Batman-Joker: ಟ್ರೈನ್​​ ಒಳಗೆ ಜೋಕರ್ ಡ್ರೆಸ್​​ ಹಾಕಿ ಬಂದವನ ಹುಚ್ಚಾಟ, ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ಅಟ್ಯಾಕ್​!

Batman-Joker: ಜಪಾನಿನ ಟೋಕಿಯೋದಲ್ಲಿ ವ್ಯಕ್ತಿಯೊಬ್ಬ ಬ್ಯಾಟ್​ಮ್ಯಾನ್​ ಸಿನಿಮಾದ ಜೋಕರ್​ನಂತೆ ಡ್ರೆಸ್​ ಧರಿಸಿ, ಟ್ರೈನ್​ ಒಳಗೆ ಹುಚ್ಚಾಟ ಪ್ರದರ್ಶಿಸಿದ್ದಾನೆ. ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಚುಚ್ಚಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಡಾ. ರಾಜ್​ಕುಮಾರ್(Dr.Rajkumar)​ ಅವರ ಬಂಗಾರದ ಮನುಷ್ಯ ಸಿನಿಮಾ(Movie) ನೋಡಿ, ಅದೆಷ್ಟೋ ಮಂದಿ ಸಿಟಿ ಬಿಟ್ಟು ಊರಿನತ್ತ ತೆರಳಿ ಉಳಿಮೆ ಮಾಡುವುದನ್ನು ಕಲಿತರು. ಈ ರೀತಿಯ ಒಳ್ಳೆಯ ಅಂಶಗಳನ್ನು ಸಿನಿಮಾದಿಂದ ಕಲಿತರೆ ಒಳಿತು. ಆದರೆ ದಂಡುಪಾಳ್ಯ ಸಿನಿಮಾ ನೋಡಿ ಅದೇ ರೀತಿ ಕೊಲೆ ಮಾಡುವುದನ್ನ ಕಲಿತ ಗ್ಯಾಂಗ್​ವೊಂದನ್ನ ಪೊಲೀಸರು ಬಂಧಿಸಿದ್ದರು. ಸಿನಿಮಾ ಅಂದರೆ ಒಳ್ಳೆಯದ್ದು, ಕೆಟ್ಟದ್ದು ಎರಡು ಇರುತ್ತೆ. ನಾವು ಮಾತ್ರ ಒಳ್ಳೆಯದನ್ನೇ ಆರಿಸಿಕೊಳ್ಳಬೇಕು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದರಂತೆ ಹಾಲಿವುಡ್​(Hollywood)ನ ಬ್ಯಾಟ್​ಮ್ಯಾನ್​ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ. ಎಲ್ಲರಿಗೂ ಬ್ಯಾಟ್​ಮ್ಯಾನ್(Batman)​ ಸಿನಿಮಾ ಅಚ್ಚುಮೆಚ್ಚು. ಅದರಲ್ಲೂ ಆ ಸಿನಿಮಾದಲ್ಲಿರುವ ವಿಲನ್​ ಜೋಕರ್(Joker)​ ಪಾತ್ರವೇ ಬ್ಯಾಟ್​ಮ್ಯಾನ್​ಗಿಂತ ಹೆಚ್ಚು ಜನಪ್ರಿಯ. ಆ ಸಿನಿಮಾ ಬಿಡುಗಡೆಯಾದಗಿನಿಂದ ಇಲ್ಲಿಯವರೆಗೂ ಆ ಜೋಕರ್​ ಪಾತ್ರ ಎಲ್ಲರ ಮನಸ್ಸಲ್ಲಿ ಅಚ್ಚಳಿಯದೆ ಕುಳಿತಿಕೊಂಡಿದೆ. ಆದರೆ ಜಪಾನಿ(Japan)ನ ಟೋಕಿಯೋ(Tokyo)ದಲ್ಲಿ ವ್ಯಕ್ತಿಯೊಬ್ಬ ಬ್ಯಾಟ್​ಮ್ಯಾನ್​ ಸಿನಿಮಾದ ಜೋಕರ್​ನಂತೆ ಡ್ರೆಸ್(Dress)​ ಧರಿಸಿ, ಟ್ರೈನ್​ ಒಳಗೆ ಹುಚ್ಚಾಟ ಪ್ರದರ್ಶಿಸಿದ್ದಾನೆ. ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಚುಚ್ಚಿದ್ದಾನೆ.

17 ಮಂದಿಗೆ ಚುಚ್ಚಿದ ಜೋಕರ್​ ಡ್ರೆಸ್​ ಧರಿಸಿದ್ದ ವ್ಯಕ್ತಿ

ವಿಶ್ವದ ಅತ್ಯಂತ ಬ್ಯುಸಿ ಟ್ರೈನ್​​ ಕಿಯೋ ಎಕ್ಸ್​ಪ್ರೆಸ್​ ಟ್ರೇನ್​ನಲ್ಲಿ ಈ ದುರಂತ ನಡೆದಿದೆ. ನಿನ್ನೆ ಸಂಜೆ ಸಾವಿರಾರು ಮಂದಿ ಈ ಟ್ರೈನ್​​ನಲ್ಲಿ ಪ್ರಯಾಣಿಸುತ್ತಿದ್ದರು. ಇದ್ದಕ್ಕಿದ್ದ ಹಾಗೇ ಬ್ಯಾಟ್​ಮ್ಯಾನ್​ ಸಿನಿಮಾದ ಜೋಕರ್​ ಪಾತ್ರದಂತೆ ವ್ಯಕ್ತಿಯೊಬ್ಬ ವೇಷ ಧರಿಸಿ ಎಂಟ್ರಿ ಕೊಟ್ಟಿದ್ದ. ಇದಾದ ಕೆಲ ನಿಮಿಷಗಳ ಬಳಿಕ ಬ್ಯಾಟ್​ಮ್ಯಾನ್​ ಸಿನಿಮಾದ, `ನಿಮ್ಮ ಮುಖದ ಮೇಲೆ ನಗು ಬರುವಂತೆ ಮಾಡುತ್ತೇನೆ’ (Lets put a Smile on Your Face)ಎಂಬ ಫೇಮಸ್​ ಡೈಲಾಗ್​ ಹೇಳಿದ್ದಾನೆ. ಟ್ರೈನ್​ನಲ್ಲಿದ್ದವರಿಗೆ ಈ ಡೈಲಾಗ್​ ಕೇಳಿ ಭಯವಾಗಿತ್ತು. ಇದಾದ ಕೆಲ ಸೆಕೆಂಡ್​​ಗಳಲ್ಲಿ ವ್ಯಕ್ತಿ ಸಿಕ್ಕ ಸಿಕ್ಕವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.ಇದನ್ನು ಓದಿ : ಈ ವಿದ್ಯಾರ್ಥಿ ನೋಡಿ..ಹೇಗೆ ವಿಭಿನ್ನವಾಗಿ ಕಾಣಿಸಿಕೊಂಡು ವೈರಲ್ ಆಗಿದ್ದಾರೆ..!

ಟ್ರೈನ್​ ಒಳಗೆ ಬೆಂಕಿ ಹಚ್ಚಿ ಹುಚ್ಚಾಟ

ಹ್ಯಾಲೋವೀನ್‌ ಎಂಬ ವಿಶೇಷ ಆಚರಣೆಯೊಂದನ್ನ ವಿದೇಶಗಳಲ್ಲಿ ಮಾಡಲಾಗುತ್ತೆ. ಈ ದಿನದಂದು ಜನರು ಚಿತ್ರ-ವಿಚಿತ್ರ ಉಡುಗೆ ತೊಡುತ್ತಾರೆ.  ಮೊದಲು ಹಾಲೋವೀನ್​ಗೆ ಈತ ಜೋಕರ್​ ಡ್ರೆಸ್​ ತೊಟ್ಟಿರಬೇಕು ಎಂದು ಜನ ಸುಮ್ಮನಿದ್ದರು. ಯಾವಾಗ ವ್ಯಕ್ತಿ ಹಲ್ಲೆಗೆ ಮುಂದಾಗಿದ್ದೇ ತಡ ಜನ ಜೀವ ಉಳಿಸಿಕೊಳ್ಳಲು ಓಡಿ ಹೋಗಿದ್ದಾರೆ. ಟ್ರೈನ್​​ ಕಿಟಕಿಗಳು , ಹಾಗೂ ಎಮರ್ಜೆನ್ಸಿ ಎಕ್ಸಿಟ್​ಗಳಲ್ಲಿ ತೂರಿ ಹೊರಬಂದಿದ್ದಾರೆ. ಅಷ್ಟರಲ್ಲಿ ಆ ವ್ಯಕ್ತಿ 17 ಮಂದಿಗೆ ಚಾಕುವಿನಿಂದ ಇರಿದಿದ್ದಾನೆ.  ಇಷ್ಟಕ್ಕೇ ನಿಲ್ಲದ ಆತನ ಹುಚ್ಚಾಟ ಟ್ರೈನ್​ ಒಳಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ . ಇದಾದ ಕೆಲವೇ ಕ್ಷಣಗಳಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.


ಮರಣದಂಡನೆ ಶಿಕ್ಷೆ ಪಡೆಯಲು ಈ ರೀತಿ ಮಾಡಿದ ವ್ಯಕ್ತಿ

ಹುಚ್ಚಾಟ ಮಾಡಿದ ವ್ಯಕ್ತಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದರು. ಯಾಕೆ ಈ ರೀತಿ ಮಾಡಿದೆ ಎಂದು ಆತನನ್ನು ಕೇಳಿದ್ದಕ್ಕೆ, ಆ ವ್ಯಕ್ತಿ ನನಗೆ ಮರಣದಂಡನೆ  ಶಿಕ್ಷೆ ಬೇಕು, ಹೀಗಾಗಿ ಎಲ್ಲರನ್ನು ಸಾಯಿಸಲು ಮುಂದಾದೆ. ಈ ರೀತಿ ಮಾಡಿದರೆ ಮರಣದಂಡನೆ ಶಿಕ್ಷೆ ಸಿಗುತ್ತೆ ಅಂತ ವಿಚಿತ್ರ ಧ್ವನಿಯಲ್ಲೇ ಉತ್ತರಿಸಿದ್ದಾನೆ. ಇದನ್ನು ಕೇಳಿದ ಪೊಲೀಸರೇ ಒಂದು ಕ್ಷಣ ದಾಂಗಾಗಿ ಹೋಗಿದ್ದರಂತೆ.

ಇದನ್ನು ಓದಿ : ಚರಂಡಿ ನೀರಿನಲ್ಲಿ ಕೊತ್ತಂಬರಿ ಸೊಪ್ಪು ತೊಳೆದು ಮಾರುತ್ತಾರಂತೆ, ಜೋಪಾನವಾಗಿರಿ!

ಜೋಕರ್​ ಪಾತ್ರದಿಂದ ಹೊರಬರಲಾಗದೆ ಸಾವನ್ನಪ್ಪಿದ್ದ ಹೀತ್ ಲೆಡ್ಜರ್

2008ರಲ್ಲಿ ಬ್ಯಾಟ್​ಮ್ಯಾನ್​ ದಿ ಡಾರ್ಕ್​ ನೈಟ್​ ಸಿನಿಮಾ ತೆರೆಕಂಡಿತ್ತು. ಬ್ಯಾಟ್​ಮ್ಯಾನ್​ ಹಾಗೂ ಜೋಕರ್​ ಪಾತ್ರದ ನಡುವಿನ ಹೊಡೆದಾಟವೇ ಈ ಸಿನಿಮಾದ ಕಥೆಯಾಗಿತ್ತು. ಬ್ಯಾಟ್​ಮ್ಯಾನ್​ಗಿಂತ ಎಲ್ಲೆಡೆ ಈ ಜೋಕರ್​ ಪಾತ್ರವೇ ಜನಪ್ರಿಯವಗಿತ್ತು. ಸೈಕೋ ರೀತಿಯ ಈ ಜೋಕರ್​ ಪಾತ್ರವನ್ನು ಹೀತ್​ ಲೆಡ್ಜರ್​ ಮಾಡಿದ್ದರು. ಈ ಸಿನಿಮಾದ ಬಳಿಕ ಹೀತ್ ಲೆಡ್ಜರ್​ ಜೋಕರ್​ ಪಾತ್ರದಿಂದ ಹೊರಬರಲಿಲ್ಲ. ಸೈಕೋ ರೀತಿಯಲ್ಲೇ ವರ್ತಿಸುವುದಕ್ಕೆ ಶುರು ಮಾಡಿದ್ದರು. ಬಳಿಕ ತಮ್ಮ ಮನೆಯಲ್ಲೇ ಅನುಮಾನಸ್ಪದ ರೀತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ವಿದೇಶದಲ್ಲಿ ಬ್ಯಾಟ್​ಮ್ಯಾನ್​ ಸಿನಿಮಾದ ಪ್ರದರ್ಶನದ ವೇಳೆ ವ್ಯಕ್ತಿಯೊಬ್ಬ ಇದೇ ರೀತಿ ವೇಷ ಧರಿಸಿ, ಸಿನಿಮಾ ನೋಡುತ್ತಿದ್ದವರ ಮೇಲೆ ಫೈರಿಂಗ್​ ನಡೆಸಿದ್ದ. ಈ ಘಟನೆಯಲ್ಲಿ 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
Published by:Vasudeva M
First published: