Crime News : 3 ತಿಂಗಳು ಅಪ್ಪನ ಮೃತದೇಹದ ಜೊತೆ ವಾಸ ಮಾಡುತ್ತಿದ್ದ ಮಗ: ಸತ್ಯಾಂಶ ತಿಳಿದು ಬೆಚ್ಚಿಬಿದ್ದ ಪೊಲೀಸರು!

Crime News: ತಂದೆ ಮೃತಪಟ್ಟು ಮೂರು ತಿಂಗಳಾದರೂ ಅವರ ದೇಹವನ್ನು ಮಣ್ಣು ಮಾಡದೆ, ಆ ಶವದೊಂದಿಗೆ ಮೂರು ತಿಂಗಳು ಕಳೆದಿದ್ದಾನೆ. 40 ವರ್ಷದ ಮಗನನ್ನು ಪೊಲೀಸರು(Police) ವಿಚಾರಣೆಗೆ ಒಳಪಡಿಸಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಈ ಭೂಮಿ(Earth) ಮೇಲೆ ಕ್ಷಣಕ್ಕೊಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಂದು ಘಟನೆಗಳನ್ನು ನೋಡಿದರೆ ಎದೆ ಝಲ್​ ಅನ್ನಿಸದೇ ಇರದು. ಇಲ್ಲೂ ಕೂಡ ಒಂದು ವಿಚಿತ್ರ ಘಟನೆ ನಡೆದಿದೆ. ತಂದೆ(Father) ಮೃತದೇಹ(Dead body)ದ ಜೊತೆ ಮಗ(Son)ನೊಬ್ಬ 3 ತಿಂಗಳು ಕಳೆದಿದ್ದಾನೆ. ಹೌದು, ಕೇಳಿಸಲು ವಿಚಿತ್ರವಾದರೂ ಇದು ಸತ್ಯ. ತಂದೆ ಮೃತಪಟ್ಟು ಮೂರು ತಿಂಗಳಾದರೂ ಅವರ ದೇಹವನ್ನು ಮಣ್ಣು ಮಾಡದೆ, ಆ ಶವದೊಂದಿಗೆ ಮೂರು ತಿಂಗಳು ಕಳೆದಿದ್ದಾನೆ. 40 ವರ್ಷದ ಮಗನನ್ನು ಪೊಲೀಸರು(Police) ವಿಚಾರಣೆಗೆ ಒಳಪಡಿಸಿದ್ದಾರೆ.  ಪಶ್ವಿಮ ಬಂಗಾಳ(West Bengal)ದ ಕೋಲ್ಕತ್ತ(Kolkata)ದಲ್ಲಿ ಈ ಶಾಕಿಂಗ್​ ಘಟನೆ ನಡೆದಿದೆ.  ಯಾರಿಂದಲೂ ಊಹಿಸಿಕೊಳ್ಳಲು ಆಗದ ಘಟನೆ ಇದು. ಒಂದು ಮೃತದೇಹದ ಜೊತೆ ಮೂರು ತಿಂಗಳು ಬದುಕಲು ಸಾಧ್ಯಾನಾ? ಮನುಷ್ಯ ಮೃತಪಟ್ಟ ಒಂದು ದಿನದ ಬಳಿಕ ವಾಸನೆ(Smell) ಬರುತ್ತೆ. ಆದರೆ ಇಲ್ಲಿ ಮಗ ಮೂರು ತಿಂಗಳು ಹೇಗೆ ಬದುಕಿದ್ದಾನೆ? ಅಷ್ಟೇ ಅಲ್ಲ ಮೃತದೇಹವನ್ನು ಮಣ್ಣು ಮಾಡದೇ ಹಾಗೇಯೇ ಇಡಲು ಸಾಧ್ಯಾನಾ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ. ಪೊಲೀಸರಿಗೆ ಈ ವಿಷಯ ತಿಳಿಯುವಷ್ಟರಲ್ಲಿ ಆ ಮೃತದೇಹದಲ್ಲಿ ಮೂಳೆಗಳು(Skeletons) ಮಾತ್ರ ಇತ್ತಂತೆ. ಇದನ್ನು ಕಂಡ ಪೊಲೀಸರಿಗೆ ಸ್ವತಃ ಶಾಕ್​(Shock) ಆಗಿತ್ತು. ಸದ್ಯ ಮಗನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ಶವವನ್ನು ಪೋಸ್ಟ್​ಮಾರ್ಟ್​ಮ್​ಗೆ ಕಳಿಸಿದ ಪೊಲೀಸರು

ಇಂಥದ್ದೊಂದು ಘಟನೆ ನಡೆದಿದೆ ಎಂದು ತಿಳಿದ ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿದ್ದಾರೆ.  ಪುತ್ರ ಕೌಶಿಕ್​ ಮಾನಸಿಕವಾಗಿ ಸ್ಥಿಮಿತದಲ್ಲಿ ಇಲ್ಲದ ವ್ಯಕ್ತಿ ಎಂದು ಹೇಳಿರುವ ಪೊಲೀಸರು ಇದೀಗ ಶವವನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಿದ್ದಾರೆ. ತಂದೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಪೋಸ್ಟ್​ಮಾರ್ಟಮ್ ರಿಪೋರ್ಟ್ ಬಂದ ಬಳಿಕ ಸತ್ಯಾಂಶ ಏನೆಂಬುದು ತಿಳಿಯಬಹುದು. ​ಈಗಾಗಲೇ ಪೊಲೀಸರು ಎಲ್ಲ ಆಯಾಮದಲ್ಲೂ ತನಿಖೆ ಶುರುಮಾಡಿದ್ದಾರೆ. ಇನ್ನು ಪೊಲೀಸರು ಮನೆಗೆ ಭೇಟಿ ನೀಡಿದ್ದಾಗ ಮತ್ತೊಂದು ಆಘಾತ ಎದುರಾಗಿತ್ತು. ಅದನ್ನು ಕಂಡ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದರು.

ಇದನ್ನು ಓದಿ : ಅಯ್ಯಯ್ಯೋ.. ಸಿಂಹದ ಗುಹೆಗೇ ನುಗಿಬಿಟ್ಟ ಆಸಾಮಿ.. ಆಮೇಲೆನಾಯ್ತು..? ಬೆಚ್ಚಿ ಬೀಳಿಸುವ ವಿಡಿಯೋ ಇಲ್ಲಿದೆ!

ಮನೆಯಲ್ಲಿಯೇ ಇದ್ದ ತಾಯಿ!

ಸಂಗ್ರಾಮ್ ಡೇ ಅವರು ಮುಂಬೈನ ಬಾಬಾ ಅಟೋಮಿಕ್​ ರಿಸರ್ಚ್​ ಸೆಂಟರ್​​ನಲ್ಲಿ ಕೆಲಸ ಮಾಡಿದವರು. ಕೋಲ್ಕತ್ತದ ಕೆ.ಪಿ.ರಾಯ್​ ಲೇನ್​ನಲ್ಲಿ ಅವರ ಮನೆಯಿತ್ತು. ಇದೀಗ ಅವರ ಶವ ಬಹುತೇಕ ಅಸ್ಥಿಪಂಜರದಂತಾಗಿದ್ದು, ಪೊಲೀಸರು ವಶಪಡಿಸಿಕೊಂಡಿದ್ದಾರೆ.   ಮೂರು ತಿಂಗಳ ಹಿಂದೆ ತಂದೆ ಮೃತಪಟ್ಟಿದ್ದಾಗಿ ಕೌಶಿಕ್​ ತಿಳಿಸಿದ್ದರೂ, ನಿಖರ ಸಮಯ ತಿಳಿಯಲು ಪೋಸ್ಟ್​ಮಾರ್ಟಮ್​ ರಿಪೋರ್ಟ್ ಬರಬೇಕಿದೆ. ಇನ್ನೊಂದು ಶಾಕಿಂಗ್​ ಸುದ್ದಿಯೆಂದರೆ, ಪತ್ನಿ 65 ವರ್ಷದ ಅರುಣಾ ಡೇ  ಕೂಡ ಅದೇ ಮನೆಯಲ್ಲಿದ್ದಾರೆ. ಆದರೆ ಅವರಿಗೆ ಎದ್ದು ಓಡಾಡಲೂ ಆಗದಷ್ಟು ಅನಾರೋಗ್ಯ ಇದೆ. ಹೀಗಾಗಿ ಅವರಿಗೆ ಈ ವಿಚಾರ ಗೊತ್ತೆ ಇಲ್ವಂತೆ.

ಇದನ್ನು ಓದಿ: 3 ಹುಲಿಗಳಿಗೆ ಸೆಡ್ಡು ಹೊಡೆದ ಬೆಕ್ಕು.. ಬದುಕಿ ಬಂದಿದ್ದೇ ರಣ ರೋಚಕ!

ಪೊಲೀಸರಿಗೆ ಸುಳಿವು ಕೊಟ್ಟಿದ್ದ ನೆರೆಮನೆಯವರು

ಕೆಲವು ದಿನಗಳಿಂದ ಸಂಗ್ರಾಮನ್ ಡೇ ಕಾಣಿಸುತ್ತಿರಲಿಲ್ಲ. ಆಗಲೇ ಅಕ್ಕಪಕ್ಕದ ಮನೆವರಿಗೆ ಸಂದೇಹ ಬಂದಿದೆ. ನಮಗ್ಯಾಕೆ ಬೇಕು ಎಂದು ಸುಮ್ಮನಾಗಿದ್ದಾರೆ. ದಿನಕ್ಕೆ ಒಮ್ಮೆಯಾದರೂ ಸಂಗ್ರಾಮ್​ ಡೇ ಮನೆಯಿಂದ ಹೊರಬರುತ್ತಿದ್ದರು. ಏಕಾಏಕಿ ಮೂರು ತಿಂಗಳಿನಿಂದ ಕಾಣಿಸದ್ದನ್ನು ಕಂಡು ನೆರೆ ಮನೆಯವರಿಗೆ ಸಂದೇಹ ಹೆಚ್ಚಾಗಿತ್ತು. ದಿನಗಳೆದಂತೆ ಸಂಗ್ರಾಮ್​ ಡೇ ಮನೆಯಿಂದ ಕೆಟ್ಟ ವಾಸನೆ ಬರುತ್ತಿತ್ತಂತೆ. ಇದನ್ನು ಗಮನಿಸಿದ ಅಕ್ಕಪಕ್ಕದವರು ಕೂಡಲೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.  ಅಕ್ಕಪಕ್ಕದ ಮನೆಯವರು ಸುಳಿವು ನೀಡಿದ ಬೆನ್ನಲ್ಲೇ ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿದ್ದೇವೆ. ಆಗ  ಅವರು ಸತ್ತಿದ್ದು ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ ಎಂದು ಅಲ್ಲಿನ ಪೊಲೀಸ್​ ಅಧಿಕಾರಿಗಳು ಎದು ತಿಳಿಸಿದ್ದಾರೆ.
Published by:Vasudeva M
First published: