ಕಚ್ಚಿದ ವಿಷಕಾರಿ ಹಾವನ್ನ ಹಿಡಿದು ಕಚ್ಚಿದ; ಮುಂದಾಗಿದ್ದು ವಿಚಿತ್ರ
ಕಿಶೋರ್ ಬುಧವಾರ ರಾತ್ರಿಯಂದು ತನ್ನ ಭತ್ತದ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಹೊರಟಿದ್ದನು. ಈ ಸಮಯದಲ್ಲಿ ಹಾವೊಂದು ಆತನ ಕಾಲಿಗೆ ಕಚ್ಚಿದೆ. ಇದರಿಂದ ಕೋಪಗೊಂಡ ಆತ ಕಚ್ಚಿದ ಹಾವನ್ನು ಹಿಡಿದು ಅದಕ್ಕೆ ತನ್ನ ಬಾಯಿಯಿಂದ ಕಚ್ಚಿದ್ದಾನೆ.
ಖ್ಯಾತ ನಟ ವಿಷ್ಣುವರ್ಧನ್ ಅವರು ನಟಿಸಿದ ‘ನಾಗರಹಾವು’ ಸಿನಿಮಾದಲ್ಲಿ ಹಾವಿನ ದ್ವೇಷ 12 ವರುಷ ಎಂಬ ಹಾಡನ್ನು ಕೇಳಿರುತ್ತೀರಾ. S P ಬಾಲಸುಬ್ರಮಣ್ಯಂ ಈ ಹಾಡನ್ನು ಹಾಡಿದ್ದಾರೆ. ಆದರೆ ಇಲ್ಲೊಂದು ಘಟನೆ ಅದಕ್ಕೆ ಉಲ್ಪಾ ಎಂಬಂತಿದೆ. ವ್ಯಕ್ತಿಯೋರ್ವ ಕಚ್ಚಿದ ಹಾವಿನ ಮೇಲೆ ಸೇಡು ತೀರಿಸಲು ತಾನೂ ಕಚ್ಚಿದ್ದಾನೆ. ಪರಿಣಾಮ ಏನಾಗಿದೆ ಗೊತ್ತಾ?
ಒಡಿಶಾದ ಬಜ್ಪುರ್ ಜಿಲ್ಲೆಯ ಗಾಂಭರಿಪತಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹಾವನ್ನು ಕಚ್ಚಿದ ವ್ಯಕ್ತಿಯನ್ನು 45 ವರ್ಷದ ಬುಡಕಟ್ಟು ಜನಾಂಗದ ಕಿಶೋರ್ ಎಂದು ಗುರುತಿಸಲಾಗಿದೆ.
ಕಿಶೋರ್ ಬುಧವಾರ ರಾತ್ರಿಯಂದು ತನ್ನ ಭತ್ತದ ಗದ್ದೆಯಲ್ಲಿ ಕೆಲಸ ಮಾಡಿ ಮನೆಗೆ ಹೊರಟಿದ್ದನು. ಈ ಸಮಯದಲ್ಲಿ ಹಾವೊಂದು ಆತನ ಕಾಲಿಗೆ ಕಚ್ಚಿದೆ. ಇದರಿಂದ ಕೋಪಗೊಂಡ ಆತ ಕಚ್ಚಿದ ಹಾವನ್ನು ಹಿಡಿದು ಅದಕ್ಕೆ ತನ್ನ ಬಾಯಿಯಿಂದ ಕಚ್ಚಿದ್ದಾನೆ. ಪರಿಣಾಮ ಹಾವು ಸಾವನ್ನಪ್ಪಿದೆ.
ಈ ಬಗ್ಗೆ ಮಾತನಾಡಿದ ಕಿಶೋರ್, ನಾನು ರಾತ್ರಿ ಕಾಲ್ನಡಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದೆ. ಆಗ ನನ್ನ ಕಾಲಿಗೆ ಏನೋ ಕಚ್ಚಿದ ಅನುಭವವಾಯಿತು. ನಾನು ಟಾರ್ಚ್ ಆನ್ ಮಾಡಿ ನೋಡಿದಾಗ ಅದು ವಿಷಕಾರಿ ಕಟ್ಟು ಹಾವು ಎಂದು ತಿಳಿಯಿತು. ಸೇಡು ತೀರಿಸಿಕೊಳ್ಳಲು ನಾನು ಹಾವನ್ನು ಹಿಡಿದು ಪದೇ ಪದೇ ಕಚ್ಚಿದೆ. ಹಾವು ಸ್ಥಳದಲ್ಲಿ ಸಾವನ್ನಪ್ಪಿತು ಎಂದು ಹೇಳಿದ್ದಾನೆ.
ನಂತರ ಸತ್ತ ಹಾವನ್ನು ಮನೆಗೆ ಹಿಡಿದುಕೊಂಡು ಬಂದು ಹೆಂಡತಿ ಬಳಿ ನಡೆದ ಘಟನೆ ವಿವರಿಸಿದ್ದಾನೆ. ಕಿಶೋರ್ ಹಾವು ಕಚ್ಚಿತ್ತೆಂದು ಆಸ್ಪತ್ರೆಗೆ ಹೋಗಲಿಲ್ಲ. ಬದಲಾಗಿ ನೆರೆಯ ಹಳ್ಳಿ ವೈದ್ಯರ ಬಳಿ ಹೋಗಿ ಮದ್ದು ಮಾಡಿದ್ದಾನೆ.
ಕಿಶೋರ್ ವಿಷಕಾರಿ ಹಾವನ್ನು ಕಚ್ಚಿದರು ಅಸ್ವಸ್ಥಗೊಂಡಿಲ್ಲ. ಗುಣಮುಖವಾದವಂತರ ಕಿಶೋರ್ ತನ್ನ ಸ್ನೇಹಿತರಿಗೆ ಸತ್ತ ಹಾವನ್ನು ತೋರಿಸಿದ್ದಾನೆ ಎಂದು ತಿಳಿದು ಬಂದಿದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ