ಸಾಮಾನ್ಯವಾಗಿ ಕದಿಯಲು ಬಂದ ಕಳ್ಳನ ಕಣ್ಣು ಮೊದಲು ಬೀಳುವುದು ಬೆಲೆ ಬಾಳುವ ವಸ್ತುಗಳ ಮೇಲೆ ಅಥವಾ ಆಭರಣಗಳ ಮೇಲೆ. ಆದರೆ ಇಲ್ಲೊಬ್ಬ ಕಳ್ಳತನ ಮಾಡಲೆಂದು ಮನೆ ಹೊಕ್ಕಿದ ಕಳ್ಳನ ಕಣ್ಣು ಬಿದ್ದಿದ್ದು ಮಾತ್ರ ಷಾಂಪೆನ್ ಬಾಟಲಿಯೊಂದರ ಮೇಲೆ.
ಮುಂಬೈನ ಮೆರೈನ್ ಡ್ರೈವ್ ಪ್ರದೇಶದಲ್ಲಿನ ಗಿರಿಕುಂಜ್ ಕಟ್ಟಡದಲ್ಲಿ ಈ ಘಟನೆ ನಡೆದಿದೆ. 19 ವರ್ಷದ ಸಂಜೀವ್ ವರ್ಮ ಎಂಬಾತ ಮೂರನೆ ಮಹಡಿಯಲ್ಲಿನ ಸಿದ್ಧಾರ್ಥ್ ಸಬೂ ಎಂಬವರ ಮನೆಗೆ ಕದಿಯಲು ಹೊಂಚು ಹಾಕಿದ್ದ. ಹಾಗಾಗಿ ಯಾರು ಇಲ್ಲದ ವೇಳೆ ಬಾಲ್ಕನಿ ಮೂಲಕ ಮನೆ ಪ್ರವೇಶ ಮಾಡುತ್ತಾನೆ.
ಆದರೆ, ಮನೆಯ ಒಳಗೆ ಪ್ರವೇಶಿಸಿದ ಕಳ್ಳನ ಕಣ್ಣಿಗೆ ಮೊದಲು ಬಿದ್ದಿದ್ದು 2 ಷಾಂಪೇನ್ ಬಾಟಲಿಗಳು. ಹೀಗಾಗಿ ಕಳ್ಳತನವನ್ನು ಮರೆತ ಸಂಜೀವ್ 2 ಶಾಂಪೇನ್ ಬಾಟಲಿಯನ್ನು ಕುಡಿದು ಮುಗಿಸುತ್ತಾನೆ.
ಮಾತ್ರವಲ್ಲದೆ ಕುಡಿದ ನಶೆಯಲ್ಲಿ ಅಲ್ಲಿಯೇ ಮಲಗಿದ್ದಾನೆ. ಕುಡಿದ ಅಮಲಿನಲ್ಲಿ ಕಳ್ಳ ನಿದ್ರೆಯ ಮಂಪರಿಗೆ ಜಾರಿದ್ದಾನೆ. ಈ ವೇಳೆ ಮನೆ ಕೆಲಸಕ್ಕೆ ಮಹಿಳೆಗೆ ಬಾಗಿಲು ತೆಗೆಯಲು ಮುಂದಾದಾಗ ಮನೆ ಒಳಗಿನಿಂದ ಬಾಗಿಲು ಹಾಕಿರುವುದು ಗೊತ್ತಾಗಿದೆ. ನಂತರ ಸಿದ್ಧಾರ್ಥ್ ಸಬೂಗೆ ತಿಳಿಸುತ್ತಾರೆ.
ಈ ವಿಚಾರ ಕೇಳಿ ಫ್ಲಾಟ್ಗೆ ಬಂದ ಸಿದ್ಧಾರ್ಥ್ ಮನೆಯ ಬಾಗಿಲಿನ ಬೀಗ ಒಡೆಯುತ್ತಾರೆ. ಈ ವೇಳೆ ಕಳ್ಳ ಮಂಚದ ಮೇಲೆ ಮಲಗಿರುವುದು ಕಂಡಿದ್ದಾರೆ. ತಕ್ಷಣ ಈ ವಿಚಾರವನ್ನು ಪೋಲಿಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.
ಸಿದ್ಧರ್ಥ್ ಸಬೂ ಇತ್ತೀಚೆಗೆ ಗಿರಿಕುಂಜ್ ಬಿಲ್ಡಿಂಗ್ನಲ್ಲಿ 3ನೇ ಪ್ಲಾನ್ನಲ್ಲಿ ಹೊಸ ಮನೆಯನ್ನು ಖರೀದಿಸಿದ್ದರು. ಹಾಗಾಗಿ ತಮ್ಮ ಹಳೇಯ ಮನೆಯಿಂದ ವಸ್ತುಗಳನ್ನು ಹೊಸ ಮನೆಗೆ ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಕಳ್ಳ ಕದಿಯಲು ಪ್ಲಾನ್ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: 8 ವರ್ಷದ ಪ್ರೀತಿಗೆ ಕೂಡಿ ಬಂತು ಕಂಕಣ ಭಾಗ್ಯ; ಹಸೆಮಣೆ ಏರಲು ಸಜ್ಜಾದ ಭೀಷ್ಮ ಚಿತ್ರದ ನಾಯಕ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ