್ಗೆ ಅವರು ಸ್ಥಳೀಯ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ದೂರು ನೀಡಲು ಹೋದ ವೇಳೆ ಸಿಬ್ಬಂದಿ ಚೆನ್ನಾಗೇ ಮಾತನಾಡಿಸಿದರು, ಸಿಸಿಟಿವಿಯಲ್ಲಿ ದೃಶ್ಯ ತೋರಿಸಲು ಕರೆದೊಯ್ದರು. ಮತ್ತು, ಅವರ ಆಶ್ಚರ್ಯಕ್ಕೆ ದೂರು ನೀಡಿದ ಎರಡೇ ದಿನಗಳಲ್ಲಿ ಫೋನ್‌ ಪತ್ತೆಹಚ್ಚಲಾಯ್ತು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ರೀತಿ 34 ಪ್ರಯಾಣಿಕರು ತಾವು ಕಳೆದುಕೊಂಡಿದ್ದ ವಸ್ತುಗಳನ್ನು ಮರಳಿ ಪಡೆದುಕೊಂಡಿದ್ದಾರೆ. ವಾಪಸ್‌ ಪಡೆಯುವಾಗ ಭಾವನಾತ್ಮಕವಾಗಿದ್ದರು ಎಂದೂ ತಿಳಿದುಬಂದಿದೆ.
Youtube Video
ಕೋವಿಡ್ -19 ಪರಿಸ್ಥಿತಿಯ ಹೊರತಾಗಿಯೂ, ಕಳೆದ ವರ್ಷ 3,400 ಕ್ಕೂ ಹೆಚ್ಚು ಮಾಲೀಕರಿಗೆ ಸುಮಾರು 4.5 ಕೋಟಿ ರೂ ಮೌಲ್ಯದ ವಸ್ತುಗಳನ್ನು ಜಿಆರ್‌ಪಿ ಕಲೆದುಕೊಂಡವರಿಗೆ ವಾಪಸ್‌ ನೀಡಿದ್ದಾರೆ ಎಂದು ತಿಳಿದುಬಂದಿದೆ.
Published by: Sushma Chakre
First published: March 11, 2021, 1:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories