Viral Video; ರೋಲರ್ ಕೋಸ್ಟರ್​ನಲ್ಲಿ ಪ್ರಯಾಣಿಸುವ ವೇಳೆ 130 ಕಿಮೀ ವೇಗದಲ್ಲಿ ಈತ ಹಿಡಿದ ಕ್ಯಾಚ್ ಇಂದು ವಿಶ್ವದಾದ್ಯಂತ ವೈರಲ್!

ಸ್ಯಾಮ್ಯುವೆಲ್ ಕೆಂಪ್ ಮೂಲತಃ ಕ್ರೀಡಾಪಟುವಾಗಿದ್ದು, ಪಿಸ್ಟ್​ಪಾಲಿಂಕ್ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸುವ ಸಲುವಾಗಿ ಸ್ಪೇನ್​ಗೆ ಆಗಮಿಸಿದ್ದರು. ಕುಟುಂಬ ಸಮೇತರಾಗಿ ಸಮಯ ಕಳೆಯಲೆಂದು ಅವರು ಇಲ್ಲಿನ ಪೋರ್ಟ್ ಅವೆಂಟುರಾ ಥೀಮ್ ಪಾರ್ಕ್​ಗೆ ತೆರಳಿದ್ದಾರೆ. ಈ ವೇಳೆ ರೋಲರ್ ಕೋಸ್ಟರ್​ನಲ್ಲಿ ಪ್ರಯಾಣ ಮಾಡುವಾಗ ಈ ಘಟನೆ ಸಂಭವಿಸಿದೆ.

MAshok Kumar | news18-kannada
Updated:September 9, 2019, 4:59 PM IST
Viral Video; ರೋಲರ್ ಕೋಸ್ಟರ್​ನಲ್ಲಿ ಪ್ರಯಾಣಿಸುವ ವೇಳೆ 130 ಕಿಮೀ ವೇಗದಲ್ಲಿ ಈತ ಹಿಡಿದ ಕ್ಯಾಚ್ ಇಂದು ವಿಶ್ವದಾದ್ಯಂತ ವೈರಲ್!
ರೋಲರ್​ ಕೋಸ್ಟರ್​ನಲ್ಲಿ ಕುಳಿತಿದ್ದ ವೇಳೆ ಮೊಬೈಲ್ ಕ್ಯಾಚ್​ ಹಿಡಿದಿರುವ ದೃಶ್ಯ.
MAshok Kumar | news18-kannada
Updated: September 9, 2019, 4:59 PM IST
ನ್ಯೂಜಿಲೆಂಡ್ ದೇಶದ ಓರ್ವ ವ್ಯಕ್ತಿ ಮಿಂಚಿನ ವೇಗದಲ್ಲಿ ಹಿಡಿದ ಕ್ಯಾಚ್ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇಲ್ಲಿನ ತಿಮರುವಾಕ್ ಪ್ರದೇಶದ ನಿವಾಸಿ ಸ್ಯಾಮ್ಯುವೆಲ್ ಕೆಂಪ್ ಎಂಬಾತ ಸ್ಪೇನ್​ ನ ಅಮ್ಯೂಸ್ಮೆಂಟ್ ಥೀಮ್ ಪಾರ್ಕ್​ನಲ್ಲಿ ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುವ ರೋಲರ್ ಕೋಸ್ಟರ್ ನಲ್ಲಿ ಕುಳಿತಿದ್ದ ವೇಳೆ ಮತ್ತೋರ್ವ ಕೆಳಗೆ ಬೀಳಿಸಿದ ಮೊಬೈಲ್ ಫೋನ್ ಅನ್ನು ಮಿಂಚಿನ ವೇಗದಲ್ಲಿ ಕ್ಯಾಚ್ ಹಿಡಿದಿದ್ದಾರೆ. ಈ ದೃಶ್ಯ ವಿಡಿಯೋದಲ್ಲಿ ದಾಖಲಾಗಿದ್ದು ಯೂಟ್ಯೂಬ್​ನಲ್ಲಿ ಈವರೆಗೆ ಸುಮಾರು 4 ಮಿಲಿಯನ್ ಜನ ಇದನ್ನು ವೀಕ್ಷಿಸಿದ್ದಾರೆ. ಅಲ್ಲದೆ, ವಿಶ್ವದಾದ್ಯಂತ ಈ ವಿಡಿಯೋ ಇದೀಗ ವೈರಲ್ ಆಗಿದೆ.

ಸ್ಯಾಮ್ಯುವೆಲ್ ಕೆಂಪ್ ಮೂಲತಃ ಕ್ರೀಡಾಪಟುವಾಗಿದ್ದು, ಪಿಸ್ಟ್​ಪಾಲಿಂಕ್ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸುವ ಸಲುವಾಗಿ ಸ್ಪೇನ್​ಗೆ ಆಗಮಿಸಿದ್ದರು. ಕುಟುಂಬ ಸಮೇತರಾಗಿ ಸಮಯ ಕಳೆಯಲೆಂದು ಅವರು ಇಲ್ಲಿನ ಪೋರ್ಟ್ ಅವೆಂಟುರಾ ಥೀಮ್ ಪಾರ್ಕ್​ಗೆ ತೆರಳಿದ್ದಾರೆ. ಈ ವೇಳೆ ರೋಲರ್ ಕೋಸ್ಟರ್​ನಲ್ಲಿ ಪ್ರಯಾಣ ಮಾಡುವಾಗ ಈ ಘಟನೆ ಸಂಭವಿಸಿದೆ.



ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಯಾಮ್ಯುವೆಲ್, “ಎಲ್ಲರೂ ರೋಲರ್ ಕೋಸ್ಟರ್​ನಲ್ಲಿ ಕುಳಿತಿದ್ದ ವೇಳೆ ನನಗಿಂತ ಮುಂದೆ ಕುಳಿತಿದ್ದ ವ್ಯಕ್ತಿ ಜೇಬಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡು ಕುಳಿತಿದ್ದನ್ನು ನಾನು ಮುಂಚೆಯೇ ನೋಡಿದ್ದೆ. ರೋಲರ್​ನಲ್ಲಿ ವೇಗವಾಗಿ ಪ್ರಯಾಣಿಸುವಾಗ ಅದು ಆಯತಪ್ಪಿ ಬೀಳುವುದನ್ನು ಗಮನಿಸಿದ್ದೆ. ಹೀಗಾಗಿಯೇ ಅದನ್ನು ಹಿಡಿಯುವುದು ನನ್ನಿಂದ ಸಾಧ್ಯವಾಯಿತು" ಎಂದು ತಿಳಿಸಿದ್ದಾರೆ.
First published:September 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...