ಫೇಸ್​ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್‌: ಸೌದಿಯಲ್ಲಿ ಉಡುಪಿ ಯುವಕನ ಬಂಧನ

ಹರೀಶ್ ಹಾಕಿದ್ದ ಪೋಸ್ಟ್​ ಸ್ಕ್ರೀನ್ ಶಾಟ್ ಮೂಲಕ ವೈರಲ್ ಮಾಡಲಾಗಿತ್ತು. ಆ ಬಳಿಕ ತನ್ನ ಫೇಸ್​ಬುಕ್ ಖಾತೆಯನ್ನು ಹರೀಶ್ ಡಿ ಆ್ಯಕ್ಟೀವ್ ಮಾಡಿದ್ದ ಎಂದು ಹೇಳಲಾಗಿದೆ.

news18-kannada
Updated:December 23, 2019, 8:07 PM IST
ಫೇಸ್​ಬುಕ್ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್‌: ಸೌದಿಯಲ್ಲಿ ಉಡುಪಿ ಯುವಕನ ಬಂಧನ
ಹರೀಶ್ ಬಂಗೇರ
  • Share this:
ಧಾರ್ಮಿಕ ಅವಹೇಳನ ಹಾಗೂ ಸೌದಿ ಅರೇಬಿಯಾ ಸೌದಿ ದೊರೆ ಬಗ್ಗೆ ತುಚ್ಛವಾಗಿ ಫೇಸ್​ಬುಕ್​ ಪೋಸ್ಟ್ ಹಾಕಿರುವ​ ಆರೋಪದಲ್ಲಿ ಕುಂದಾಪುರದ ಯುವಕನನ್ನು ಸೌದಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಉಡುಪಿಯ ಕೋಟೇಶ್ವರ ಮೂಲದ ಹರೀಶ್ ಬಂಗೇರ ಎಂದು ತಿಳಿದುಬಂದಿದೆ.

ದಮಾಮ್​ನ ಅಲ್ ಹಾಸ್ ಗಲ್ಫ್ ಕಾರ್ಟೂನ್ ಫ್ಯಾಕ್ಟರಿ ಕಂಪೆನಿಯಲ್ಲಿ ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ತನ್ನ ಸಾಮಾಜಿಕ ಖಾತೆಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಮತ್ತು ಪೌರತ್ವ ಕಾಯ್ದೆಯ ಪರ ಬರೆದು ಪೋಸ್ಟ್ ಹಾಕಿದ್ದರು. ಈ ಬರಹದ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಈತ ಪೋಸ್ಟ್ ಡಿಲೀಟ್ ಮಾಡಿ ವಿಡಿಯೋ ಮೂಲಕ ಎಲ್ಲರ ಕ್ಷಮೆಯಾಚಿಸಿದ್ದನು.ಆದರೆ ಅದಾಗಲೇ ಹರೀಶ್ ಹಾಕಿದ್ದ ಪೋಸ್ಟ್​ ಸ್ಕ್ರೀನ್ ಶಾಟ್ ಮೂಲಕ ವೈರಲ್ ಮಾಡಲಾಗಿತ್ತು. ಆ ಬಳಿಕ ತನ್ನ ಫೇಸ್​ಬುಕ್ ಖಾತೆಯನ್ನು ಹರೀಶ್ ಡಿ ಆ್ಯಕ್ಟೀವ್ ಮಾಡಿದ್ದ ಎಂದು ಹೇಳಲಾಗಿದೆ. ಆದರೆ ಹರೀಶ್ ಕಾಸರಗೋಡಿನಲ್ಲಿರುವ ವ್ಯಕ್ತಿಯೊಬ್ಬ ಹರೀಶ್ ಫೇಸ್ ಬುಕ್ ಅಕೌಂಟಿನ ನಕಲಿ ಖಾತೆ ತೆರೆದು ಸೌದಿ ರಾಜನ ವಿರುದ್ದ ಅವಹೇಳನಕಾರಿ ಪೋಸ್ಟ್ ಜೊತೆಗೆ ಮೆಕ್ಕಾದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಬಗ್ಗೆ ಪೋಸ್ಟ್ ಮಾಡಿದ್ದಾರೆ ಎಂದು ಕುಟುಂಬ ಮೂಲಗಳು ಹೇಳುತ್ತಿವೆ.ಈ ಫೋಸ್ಟ್​ ಸೌದಿ ದೇಶದಲ್ಲೆಲ್ಲ ವೈರಲ್ ಆಗಿದ್ದಲ್ಲದೆ ಕೆಲಸ ಕೂಡ ಕಳೆದುಕೊಂಡಿದ್ದಾನೆ. ಅದರ ಜೊತೆಗೆ ಪೊಲೀಸರು ಆತನನ್ನ ತನಿಖೆಗಾಗಿಯೂ ನಿಗೂಢ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿದೆ. ಬಂಧನದ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರೀಶ್ ಅರೆಸ್ಟೆಡ್ ಟ್ಯಾಗ್​ನಲ್ಲಿ ವೈರಲ್ ಕೂಡ ಆಗಿತ್ತು.

ಇದೀಗ ತನ್ನ ಪತಿ ಬಂಧನಕ್ಕೊಳಗಾಗಿರುವ ಸುದ್ದಿ ತಿಳಿದು ಪತ್ನಿ ಸುಮಾ ಚಿಂತಿತರಾಗಿದ್ದಾರೆ. ಪತಿಯನ್ನ ಎಷ್ಟೇ ಸಂಪರ್ಕ ಮಾಡಿದ್ದರೂ ಸಂಪರ್ಕಕ್ಕೆ ಸಿಗುತ್ತಿಲ್ಲ. ಸೌದಿಯಲ್ಲಿರುವ ಆತನ ಸ್ನೇಹಿತರ ಮೂಲಕ ಉಡುಪಿ ಜಿಲ್ಲೆಯಲ್ಲಿರುವ ಸೆನ್ ಪೊಲೀಸ್ ಠಾಣೆಯಲ್ಲಿ ನೀಡಲಾಗಿರುವ ನಕಲಿ ಫೇಸ್​ಬುಕ್ ಅಕೌಂಟ್ ಬಗ್ಗೆ ದೂರಿನ ಪ್ರತಿಯನ್ನ ಸೌದಿಗೆ ಕಳುಹಿಸಿಕೊಡಲಾಗಿದೆ.ಅದರೊಂದಿಗೆ ಕುಟುಂಬಸ್ಥರು ಸಂಸದೆ ಶೋಭಾ ಕರಂದ್ಲಾಜೆ ಮೂಲಕ ಅಲ್ಲಿನ ಭಾರತೀಯ ಎಂಬಸಿಗೆ ಸಂಪರ್ಕಿಸಿ ಹರೀಶ್ ಬಿಡುಗಡೆಗೆ ಪ್ರಯತ್ನ ಮಾಡುತ್ತಿದ್ದಾರೆ
. ಒಟ್ಟಾರೆ ಏನೋ ಮಾಡಲು ಹೋಗಿ ಇನ್ನೇನೋ ಆಯಿತು ಅನ್ನುವ ಸ್ಥಿತಿ ಹರೀಶ್ ಅವರದ್ದು. ಇನ್ನಾದರೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮುನ್ನ ಸಾವಿರ ಬಾರಿ ಯೋಚಿಸೋದು ಒಳ್ಳೇದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಪರಿಕ್ಷೀತ್ ಶೆಟ್,  ನ್ಯೂಸ್ 18 ಕನ್ನಡ
First published:December 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ