HOME » NEWS » National-international » MAN CLAIMS HE GOT MAGNETIC POWERS AFTER TAKING SECOND DOSE OF VACCINE KVD

Vaccine Magnetic Power: ಲಸಿಕೆ ಪಡೆದ ಬಳಿಕ ದೇಹಕ್ಕೆ ಅಂಟಿಕೊಳ್ಳುತ್ತಿವೆ ಪಾತ್ರೆಗಳು..ಏನಿದರ ಮರ್ಮ?

2 ಡೋಸ್​ ಕೊರೊನಾ ವ್ಯಾಕ್ಸಿನ್​ ಪಡೆದ ಬಳಿಕ ದೇಹ ಮ್ಯಾಗ್ನೆಟ್​​ನಂತೆ ಆಗಿದೆಯಂತೆ. ಲಸಿಕೆ ಪಡೆಯುವ ಮೊದಲು ಎಂದಿಗೂ ಈ ರೀತಿ ಆಗಿರಲಿಲ್ಲ. ಲಸಿಕೆ ಪಡೆದ ಬಳಿಕ ದೇಹಕ್ಕೆ ಕಬ್ಬಿಣದ ವಸ್ತುಗಳು ಮೆತ್ತಿಕೊಳ್ಳುತ್ತಿವೆಯಂತೆ.

Kavya V | news18-kannada
Updated:June 11, 2021, 7:04 PM IST
Vaccine Magnetic Power: ಲಸಿಕೆ ಪಡೆದ ಬಳಿಕ ದೇಹಕ್ಕೆ ಅಂಟಿಕೊಳ್ಳುತ್ತಿವೆ ಪಾತ್ರೆಗಳು..ಏನಿದರ ಮರ್ಮ?
ಮೈಗೆ ಅಂಟಿಕೊಳ್ಳುತ್ತಿರುವ ಕಬ್ಬಿಣದ ವಸ್ತುಗಳು
  • Share this:
ಎಲ್ಲೆಲ್ಲೂ ವ್ಯಾಕಿನೇಷನ್​​​ ಭರದಿಂದ ಸಾಗುತ್ತಿದ್ದು, ಜನ ಕೊರೊನಾ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಲಸಿಕೆ ಪಡೆದ ಬಳಿಕ ಸಾಮಾನ್ಯವಾಗಿ ಜ್ವರ, ತಲೆನೋವು ಕಾಣಿಸಿಕೊಳ್ಳುತ್ತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಲಸಿಕೆ ಪಡೆದ ಬಳಿಕ ದೇಹ ವಿಚಿತ್ರವಾಗಿ ಪ್ರತಿಕ್ರಿಯಿಸುತ್ತಿದೆ ಎಂದು ದೂರಿದ್ದಾರೆ. ಎರಡು ಡೋಸ್​ ಲಸಿಕೆ ಪಡೆದ ಬಳಿಕ ಇಡೀ ದೇಹ ಮ್ಯಾಗ್ನೆಟ್​​ನಂತೆ ಆಗಿದೆಯಂತೆ. ಲಸಿಕೆ ಪಡೆದ ಬಳಿಕ ಆಯಸ್ಕಾಂತೀಯ ಶಕ್ತಿ ಬಂದಿದೆ. ಇದರಿಂದ ಮನೆಯಲ್ಲಿನ ಕಬ್ಬಿಣದ ವಸ್ತುಗಳು ಮೈಗೆ ಅಂಟಿಕೊಟ್ಟಿತ್ತಿವೆ ಎಂದು ಆರೋಪಿಸಿದ್ದಾರೆ. ಮೈಗೆ ಕಬ್ಬಿಣದ ಸಾಮಾನುಗಳ ಅಂಟಿಕೊಂಡಿರುವುದಕ್ಕೆ ಸಾಕ್ಷ್ಯವಾಗಿ ವಿಡಿಯೋ ಮಾಡಿದ್ದು, ಆ ವಿಡಿಯೋ ವೈರಲ್​ ಆಗಿದೆ.

ಮಹಾರಾಷ್ಟ್ರದ ನಾಸಿಕ್​ನ ಹಿರಿಯ ನಾಗರೀಕರಾದ ಅರವಿಂದ್​​​ ಸೋನಾರ್​ ಎಂಬುವರು ಇಂಥ ವಿಚಿತ್ರವನ್ನು ಎದುರಿಸುತ್ತಿದ್ದಾರಂತೆ. 2 ಡೋಸ್​ ಕೊರೊನಾ ವ್ಯಾಕ್ಸಿನ್​ ಪಡೆದ ಬಳಿಕ ದೇಹ ಮ್ಯಾಗ್ನೆಟ್​​ನಂತೆ ಆಗಿದೆಯಂತೆ. ಲಸಿಕೆ ಪಡೆಯುವ ಮೊದಲು ಎಂದಿಗೂ ಈ ರೀತಿ ಆಗಿರಲಿಲ್ಲ. ಲಸಿಕೆ ಪಡೆದ ಬಳಿಕ ದೇಹಕ್ಕೆ ಕಬ್ಬಿಣದ ವಸ್ತುಗಳು ಮೆತ್ತಿಕೊಳ್ಳುತ್ತಿವೆ ಎಂದು ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಲಸಿಕೆ ಪಡೆದು ಮನೆಗೆ ಬಂದಾಗ ಲೋಟ, ಚಮಚ ಮೈಗೆ ಅಂಟಿಕೊಳ್ತು. ಬೆವರಿನಿಂದ ಹಾಗೆ ಆಗಿರಬಹುದು ಎಂದು ಭಾವಿಸಿದೆವು. ಅದಕ್ಕಾಗಿ ಸ್ನಾನ ಮಾಡಿದೆನು. ಸ್ನಾನ ಮಾಡಿದ ಬಳಿಕವೂ ವಸ್ತುಗಳು ದೇಹಕ್ಕೆ ಅಂಟಿಕೊಳ್ಳುತ್ತಿವೆ ಎಂದಿದ್ದಾರೆ. ವ್ಯಾಕ್ಸಿನ್​​ನಿಂದಲೇ ಹೀಗೆಲ್ಲಾ ಆಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.









View this post on Instagram






A post shared by Bol Bhidu (@bolbhidu)






ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಇಂಥಹ ಆಯಸ್ಕಾಂತೀಯ ಗುಣ ಬಂದಿರುವ ಘಟನೆಗಳು ನಡೆದಿಲ್ಲ. ಲಸಿಕೆಯಿಂದಲೇ ಅರವಿಂದ್​ ಅವರ ದೇಹ ಹೀಗೆ ಪ್ರತಿಕ್ರಿಯಿಸುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಕೊರೊನಾ ಲಸಿಕೆಯಿಂದಲೇ ಆಗಿದೆ ಎಂದು ಅಧ್ಯಯನದಿಂದ ಮಾತ್ರ ಹೇಳಲು ಸಾಧ್ಯ ಎಂದಿದ್ದಾರೆ. ಸದ್ಯ ಅರವಿಂದ ಸೋನಾರ್​ ಅವರ ದೇಹಕ್ಕೆ ನಾಣ್ಯಗಳು, ಚಮಚ ಅಂಟಿಕೊಂಡಿರುವ ವಿಡಿಯೋ ಎಲ್ಲೆಲ್ಲೂ ಹರಿದಾಡುತ್ತಿದೆ. ಲಸಿಕೆ ಬಗೆಗಿನ ಊಹಾಪೋಹಗಳನ್ನು ಹೆಚ್ಚಿಸುತ್ತಿದೆ.

ಇಂತಹದ್ದೇ ವಿಚಿತ್ರ ಪ್ರಕರಣ ರಾಜ್ಯದ ಹುಬ್ಬಳ್ಳಿ ಜಿಲ್ಲೆಯಲ್ಲೂ ವರದಿಯಾಗಿತ್ತು. ಕೋವಿಶೀಲ್ಡ್​​ ಲಸಿಕೆ ಪಡೆದ ಅಣ್ಣ-ತಂಗಿಯ ದೇಹದಲ್ಲಿ ವಿದ್ಯುತ್​ ಉತ್ಪಾದನೆ ಆಗುತ್ತಿದೆ. ಲಸಿಕೆ ಪಡೆದ ಸ್ಥಳದಲ್ಲಿ ಬಲ್ಬ್​​ ಹಿಡಿದರೆ ಬೆಳಗುತ್ತದೆ ಎಂದು ವದಂತಿ ಹಬ್ಬಿತ್ತು. ಆದರೆ ಇದು ಅಸತ್ಯ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದರು. ದೇಶಾದ್ಯಂತ ಲಸಿಕೆಯ ಸುತ್ತಮುತ್ತ ಅನೇಕ ವಿಚಿತ್ರ ಮಿಥ್ಯಗಳು ಹುಟ್ಟಿಕೊಂಡಿವೆ. ಎಲ್ಲಾ ವಿಷಯಗಳನ್ನು ನಂಬುವ ಮುನ್ನ ಪ್ರಜ್ಞಾವಂತರಾಗಿ ಯೋಚಿಸಬೇಕಿದೆ.

ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ಸ್ಥಳದಲ್ಲಿ ಬಲ್ಬ್ ಬೆಳಗಿದ ಪ್ರಕರಣಕ್ಕೆ ಟ್ವಿಸ್ಟ್: ಬಯಲಾಯ್ತು ಅಸಲಿ ಸತ್ಯ..!

ಇನ್ನು ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿದ್ದು, ಲಸಿಕೆ ಅಭಿಯಾನ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈವರೆಗೂ ಕೇಂದ್ರದಿಂದ ರಾಜ್ಯಗಳಿಗೆ 25.60 ಕೋಟಿ ಡೋಸ್ ಹಂಚಿಕೆಯಾಗಿದೆ. ಈವರೆಗೂ 24.44 ಕೋಟಿ ಡೋಸ್ ಬಳಕೆಯಾಗಿದೆ. ರಾಜ್ಯಗಳಲ್ಲಿ ಸದ್ಯ 1.17 ಕೋಟಿ ಡೋಸ್ ಬಳಕೆಗೆ ಲಭ್ಯವಿದೆ. ಇನ್ನು ಮೂರು ದಿನಗಳಲ್ಲಿ 38 ಲಕ್ಷ ಡೋಸ್ ಹಂಚಿಕೆಯಾಗಕಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 11, 2021, 7:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories