HOME » NEWS » National-international » MAN FLIES FROM BENGALURU TO LUCKNOW WITH BIRTHDAY GIFT FOR MINOR GIRL MET ONLINE BUT ARRESTED BY POLICE LG

ಗೆಳತಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬೆಂಗಳೂರಿನಿಂದ ಲಕ್ನೋಗೆ ತೆರಳಿದ ಯುವಕನಿಗೆ ಕಾದಿತ್ತು ಶಾಕ್..!

ಅಪ್ರಾಪ್ತೆ ಮನೆಯವರು ಈತನ ಮೇಲೆ ಅನುಮಾನಗೊಂಡು, ಪೊಲೀಸರಿಗೆ ಕರೆ ಮಾಡಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸಲ್ಮಾನ್​ನ್ನು ಪೊಲೀಸ್ ಸ್ಟೇಷನ್​ಗೆ ಕರೆದೊಯ್ದರು. ಹೀಗಾಗಿ ಇಡೀ ರಾತ್ರಿ ಆತ ಜೈಲಿನಲ್ಲೇ ಕಾಲ ಕಳೆದನು. ಗೆಳತಿಯ ಹುಟ್ಟುಹಬ್ಬಕ್ಕೆ ವಿಶ್​ ಮಾಡಲು ಬಂದಾತ, ಪೊಲೀಸರಿಗೆ ಅತಿಥಿಯಾಗಿದ್ದು ವಿಪರ್ಯಾಸವೇ ಸರಿ.

news18-kannada
Updated:January 13, 2021, 11:54 AM IST
ಗೆಳತಿಯ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬೆಂಗಳೂರಿನಿಂದ ಲಕ್ನೋಗೆ ತೆರಳಿದ ಯುವಕನಿಗೆ ಕಾದಿತ್ತು ಶಾಕ್..!
ಸಾಂದರ್ಭಿಕ ಚಿತ್ರ
  • Share this:
ಲಕ್ನೋ(ಜ.13): ಆನ್​ಲೈನ್​ನಲ್ಲಿ ಪರಿಚಯವಾದ ಗೆಳತಿಯ ಹುಟ್ಟುಹಬ್ಬಕ್ಕೆ ಗಿಫ್ಟ್​ ಖರೀದಿಸಿ ಬೆಂಗಳೂರಿನಿಂದ ಲಕ್ನೋಗೆ ತೆರಳಿದ ಯುವಕನಿಗೆ ಪೊಲೀಸರಿಂದ ಭರ್ಜರಿ ಗಿಫ್ಟ್​ ಸಿಕ್ಕಿದೆ. ಆತ 21 ವರ್ಷದ ಯುವಕ ಸಲ್ಮಾನ್​. ಇವನಿಗೆ ಆನ್​ಲೈನ್​ನಲ್ಲಿ ಅಪ್ರಾಪ್ತ ಹುಡುಗಿಯ ಪರಿಚಯವಾಗಿತ್ತು. ಆಕೆ ಲಕ್ನೋದ ಹುಡುಗಿ. ಬರೀ ಫೋನ್, ಮೆಸೇಜ್​ಗಳ ಮೂಲಕ ಇವರ ಗೆಳೆತನ ಸಾಗಿತ್ತು. ಒಂದು ಬಾರಿಯೂ ಭೇಟಿಯಾಗಿರಲಿಲ್ಲ. ಹೀಗಿರುವಾಗ ಗೆಳತಿಯ ಹುಟ್ಟುಹಬ್ಬ ಇದೆ ಎಂದು ತಿಳಿದ ಬೆಂಗಳೂರಿನ ಯುವಕ ಆಕೆಯನ್ನು ಭೇಟಿ ಮಾಡಲು ನಿರ್ಧರಿಸಿದ್ದ. ಹೀಗಾಗಿ ತನ್ನ ಗೆಳತಿಗೆ ಬರ್ತ್​ಡೇ ಗಿಫ್ಟ್​ ಖರೀದಿಸಿ ಬೆಂಗಳೂರಿನಿಂದ ಲಕ್ನೋಗೆ ತೆರಳಲು ಮುಂದಾಗಿದ್ದ.

ಅಂತೆಯೇ ಬೆಂಗಳೂರಿನಿಂದ ವಿಮಾನ ಟಿಕೆಟ್ ಬುಕ್ ಮಾಡಿ, ಸುಮಾರು 2000 ಕಿ.ಮೀ.ದೂರವಿರುವ ಲಕ್ನೋಗೆ ಗಿಫ್ಟ್​ ಜೊತೆ ತೆರಳಿದ್ದ. ಗೆಳತಿಯನ್ನು ಭೇಟಿ ಮಾಡಿ ಗಿಫ್ಟ್​ ಕೊಟ್ಟು ಹುಟ್ಟುಹಬ್ಬದ ಶುಭಾಶಯ ತಿಳಿಸಲು ಕಾತರದಿಂದ ಕಾಯುತ್ತಿದ್ದ. ಲಕ್ನೋಗೆ ತೆರಳಿದ ಆತ, ಸರಿಯಾದ ಸಮಯಕ್ಕೆ ವಿಶ್ ಮಾಡಲು ಅಲ್ಲಿಂದ ಲಕ್ಕಿಂಪುರ ಖೇರಿಗೆ ಬಸ್​ ಹಿಡಿದ. ಬಹಳ ಕಾತುರದಿಂದ ಹೋದ ಆತನಿಗೆ ಆ ಹುಡುಗಿಯ ಮನೆಯಲ್ಲಿ ಸಿಕ್ಕ ಉಡುಗೊರೆ ನಿರಾಸೆ.

ಯಾಕೆಂದರೆ ಆತನ ಗೆಳತಿ ಮನೆಯವರು ಈತ ಅಪರಿಚಿತ ಎಂದು ಮನೆಯೊಳಗೆ ಕರೆಯಲು ನಿರಾಕರಿಸಿದರು. ಆತ ಎಷ್ಟೇ ಬೇಡಿಕೊಂಡರೂ ಸಹ ಹುಡುಗಿ ಮನೆಯವರು ಸುತಾರಾಂ ಒಪ್ಪಲಿಲ್ಲ. ಗೆಳತಿಯ ಬರ್ತ್​ಡೇ ಗೆ ಚಾಕೋಲೇಟ್ಸ್​​​​​, ಟೆಡ್ಡಿ ಬೇರ್ ಹಾಗೂ ಇನ್ನಿತರೆ ಗಿಫ್ಟ್​ಗಳನ್ನು ಆತ ತಂದಿದ್ದ. ಆದರೆ ಈ ಗಿಫ್ಟ್​​ ಕೊಡುವುದಿರಲಿ, ಆತನಿಗೆ ಗೆಳತಿಯನ್ನು ಭೇಟಿ ಮಾಡುವ ಅವಕಾಶವೂ ಸಿಗಲಿಲ್ಲ.

ಅಪ್ರಾಪ್ತೆ ಮನೆಯವರು ಈತನ ಮೇಲೆ ಅನುಮಾನಗೊಂಡು, ಪೊಲೀಸರಿಗೆ ಕರೆ ಮಾಡಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸಲ್ಮಾನ್​ನ್ನು ಪೊಲೀಸ್ ಸ್ಟೇಷನ್​ಗೆ ಕರೆದೊಯ್ದರು. ಹೀಗಾಗಿ ಇಡೀ ರಾತ್ರಿ ಆತ ಜೈಲಿನಲ್ಲೇ ಕಾಲ ಕಳೆದನು. ಗೆಳತಿಯ ಹುಟ್ಟುಹಬ್ಬಕ್ಕೆ ವಿಶ್​ ಮಾಡಲು ಬಂದಾತ, ಪೊಲೀಸರಿಗೆ ಅತಿಥಿಯಾಗಿದ್ದು ವಿಪರ್ಯಾಸವೇ ಸರಿ.

Gold Rate Today: ಬೆಂಗಳೂರು ಸೇರಿ ಪ್ರಮುಖ ನಗರಗಳ ಇಂದಿನ ಚಿನ್ನದ ದರ ಹೀಗಿದೆ

ಹುಡುಗಿಯ ಮನೆಯವರು ಯುವಕನ ವಿರುದ್ಧ ಎಫ್​ಐಆರ್​ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸುನಿಲ್​ ಕುಮಾರ್ ಸಿಂಗ್ ಹೇಳಿದರು.

ಬಳಿಕ ಸೋಮವಾರ ವೈಯಕ್ತಿಕ ಬಾಂಡ್​ ಆಧಾರದ ಮೇಲೆ ಯುವಕನನ್ನು ಜೈಲಿನಿಂದ ರಿಲೀಸ್ ಮಾಡಲಾಯಿತು. ಸಲ್ಮಾನ್ ಮೂಲತಃ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯವನಾಗಿದ್ದು, ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.ಹುಡುಗಿಯು ಆನ್​ಲೈನ್​ ಮೂಲಕ ಪರಿಚಯವಾಗಿ ನಮ್ಮಿಬ್ಬರ ನಡುವೆ ಗೆಳೆತನ ಬೆಳೆಯಿತು. ಆಕೆಯ ಹುಟ್ಟುಹಬ್ಬಕ್ಕೆ ವಿಶ್ ಮಾಡಲು ನಾನು ಗಿಫ್ಟ್​ ಖರೀದಿಸಿ ಬೆಂಗಳೂರಿನಿಂದ ಲಕ್ನೋಗೆ ತೆರಳಿದ್ದೆ ಎಂದು ಸಲ್ಮಾನ್​ ಪೊಲೀಸರ ಬಳಿ ಹೇಳಿದ್ದಾನೆ. ಆದರೆ ಹುಡುಗಿಯ ಪೋಷಕರು ಈತನ ಮೇಲೆ ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಲಕ್ನೋದಿಂದ ಬೆಂಗಳೂರಿಗೆ ಮರಳಲು ಜನವರಿ 11ಕ್ಕೆ ಬುಕ್​ ಆಗಿರುವ ಟಿಕೆಟ್ ಹಾಗೂ ಹಣ ಆತನ ಬಳಿ ಇತ್ತು. ಹುಡುಗಿಯ ಪೋಷಕರು ಯುವಕನ ಮೇಲೆ ಕೋಪಗೊಂಡು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು.

ದೂರಿನ ಆಧಾರದ ಮೇಲೆ ಪೊಲೀಸರು ಯುವಕನ ವಿರುದ್ಧ ಐಪಿಸಿ ಸೆಕ್ಷನ್ 151ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಬಾಂಡ್​ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಯಿತು ಎಂದು ಸಿಂಗ್ ಹೇಳಿದರು.
Published by: Latha CG
First published: January 13, 2021, 11:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading