ಚಂಡೀಗಢ: ಅತ್ತಿಗೆಯೊಂದಿಗೆ (Sister in Law) ಓಡಿ ಹೋಗಿದ್ದ ಏಳು ಮಕ್ಕಳ ತಂದೆಗೆ ಸಂಬಂಧಿಕರು ಚಪ್ಪಲಿ ಹಾರ ಹಾಕಿ ಮೂತ್ರ ಕುಡಿಸಿರುವ ಘಟನೆ ಹರಿಯಾಣದ (Haryana) ಕರ್ನಾಲ್ (Karnal) ಜಿಲ್ಲೆಯಲ್ಲಿ ನಡೆದಿದೆ. ಕರ್ನಾಲ್‌ನ ಘರುಂಡಾದ (Gharaunda) ಬೊಲ್ಹೆಡಾ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ವ್ಯಕ್ತಿಯನ್ನು ಆತನ ಸಂಬಂಧಿಕರೇ ಅಪಹರಿಸಿ ಈ ರೀತಿ ಚಿತ್ರ ಹಿಂಸೆ ನೀಡಿದ್ದಾರೆ. 35 ವರ್ಷದ ಹರೂನ್ ಎಂಬಾತನಿಗೆ ಹತ್ತಕ್ಕೂ ಹೆಚ್ಚು ಮಂದಿ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಹರೂನ್ ಕುತ್ತಿಗೆಗೆ ಶೂ ಹಾರವನ್ನು ಹಾಕಿ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಅಷ್ಟಕ್ಕೂ ಥಳಿತಕ್ಕೊಳಗಾದ ವ್ಯಕ್ತಿ ನಿರಪರಾಧಿಯಲ್ಲ.
ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿರುವ ಸಂಬಂಧಿಕರು
ಬಲ್ಹೆಡ ಗ್ರಾಮದ ನಿವಾಸಿಯಾಗಿರುವ ಹರೂನ್ಗೆ ಏಳು ಜನ ಮಕ್ಕಳಿದ್ದಾರೆ. ಆದರೆ ಕೆಲ ದಿನಗಳ ಹಿಂದೆ ವಿವಾಹಿತ ಅತ್ತಿಗೆಯೊಂದಿಗೆ ಓಡಿ ಹೋಗಿದ್ದ ಎನ್ನಲಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡ ಮಹಿಳೆಯ ಕುಟುಂಬಸ್ಥರು ಝರುಂಡಾದಿಂದ ಹರೂನ್‌ನನ್ನು ಎತ್ತಿಕೊಂಡು ಬಂದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ನಂತರ ಹತ್ತಕ್ಕೂ ಹೆಚ್ಚು ಜನರು ತನಗೆ ತೀವ್ರವಾಗಿ ಥಳಿಸಿ ಮಾನಸಿಕ ಹಿಂಸೆ ನೀಡಿದ್ದಾರೆ. ತನ್ನ ಕುತ್ತಿಗೆಗೆ ಶೂ ಹಾರ ಹಾಕಿ ಮೂತ್ರ ಕುಡಿಸಿ ನಾನಾ ರೀತಿಯಲ್ಲಿ ಹಿಂಸೆ ನೀಡಿದ್ದಾರೆ. ಈ ವಿಚಾರವಾಗಿ ನನಗೆ ನ್ಯಾಯ ಬೇಕು ಎಂದು ವ್ಯಕ್ತಿ ಆಗ್ರಹಿಸಿದ್ದಾನೆ.
ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವ್ಯಕ್ತಿ ಆಗ್ರಹ
ನಂತರ ಈ ಅಮಾನವೀಯ ಘಟನೆಯ ಬಗ್ಗೆ ಬಲ್ಹೆಡಾ ಗ್ರಾಮದಲ್ಲಿ ಮ್ಯಾಂಡರಿನ್ ಮುಸ್ಲಿಂ ಸಮುದಾಯದ ಸಭೆ ನಡೆಸಿತುಈ ವೇಳೆ ಘಟನೆ ಕುರಿತಂತೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹರೂನ್ ಮನವಿ ಮಾಡಿದ್ದಾನೆ. ಆದರೆ ಅರೂನ್ ತನ್ನ ಸೋದರ ಮಾವನನ್ನೇ ಓಡಿಸಿದ್ದಾನೆ. ಈ ಅಪರಾಧಕ್ಕೆ ಅವನು ಕಾನೂನುಬದ್ಧವಾಗಿ ಶಿಕ್ಷೆಗೆ ಒಳಗಾಗಬೇಕಿತ್ತು. ಆದರೆ ಯಾವುದೇ ಪ್ರಯೋಜನವಾಗದ ಹಿನ್ನೆಲೆ ಕುಟುಂಬಸ್ಥರೇ ಸೇರಿಕೊಂಡು ಆತನನ್ನು ಅವಮಾನಿಸಿದ್ದಾರೆ ಮತ್ತು ಈ ವೀಡಿಯೊ ವೈರಲ್ ಆಗಿದೆ. ನಂತರ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಹಿಂದೆ ಮನೆಗೆಲಸದಾಕೆಗೆ ಮೂತ್ರ ಕುಡಿಸಿದ್ದ ಬಿಜೆಪಿ ನಾಯಕಿ
ಈ ಹಿಂದೆ ಮನೆಗೆಲಸದಾಕೆಗೆ ಮೂತ್ರ ಕುಡಿಸಿ ಚಿತ್ರಹಿಂಸೆ ನೀಡಿದ್ದ ಆರೋಪದಡಿ ಜಾರ್ಖಂಡ್‍ನ ಬಿಜೆಪಿ ನಾಯಕಿ ಸೀಮಾ ಪಾತ್ರಾ ಎಂಬವರನ್ನು ಬಿಜೆಪಿ ಇಂದು ಅಮಾನತುಗೊಳಿಸಿತ್ತು. ಸೀಮಾ ಪಾತ್ರಾ ಅವರು ಬಿಜೆಪಿ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಜೊತೆಗೆ ಅವರ ಪತಿ ಮಹೇಶ್ವರ್ ಪಾತ್ರಾ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದಾರೆ. ಮನೆಕೆಲಸದಾಕೆಗೆ ಸೀಮಾ ಪಾತ್ರಾ ಚಿತ್ರಹಿಂಸೆ ನೀಡುತ್ತಿರುವ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸೀಮಾ ಪಾತ್ರಾ ಅವರನ್ನು ಜಾರ್ಖಂಡ್ ಬಿಜೆಪಿ ಮುಖ್ಯಸ್ಥ ದೀಪಕ್ ಪ್ರಕಾಶ್ ಅಮಾನತುಗೊಳಿಸಿದ್ದರು.
ಇದನ್ನೂ ಓದಿ: Air India: ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ್ದವನಿಗೆ ಕೋಳ! ಘಟನೆ ಬಗ್ಗೆ ಏರ್ ಇಂಡಿಯಾ ಕ್ಷಮೆಯಾಚನೆ
ವಿಡಿಯೋ ವೈರಲ್ ಆಗ್ತಿದ್ದಂತೆಯೇ ಸೀಮಾ ಪಾತ್ರಾ ಅಮಾನತು
ವೈರಲ್ ಆದ ವೀಡಿಯೋದಲ್ಲಿ ಸುನೀತಾ ಎಂಬಾಕೆ ಆಸ್ಪತ್ರೆಯ ಹಾಸಿಗೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರು ಕುಳಿತುಕೊಳ್ಳಲು ಅಸಮರ್ಥರಾಗಿದ್ದು, ಅವರ ಬಾಯಲ್ಲಿ ಅನೇಕ ಹಲ್ಲುಗಳು ಇಲ್ಲದಿರುವುದನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲದೇ ಅವರ ದೇಹದ ಮೇಲೆ ಅನೇಕ ಗಾಯದ ಗುರುತುಗಳಿದ್ದು, ಇವೆಲ್ಲವೂ ಸುನೀತಾಗೆ ಚಿತ್ರಹಿಂಸೆ ನೀಡಿರುವುದು ಸೂಚಿಸುತ್ತದೆ. ಘಟನೆ ಸಂಬಂಧಿಸಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕೂಡಲೇ ಸೀಮಾ ಪಾತ್ರಾ ಅವರನ್ನು ಬಂಧಿಸಲು ಒತ್ತಾಯಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ