Shocking News: "ನೀನು ನೋಡೋಕೆ ಚೆನ್ನಾಗಿಲ್ಲ" ಅಂತ ಗರ್ಭಿಣಿಗೆ ಟಾಯ್ಲೆಟ್‌ ಕ್ಲೀನರ್‌ ಕುಡಿಸಿದ ಪಾಪಿ ಪತಿ! ನರಳಾಡುತ್ತ ಪ್ರಾಣ ಬಿಟ್ಟ ಹೆಂಡತಿ

ಗರ್ಭಿಣಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆಕೆಯನ್ನು ಕೊಂದಿದ್ದು ಬೇರೆ ಯಾರೂ ಅಲ್ಲ, ಆಕೆಯದ್ದೇ ಪತಿ. ಆಕೆಯ ಪತಿ ಟಾಯ್ಲೆಟ್ ಕ್ಲೀನಿಂಗ್ ಆಸಿಡ್ ಕುಡಿಯಲು ಒತ್ತಾಯಿಸಿದ್ದಾನೆ. ಭಯ ಹಾಗೂ ಆತನ ಕಿರುಕುಳ ತಾಳಲಾರದೇ ಆಕೆ ಟಾಯ್ಲೆಟ್ ಕ್ಲೀನರ್ ಕುಡಿದಿದ್ದಾಳೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ತೆಲಂಗಾಣ: ಆಕೆ ತುಂಬು ಗರ್ಭಿಣಿ (Pregnant). ಪುಟ್ಟ ಕಂದನ (Baby) ಬಗ್ಗೆ ನೂರಾರು ಕನಸು (Dreams) ಕಂಡವಳು, ಮಗು (Child) ಮಡಿಲಿಗೆ ಬರುತ್ತಿದ್ದಂತೆ ಮುದ್ದಾಡಬೇಕು, ಮಗುವನ್ನು ಜೀವಕ್ಕಿಂತ ಹೆಚ್ಚಾಗಿ ಕಾಪಾಡಿಕೊಳ್ಳಬೇಕು ಅಂತ ಕನಸು ಕಂಡಿದ್ದಳು. ಈ ವೇಳೆ ಆಕೆಗೆ ಗಂಡ (Husband) ಎನಿಸಿಕೊಂಡವ ಜೊತೆಯಾಗಿ ಇರಬೇಕಿತ್ತು. ಹೆಂಡತಿಯ (Wife) ಜೊತೆಗೆ ಮಗುವನ್ನೂ ಜೀವಕ್ಕಿಂತ ಹೆಚ್ಚಾಗಿ ಕಾಪಾಡಿಕೊಳ್ಳಬೇಕಿತ್ತು. ಆದರೆ ಈ ಪತಿರಾಯ ತಾಯಿ ಹಾಗೂ ಇನ್ನೂ ಜೀವನವನ್ನೇ ನೋಡದ ಕಂದನ ಪಾಲಿಗೆ ಯಮನಾಗಿ ಬಿಟ್ಟಿದ್ದಾನೆ. ತನ್ನ ಕೈಯಾರೆ ಹೆಂಡತಿ ಹಾಗೂ ಆಕೆಯ ಹೊಟ್ಟೆಯೊಳಗಿದ್ದ ಪಾಪದ ಕೂಸುವನ್ನು ಕೊಂದೇ (Murder) ಬಿಟ್ಟಿದ್ದಾನೆ. ಈ ಘೋರ ಘಟನೆ ಬಗ್ಗೆ ತಿಳಿದು ಜನರೆಲ್ಲ ಮಮ್ಮಲ ಮರುಗಿದ್ದಾರೆ. ಆ ಪಾಪಿಗೆ ಶಿಕ್ಷೆ (Punishment) ಆಗಲೇ ಬೇಕು ಅಂತ ಆಗ್ರಹಿಸಿದ್ದಾರೆ.

ತೆಲಂಗಾಣದಲ್ಲಿ ನಡೆಯಿತು ಅಮಾನವೀಯ ಘಟನೆ

ತೆಲಂಗಾಣ ರಾಜ್ಯದ ನಿಜಾಮಾಬಾದ್ ಜಿಲ್ಲೆಯ ವರ್ಣಿ ಮಂಡಲದ ರಾಜಪೇಟ್ ತಾಂಡಾದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಆಕೆಯನ್ನು ಕೊಂದಿದ್ದು ಬೇರೆ ಯಾರೂ ಅಲ್ಲ, ಆಕೆಯದ್ದೇ ಪತಿ. ಆಕೆಯ ಪತಿ ಟಾಯ್ಲೆಟ್ ಕ್ಲೀನಿಂಗ್ ಆಸಿಡ್ ಕುಡಿಯಲು ಒತ್ತಾಯಿಸಿದ್ದಾನೆ. ಭಯ ಹಾಗೂ ಆತನ ಕಿರುಕುಳ ತಾಳಲಾರದೇ ಆಕೆ ಟಾಯ್ಲೆಟ್ ಕ್ಲೀನರ್ ಕುಡಿದಿದ್ದಾಳೆ. ಪರಿಣಾಮ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾಳೆ.

“ನೀನು ಚೆನ್ನಾಗಿಲ್ಲ” ಅಂತ ಕಿರುಕುಳ

ಮೃತ ಗರ್ಭಿಣಿಯನ್ನು ಕಲ್ಯಾಣಿ ಅಂತ ಗುರುತಿಸಲಾಗಿದ್ದು, ಆಕೆಯ ಪತಿ ಆರೋಪಿ ತರುಣ್ ಎಸ್ಕೇಪ್ ಆಗಿದ್ದಾನೆ. ಪತಿ ತರುಣ್ ಮೃತ ಕಲ್ಯಾಣಿಯನ್ನು ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ. ಮೂರು ತಿಂಗಳ ಹಿಂದೆ ಕಲ್ಯಾಣಿ ಗರ್ಭಿಣಿಯಾದಾಗ ತರುಣ್ ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ, ನೀನು ನೋಡಲು ಚೆನ್ನಾಗಿಲ್ಲ ಅಂತ ನಿತ್ಯ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುತ್ತಾ ಇದ್ದ ಎನ್ನಲಾಗಿದೆ.

ಇದನ್ನೂ ಓದಿ: Kamali ಧಾರಾವಾಹಿ ನಿರ್ದೇಶಕ ಅರವಿಂದ್ ಕೌಶಿಕ್ ಅರೆಸ್ಟ್! ನಿರ್ಮಾಪಕರಿಗೆ ವಂಚಿಸಿ ತಗ್ಲಾಕೊಂಡ್ರಾ ಡೈರೆಕ್ಟರ್?

 ಹೆಚ್ಚಿನ ವರದಕ್ಷಿಣೆ ನೀಡುವಂತೆ ಕಿರುಕುಳ

ಇಷ್ಟೇ ಅಲ್ಲದೇ ಆತ ವರದಕ್ಷಿಣೆ ನೀಡುವಂತೆಯೂ ನಿತ್ಯ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಳೆದ ಮಂಗಳವಾರ ಇಬ್ಬರ ನಡುವೆ ವಾಗ್ವಾದ ನಡೆದು, ನಂತರ ತರುಣ್ ಕಲ್ಯಾಣಿಗೆ ಟಾಯ್ಲೆಟ್ ಕ್ಲೀನಿಂಗ್ ಲಿಕ್ವಿಡ್ ಕುಡಿಯುವಂತೆ ಒತ್ತಾಯಿಸಿದ್ದ ಎನ್ನಲಾಗಿದೆ. ಆತನ ಕಿರುಕುಳ ತಾಳಲಾರದೇ ಆಕೆ ಟಾಯ್ಲೆಟ್ ಕ್ಲೀನರ್ ಕುಡಿದು ಅಸ್ವಸ್ಥಗೊಂಡಿದ್ದಾಳೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು

ಇನ್ನು ಆಕೆ ನರಳಾಡುತ್ತಿರುವುದನ್ನು ಅಕ್ಕಪಕ್ಕದ ಜನ ನೋಡಿ, ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕುಟುಂಬಸ್ಥರು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಲ್ಯಾಣಿ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: PSI Recruitment Scam : ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯ ಬಂಧನ

ಆರೋಪಿ ತರುಣ್ ಎಸ್ಕೇಪ್

ಇನ್ನು ಕಲ್ಯಾಣಿ ಕುಟುಂಬಸ್ಥರು ತರುಣ್ ಮತ್ತು ಆತನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ತರುಣ್ ಮತ್ತು ಅವರ ಕುಟುಂಬದ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 304-ಬಿ ಮತ್ತು 498-ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನು ಇಷ್ಟೆಲ್ಲಾ ಆಗುತ್ತಿದ್ದಂತೆ ಆರೋಪಿ ತರುಣಾ ಹಾಗೂ ಆತನ ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ. ಇದೀಗ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Published by:Annappa Achari
First published: