ಸಂತ್ರಸ್ತರ ನೆರವಿಗೆ ಬಟ್ಟೆ ಅಂಗಡಿಯನ್ನೇ ದಾನ ಮಾಡಿದ ಯುವಕ

news18
Updated:August 20, 2018, 5:15 PM IST
ಸಂತ್ರಸ್ತರ ನೆರವಿಗೆ ಬಟ್ಟೆ ಅಂಗಡಿಯನ್ನೇ ದಾನ ಮಾಡಿದ ಯುವಕ
news18
Updated: August 20, 2018, 5:15 PM IST
ನ್ಯೂಸ್​ 18 

ತಿರುವನಂತಪುರ (ಆ.20):  ಪ್ರವಾಹದಿಂದ ತತ್ತರಿಸಿರುವ ಕೇರಳಕ್ಕೆ ಈಗ ನೆರವಿನ ಅವಶ್ಯಕತೆ ಇದೆ.  ತುತ್ತು ಅನ್ನ, ಬಟ್ಟೆಗೂ ಅಲ್ಲಿನ ಜನ ಎದುರು ನೋಡುತ್ತಿದ್ದಾರೆ. ಅಲ್ಲದೆ ಅವರಿಗಾಗಿ ಅನೇಕರು ತಮ್ಮ ಕೈಯಲಾದ ಮಟ್ಟಿಗೂ ಸಹಾಯ ಮಾಡುತ್ತಿದ್ದಾರೆ.

ಇಲ್ಲೊಬ್ಬರು ಕೂಡ ಈ ರೀತಿ ನೆರವನ್ನು ಕೇಳಿಕೊಂಡು ಬಂದ ಸಂಘಟನೆಗೆ ತಮ್ಮ ಇಡೀ ಬಟ್ಟೆ ಅಂಗಡಿಯನ್ನೇ ದಾನವಾಗಿ ನೀಡಿದ್ದಾರೆ. ಕೇರಳದಲ್ಲಿರುವ ಕಲ್ಪಟನಲ್ಲಿ ನೆರೆ ಸಂತ್ರಸ್ತರಿಗೆ ಸಹಾಯ ಮಾಡಲು ಸ್ವಯಂ ಸಂಘಟನೆ ಸಂಸ್ಥೆಯೊಂದು ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ.  ಸಂತ್ರಸ್ತರಿಗೆ ನೆರವಾಗಲು ಬಟ್ಟಯನ್ನು ಕೇಳಿದ್ದಕ್ಕೆ ಫೈಝಲ್​ ತನ್ನ ಇಡೀ ಬಟ್ಟೆ ಅಂಗಡಿಯನ್ನೆ ಅವರಿಗೆ ದಾನವಾಗಿ ನೀಡಿ ಸಂತ್ರಸ್ತರ ಕಷ್ಟದಲ್ಲಿ ಭಾಗಿಯಾಗಿದ್ದಾರೆ.

ಫೈಝಲ್​ ಕಲ್ಪಟ್ಟದಲ್ಲಿ ರೆಡಿಮೇಡ್​ ಗಾರ್ಮೆಂಟ್ಸ್​ ಅಂಗಡಿಯನ್ನು ಹೊಂದಿದ್ದು, ತಮ್ಮಲ್ಲಿದ್ದ ಲಕ್ಷಾಂತರ ಮೌಲ್ಯದ ಬಟ್ಟೆಯನ್ನು ದಾನವಾಗಿ ನೀಡಿದ್ದಾರೆ, ಫೈಝಲ್​ ನೆರವಿಗೆ ಸಾಮಾಜಿಕ ಜಾಲತಾಣದಲ್ಲಿಯೂ ಪ್ರಶಂಸೆಯಾಗಿದೆ.

ಕೇರಳ ಸಂತ್ರಸ್ತರ ನೆರವಿಗೆ ಅನೇಕ ಜನರು ನೆರವಿನ ಹಸ್ತ ಚಾಚಿದ್ದು, ಅವರಿಗಾಗಿ ತಮ್ಮ ವೇತನ ಸೇರಿದಂತೆ ಅನೇಕ ನೆರವು ನೀಡುತ್ತಿದ್ದಾರೆ. ಅಲ್ಲಿನ ಮೀನುಗಾರಾರು ಕೂಡ ಸ್ವಯಂ ಪ್ರೇರಿತವಾಗಿ ನೆರವಿಗೆ ಮುಂದಾಗಿದ್ದು, ಅಲ್ಲಿನ ರಕ್ಷಣೆಯಲ್ಲಿ ತೊಡಗಿದ್ದಾರೆ.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...