Gorakhpur: ‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಾ ದೇವಸ್ಥಾನ ಪ್ರವೇಶಕ್ಕೆ ಯತ್ನ, ಇಬ್ಬರು ಪೊಲೀಸರ ಮೇಲೆ ಹಲ್ಲೆ

ಪೊಲೀಸರ ಪ್ರಕಾರ, ಆರೋಪಿ " ಅಲ್ಲಾಹು ಅಕ್ಬರ್ " ಎಂಬ ಧಾರ್ಮಿಕ ಘೋಷಣೆಯನ್ನು ಕೂಗುತ್ತಾ ದೇವಾಲಯದ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದನು. ಆರೋಪಿ ಹರಿತವಾದ ಆಯುಧದೊಂದಿಗೆ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸಿದ್ದರಿಂದ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ

ಆರೋಪಿ (ಫೋಟೋ NDTV ಕೃಪೆ)

ಆರೋಪಿ (ಫೋಟೋ NDTV ಕೃಪೆ)

  • Share this:
ಲಖನೌ:  ‘ಅಲ್ಲಾಹು ಅಕ್ಬರ್’ (Allahu Akbar) ಎಂದು ಕೂಗುತ್ತಾ ಬಲವಂತವಾಗಿ ಹಿಂದೂ ದೇವಸ್ಥಾನವನ್ನು (Gorakhnath temple) ಪ್ರವೇಶಿಸಲು ಯತ್ನಿಸಿದವನನ್ನು ತಡೆಯಲು ಪೊಲೀಸರು ಮುಂದಾದಾಗ ಆತ ಪೊಲೀಸರ ಮೇಳೆ ಮಚ್ಚಿನಿಂದ ದಾಳಿ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಗೋರಖ್‌ಪುರ (Gorakhpur) ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಪೇದೆಗಳ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ ವ್ಯಕ್ತಿಯನ್ನು ಉತ್ತರ ಪ್ರದೇಶ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಗೋರಖ್‌ನಾಥ್ ದೇವಸ್ಥಾನದ ದಕ್ಷಿಣ ದ್ವಾರದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ವರದಿಯಾಗಿದೆ. ಆರೋಪಿಯನ್ನು ಮುರ್ತಾಜಾ ಎಂದು ಗುರುತಿಸಲಾಗಿದ್ದು, ದೇವಸ್ಥಾನಕ್ಕೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ. ಪೊಲೀಸರ ಪ್ರಕಾರ, ಆರೋಪಿ " ಅಲ್ಲಾಹು ಅಕ್ಬರ್ " ಎಂಬ ಧಾರ್ಮಿಕ ಘೋಷಣೆಯನ್ನು ಕೂಗುತ್ತಾ ದೇವಾಲಯದ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದನು. ಆರೋಪಿ ಹರಿತವಾದ ಆಯುಧದೊಂದಿಗೆ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸಿದ್ದರಿಂದ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ ಎಂದು ಗೋರಖ್‌ಪುರ ವಲಯದ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಅಖಿಲ್ ಕುಮಾರ್ ತಿಳಿಸಿದ್ದಾರೆ.

ಭಯೋತ್ಪಾದನಾ ದಾಳಿ ಸಂಚು..?

ಗಾಯಗೊಂಡ ಕಾನ್‌ಸ್ಟೆಬಲ್‌ಗಳಾದ ಗೋಪಾಲ್ ಕುಮಾರ್ ಗೌರ್ ಮತ್ತು ಅನಿಲ್ ಪಾಸ್ವಾನ್ ಅವರಿಗೆ ಗುರು ಗೋರಖ್‌ನಾಥ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಿಆರ್‌ಡಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆರೋಪಿಯು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಾಥಮಿಕ ತನಿಖೆಯಲ್ಲಿ ಆತನ ಹೆಸರು ಮುರ್ತಾಜಾ ಮತ್ತು ಗೋರಖ್‌ಪುರದ ನಿವಾಸಿ ಎಂದು ತಿಳಿದುಬಂದಿದೆ ಎಂದು ಎಡಿಜಿ ತಿಳಿಸಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಾಗ್ಗೆ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಭಯೋತ್ಪಾದನಾ ದಾಳಿ ಸಂಚನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: ಬಿಹಾರ CM ಸ್ಥಾನಕ್ಕೆ ರಾಜೀನಾಮೆ ನೀಡ್ತಾರಾ ನಿತೀಶ್ ಕುಮಾರ್? ನಿಗೂಢ ಅರ್ಥದ ಟ್ವೀಟ್‌ನಿಂದ ಬಿಸಿ ಬಿಸಿ ಚರ್ಚೆ!

ಸಿಎಂ ಯೋಗಿ ಭೇಟಿ ನೀಡುವ ದೇವಸ್ಥಾನ   

ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗೋರಖ್‌ಪುರದ ಗೋರಖ್‌ನಾಥ್ ದೇವಸ್ಥಾನದಲ್ಲಿ ಪೊಲೀಸ್ ಪೇದೆಗಳ ಮೇಲೆ ನಡೆದ ದಾಳಿಯ ಘಟನೆಯ ತನಿಖೆ ನಡೆಸಲಿದೆ.  ಭಾನುವಾರ, ವ್ಯಕ್ತಿಯೊಬ್ಬರು ಗೋರಖ್‌ಪುರದ ಗೋರಖನಾಥ ದೇವಾಲಯದ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದವನನ್ನು ತಡೆಯಲು ಯತ್ನಿಸಿದ ಇಬ್ಬರು ಕಾನ್‌ಸ್ಟೆಬಲ್‌ಗಳ ಮೇಲೆ ಹಲ್ಲೆ ನಡೆಸಿದ್ದಾನೆ. ದಾಳಿಕೋರನನ್ನು ಅಹ್ಮದ್ ಮುರ್ತಾಜಾ ಅಬ್ಬಾಸಿ ಎಂದು ಗುರುತಿಸಲಾಗಿದ್ದು, ಸುಮಾರು ಹತ್ತು ನಿಮಿಷಗಳ ಕಾಲ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯನ್ನು ಹೆದರಿಸಿದ್ದಾನೆ.  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖನಾಥ ದೇವಾಲಯದ ಪ್ರಧಾನ ಅರ್ಚಕ (ಮಹಾಂತ್) ಆಗಿದ್ದಾರೆ. ಇಲ್ಲಿ ವೈಯಕ್ತಿಕ ವಸತಿಯನ್ನೂ ಹೊಂದಿದ್ದಾರೆ. ದಾಳಿ ವೇಳೆ ಸಿಎಂ ಯೋಗಿ ದೇವಸ್ಥಾನದಲ್ಲಿ ಇರಲಿಲ್ಲ.

ಆರೋಪಿ ಮುರ್ತಾಜಾ ಗೋರಖ್‌ಪುರದ ನಿವಾಸಿಯಾಗಿದ್ದು, 2015ರಲ್ಲಿ ಪ್ರತಿಷ್ಠಿತ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)-ಬಾಂಬೆಯಲ್ಲಿ ಪದವಿ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಬಳಿ ಲ್ಯಾಪ್‌ಟಾಪ್, ಫೋನ್ ಮತ್ತು ಟಿಕೆಟ್ ಪತ್ತೆಯಾಗಿದೆ.
Published by:Kavya V
First published: