Snake Drama: ಸ್ನೇಹಿತನನ್ನು ತಾನೇ ಕೊಂದು, ಡೆಡ್‍ಬಾಡಿ ಪಕ್ಕ ಸತ್ತ ನಾಗರಹಾವು ಇಟ್ಟು ನಾಟಕವಾಡಿದ ಚಾಲಾಕಿ!

ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಸ್ನೇಹಿತನೇ ತನ್ನ ಆತ್ಮೀಯ ಸ್ನೇಹಿತನನ್ನು ತನ್ನ ಮನೆಯಲ್ಲೇ ಕೊಂದಿದ್ದಾನೆ. ಆತನ ಡೆಡ್‍ಬಾಡಿ ಪಕ್ಕ ಸತ್ತ ನಾಗರಹಾವು ತಂದಿಟ್ಟು, ಹಾವು ಕಚ್ಚಿತು ಎಂದು ನಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ಆತನ ಚಾಲಕಿತನ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ನಾಗರಹಾವು

ನಾಗರಹಾವು

  • Share this:
ಸ್ನೇಹಕ್ಕೆ ಅದರದ್ದೇ ಆದ ವಿಶೇಷ ಬೆಲೆ, ಸ್ಥಾನ ಇರುತ್ತೆ. ಎಷ್ಟೋ ಜನ ಪ್ರಾಣ ಸ್ನೇಹಿತರನ್ನು (Friends) ನಾವು ನೋಡಿದ್ದೇವೆ. ಎಷ್ಟೇ ಕಷ್ಟ ಬಂದರು ಒಬ್ಬರನ್ನು ಒಬ್ಬರು ಬಿಟ್ಟು ಕೊಡದೇ ಇರ್ತಾರೆ. ಒಬ್ಬರ ಸಹಾಯಕ್ಕೆ ಒಬ್ಬರು ಇರ್ತಾರೆ. ಮನೆಯವರು, ಸಂಬಂಧಿಕರ ಬಳಿ ಹೇಳಿಕೊಳ್ಳಲು ಆಗದ ಎಷ್ಟೋ ವಿಷಯಗಳನ್ನು ತನ್ನ ಸ್ನೇಹಿತರ ಬಳಿ ಹಂಚಿಕೊಳ್ಳುತ್ತಾರೆ. ಪರಸ್ಪರ ನಂಬಿಕೆ ಇದ್ರೆ ಮಾತ್ರ ಸ್ನೇಹ ಗಟ್ಟಿಯಾಗಿ ಉಳಿಯಲು ಸಾಧ್ಯ.  ಇಲ್ಲೂ ಹಾಗೆಯೇ ಆಗಿದೆ. ಮಧ್ಯಪ್ರದೇಶದ (Madya pradesh) ಭೋಪಾಲ್‍ (Bhopal)ನಲ್ಲಿ ಸ್ನೇಹಿತನೇ ತನ್ನ ಆತ್ಮೀಯ ಸ್ನೇಹಿತನನ್ನು ತನ್ನ ಮನೆಯಲ್ಲೇ ಕೊಂದಿದ್ದಾನೆ. ಆತನ ಡೆಡ್‍ಬಾಡಿ (Dead body) ಪಕ್ಕ ಸತ್ತ ನಾಗರಹಾವು (Cobra) ತಂದಿಟ್ಟು, ಹಾವು ಕಚ್ಚಿತು ಎಂದು ನಂಬಿಸಲು ಪ್ರಯತ್ನಿಸಿದ್ದಾನೆ. ಆದರೆ ಆತನ ಚಾಲಕಿತನ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ತಾನೇ ಕೊಲೆ ಮಾಡಿ, ಹೆಣದ ಪಕ್ಕ ಸತ್ತ ಹಾವಿಟ್ಟು ನಾಟಕ!
ಸಂದೀಪ್ ಬಾಗ್ಮಾರೆ ಮತ್ತು ನವಲ್ ಸಿಂಗ್ ಮಧ್ಯಪ್ರದೇಶದ ಭೋಪಾಲ್‍ನವರು. ತುಂಬಾ ದಿನಗಳಿಂದ ಇವರು ಸ್ನೇಹಿತರಾಗಿರುತ್ತಾರೆ. ಆತ್ಮೀಯತೆಯೂ ಬೆಳೆದು ಅವರ ಮನೆಗೆ ಇವರು, ಇವರ ಮನೆಗೆ ಅವರು ಹೋಗುವುದು ಕಾಮನ್ ಆಗಿರುತ್ತೆ. ಅಂತೆಯೇ ಸಂದೀಪ್ ಬಾಗ್ಮಾರೆ ಮನೆಗೆ ನವಲ್ ಸಿಂಗ್ ಬಂದಿದ್ದಾನೆ. ಇಬ್ಬರು ಕಂಠಪೂರ್ತಿ ಕುಡಿದ್ದಾರೆ. ಆಗ ಸಂದೀಪ್ ಬಾಗ್ಮಾರೆ, ನವಲ್ ಸಿಂಗ್‍ನನ್ನು ಕೊಂದಿದ್ದಾನೆ. ತಾನು ಕೊಂದಿದ್ದ ಗೊತ್ತಾಗಬಾರದು ಎಂದು ಆತನ ಹೆಣದ ಪಕ್ಕ ಸತ್ತ ನಾಗರಹಾವನ್ನು ಇಟ್ಟಿದ್ದಾನೆ. ತನ್ನ ಗೆಳೆಯ ಹಾವು ಕಚ್ಚಿ ಸತ್ತ ಎಂದು ನಾಟಕವಾಡಿದ್ದಾನೆ.

ಕೊಂದವನೇ ಕರೆ ಮಾಡಿದ್ದ ಪೊಲೀಸರಿಗೆ!
ಸಂದೀಪ್ ತನ್ನ ಸ್ನೇಹಿತನನ್ನು ಕೊಂದು, ಪಕ್ಕದಲ್ಲಿ ಸತ್ತ ಹಾವು ಮಲಗಿಸಿ, ಪೊಲೀಸರಿಗೆ ಕರೆ ಮಾಡಿದ್ದ. ತನ್ನ ಸ್ನೇಹಿತ ಹಾವು ಕಚ್ಚಿ ಸತ್ತು ಹೋದ ಎಂದು. ಪೊಲೀಸರು ಸಂದೀಪ್ ಅವರ ಮನೆಗೆ ಆಗಮಿಸಿದಾಗ, ಶವದ ಬಳಿ ಸತ್ತ ನಾಗರಹಾವು ಬಿದ್ದಿರುವುದನ್ನು ಕಂಡರು. ಇದರಿಂದಾಗಿ ರಾತ್ರಿ ಮಲಗಿದ್ದಾಗ ಹಾವು ಕಡಿತದಿಂದ ಸಿಂಗ್ ಸಾವನ್ನಪ್ಪಿರಬಹುದು ಎಂದು ಶಂಕಿಸಿದ್ದರು.

ಇದನ್ನೂ ಓದಿ: Re-Postmortem: ಪೇಂಟರ್ ರಮೇಶ್ ಕೊಲೆ ಕೇಸ್! ಮರು ಪೋಸ್ಟ್​ಮಾರ್ಟಂಗಾಗಿ ಕೆರೆಯಲ್ಲಿರೊ ನೀರು ಹೊರಕ್ಕೆ

ಡಿಸಿಪಿ ರಾಜೇಶ್ ಸಿಂಗ್ ಭದೌರಿಯಾ ಅವರು ಹೇಳಿದ್ದೇನು?
ಬಸ್ ಚಾಲಕ ನವಲ್ ಸಿಂಗ್ ಅವರ ಮೃತದೇಹ ಮಿಸ್ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅವರ ಸ್ನೇಹಿತ ಸಂದೀಪ್ ಬಾಗ್ಮಾರೆ ಅವರ ಮನೆಯಲ್ಲಿ ಪತ್ತೆಯಾಯಿತು. ಶವದ ಬಳಿ ಸತ್ತ ನಾಗರ ಹಾವು ಕೂಡ ಬಿದ್ದಿತ್ತು. ಸಿಂಗ್ ಮತ್ತು ಅವರ ಸ್ನೇಹಿತರು ರಾತ್ರಿಯಲ್ಲಿ ಒಟ್ಟಿಗೆ ಮದ್ಯ ಸೇವಿಸಿದ್ದರು ಎಂದು ಸಂದೀಪ್ ನಮಗೆ ತಿಳಿಸಿದ್ರು ಎಂದು ಭದೌರಿಯಾ ಹೇಳಿದರು.

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನಿತ್ತು?
ಪ್ರಕರಣ ದಾಖಲಿಸಿಕೊಂಡ ಪೊಲೀಸರು ನವಲ್ ಸಿಂಗ್‍ನ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹಾವು ಕಡಿದಿರುವ ಬಗ್ಗೆ ಉಲ್ಲೇಖ ಇಲ್ಲ. ಮೃತನ ದೇಹದಲ್ಲಿ ಯಾವುದೇ ವಿಷ ಇರಲಿಲ್ಲ ಅಥವಾ ದೇಹದ ಮೇಲೆ ಹಾವು ಕಚ್ಚಿದ ಯಾವುದೇ ಚಿಹ್ನೆ ಇರಲಿಲ್ಲ. ಉಸಿರುಗಟ್ಟುವಿಕೆಯಿಂದ ನೇವಲ್ ಸಾವನ್ನಪ್ಪಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ ಎಂದು ಭದೌರಿಯಾ ಹೇಳಿದರು.

ಇದನ್ನೂ ಓದಿ: Mother Kills Son: 4 ವರ್ಷದ ಮಗನ ಕೊಂದ ತಾಯಿ, 10 ವರ್ಷದ ಹಿಂದೆ ಮಗಳನ್ನೂ ಕೊಂದಿದ್ದಳು!

ಪೊಲೀಸರ ಲಾಠಿ ಏಟಿಗೆ ಸತ್ಯ ಬಾಯ್ಬಿಟ್ಟ ಆರೋಪಿ
ಪ್ರಾಥಮಿಕ ತನಿಕ ನಮಥರ ಪೊಲೀಸರು ಸಂದೀಪ್‍ನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಆರಂಭದಲ್ಲಿ ಆರೋಪಿ ಏನನ್ನು ಬಾಯಿ ಬಿಟ್ಟಿಲ್ಲ. ನಂತರ ತಾನೇ ನವಲ್ ಸಿಂಗ್ ಅವರ ಬಾಯಿ ಮತ್ತು ಮೂಗಿಗೆ ಬಟ್ಟೆಯನ್ನು ಸುತ್ತಿ ಉಸಿರುಗಟ್ಟಿಸಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

ಏನೇ ಜಗಳವಾದ್ರೂ ಸ್ನೇಹಿತರಿಬ್ಬರು ಕೂತು ಮಾತನಾಡಿ ಬಗೆಹರಿಸಿಕೊಳ್ಳಬಹುದಿತ್ತು. ಅದು ಬಿಟ್ಟು ಈ ರೀತಿ ಕೊಲೆ ಮಾಡಿದ್ರೆ ಹೇಗೆ? ಈಗ
ನವಲ್ ಸಿಂಗ್ ಪೋಷಕರು ಮಗನನ್ನು ಕಳೆದುಕೊಂಡು ಅನಾಥವಾಗಿದ್ದಾರೆ. ಇತ್ತ ಸಂದೀಪ್ ಸಹ ಜೈಲು ಪಾಲಾಗಿದ್ದಾನೆ.
Published by:Savitha Savitha
First published: