• Home
  • »
  • News
  • »
  • national-international
  • »
  • Murder Case: ಕೊಲೆ ಮಾಡದೆ ಇದ್ದರೂ, ತಾನೇ ಮಾಡಿದ್ದು ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ! ಕಾರಣವೇನಿರಬಹುದು?

Murder Case: ಕೊಲೆ ಮಾಡದೆ ಇದ್ದರೂ, ತಾನೇ ಮಾಡಿದ್ದು ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ ವ್ಯಕ್ತಿ! ಕಾರಣವೇನಿರಬಹುದು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಲ್ಲೊಬ್ಬ ವ್ಯಕ್ತಿ ತಾನು ಮಾಡದೆ ಇರುವ ಕೊಲೆಯನ್ನು ತಾನೇ ಮಾಡಿದ್ದೇನೆ ಎಂದು ಪೊಲೀಸರ ಬಳಿ ಖುದ್ದು ತಾನೇ ಹೋಗಿ ಹೇಳಿಕೊಂಡಿದ್ದಾನೆ ನೋಡಿ. ಅಬ್ಬಬ್ಬಾ.. ಇಂತಹವರು ಇರುತ್ತಾರಾ ಸಮಾಜದಲ್ಲಿ ಅಂತ ನಿಮಗೆ ಆಶ್ಚರ್ಯವಾಗುವುದು ಸುಳ್ಳಲ್ಲ

  • Share this:

ಎಷ್ಟೋ ಜನರು ತಾವು ಸೇಡು ತೀರಿಸಿಕೊಳ್ಳಬೇಕೆಂದು ಅಥವಾ ಕೋಪದಲ್ಲಿಯೋ ತಾವು ಒಬ್ಬ ವ್ಯಕ್ತಿಯ ಕೊಲೆ (Murder) ಮಾಡಿ, ನಂತರ ಅದನ್ನು ಮುಚ್ಚಿಟ್ಟುಕೊಳ್ಳಲು ಅನೇಕ ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಿ ಮತ್ತು ನ್ಯಾಯಾಲಯದಲ್ಲಿ (Court) ಅವರಿಂದ ಸುಳ್ಳುಗಳನ್ನು ಹೇಳಿಸಿ ಪೊಲೀಸರ (Police) ಮತ್ತು ನ್ಯಾಯಾಲಯದ ಕಣ್ಣಿಗೆ ಮಣ್ಣೆರಚೋ ಕೆಲಸ ಮಾಡೋ ಪ್ರಯತ್ನಗಳ ಬಗ್ಗೆ ಕೇಳಿದ್ದೇವೆ. ಇನ್ನೂ ಕೆಲವು ಜನರು ತಾವು ಮಾಡಿರುವ ಕೊಲೆಯ ಆಪಾದನೆಯನ್ನು ಒಪ್ಪಿಕೊಂಡು ತಮ್ಮ ಅರ್ಧ ಜೀವನವನ್ನು ಆ ನಾಲ್ಕು ಗೋಡೆಗಳ ಮಧ್ಯೆ ಜೈಲಿನಲ್ಲಿಯೇ (Jail) ಕಳೆದು ಬಿಡುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಆದರೆ ಇಂಥವರ ಪೈಕಿ ನಿಮಗೆ ತುಂಬಾ ಕಡಿಮೆ ಜನರು ತಾವು ಮಾಡದೇ ಇರುವ ಅಪರಾಧವನ್ನು ಯಾವ ಕಾರಣಕ್ಕೋ ಒಪ್ಪಿಕೊಂಡು ಶಿಕ್ಷೆ ಅನುಭವಿಸಲು ಸಿದ್ಧರಾಗಿರುವುದನ್ನು ನೋಡಲು ಕಾಣಸಿಗುತ್ತಾರೆ ಎಂದು ಹೇಳಬಹುದು. ಇಲ್ಲಿರುವ ವ್ಯಕ್ತಿಯ ಕಥೆಯೂ ಹೀಗೆ ಭಿನ್ನವಾಗಿದೆ ನೋಡಿ.


ಮಾಡದೆ ಇರುವ ಕೊಲೆಯನ್ನು ತಾನೇ ಮಾಡಿದ್ದೇನೆ ಪೊಲೀಸರ ಬಳಿ ಹೇಳಿದ ವ್ಯಕ್ತಿ
ಆದರೆ ಇಲ್ಲೊಬ್ಬ ವ್ಯಕ್ತಿ ತಾನು ಮಾಡದೆ ಇರುವ ಕೊಲೆಯನ್ನು ತಾನೇ ಮಾಡಿದ್ದೇನೆ ಎಂದು ಪೊಲೀಸರ ಬಳಿ ಖುದ್ದು ತಾನೇ ಹೋಗಿ ಹೇಳಿಕೊಂಡಿದ್ದಾನೆ ನೋಡಿ. ಅಬ್ಬಬ್ಬಾ.. ಇಂತಹವರು ಇರುತ್ತಾರಾ ಸಮಾಜದಲ್ಲಿ ಅಂತ ನಿಮಗೆ ಆಶ್ಚರ್ಯವಾಗುವುದು ಸುಳ್ಳಲ್ಲ. 45 ವರ್ಷದ ವ್ಯಕ್ತಿಯೊಬ್ಬ ತಾನು ಕೊಲೆ ಮಾಡಿರುವುದಾಗಿ ಮಂಗಳವಾರ ರಾತ್ರಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.


ಕಳೆದ ಎರಡು ವಾರಗಳಿಂದ ಬನ್ಸ್‌ದ್ರೋನಿ ಪೊಲೀಸ್ ಠಾಣೆ ವ್ಯಾಪ್ತಿಯ ನಿರಂಜನ್ ಪಲ್ಲಿಯಲ್ಲಿ ವಾಸಿಸುತ್ತಿದ್ದ ಸ್ನೇಹಶಿಸ್ ಚಕ್ರವರ್ತಿ ಎಂಬ ವ್ಯಕ್ತಿ ಮಂಗಳವಾರ ರಾತ್ರಿ 11.30 ರ ಸುಮಾರಿಗೆ ಪೊಲೀಸರ ಬಳಿಗೆ ಹೋಗಿ, ತನ್ನ 48 ವರ್ಷದ ಸಹೋದರ ದೇಬಶಿಶ್ ನನ್ನು ತಾನೇ ಕೈಯಾರ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ.


ಈತ ಹೀಗೆ ಹೇಳಲು ಕಾರಣವೇನು?
ಸ್ನೇಹಶಿಶ್ ಅವರು ತಮ್ಮ ಸಹೋದರ ಕಳೆದ ಒಂದು ವಾರದಿಂದ ತುಂಬಾನೇ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಹಾಸಿಗೆ ಹಿಡಿದಿದ್ದ ಎಂದು ಹೇಳಿದರು. ಅವರು ತುಂಬಾನೇ ಆರ್ಥಿಕ ಸಂಕಷ್ಟದಿಂದ ಸಹ ಕಷ್ಟ ಪಡುತ್ತಿದ್ದರು ಮತ್ತು ಅವರ ಸಹೋದರನಿಗೆ ಒಳ್ಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲು ಸಹ ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Police Dog: ಪೊಲೀಸ್ ಡಾಗ್​ಗೆ ಕಣ್ಣಿನ ಸಮಸ್ಯೆ, ಚೆನ್ನೈ ಟ್ರಿಪ್ ಅನುಮತಿಗೆ ಕಾಯುತ್ತಿದೆ ಶ್ವಾನ


ಆದ್ದರಿಂದ, ಅವನು ತನ್ನ ಸಹೋದರನ ನೋವನ್ನು ಕೊನೆಗೊಳಿಸಲು ದಿಂಬನ್ನು ಬಳಸಿ ಅವನನ್ನು ಉಸಿರುಗಟ್ಟಿಸಿದನು. ಆದಾಗ್ಯೂ, ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯು ಇದು ಕೊಲೆಯಲ್ಲ ಎಂದು ತೋರಿಸಿದೆ. ಇದು ಸೆರೆಬ್ರಲ್ ರಕ್ತಸ್ರಾವದಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತೋರಿಸಿದೆ.


ಈ ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಅವನ ಬಾಡಿಗೆ ಮನೆಗೆ ಧಾವಿಸಿದರು ಮತ್ತು ದೇಬಶಿಶ್ ಹಾಸಿಗೆಯ ಮೇಲೆ ಸತ್ತು ಬಿದ್ದಿರುವುದನ್ನು ಕಂಡರು. ಹೆಚ್ಚಿನ ತನಿಖೆ ಮುಂದುವರಿದಿದ್ದರೂ ಸಹ ಅವರು ತಕ್ಷಣಕ್ಕೆ ಸ್ನೇಹಶಿಶ್ ಅವರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದರು.


ಎರಡು ಹೊತ್ತಿನ ಊಟಕ್ಕೆ ಹೀಗೆ ಮಾಡಿರಬಹುದೇ?
ಬನ್ಸ್‌ದ್ರೋನಿ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಗಳಿಗೆ ಸ್ನೇಹಶಿಶ್ ಹೇಳಿದ್ದು ಒಂದು ಕಟ್ಟು ಕಥೆ ಎಂದು ಊಹಿಸಿದರು. ನಾವು ಸ್ಥಳಕ್ಕೆ ಭೇಟಿ ನೀಡಿ ದೇಬಶಿಶ್ ಅವರ ಮೃತ ದೇಹವನ್ನು ಪರಿಶೀಲಿಸಿದಾಗ, ದೇಹದ ಮೇಲೆ ಯಾವುದೇ ರೀತಿಯ ಕತ್ತು ಹಿಸುಕಿರುವುದು, ಉಸಿರುಗಟ್ಟಿಸಿರುವುದು ಮತ್ತು ಯಾವುದೇ ರೀತಿಯ ಸ್ಪಷ್ಟ ಲಕ್ಷಣಗಳು ಕಂಡು ಬಂದಿಲ್ಲ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: Mumbai Youth: 28 ಚೇಂಜ್​​ಗಾಗಿ ಆಟೋ ಹಿಂದೆ ಓಡಿ ಮೃತಪಟ್ಟ ವ್ಯಕ್ತಿ! ಸಂಬಂಧಿಗೆ 43 ಲಕ್ಷ ಪರಿಹಾರ


"ದಿನಕ್ಕೆ ಎರಡು ಹೊತ್ತಿನ ಊಟದೊಂದಿಗೆ ಜೈಲಿನಲ್ಲಿ ಬದುಕುಳಿಯಬಹುದು ಎಂದು ಸ್ನೇಹಶಿಶ್ ಯೋಜನೆ ಹಾಕಿಕೊಂಡಿರಬಹುದು ಎಂದು ಅವನ ಮಾತುಗಳಿಂದ ಸ್ಪಷ್ಟವಾಗಿ ತೋರುತ್ತದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅನುಮಾನಿಸಿದ್ದಾರೆ. ಅದೇ ಈ ವಿಷಯವಾಗಿ ಅಕ್ಕಪಕ್ಕದ ಮನೆಯವರನ್ನು ಪೊಲೀಸರು ವಿಚಾರಿಸಿದಾಗ ಅವರು ಪೊಲೀಸರಿಗೆ ಈ ಇಬ್ಬರೂ ಸಹೋದರರ ಮಧ್ಯೆ ಯಾವುದೇ ರೀತಿಯ ಜಗಳಗಳು ಇರಲಿಲ್ಲ, ಒಬ್ಬರಿಗೊಬ್ಬರು ತುಂಬಾನೇ ಇಷ್ಟ ಪಡುತ್ತಿದ್ದರು ಮತ್ತು ಅನೋನ್ಯವಾಗಿದ್ದರು ಎಂದು ತಿಳಿಸಿದರು.

Published by:Ashwini Prabhu
First published: