ವೈದ್ಯಲೋಕಕ್ಕೆ ಸಲಾಂ: ಮೆಟ್ರೋ ರೈಲಿನಲ್ಲಿ ಹೃದಯ ಸಾಗಿಸಿ ಕಸಿ ಮಾಡಿದ್ದ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ!

ರೋಗಿಗೆ ಅತಿಕಡಿಮೆ ಸಮಯದಲ್ಲಿ ಹೃದಯ ಕಸಿ ಮಾಡುವ ಅಗತ್ಯವಿತ್ತು. ಸಾವಿನ ದವಡೆಯಲ್ಲಿದ್ದ ಅವರನ್ನು ಬದುಕಿಸಲು 1 ರಿಂದ 2 ಗಂಟೆಯಲ್ಲಿ ಹೃದಯವನ್ನು ಕಸಿ ಮಾಡಬೇಕಾಗಿತ್ತು. ಹೀಗಾಗಿ ಮೆಟ್ರೋ ರೈಲಿನಲ್ಲಿ ಯಶಸ್ವಿಯಾಗಿ ಹೃದಯವನ್ನು ಸಾಗಿಸಲಾಯಿತು. ನಾವು ನಿಗದಿಪಡಿಸಿದ್ದ 10 ನಿಮಿಷ ಮೊದಲೇ ಮೆಟ್ರೋ ರೈಲು ಸ್ಥಳ ತಲುಪಿತು. ಹೀಗಾಗಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಒಂದು ಜೀವಕ್ಕೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಗಿದೆ ಎಂದು ಹೇಳಿದರು.

ಮೆಟ್ರೋ ರೈಲಿನಲ್ಲಿ ಹೃದಯ ಸಾಗಿಸುತ್ತಿರುವ ವೈದ್ಯರ ತಂಡ

ಮೆಟ್ರೋ ರೈಲಿನಲ್ಲಿ ಹೃದಯ ಸಾಗಿಸುತ್ತಿರುವ ವೈದ್ಯರ ತಂಡ

 • Share this:
  ಹೈದರಾಬಾದ್(ಫೆ.17): ಹೃದಯ ಕಸಿ ಮಾಡುವ ಸಂದರ್ಭದಲ್ಲಿ ಗ್ರೀನ್ ಕಾರಿಡಾರ್, ಟ್ರಾಫಿಕ್ ಫ್ರೀ ಕಾರಿಡಾರ್ ನಲ್ಲಿ ಹೃದಯ ಸಾಗಿಸುವುದು ಸಾಮಾನ್ಯ. ಭಾರತೀಯ ವೈದ್ಯಲೋಕ ಇಂತಹ ಸಾಹಸಗಳನ್ನು ಈಗಾಗಲೇ ಅನೇಕ ಬಾರಿ ಮಾಡಿದೆ. ಒಂದು ಜೀವದ ಬೆಲೆ ಎಷ್ಟು ಅಮೂಲ್ಯ ಎನ್ನುವುದಕ್ಕೆ ದೇಶದಲ್ಲಿ ಆಗಾಗ ಈ ರೀತಿ ಘಟನೆಗಳು ಮರುಕಳಿಸುತ್ತಿರುವುದೇ ಸಾಕ್ಷಿ. ಈ ರೀತಿಯ ಸಾಹಸ ಮಾಡಿ ವೈದ್ಯರು ಅನೇಕರ ಜೀವ ಉಳಿಸಿದ್ದಾರೆ. ಮುತ್ತಿನ ನಗರಿ ಹೈದರಾಬಾದಿನಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ. ಆದರೆ ಈ ಸಲ ಹೃದಯ ಸಾಗಿಸಿದ್ದು ಮಾತ್ರ ಮೆಟ್ರೋ ರೈಲಿನಲ್ಲಿ.

  ಹೌದು, ಅಪರೂಪದಲ್ಲೇ ಅಪರೂಪ ಎನ್ನುವ ಈ ಘಟನೆಗೆ ಸಾಕ್ಷಿಯಾಗಿದ್ದು ಹೈದರಾಬಾದ್. ಈ ತಿಂಗಳ ಆರಂಭದಲ್ಲಿ ಹೈದರಾಬಾದ್ ಮೆಟ್ರೋ ರೈಲಿನ ಮೂಲಕ ವ್ಯಕ್ತಿಯೊಬ್ಬರಿಗೆ ಕಸಿ ಮಾಡಲು ಹೃದಯವನ್ನು ಸಾಗಿಸಲಾಗಿತ್ತು. ಮೆದುಳು ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಹೃದಯವನ್ನು ಯಶಸ್ವಿಯಾಗಿ ಈ ವ್ಯಕ್ತಿಗೆ ಕಸಿ ಮಾಡಲಾಗಿತ್ತು. ಇದೀಗ ಹೃದಯ ಕಸಿಗೊಳಗಾದ ವ್ಯಕ್ತಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆಂದು ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

  ಎಲ್ ಬಿ ನಗರದ ಕಾಮಿನೇನಿ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರು ಮೆದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ್ದರು. ಜುಬಿಲಿ ಹಿಲ್ಸ್ ನ ಆಸ್ಪತ್ರೆಯಲ್ಲಿದ್ದ ವ್ಯಕ್ತಿಯೊಬ್ಬರಿಗೆ ತತಕ್ಷಣವೇ ಹೃದಯ ಬೇಕಿತ್ತು. ಅವರಿಗೆ ಹೃದಯ ಕಸಿಮಾಡಲು ವೈದ್ಯರು ಸಿದ್ದತೆಯನ್ನು ಮಾಡಿಕೊಂಡಿದ್ದರು. ಅಪೋಲೋ ಆಸ್ಪತ್ರೆಯ ಹೃದ್ರೋಗಿಯನ್ನು ಬದುಕಿಸಲು ಕಾಮಿನೇನಿ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಹೃದಯವನ್ನು ಫಟಾಪಟ್ ಅಂತಾ ತರಬೇಕಿತ್ತು. ಹೀಗಾಗಿ ಫೆಬ್ರುವರಿ 2 ರಂದು ಹೈದರಾಬಾದ್‌ನಲ್ಲಿ ಮೊದಲ ಬಾರಿಗೆ ಹೃದಯ ಸಾಗಿಸಲು ಮೆಟ್ರೋ ರೈಲನ್ನು ಬಳಸಲಾಗಿತ್ತು. ಇದಕ್ಕಾಗಿ ಹೈದರಾಬಾದ್ ಪೊಲೀಸರು ಮತ್ತು ಮೆಟ್ರೋ ರೈಲು ಸಿಬ್ಬಂದಿ ವಿಶೇವಾಗಿ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡಿದ್ದರು. ಬಳಿಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ಹೃದಯ ಕಸಿ ಮಾಡಲಾಗಿತ್ತು.

  Chikmagalur Rape: ಚಿಕ್ಕಮಗಳೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು; ಬೆಚ್ಚಿಬಿದ್ದ ಕಾಫಿನಾಡು

  ಸೋಮವಾರ ಡಿಸ್ಚಾರ್ಜ್ ಆದ 44 ವರ್ಷದ ಈ ವ್ಯಕ್ತಿ ಕಾರ್ಡಿಯೋಮಿಯೋಪತಿಯಿಂದ ಬಳಲುತ್ತಿದ್ದರು. ಅವರು ಬದುಕಲು ಹೃದಯದ ಕಸಿ ಅಗತ್ಯವಾಗಿತ್ತು. ಹೊಸ ಹೃದಯ ಕಸಿ ಮಾಡುವವರೆಗೂ 45 ದಿನಗಳವರೆಗೆ ನಿರಂತರವಾಗಿ ಅವರಿಗೆ ಔಷಧಿ ನೀಡಿ ಜೀವಂತವಾಗಿರಿಸಲಾಗಿತ್ತು ಎಂದು ಅಪೊಲೊ ಆಸ್ಪತ್ರೆಯ ಹೃದಯ ಮತ್ತು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸಕ ಡಾ.ಅಲ್ಲ ಗೋಪಾಲ ಕೃಷ್ಣ ಗೋಖಲೆ ಹೇಳಿದ್ದಾರೆ. ಗರಿಷ್ಠ ಸಂಚಾರ ಸಮಯದಲ್ಲಿ ಮೀಸಲಾದ ಮೆಟ್ರೋ ರೈಲಿನ ಮೂಲಕ ಹೃದಯದ ತ್ವರಿತ ಸಾಗಣೆಯು ನಿರ್ಣಾಯಕ ಪಾತ್ರ ವಹಿಸಿದೆ. ಹೃದಯವನ್ನು ತ್ವರಿತವಾಗಿ ಸಾಗಿಸಲು ಮತ್ತು ಶಸ್ತ್ರಚಿಕಿತ್ಸೆಯ ಯಶಸ್ಸಿಗೆ ಇದು ಸಹಾಯ ಮಾಡಿದೆ ಎಂದಿದ್ದಾರೆ. .

  ‘ಆಂಬ್ಯುಲೆನ್ಸ್, ಹೆಲಿಕಾಪ್ಟರ್ ಬದಲಾಗಿ ಮೆಟ್ರೊ ರೈಲಿನ ಮೂಲಕ ಹೃದಯ ತರಲು ನಾವು ಹೊಸ ಗ್ರೀನ್ ಕಾರಿಡಾರ್ ಅನ್ನು ರಚಿಸಿದ್ದೆವು. ನಗರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ರಸ್ತೆಯ ಮೂಲಕ ಸಾಗಿಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿತ್ತು. ಅಲ್ಲದೇ ಇದಕ್ಕೆ ಸುಮಾರು 4 ಗಂಟೆ ಹಿಡಿಯುತ್ತಿತ್ತು. ಆದರೆ ರೋಗಿಗೆ ಅತಿಕಡಿಮೆ ಸಮಯದಲ್ಲಿ ಹೃದಯ ಕಸಿ ಮಾಡುವ ಅಗತ್ಯವಿತ್ತು. ಸಾವಿನ ದವಡೆಯಲ್ಲಿದ್ದ ಅವರನ್ನು ಬದುಕಿಸಲು 1 ರಿಂದ 2 ಗಂಟೆಯಲ್ಲಿ ಹೃದಯವನ್ನು ಕಸಿ ಮಾಡಬೇಕಾಗಿತ್ತು. ಹೀಗಾಗಿ ಮೆಟ್ರೋ ರೈಲಿನಲ್ಲಿ ಯಶಸ್ವಿಯಾಗಿ ಹೃದಯವನ್ನು ಸಾಗಿಸಲಾಯಿತು. ನಾವು ನಿಗದಿಪಡಿಸಿದ್ದ 10 ನಿಮಿಷ ಮೊದಲೇ ಮೆಟ್ರೋ ರೈಲು ಸ್ಥಳ ತಲುಪಿತು. ಹೀಗಾಗಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಒಂದು ಜೀವಕ್ಕೆ ಯಶಸ್ವಿಯಾಗಿ ಹೃದಯ ಕಸಿ ಮಾಡಲಾಗಿದೆ ಎಂದು ಹೇಳಿದರು.

  ಅಪೋಲೋ ಗ್ರೂಪ್ ಆಸ್ಪತ್ರೆಗಳ ಅಧ್ಯಕ್ಷ ಡಾ.ಕೆ.ಹರಿಪ್ರಸಾದ್ ಮಾತನಾಡಿ, ಹೃದಯ ದಾನಿ ಮತ್ತು ಅವರ ಕುಟುಂಬದ ಸಮಸ್ಯೆ ನಡುವೆಯೂ ದೇಣಿಗೆ ನೀಡಲು ಮುಂದಾಗಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಹೈದರಾಬಾದ್ ಹೆಚ್ಚುವರಿ ಪೊಲೀಸ್ ಆಯುಕ್ತ ಅನಿಲ್ ಕುಮಾರ್ ಮಾತನಾಡಿ, ಹೈದರಾಬಾದ್ ಟ್ರಾಫಿಕ್ ಪೊಲೀಸರು ಕಳೆದ 2 ರಿಂದ 3 ವರ್ಷಗಳಿಂದ ಅಂಗಾಂಗ ಸಾಗಿಸಲು ಗ್ರೀನ್ ಕಾರಿಡಾರ್ ನಿರ್ಮಿಸುತ್ತಿದ್ದಾರೆ. ಕಳೆದ ಒಂದೇ ವರ್ಷದಲ್ಲಿ ಸುಮಾರು 25 ಬಾರಿ ಗ್ರೀನ್ ಕಾರಿಡಾರ್ ರಚಿಸಲಾಗಿತ್ತು ಎಂದು ಮಾಹಿತಿ ನೀಡಿದರು. ಎಲ್ & ಟಿ ಮೆಟ್ರೋ ರೈಲು ಸಿಒಒ ಅನಿಲ್ ಕುಮಾರ್ ಸೈನಿ ಮಾತನಾಡಿ, ಮೆಟ್ರೋ ರೈಲಿನ ಮೂಲಕ ಒಂದು ಜೀವ ಉಳಿಸಲಾಗಿದೆ ಎಂದಿದ್ದಾರೆ.
  Published by:Latha CG
  First published: