Planet Birth - ಮೊದಲ ಬಾರಿಗೆ ಗ್ರಹ ಜನಿಸುವ ದೃಶ್ಯ ಕಂಡ ಮಾನವ; ವಿಜ್ಞಾನಿಗಳು ರೋಮಾಂಚನ

ನಕ್ಷತ್ರದ ಸುತ್ತ ಸುರಳಿ ಸುತ್ತಿರುವ ಪದರಗಳು ನವಜಾತ ಗ್ರಹ ಇರುವ ಸುಳಿವು ನೀಡುತ್ತವೆ. ಕೆರೆಯಲ್ಲಿ ದೋಣಿ ಹೊಯ್ದಾಡುತ್ತಾ ಸಾಗುವಂತೆ ಈ ಪದರದಲ್ಲಿ ಅಲೆ ಸೃಷ್ಟಿಯಾಗಿದೆ ಎಂದು ವಿಜ್ಞಾನಿಗಳು ಬಣ್ಣಿಸಿದ್ಧಾರೆ.

Vijayasarthy SN | news18
Updated:May 23, 2020, 2:15 PM IST
Planet Birth - ಮೊದಲ ಬಾರಿಗೆ ಗ್ರಹ ಜನಿಸುವ ದೃಶ್ಯ ಕಂಡ ಮಾನವ; ವಿಜ್ಞಾನಿಗಳು ರೋಮಾಂಚನ
AB Aurigae ನಕ್ಷತ್ರದಿಂದ ಗ್ರಹ ನಿರ್ಮಾಣವಾಗುತ್ತಿರುವುದು
  • News18
  • Last Updated: May 23, 2020, 2:15 PM IST
  • Share this:
ಮಗು ಜನಿಸುವುದನ್ನು ನೋಡಿದ್ದೇವೆ; ಪ್ರಾಣಿಗಳಿಂದ ಮರಿ ಹುಟ್ಟುವುದನ್ನು ಕಂಡಿದ್ದೇವೆ. ಆದರೆ, ಗ್ರಹ, ನಕ್ಷತ್ರ ಇತ್ಯಾದಿ ಆಕಾಶ ಕಾಯಗಳ ಹುಟ್ಟನ್ನು ಮನುಷ್ಯ ನೋಡಿರಲಿಲ್ಲ. ಈಗ ಮನುಷ್ಯನಿಗೆ ಆ ಭಾಗ್ಯವೂ ಇಕ್ಕಿದೆ. ಫ್ರಾನ್ಸ್​ನ ಪಿಎಸ್​ಎಲ್ ಯೂನಿವರ್ಸಿಟಿಯ ತಾರಾಲಯದ ಬೃಹತ್ ಟೆಲಿಸ್ಕೋಪ್​ನಲ್ಲಿ ವಿಜ್ಞಾನಿಗಳು ಗ್ರಹವೊಂದರ ಜನ್ಮದ ದೃಶ್ಯ ಕಂಡು ಕೃತಾರ್ಥರಾಗಿದ್ದಾರೆ.

ಭೂಮಿಯಿಂದ 520 ಜ್ಯೋತಿರ್ವರ್ಷ ದೂರದಲ್ಲಿರುವ AB Aurigae ಎಂಬ ನವ ಸೂರ್ಯನಿಂದ ಗ್ರಹವೊಂದು ಜನ್ಮ ತಾಳುತ್ತಿದೆ. ಫ್ರಾನ್ಸ್​ನ ಒಬ್ಸೆರ್ವೇಟೋರೀ ಡೀ ಪ್ಯಾರಿಸ್​ನಲ್ಲಿ ಪ್ರಬಲ ಟೆಲಿಸ್ಕೋಪ್ ಸಹಾಯದಿಂದ ಆಂಥೋನಿ ಬೋಕ್ಕಾಲೆಟ್ಟಿ ನೇತೃತ್ವದಲ್ಲಿ ವಿಜ್ಞಾನಿಗಳ ತಂಡವೊಂದು ನಿರಂತರವಾಗಿ ಅಧ್ಯಯನ ನಡೆಸುತ್ತಿದೆ.

ಖಗೋಲ ವಿಜ್ಞಾನಿಗಳು ನಮ್ಮ ವಿಶ್ವದಲ್ಲಿ ಸಾಕಷ್ಟು ನವಜಾತ ಗ್ರಹ, ನವಜಾತ ನಕ್ಷತ್ರಗಳನ್ನ ನೋಡಿದ್ದಾರೆ. ಸೌರಮಂಡಲಗಳ ಹೊರಗಿರುವ ಬಾಹ್ಯ ಗ್ರಹಗಳನ್ನ(Exoplanets) ಗುರುತಿಸಿದ್ಧಾರೆ. ಗ್ರಹಗಳು ಹೇಗೆ ಹುಟ್ಟುತ್ತವೆ ಎಂಬುದು ವಿಜ್ಞಾನಿಗಳಿಗೆ ಈಗಾಗಲೇ ಗೊತ್ತಿರುವ ವಿಚಾರವ. ಆದರೆ, ಜನ್ಮ ತಳೆಯುತ್ತಿರುವ ಗ್ರಹ ನೋಡುತ್ತಿರುವುದು ಇದೇ ಮೊದಲು.

ನವಜಾತ ಅಥವಾ ಎಳೆಯ ನಕ್ಷತ್ರದ ಸುತ್ತ ಸುರುಳಿ ಸುತ್ತಿದಂತೆ ಇರುವ ದೂಳಿನ ಪದರಗಳಿಂದ (Dusty Discs) ಗ್ರಹ ನಿರ್ಮಾಣವಾಗುತ್ತದೆ. ದೂಳು ಮತ್ತು ಶೀತದ ಅನಿಲ ಎರಡೂ ಬೆರೆತು ಗ್ರಹ ರಚನೆಗೆ ಪುಷ್ಟಿ ನೀಡುತ್ತವೆ. ಇದು ವಿಜ್ಞಾನಿಗಳಿಗೆ ಗೊತ್ತಿದೆ. ಆದರೆ, ಪ್ರತ್ಯಕ್ಷವಾಗಿ ನೋಡುತ್ತಿರುವುದು ಇದೇ ಮೊದಲು. AB Aurigae ನಕ್ಷತ್ರ ಕೂಡ ಇನ್ನೂ ಕಿರಿಯ ವಯಸ್ಸಿನದ್ದೇ ಆಗಿದೆ. ಹೀಗಾಗಿ, ಗ್ರಹ ಸೃಷ್ಟಿಗೆ ಪೂರಕವಾದ ವಾತಾವರಣ ಹೊಂದಿದೆ.

ಇದನ್ನೂ ಓದಿ: Parallel Universe - ಸಮಯ ಹಿಂದೋಡುತ್ತಿರುವ ಪರ್ಯಾಯ ವಿಶ್ವ ಅಸ್ತಿತ್ವದಲ್ಲಿದೆಯಾ? ನಾಸಾ ವಿಜ್ಞಾನಿಗಳಿಗೆ ಪತ್ತೆಯಾಗಿದ್ದೇನು?

ನಕ್ಷತ್ರದ ಸುತ್ತ ಸುರಳಿ ಸುತ್ತಿರುವ ಪದರಗಳು ನವಜಾತ ಗ್ರಹ ಇರುವ ಸುಳಿವು ನೀಡುತ್ತವೆ. ಕೆರೆಯಲ್ಲಿ ದೋಣಿ ಹೊಯ್ದಾಡುತ್ತಾ ಸಾಗುವಂತೆ ಈ ಪದರದಲ್ಲಿ ಅಲೆ ಸೃಷ್ಟಿಯಾಗಿದೆ. ಎರಡು ರೀತಿಯ ಸುರುಳಿಗಳು ಸುತ್ತುತ್ತಿವೆ. ಒಂದು ಗ್ರಹದ ಪಥದ ಒಳಗೆ ಹೋಗುವಂತಿದ್ದರೆ, ಮತ್ತೊಂದು ಪಥದ ಹೊರಗೆ ವಿಸ್ತರಿಸಲು ಹೋಗುತ್ತಿರುವಂತಿದೆ. ಇವೆರಡೂ ಕೂಡ ಅಂತಿಮವಾಗಿ ಗ್ರಹವನ್ನ ಕೂಡಿಕೊಳ್ಳುತ್ತವೆ. ಇದರಿಂದ ನಕ್ಷತ್ರದ ಧೂಳಿನ ಪದರದಲ್ಲಿರುವ ಅನಿಲ ಮತ್ತು ಧೂಳು ಎರಡೂ ಕೂಡ ನವಜಾತ ಗ್ರಹವನ್ನು ಸೇರಿಕೊಳ್ಳುತ್ತವೆ. ಇದರಿಂದ ಗ್ರಹ ಬೆಳೆಯುತ್ತಾ ಹೋಗುತ್ತದೆ ಎಂದು ಇದೇ ಅಧ್ಯಯನ ತಂಡದಲ್ಲಿರುವ ವಿಜ್ಞಾನಿ ಆನೆ ಡುಟ್ರೇ ಹೇಳುತ್ತಾರೆ.

ಇದೇ ಮೊದಲ ಬಾರಿಗೆ ನೋಡಲು ಸಿಕ್ಕಿರುವ ಗ್ರಹ ಹುಟ್ಟಿನ ದೃಶ್ಯವೈಭವನ್ನು ಕಾಣಲು ಇನ್ನೂ ದೊಡ್ಡ ಹಾಗೂ ಪ್ರಬಲ ಟೆಲಿಸ್ಕೋಪ್ ನಿರ್ಮಾಣವಾಗುತ್ತಿದೆ. ಇದರಿಂದ ಗ್ರಹಗಳ ನಿರ್ಮಾಣದಲ್ಲಿ ಅನಿಲಗಳ ಪಾತ್ರ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಹೆಚ್ಚು ನಿಖರವಾಗಿ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ.
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading