ಕೇರಳ: ಶಾಲಾ ದಿನಗಳನ್ನು ಮೆಲುಕು ಹಾಕಲು ಗೆಟ್ ಟುಗೆದರ್ (Get Together) ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ. ಕೆಲವು ಕಡೆ ಪ್ರತಿ ವರ್ಷ ಹಳೆಯ ವಿದ್ಯಾರ್ಥಿಗಳು (Alumni Reunion) ಸೇರುವ ಪರಿಪಾಟವಿದೆ. ಆದರೆ ಕೇರಳದಲ್ಲಿ ಇದೇ ರೀತಿ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮದ ವೇಳೆ ಭೇಟಿಯಾಗಿದ್ದ ವಿವಾಹಿತ ಮಹಿಳೆಯೊಬ್ಬರು (Housewife) ತಮ್ಮ 10ನೇ ತರಗತಿಯಲ್ಲಿ ಪ್ರೀತಿಸಿದ್ದ ತನ್ನ ಸಹಪಾಠಿಯೊಂದಿಗೆ ಪರಾರಿಯಾಗಿದ್ದಾರೆ. ವಿಚಿತ್ರವೆಂದರೆ 35 ವರ್ಷಗಳ ನಂತರ ಶಾಲೆಯ ಗೆಟ್ ಟುಗೆದರ್ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೆ ಬಂದಾಗ ಈ ಹಳೆಯ ಲವರ್ಸ್ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಎರಡೂ ಕುಟುಂಬದ ಸದಸ್ಯರು ಪ್ರತ್ಯೇಕ ದೂರು ನೀಡಿದ್ದಾರೆ.
10 ನೇ ತರಗತಿ ವಿದ್ಯಾರ್ಥಿಗಳ ಪುನರ್ಮಿಲನ
1987ರಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದವರು ವಾಟ್ಸಪ್ ಗ್ರೂಪ್ ರಚಿಸಿಕೊಂಡು ಎಲ್ಲರೂ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದರು. ಈ ವೇಳೆ ಒಂದು ದಿನ ತಮ್ಮ ಶಾಲೆಯಲ್ಲಿ ಭೇಟಿಯಾಗಲು ನಿರ್ಧರಿಸಿದ್ದಾರೆ. ಬರೋಬ್ಬರಿ 35 ವರ್ಷಗಳ ನಂತರ ಎಲ್ಲರೂ ಭೇಟಿಯಾಗಿದ್ದಾರೆ. ಮೂರುವರೆ ದಶದಕ ನಂತರ ಭೇಟಿ ಮಾಡಿದ್ದ ಈ ಪ್ರೇಮಿಗಳು ತಮ್ಮ ಕುಟುಂಬವನ್ನು ಬಿಟ್ಟು ಪರಾರಿಯಾಗಿದ್ದಾರೆ.
ವಾಟ್ಸಪ್ ಮೂಲಕ ಸಂಬಂಧ ಪುನರಾರಂಭ
ಮೂರು ವಾರಗಳ ಹಿಂದೆ ಮೂವಟುಪುಳದ ಶಾಲೆಯಲ್ಲಿ 35 ವರ್ಷಗಳ ಹಿಂದಿನ 10ನೇ ತರಗತಿ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ ನಡೆದಿತ್ತು. ಹಳೆಯ ಸಹಪಾಠಿಗಳು ವಾಟ್ಸಾಪ್ ಗ್ರೂಪ್ ರಚಿಸಿಕೊಂಡು ಅದರ ಆಶ್ರಯದಲ್ಲಿ ಹಳೆ ವಿದ್ಯಾರ್ಥಿಗಳ ಸಭೆಯನ್ನು ಆಯೋಜಿಸಿದ್ದರು. ತಮ್ಮ ಶಾಲೆಯಲ್ಲೇ ಭೇಟಿಯಾಗಲು ಎಲ್ಲರೂ ನಿರ್ಧರಿಸಿದ್ದರು. ಈ ಸಂದರ್ಭದಲ್ಲಿ ತಮಗೆ ಪ್ರತ್ಯೇಕ ಕುಟುಂಬವಿದೆ ಎನ್ನುವುದನ್ನು ಮರೆತ ಈ ಹಳೆ ಪ್ರೇಮಿಗಳು ವಾಟ್ಸಾಪ್ ಮೂಲಕ ತಮ್ಮ ಸಂಬಂಧವನ್ನು ಪುನರಾರಂಭಿಸಿದ್ದಾರೆ.
ಇದನ್ನೂ ಓದಿ: School News: 10ನೇ ತರಗತಿ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯ ಪ್ರೇಮ ಸಲ್ಲಾಪ, ಕೊನೆಗೆ ಆಗಿದ್ದೇನು ನೋಡಿ
ಮಹಿಳೆಯ ಪತಿಯಿಂದ ನಾಪತ್ತೆ ದೂರು
ಮೂರು ಮಕ್ಕಳ ತಾಯಿಯಾಗಿದ್ದ ಮಹಿಳೆ ಗೆಳೆಯನೊಂದಿಗೆ ಪರಾರಿಯಾಗಿದ್ದಾರೆ. ಇದರ ಬೆನ್ನಲ್ಲೇ ತನ್ನ ಪತ್ನಿ ಮೂರು ದಿನಗಳಿಂದ ಕಾಣೆಯಾಗಿದ್ದಾರೆ ಎಂದು ಪತಿ ಕರಿಮಣ್ಣೂರು ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳೆಕಿಗೆ ಬಂದಿದೆ. ಇದೇ ವೇಳೆ ಮತ್ತೊಬ್ಬ ಮಹಿಳೆ ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಮುವಾಟ್ಟುಪುಳ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ತನಿಖೆಯಲ್ಲಿ ಈ ಇಬ್ಬರು ಒಟ್ಟಿಗೆ ಹೋಗಿರುವುದು ತಿಳಿದುಬಂದಿದೆ.
ಸೈಬರ್ ಸೆಲ್ ಸಹಾಯ ಪಡೆದು ಸಂಪರ್ಕಿಸಿದ ಪೊಲೀಸ್
ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಇಬ್ಬರ ಪತ್ತೆಗೆ ಸೈಬರ್ ಸೆಲ್ ಸಹಾಯ ಪಡೆದಿದ್ದಾರೆ. ಇವರಿಬ್ಬರ ಮೊಬೈಲ್ ಟ್ರ್ಯಾಕ್ ಮಾಡಿದಾಗ ಇಬ್ಬರೂ ಒಟ್ಟಿಗೆ ಇರುವುದು ಪೊಲೀಸರಿಗೆ ಅರಿವಾಗಿದೆ. ತನಿಖೆಯಲ್ಲಿ ಈ ಜೋಡಿ ತಿರುವನಂತಪುರಂ, ಪಾಲಕ್ಕಾಡ್, ವೆಲಂಕಣಿ ತಲುಪಿರುವುದು ತಿಳಿದುಬಂದಿದೆ.
ಪೊಲೀಸ್ ಠಾಣೆಗೆ ಹಾಜರಾಗಲು ಸೂಚನೆ
ಇಬ್ಬರು ಇರುವ ಸ್ಥಳ ಪತ್ತೆಯಾದ ಬೆನ್ನಲ್ಲೇ ಪೊಲೀಸರು ಇಬ್ಬರಿಗೂ ದೂರವಾಣಿ ಕರೆ ಮಾಡಿ ಮುವಾಟುಪುಳ ಪೊಲೀಸ್ ಠಾಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಇಬ್ಬರೂ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ನಂತರ ಇಬ್ಬರನ್ನು ಆದಿಮಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.
10ನೇ ತರಗತಿ ವಿದ್ಯಾರ್ಥಿಯೊಂದಿಗೆ ಶಿಕ್ಷಕಿ ಪರಾರಿ
ಹೈದರಾಬಾದ್ ಚಂದಂಗರ್ ಪ್ರದೇಶದಲ್ಲಿ 27 ವರ್ಷದ ಶಾಲಾ ಶಿಕ್ಷಕರೊಬ್ಬರು ಚಂದಾನಗರದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ 10ನೇ ತರಗತಿ ವಿದ್ಯಾರ್ಥಿಯೊಂದಿಗೆ ಪರಾರಿಯಾಗಿದ್ದಾರೆ. ಶಿಕ್ಷಕಿ ತನ್ನ ವಿದ್ಯಾರ್ಥಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಪ್ರೀತಿ ಮುಂದುವರಿದು ಶಾಲೆ ಅವಧಿ ಮುಗಿದ ನಂತರವೂ ವಿದ್ಯಾರ್ಥಿ ಮತ್ತು ಶಿಕ್ಷಕಿ ಮನೆಗೆ ಹೋಗದೇ ಸುತ್ತಾಡುತ್ತಿದ್ದರು. ಇವರಿಬ್ಬರ ನಡುವಿನ ಸಂಬಂಧ ಶಾಲೆಯಲ್ಲಿ ಈಗಾಗಲೇ ತಿಳಿದಿತ್ತು. ಹುಡುಗನಿಗೆ 16 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.
ಇಬ್ಬರು ನಾಪತ್ತೆಯಾದ ನಂತರ ಇಬ್ಬರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕ್ಷಕಿ ತಮ್ಮ ಮಗನನ್ನು ವಂಚಿಸಿದ್ದಾರೆ ಎಂದು ಬಾಲಕನ ಪೋಷಕರು ಆರೋಪಿಸಿದ್ದಾರೆ. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಶಿಕ್ಷಕ ಮತ್ತು ವಿದ್ಯಾರ್ಥಿಯನ್ನು ಕಂಡುಹಿಡಿದಿದ್ದು, ಬಳಿಕ ಇಬ್ಬರನ್ನೂ ಠಾಣೆಗೆ ಕರೆದೊಯ್ದು ಕೌನ್ಸಿಲಿಂಗ್ ಮಾಡಿ ಮನೆಗೆ ಕಳುಹಿಸಿದ್ದಾರೆ. ಯುವತಿ ಮನೆಯಲ್ಲಿ ಮದುವೆ ಬಗ್ಗೆ ಮಾತುಕತೆ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಇಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ