ಈರುಳ್ಳಿ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು

ಆ ಸಂದರ್ಭದಲ್ಲಿ ಈರುಳ್ಳಿ ಖರೀದಿಸಲು ಸಾಂಬಯ್ಯ ಎಂಬ 56 ವರ್ಷದ ವ್ಯಕ್ತಿಯೂ ಸಹ ಸರತಿ ಸಾಲಿನಲ್ಲಿ ನಿಂತಿದ್ದರು. ತುಂಬಾ ಸಮಯದಿಂದ ನಿಂತು ಸುಸ್ತಾಗಿದ್ದರಿಂದ ಇದ್ದಕ್ಕಿದ್ದಂತೆ ಆ ವ್ಯಕ್ತಿ ಕುಸಿದು ಬಿದ್ದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಅಮರಾವತಿ(ಡಿ.09): ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಗ್ರಾಹಕರು ಈರುಳ್ಳಿ ಕತ್ತರಿಸುವ ಮುನ್ನವೇ ಅಂದರೆ ಖರೀದಿ ಮಾಡುವಾಗ ಕಣ್ಣೀರು ಸುರಿಸುವಂತಾಗಿದೆ. ಬೆಲೆ ಏರಿಕೆಯಾಗಿದ್ದರೂ ಈರುಳ್ಳಿಗೆ ಅಧಿಕ ಬೇಡಿಕೆ ಇದೆ. ಕನಿಷ್ಠ120ರೂ. ನಿಂದ ಗರಿಷ್ಠ 180ರೂ.ವರೆಗೆ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆ ಕಡಿಮೆ ಇರುವುದರಿಂದ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈರುಳ್ಳಿ ಬೆಲೆ ಹೆಚ್ಚಾಗಿರುವುದರಿಂದ ಬಡವರ್ಗದ ಜನರಿಗೆ ಕೊಂಡುಕೊಳ್ಳಲು ಕಷ್ಟವಾಗುತ್ತಿದೆ. ಹೀಗಾಗಿ ಕೆಲವು ಕಡೆ ಸ್ವಯಂ ಸೇವಕರು ಅಥವಾ ಸಂಘಸಂಸ್ಥೆಗಳು ಕಡಿಮೆ ದರದಲ್ಲಿ ಬಡವರಿಗೆ ಈರುಳ್ಳಿ ಮಾರಾಟ ಮಾಡುತ್ತಿದ್ಧಾರೆ.

ಗಗನಕ್ಕೇರಿರುವ ಈರುಳ್ಳಿ ಬರೀ ಕಣ್ಣೀರನ್ನು ಮಾತ್ರ ಬರಿಸದೆ ವ್ಯಕ್ತಿಯ ಜೀವವನ್ನೇ ತೆಗೆದಿದೆ. ಹೌದು, ಇದು ಆಶ್ಚರ್ಯವೆನಿಸಿದರೂ ಸತ್ಯ. ಈರುಳ್ಳಿ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದ 56 ವರ್ಷದ ವ್ಯಕ್ತಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಘಟನೆ ಆಂಧ್ರಪ್ರದೇಶದ ಅಮರಾವತಿಯ ಕೃಷ್ಣ ಜಿಲ್ಲೆಯಲ್ಲಿ ನಡೆದಿದೆ.

ಸಿನಿಮಾ ಎನ್​ಕೌಂಟರ್ ನೋಡಿ ಚಪ್ಪಾಳೆ ತಟ್ಟುತ್ತೇವೆ, ನಿಜಜೀವನದಲ್ಲಿ ಮಾಡಿದರೆ ಪ್ರಶ್ನೆ ಮಾಡುತ್ತೇವೆ; ಆಂಧ್ರ ಸಿಎಂ ಜಗನ್

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮಾರುಕಟ್ಟೆಯೊಂದರಲ್ಲಿ (ರಿತು ಬಜಾರ್​​) ಸೋಮವಾರ ಸರ್ಕಾರದ ವತಿಯಿಂದ ಸಬ್ಸಿಡಿ ದರದಲ್ಲಿ 1 ಕೆ.ಜಿ ಈರುಳ್ಳಿಯನ್ನು 25 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಈ ವೇಳೆ ಈರುಳ್ಳಿ ಖರೀದಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಬೆಲೆ ಕಡಿಮೆ ಇದ್ದುದ್ದರಿಂದ ಈರುಳ್ಳಿ ಖರೀದಿಗೆ ಜನಸಾಗರವೇ ಹರಿದು ಬಂದಿತ್ತು. ಸರತಿ ಸಾಲಿನಲ್ಲಿ ನಿಂತು ಗ್ರಾಹಕರು ಈರುಳ್ಳಿ ಖರೀದಿ ಮಾಡುತ್ತಿದ್ದರು.

ಆ ಸಂದರ್ಭದಲ್ಲಿ ಈರುಳ್ಳಿ ಖರೀದಿಸಲು ಸಾಂಬಯ್ಯ ಎಂಬ 56 ವರ್ಷದ ವ್ಯಕ್ತಿಯೂ ಸಹ ಸರತಿ ಸಾಲಿನಲ್ಲಿ ನಿಂತಿದ್ದರು. ತುಂಬಾ ಸಮಯದಿಂದ ನಿಂತು ಸುಸ್ತಾಗಿದ್ದರಿಂದ ಇದ್ದಕ್ಕಿದ್ದಂತೆ ಆ ವ್ಯಕ್ತಿ ಕುಸಿದು ಬಿದ್ದರು. ಕೂಡಲೇ ಸ್ಥಳೀಯರು ಆ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲು ಮುಂದಾದರು. ಆದರೆ ಮಾರ್ಗಮಧ್ಯೆದಲ್ಲೇ ಸಾಂಬಯ್ಯ ಮೃತಪಟ್ಟಿದ್ದರು. ಬಳಿಕ ವೈದ್ಯರು ಸಾಂಬಯ್ಯ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದರು.

ಸಿದ್ದರಾಮಯ್ಯ ಜ್ಯೋತಿಷ್ಯಾಲಯ ಬಂದ್ ಆಗಿದೆ, ರೇವಣ್ಣನವರ ನಿಂಬೆ ಹಣ್ಣು ಕೂಡ ಪತ್ತೆ ಇಲ್ಲ; ಆರ್​.ಅಶೋಕ್​ ವ್ಯಂಗ್ಯ

ಈ ವಿಷಯವನ್ನು ತೆಲುಗು ದೇಶಂ ಪಾರ್ಟಿ(ಟಿಡಿಪಿ) ವಿಧಾನಸಭೆಯಲ್ಲಿ ಎತ್ತಲು ಪ್ರಯತ್ನಿಸಿದರೂ ಅದಕ್ಕೆ ಅನುಮತಿ ಸಿಕ್ಕಿಲ್ಲ ಎನ್ನಲಾಗಿದೆ. "ವ್ಯಕ್ತಿಯ ಸಾವಿನ ಬಗ್ಗೆ ಸರ್ಕಾರ ಏಕೆ ಹೇಳಿಕೆ ನೀಡಲಿಲ್ಲ," ಎಂದು ಟಿಡಿಪಿ ಅಧ್ಯಕ್ಷ ಎನ್​. ಚಂದ್ರಬಾಬು ನಾಯ್ಡು ಪ್ರಶ್ನಿಸಿದ್ದಾರೆ.

ವ್ಯಕ್ತಿ ಈರುಳ್ಳಿ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾನೆ. ಸರ್ಕಾರ ಆ ವ್ಯಕ್ತಿಯ ಸಾವಿನ ಬಗ್ಗೆ ಏಕೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಚಂದ್ರಬಾಬು ನಾಯ್ಡು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಜನರ ಮನೆ ಬಾಗಿಲಿಗೆ ವಿವಿಧ ಸೇವೆಗಳನ್ನು ಒದಗಿಸಲು ಸರ್ಕಾರ ನೇಮಿಸಿದ ಗ್ರಾಮ ಸ್ವಯಂಸೇವಕರು ಈರುಳ್ಳಿ ತಲುಪಿಸುವಲ್ಲಿ ಏಕೆ ವಿಫಲರಾಗಿದ್ದಾರೆ ಎಂದು ಅವರು ಕೇಳಿದ್ದಾರೆ.

ಮುಸ್ಲಿಮರ ಪೌರತ್ವರಹಿತ ಹುನ್ನಾರ ಇದರಲ್ಲಿ ಅಡಗಿದೆ; ಲೋಕಸಭೆಯಲ್ಲಿ ಮಸೂದೆ ಪ್ರತಿ ಹರಿದುಹಾಕಿದ ಸಂಸದ ಓವೈಸಿ
First published: