ಲೈಂಗಿಕ ಕ್ರಿಯೆ ವೇಳೆ ಹಾರ್ಟ್​ ಅಟ್ಯಾಕ್; ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ಕೋರ್ಟ್​ ಆದೇಶ!

ಎಂ. ಕ್ಸೇವಿಯರ್ 2013ರಲ್ಲಿ ಸೆಕ್ಯುರಿಟಿ ಟೆಕ್ನಿಷಿಯನ್ ಆಗಿ ಲಾಯ್ರೆಟ್​ನ ಇಂಜಿನಿಯರಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಬ್ಯುಸಿನೆಸ್​ ಟ್ರಿಪ್​ಗೆಂದು ಹೋಗಿದ್ದ ಕ್ಸೇವಿಯರ್ ರಾತ್ರಿ ತನ್ನ ಸಹೋದ್ಯೋಗಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಹೃದಯಾಘಾತ ಸಂಭವಿಸಿತ್ತು.

Sushma Chakre | news18-kannada
Updated:September 13, 2019, 4:24 PM IST
ಲೈಂಗಿಕ ಕ್ರಿಯೆ ವೇಳೆ ಹಾರ್ಟ್​ ಅಟ್ಯಾಕ್; ಮೃತ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ಕೋರ್ಟ್​ ಆದೇಶ!
ಸಾಂದರ್ಭಿಕ ಚಿತ್ರ
  • Share this:
ಕಂಪನಿಯ ಸಹೋದ್ಯೋಗಿಗಳ ಜೊತೆ ಬ್ಯುಸಿನೆಸ್ ಟ್ರಿಪ್​ ಹೋಗಿದ್ದ ಫ್ರೆಂಚ್​ ಮೂಲದ ವ್ಯಕ್ತಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸಹೋದ್ಯೋಗಿಯ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿ ಮೃತಪಟ್ಟಿರುವ ಘಟನೆ ಲಂಡನ್​ನಲ್ಲಿ ನಡೆದಿದೆ.

ಫ್ರೆಂಚ್​ ಮೂಲದ ಎಂ. ಕ್ಸೇವಿಯರ್ ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿದವರು. ಇದು ಕೆಲಸದ ಸ್ಥಳದಲ್ಲಿ ನಡೆದ ಸಾವಾಗಿರುವುದರಿಂದ ಈ ಸಾವಿಗೆ ಪರಿಹಾರವಾಗಿ ಮೃತ ವ್ಯಕ್ತಿಯ ಕುಟುಂಬಕ್ಕೆ ಕಂಪನಿ ಪರಿಹಾರ ನೀಡಬೇಕೆಂದು ಪ್ಯಾರೀಸ್​ ಕೋರ್ಟ್​ ಆದೇಶಿಸಿದೆ.

ಎಂ. ಕ್ಸೇವಿಯರ್ 2013ರಲ್ಲಿ ಸೆಕ್ಯುರಿಟಿ ಟೆಕ್ನಿಷಿಯನ್ ಆಗಿ ಲಾಯ್ರೆಟ್​ನ ಇಂಜಿನಿಯರಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಬ್ಯುಸಿನೆಸ್​ ಟ್ರಿಪ್​ಗೆಂದು ಹೋಗಿದ್ದ ಕ್ಸೇವಿಯರ್ ರಾತ್ರಿ ತನ್ನ ಸಹೋದ್ಯೋಗಿಯ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಹೃದಯಾಘಾತ ಸಂಭವಿಸಿದ್ದು, ಹಾಸಿಗೆಯಲ್ಲೇ ಮೃತಪಟ್ಟಿದ್ದರು.

ಜಿರಲೆಯಿಂದ ಕೂಡ ಬರುತ್ತೆ ಅಸ್ತಮಾ: ಈ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

ಹೆಲ್ತ್​ ಇನ್ಷುರೆನ್ಸ್​ ಏಜೆನ್ಸಿ ಪ್ರಕಾರ, ಈ ಸಾವು ಕೆಲಸದ ಒತ್ತಡದಿಂದ ಸಂಭವಿಸಿದೆ. ಆದರೆ, ಈ ಆರೋಪವನ್ನು ತಳ್ಳಿ ಹಾಕಿರುವ ಕಂಪನಿ ಇದಕ್ಕೂ ತಮ್ಮ ಕಂಪನಿಗೂ ಸಂಬಂಧವಿಲ್ಲ ಎಂದು ಹೇಳಿದೆ. ಮಹಿಳೆಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಕ್ಸೇವಿಯರ್ ಸೆಕ್ಸ್​ ವೇಳೆ ಉಂಟಾದ ಮಾನಸಿಕ ಒತ್ತಡದಿಂದ ಮೃತಪಟ್ಟಿದ್ದಾರೆ ಎಂದು ಕಂಪನಿ ಪರ ವಕೀಲರು ವಾದಿಸಿದ್ದಾರೆ.

ಈ ಬಗ್ಗೆ ತೀರ್ಪು ನೀಡಿರುವ ಪ್ಯಾರಿಸ್ ಕೋರ್ಟ್ ಕೆಲಸದ ವೇಳೆಯಲ್ಲಿ ಸಾವು ಸಂಭವಿಸಿದೆಯೇ ಅಥವಾ ಕೆಲಸ ಮುಗಿಸಿ ಹೊರಗೆ ಹೋಗಿದ್ದಾಗ ಸಾವು ಸಂಭವಿಸಿದೆಯೇ ಎಂಬುದು ಮುಖ್ಯವಲ್ಲ. ಆತ ಬ್ಯುಸಿನೆಸ್ ಟ್ರಿಪ್​ಗೆ ಹೋಗಿದ್ದಾಗ ಮೃತಪಟ್ಟಿದ್ದಾರೆ. ಹೀಗಾಗಿ, ಪರಿಹಾರ ಮೊತ್ತವನ್ನು ಅವರ ಕುಟುಂಬಸ್ಥರಿಗೆ ನೀಡಬೇಕೆಂದು ಸೂಚಿಸಿದೆ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ