ಸೆಕೆಂಡ್ ಹ್ಯಾಂಡ್ ರೆಫ್ರಿಜಿರೇಟರ್ ಖರೀದಿಸಿ ಮನೆಗೆ ತಂದರೆ , ಅದರಲ್ಲಿತ್ತು 96 ಲಕ್ಷ ರೂಪಾಯಿ!

Viral News: ವ್ಯಕ್ತಿಯೊಬ್ಬ ಇತ್ತೀಚೆಗೆ ಖರೀದಿಸಿದ್ದ ರೆಫ್ರಿಜರೇಟರನ್ನು ಸ್ವಚ್ಛಗೊಳಿಸುತ್ತಿದ್ದಾಗ 96 ಲಕ್ಷ ರೂಪಾಯಿ ಸಿಕ್ಕಿದ್ದು, ಆತ ಪೊಲೀಸರಿಗೆ ದೂರು ನೀಡಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

 ದಕ್ಷಿಣ ಕೊರಿಯಾದ ವ್ಯಕ್ತಿಯೊಬ್ಬ, ಮನೆಯಲ್ಲಿರುವ ತಿನಿಸುಗಳನ್ನು ತಣ್ಣಗಿರಿಸೋಣವೆಂದು ಫ್ರಿಡ್ಜ್ ಖರೀದಿಸಿ ತಂದರೆ, ಅದರೊಳಗೆ ಲಕ್ಷಾಂತರ ರೂಪಾಯಿಗಳು ಸಿಕ್ಕಿದ್ದು , ಸ್ವತಃ ಅವನ ಕಣ್ಣುಗಳೇ ತಂಪಾಗಿಬಿಟ್ಟಿವೆ! ಹೌದು, ಅದರೊಳಗಿತ್ತು 1,30,000 ಡಾಲರ್ . ವರದಿಗಳ ಪ್ರಕಾರ, ಆ ರೆಫ್ರಿಜರೇಟರನ್ನು ಖರೀದಿಸಿದ ವ್ಯಕ್ತಿ ದಕ್ಷಿಣ ಕೊರಿಯಾದ ಜೆಜು ದ್ವೀಪಕ್ಕೆ ಸೇರಿದವನು ಮತ್ತು ಅವನಿಗೆ ಆ ರೆಫ್ರಿಜರೇಟರಿನ ಕೆಳಗೆ ಅಷ್ಟೊಂದು ಹಣವನ್ನು ಟೇಪ್ ಮಾಡಿ ಇಡಲಾಗಿದೆ ಎಂದು ತಿಳಿದಿರಲಿಲ್ಲ. ಅವನು ಖರೀದಿಸಿ ತಂದಿದ್ದು ಹೊಚ್ಚ ಹೊಸ ಫ್ರಿಡ್ಜ್ ಅಲ್ಲ, ಬಳಸಲ್ಪಟ್ಟಿರುವ ಕಿಮ್ಚಿ ಫ್ರಿಡ್ಜ್, ಬಹುಶ: ಹಿಂದಿನ ಮಾಲೀಕರು ಆ ಹಣವನ್ನು ಇಟ್ಟಿರಬಹುದು ಅಥವಾ ಅದರ ಹಿನ್ನಲೆ ಏನು ಎಂಬುವುದು ಇನ್ನಷ್ಟೆ ತಿಳಿಯಬೇಕಿದೆ.


ಆ ವ್ಯಕ್ತಿ ತಾನು ಇತ್ತೀಚೆಗೆ ಕೊಂಡ ರೆಫ್ರಿಜರೇಟರನ್ನು ಸ್ವಚ್ಛಗೊಳಿಸುತ್ತಿದ್ದಾಗ ತನಗೆ ಆ 96 ಲಕ್ಷ ರೂಪಾಯಿ ಸಿಕ್ಕಿತು ಎಂದು ಆಗಸ್ಟ್ 6ರಂದು ದೂರು ಸಲ್ಲಿಸಿದ್ದ ಎಂದು ಪೊಲೀಸರು ಮಾಧ್ಯಮಗಳಿಗೆ  ತಿಳಿಸಿದ್ದಾರೆ.


ವರದಿಗಳ ಪ್ರಕಾರ, ಅಷ್ಟು ಮೊತ್ತದ ಹಣವನ್ನು ಪ್ಲಾಸ್ಟಿಕ್ ಶೀಟ್‍ಗಳಲ್ಲಿ ಸುತ್ತಿ ಮತ್ತು ಟೇಪ್ ಅಂಟಿಸಿ ಫ್ರೀಡ್ಜನ ತಳಭಾಗದಲ್ಲಿ ಇಡಲಾಗಿತ್ತು. ಅವು 50,000 ವಾನ್‍ನ ನೋಟ್ ಬಂಡಲ್‍ಗಳಾಗಿದ್ದವು.


ಅದನ್ನು ಕಂಡಿದ್ದೇ ಆ ವ್ಯಕ್ತಿ, ಅಷ್ಟೂ ಹಣವನ್ನು ಪೊಲೀಸರಿಗೆ ಒಪ್ಪಿಸಿದ. ಆನ್‍ಲೈನ್‍ನಲ್ಲಿ ರೆಫ್ರಿಜರೇಟರ್ ಮಾರಿದ ವ್ಯಕ್ತಿಯನ್ನು ಹುಡುಕಲು ತನಿಖೆಗೆ ಆದೇಶ ನೀಡಲಾಗಿದೆ. ಅದು ದೊಡ್ಡ ಮೊತ್ತದ ಹಣವಾಗಿತ್ತು. ಇದು ಅಸಂಬದ್ಧ ಪ್ರಕರಣ ಏಕೆಂದರೆ ನಮ್ಮ ಮುಂದೆ ಇಂತಹ ಪ್ರಕರಣಗಳು ಬರುವುದು ತೀರಾ ಅಪರೂಪ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


 ಇದನ್ನೂ ಓದಿ: ಪಾರ್ಸಿ ಹೊಸ ವರ್ಷದ ಇತಿಹಾಸ ಮತ್ತು ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು?


ಫ್ರಿಡ್ಜ್‌ನಲ್ಲಿ ಹಣ ಕಂಡ ವ್ಯಕ್ತಿ ಅದನ್ನು ಪೊಲೀಸರಿಗೆ ಒಪ್ಪಿಸಿದ್ದರೂ, ಆತ ಅದನ್ನು ವಾಪಸ್ ಪಡೆಯುವ ಸಾಧ್ಯತೆಗಳು ಇವೆ. ಏಕೆಂದರೆ, ದಕ್ಷಿಣ ಕೊರಿಯಾದ ಲೋಸ್ಟ್ ಅಂಡ್ ಫೌಂಡ್ ಆ್ಯಕ್ಟ್ ಪ್ರಕಾರ, ವಸ್ತುವಿನ ಮಾಲೀಕ ಸಿಗದಿದ್ದರೆ, ಆ ವಸ್ತು ಯಾರ ಕೈಗೆ ಸಿಕ್ಕಿತ್ತೋ ಅವರಿಗೆ ಸೇರುತ್ತದೆ. ಅಂತಹ ಸಂದರ್ಭದಲ್ಲಿ ಆ ವ್ಯಕ್ತಿ 22 ಶೇಕಡಾ ತೆರಿಗೆ ಮೊತ್ತ ಪಾವತಿಸಿ, ಉಳಿದ ಹಣವನ್ನು ತನ್ನದಾಗಿಸಿಕೊಳ್ಳಬಹುದು. ಒಂದು ವೇಳೆ ರೆಫ್ರಿಜರೇಟರಿನ ಹಿಂದಿನ ಮಾಲೀಕ ಸಿಕ್ಕರೂ, ಈಗಿನ ಮಾಲೀಕನಿಗೆ ಪರಿಹಾರ ಮೊತ್ತ ಕೊಡಿಸುವುದಾಗಿ ಭರವಸೆ ನೀಡಲಾಗಿದೆ. ಆದರೆ ಆ ಹಣ ಯಾವುದಾದರೂ ಅಪರಾಧಕ್ಕೆ ಸಂಬಂಧಿಸಿದ್ದಾದರೆ ಅದು ಯಾರಿಗೂ ಸಹ ಸಿಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಆಸಕ್ತಿದಾಯಕ ವಿಷಯವೆಂದರೆ, 2016ರ ಒಂದು ವರದಿಯ ಪ್ರಕಾರ, ಬ್ಯಾಂಕ್ ಬಡ್ಡಿದರ ಕಡಿಮೆ ಇದ್ದ ಕಾರಣದಿಂದ, ದಕ್ಷಿಣ ಕೊರಿಯಾದಲ್ಲಿ ಹಣವನ್ನು ಕಿಮ್ಚಿ ಫ್ರಿಡ್ಜ್‌ನ ಕೆಳಗೆ ಸಂಗ್ರಹಿಸಿಡುವ ಟ್ರೆಂಡ್ ಅಲ್ಲಿ ಆರಂಭವಾಗಿತ್ತು ಎನ್ನಲಾಗಿದೆ.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: