HOME » NEWS » National-international » MAN FED UP WITH WIFES COCKROACH PHOBIA AND ASK DIVORCE KVD

ಹೆಂಡತಿಗೆ ಜಿರಳೆ ಎಂದರೆ ಎಲ್ಲಿಲ್ಲದ ಹೆದರಿಕೆ: ಬಾಡಿಗೆ ಮನೆಗಳನ್ನು ಬದಲಾಯಿಸಿ ರೋಸಿ ಹೋದ ಗಂಡ!

ಪತ್ನಿಯ ಅತಿಯಾದ ಜಿರಳೆ ಭಯದಿಂದ ದಂಪತಿ ಕಳೆದ 3 ವರ್ಷದಲ್ಲಿ ಬರೋಬ್ಬರಿ 18 ಮನೆಗಳನ್ನು ಬದಲಾಯಿಸಿದ್ದಾರೆ. ಹೆಂಡತಿಯ ಜಿರಳೆ ಫೋಬಿಯಾದಿಂದ ರೋಸಿ ಹೋದ ಗಂಡ ಎಲ್ಲದಲ್ಲೂ ಅಂತ್ಯ ಹಾಡಲು ಮುಂದಾಗಿದ್ದಾರೆ.

Kavya V | news18-kannada
Updated:June 11, 2021, 10:03 PM IST
ಹೆಂಡತಿಗೆ ಜಿರಳೆ ಎಂದರೆ ಎಲ್ಲಿಲ್ಲದ ಹೆದರಿಕೆ: ಬಾಡಿಗೆ ಮನೆಗಳನ್ನು ಬದಲಾಯಿಸಿ ರೋಸಿ ಹೋದ ಗಂಡ!
ಸಾಂದರ್ಭಿಕ ಚಿತ್ರ.
  • Share this:
ಭೂಪಾಲ್​: ಬಹುತೇಕ ಹೆಣ್ಣು ಮಕ್ಕಳು ಜಿರಳೆ ಅಂದರೆ ಹೆದರೋದು ಕಾಮನ್​ ಆಗೋಗಿದೆ. ಜಿರಳೆ ಕಂಡರೆ ಸಾಕು ಹೌಹಾರಿ ಕಾಲ್ಕಿಳುತ್ತಾರೆ. ಹೆಂಗಸರು ಹೆದರೋದು ಜಿರಳೆಗಳಿಗೆ ಮಾತ್ರ ಅಂತ ಕಾಲೆಳೆಯೋ ಗಂಡಸಿರಿಗೇನು ಕಡಿಮೆ ಇಲ್ಲ. ಇಂಥಾ ಜಿರಳೆ ಭಯವೇ ಮಧ್ಯಪ್ರದೇಶದಲ್ಲಿ ಒಂದು ದಾಂಪತ್ಯವನ್ನು ಮುರಿದಿದೆ. ಪತ್ನಿಯ ಅತಿಯಾದ ಜಿರಳೆ ಭಯದಿಂದ ಭೂಪಾಲ್​ನ ದಂಪತಿ ಕಳೆದ 3 ವರ್ಷದಲ್ಲಿ ಬರೋಬ್ಬರಿ 18 ಮನೆಗಳನ್ನು ಬದಲಾಯಿಸಿದ್ದಾರೆ. ಹೆಂಡತಿಯ ಜಿರಳೆ ಫೋಬಿಯಾದಿಂದ ರೋಸಿ ಹೋದ ಗಂಡ ಎಲ್ಲದಲ್ಲೂ ಅಂತ್ಯ ಹಾಡಲು ಮುಂದಾಗಿದ್ದಾರೆ.

ಭೂಪಾಲ್​ನ ನಿವಾಸಿ ಸಾಫ್ಟ್​​ವೇರ್​ ಇಂಜಿನಿಯರ್​ 2017ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಹೊಸತರಲ್ಲಿ ತನಗೆ ಜಿರಳೆ ಅಂದರೆ ಭಯ ಎಂದು ಪತ್ನಿ ಹೇಳಿಕೊಂಡಿದ್ದಳು. ಮೊದಮೊದಲು ಇದನ್ನು ಕಾಮನ್​ ಆಗೇ ತೆಗೆದುಕೊಂಡಿದ್ದ ಪತಿ, ಎಲ್ಲಾ ಹುಡುಗಿಯರಂತೆ ತನ್ನ ಹೆಂಡತಿಗೂ ಜಿರಳೆ ಭಯವಿದೆ ಎಂದು ಭಾವಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಪತ್ನಿಯ ಅತಿಯಾದ ಭಯ ಗೊತ್ತಾಗುತ್ತಾ ಹೋಯ್ತು.

ಅಡುಗೆ ಮನೆಯಲ್ಲಿ ಜಿರಳೆ ನೋಡಿದ ಪತ್ನಿ ಮತ್ತೆ ಅಡಿಗೆ ಮನೆಗೆ ಕಾಲಿಡಲು ಒಪ್ಪಲೇ ಇಲ್ಲ. ಈ ಮನೆ ಬೇಡವೇ ಬೇಡ, ಮನೆ ಬದಲಾಯಿಸೋಣ ಅಂತ ಪಟ್ಟು ಹಿಡಿದಳು. ಇದಕ್ಕೆ ಒಪ್ಪಿದ ಪತಿ 2018ರಲ್ಲಿ ಮೊದಲ ಬಾರಿಗೆ ಮನೆ ಬದಲಿಸಿದರು. ಆದರೆ ಇದು ಇಲ್ಲಿಗೆ ನಿಲ್ಲಲಿಲ್ಲ. ಮತ್ತೆ ಜಿರಳೆ ನೋಡಿದ ಪತ್ನಿ ರಂಪಾಟ ಮಾಡಿದ್ದಾಳೆ. ಈ ಮನೆ ಬೇಡ, ಆ ಮನೆ ಬೇಡ. ಮತ್ತೊಂದು ಮನೆ ನೋಡೋಣ ಎಂದು ಬರೋಬ್ಬರಿ 18 ಮನೆಗಳನ್ನು ಬದಲಿಸುವಂತೆ ಮಾಡಿದ್ದಾಳೆ.

ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ಸ್ಥಳದಲ್ಲಿ ಬಲ್ಬ್ ಬೆಳಗಿದ ಪ್ರಕರಣಕ್ಕೆ ಟ್ವಿಸ್ಟ್: ಬಯಲಾಯ್ತು ಅಸಲಿ ಸತ್ಯ..!

ಈ ಮಧ್ಯೆ ಪತ್ನಿಯ ಜಿರಳೆ ಫೋಬಿಯಾ(Katsaridaphobia)ಗೆ ಚಿಕಿತ್ಸೆಯನ್ನೂ ಕೊಡಿಸಿದ್ದಾರೆ. ಮನೋಶಾಸ್ತ್ರಜ್ಞರಿಂದ ಕೌನ್ಸಿಲಿಂಗ್​ ಸಹ ಮಾಡಿಸಲಾಗಿದೆ. ದೆಹಲಿಯ ಪ್ರತಿಷ್ಠಿತ ಆಸ್ಪತ್ರೆ ಏಮ್ಸ್​ನ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಪತ್ನಿಯ ವರ್ತನೆಯಲ್ಲಿ ಯಾವುದೇ ಬದಲಾವಣೆ ಬರಲಿಲ್ಲ. ವೈದ್ಯರು ನೀಡಿದ ಔಷಧಿಗಳನ್ನು ಪತ್ನಿ ಸರಿಯಾಗಿ ತೆಗೆದುಕೊಳ್ಳುತ್ತಿರಲಿಲ್ಲ. ಬದಲಿಗೆ ಜಿರಳೆ ಬಂತು.. ಜಿರಳೆ ಬಂತು.. ಮನೆ ಖಾಲಿ ಮಾಡೋಣ ಎಂದು ಜಗಳ ಮಾಡುತ್ತಿದ್ದಳು.

ಇದರಿಂದ ರೋಸಿ ಹೋದ ಸಾಫ್ಟ್​ವೇರ್​ ಎಂಜಿನಿಯರ್​ ಪತಿ ನನಗೆ ಪತ್ನಿಯೇ ಬೇಡ. ಆಕೆಯೊಂದಿಗೆ ದಾಂಪತ್ಯ ಮುಂದುವರಿಸಲು ಆಕೆಯ ಮಾನಸಿಕ ಆರೋಗ್ಯ ಸ್ಥಿಮಿತದಲ್ಲಿ ಇಲ್ಲ. ಹೀಗೆ ಸದಾ ಮನೆಗಳನ್ನು ಬದಲಾಯಿಸುತ್ತಾ ಬದುಕುವುದು ನನಗೆ ಅಸಾಧ್ಯ ಎಂದು ಪತಿ ಗಂಡಸರ ಹಕ್ಕುಗಳ ಸಮಿತಿಗೆ ಹೋಗಿದ್ದರು. BHAI ಸಂಸ್ಥೆಯಲ್ಲೂ ಇವರ ಸಮಸ್ಯೆ ಇತ್ಯರ್ಥವಾಗಿಲ್ಲ. ಹೀಗಾಗಿ ಪತಿ ವಿಚ್ಛೇದನ ಬೇಕೆಂದು ಕೋರ್ಟ್​ ಮೊರೆ ಹೋಗಿದ್ದಾರೆ.
Youtube Video
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 11, 2021, 10:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories