ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಅತ್ಯಾಚಾರ: ಆರೋಪಿಗೆ 20 ವರ್ಷ ಶಿಕ್ಷೆ ವಿಧಿಸಿದ ನಾಗ್ಪುರ ನ್ಯಾಯಾಲಯ

ಮಹಿಳೆಯರ ಮೇಲೆ ಅತಿಹೆಚ್ಚು ದೌರ್ಜನ್ಯ ಉತ್ತರಪ್ರದೇಶದಲ್ಲಿ ನಡೆದಿದೆ ಈವರೆಗೂ 59,853 ಘಟನೆಗಳು ನಡೆದಿವೆ. ರಾಜಸ್ಥಾನದಲ್ಲಿ ಈವರೆಗೆ 5,997 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಅಪ್ರಾಪ್ತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ ಆ ಬಾಲಕಿಯು ಗರ್ಭ ಧರಿಸಲು ಕಾರಣನಾದ ಯುವಕನೊಬ್ಬನಿಗೆ ನಾಗ್ಪುರ ನ್ಯಾಯಾಲಯ ಸೋಮವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಈ ಕ್ರೂರ ಆರೋಪಿಯನ್ನು ಕಟೋಲ್ ನಿವಾಸಿ ಆಕಾಶ್ ಯೆದಾನಿ Aakash Yedani (23) ಎಂದು ಹೇಳಲಾಗಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕೆ.ಜಿ.ರಥಿ ಅವರು ಐಪಿಸಿ ಸೆಕ್ಷನ್ 376 (2) (3), 506 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ,POCSO) ಕಾಯ್ದೆ ಸೆಕ್ಷನ್ 5 ರ ಅಡಿಯಲ್ಲಿ ಇವರಿಗೆ ಶಿಕ್ಷೆ ನೀಡಲಾಗುತ್ತಿದೆ ಎಂದು ಹೇಳಿದರು. ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ರಶ್ಮಿ ಖಪರ್ಡೆ (Rashmi Khaparde) ಸಂತ್ರಸ್ತೆಯ ಪರ ವಕಾಲತ್ತು ವಹಿಸಿದ್ದರು.

  ಅತ್ಯಾಚಾರ ಆರೋಪಿಯು ಮಾನಸಿಕ ಅಸ್ವಸ್ಥ 16 ವರ್ಷದ ಯುವತಿಯು ಮನೆಯಲ್ಲಿ ಒಬ್ಬಳೇ ಇದ್ದಾಗ ಸಮಯ ನೋಡಿಕೊಂಡು ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ. ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದಾನೆ, ಅನೇಕ ದಿನಗಳ ನಂತರ ಬಾಲಕಿಯ ಪೋಷಕರಿಗೆ ಈ ವಿಚಾರ ತಿಳಿದಿದೆ,  ನಂತರ ನವೆಂಬರ್ 11, 2018 ರಂದು ಕೊಂಡಾಳಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಯಿತು ಎಂದು ಪೊಲೀಸ್​ ಅಧಿಕಾರಿ ಖಪರ್ಡೆ ಪಿಟಿಐಗೆ ತಿಳಿಸಿದರು.


  ಈ ಅಪರಾಧಿಗೆ ನ್ಯಾಯಾಲಯವು 20,000 ರೂಪಾಯಿ ದಂಡವನ್ನು ವಿಧಿಸಿದೆ ಎಂದು ಅವರು ಹೇಳಿದರು.

  ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ  ಮಾಹಿತಿಯ ಪ್ರಕಾರ, 2019ರಲ್ಲಿ ಭಾರತದಲ್ಲಿ ನಿತ್ಯ 95 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ವರ್ಷದಲ್ಲಿ ಒಟ್ಟು 32,033 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.


  2018-19ರಿಂದ ಮಹಿಳೆಯರ ಮೇಲಿನ ಶೋಷಣೆಗಳು 7.3% ಹೆಚ್ಚಳ. ಮಹಿಳೆಯರ ಮೇಲೆ ಅತಿ ಹೆಚ್ಚು ದೌರ್ಜನ್ಯ ಪ್ರಮಾಣವನ್ನು ಅಸ್ಸಾಂ  ರಾಜ್ಯದಲ್ಲಿ ದಾಖಲಾಗಿದೆ.  ಮಹಿಳೆಯರ ಮೇಲೆ ಅತಿಹೆಚ್ಚು ದೌರ್ಜನ್ಯ ಉತ್ತರಪ್ರದೇಶದಲ್ಲಿ ನಡೆದಿದೆ ಈವರೆಗೂ 59,853 ಘಟನೆಗಳು ನಡೆದಿವೆ. ರಾಜಸ್ಥಾನದಲ್ಲಿ ಈವರೆಗೆ 5,997 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.


   ಭಾರತದಲ್ಲಿ ನಿತ್ಯ 10 ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಾರೆ (2019ರಲ್ಲಿ ಸುಮಾರು 3,500 ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ). ಇದರಲ್ಲಿ ಮೂರನೇ ಒಂದು ಭಾಗ ಪ್ರಕರಣಗಳು ರಾಜಸ್ಥಾನ ಮತ್ತು ಉತ್ತರಪ್ರದೇಶದಿಂದ ವರದಿಯಾಗಿವೆ. ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ 554 ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿವೆ. ಉತ್ತರಪ್ರದೇಶದಲ್ಲಿ 537 ಮತ್ತು ಮಧ್ಯಪ್ರದೇಶದಲ್ಲಿ 510 ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ ಅತಿಹೆಚ್ಚು ಅಂದರೆ 4.6ರಷ್ಟು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಯುಪಿಯಲ್ಲಿ 4.5 ಮತ್ತು ರಾಜಸ್ಥಾನ 4.5 ರಷ್ಟು ದಲಿತ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ.


  ಇದನ್ನೂ ಓದಿ: Explainer: ಡ್ರಗ್​​ ಜಾಲದಲ್ಲಿ 30 ಜನ ಸೆಲೆಬ್ರಿಟಿಗಳು? ಯಾರಿದು ಸೋನಿಯಾ ಅಗರ್​ವಾಲ್​; ಇಲ್ಲಿದೆ ಮಾಹಿತಿ

  ಕಳೆದ 10 ವರ್ಷಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಮಾಣವು ಶೇ. 44ರಷ್ಟು ಹೆಚ್ಚಾಗಿದೆ ಎಂದು ಎನ್‌ಸಿಆರ್‌ಬಿ ಅಂಕಿ - ಅಂಶಗಳು ತಿಳಿಸುತ್ತವೆ. ಎನ್‌ಸಿಆರ್‌ಬಿ ಅಂಕಿ - ಅಂಶಗಳ ಪ್ರಕಾರ, 2010-2019ರ ಅವಧಿಯಲ್ಲಿ ಭಾರತದಾದ್ಯಂತ ಒಟ್ಟು 3,13,289 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: