• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Viral News: ಹಾವಿನ ತಲೆ ಕಚ್ಚಿ ತುಂಡರಿಸಿ ವಿಕೃತಿ ಮೆರೆದ ಪಾಪಿಗಳು! ಸೋಷಿಯಲ್ ಮೀಡಿಯಾದಲ್ಲಿ ಹೀರೋ ಆಗಲೂ ಹೀಗೂ ಮಾಡ್ತಾರಾ?

Viral News: ಹಾವಿನ ತಲೆ ಕಚ್ಚಿ ತುಂಡರಿಸಿ ವಿಕೃತಿ ಮೆರೆದ ಪಾಪಿಗಳು! ಸೋಷಿಯಲ್ ಮೀಡಿಯಾದಲ್ಲಿ ಹೀರೋ ಆಗಲೂ ಹೀಗೂ ಮಾಡ್ತಾರಾ?

ಹಾವನ್ನು ಕೊಂದವರು

ಹಾವನ್ನು ಕೊಂದವರು

ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಜೀವಂತ ಹಾವಿನ ತಲೆಯನ್ನ ಕಚ್ಚುತ್ತಿದ್ದಾನೆ. ಆತನ ಇಬ್ಬರು ಸ್ನೇಹಿತರು ಹಾವಿನ ತಲೆ ಕತ್ತರಿಸೋಣ ಎನ್ನುತ್ತಿದ್ದಾರೆ. ಜೊತೆಗೆ ಮೂವರೂ ಹಾವಿಗೆ ಹಿಂಸೆ ಕೊಡುವ ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

 • News18 Kannada
 • 3-MIN READ
 • Last Updated :
 • Chennai, India
 • Share this:

ಚೆನ್ನೈ: ನಾವು ಸಾಮಾನ್ಯವಾಗಿ ಹಾವು (Snake) ಮನುಷ್ಯರಿಗೆ ಕಚ್ಚಿದ ಸುದ್ದಿಯನ್ನು ಆಗಾಗ ಕೇಳ್ತಾ ಇರುತ್ತೇವೆ. ಆದರೆ ಮನುಷ್ಯ ಹಾವಿಗೆ ಕಚ್ಚಿರುವ ವಿಲಕ್ಷಣ ಸುದ್ದಿಯನ್ನು ಕೇಳಿದ್ದೀರಾ? ಹೌದು, ಆಶ್ಚರ್ಯವಾದರೂ ಇದು ಸತ್ಯ. ತನಗೆ ಕಚ್ಚಿದ ಹಾವಿನ ಮೇಲೆ ಸೇಡು ತೀರಿಸಿಕೊಳ್ಳಲು, ಹಾವಿನ ತಲೆಯನ್ನು ಕಚ್ಚಿ, ತುಂಡರಿಸಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಆ ಘಟನೆಯನ್ನು ವಿಡಿಯೋ (Video) ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿಬಿಟ್ಟಿದ್ದಾರೆ. ಈ ಆಘಾತಕಾರಿ ಘಟನೆ ತಮಿಳುನಾಡಿನ (Tamil Nadu) ಅರಕ್ಕೋಣಂನಲ್ಲಿ ನಡೆದಿದೆ. ಪರಿಸರವಾದಿಗಳು ಪೊಲೀಸರ ಗಮನಕ್ಕೆ ತಂದಿದ್ದು, ಮೂವರನ್ನ ಬಂಧಿಸಲಾಗಿದೆ.


ಜೀವಂತ ಹಾವನ್ನು ಕಚ್ಚಿದ ಹಾವು


ವರದಿಗಳ ಪ್ರಕಾರ, ತಮಿಳುನಾಡಿನ ಅರಕ್ಕೋಣಂನಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಕೈನೂರು ನಿವಾಸಿಗಳಾದ ಮೋಹನ್, ಸೂರ್ಯ ಮತ್ತು ಸಂತೋಷ್ ಎಂಬ ಮೂವರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಜೀವಂತ ಹಾವಿನ ತಲೆಯನ್ನ ಕಚ್ಚುತ್ತಿದ್ದಾನೆ. ಆತನ ಇಬ್ಬರು ಸ್ನೇಹಿತರು ಹಾವಿನ ತಲೆ ಕತ್ತರಿಸೋಣ ಎನ್ನುತ್ತಿದ್ದಾರೆ. ಜೊತೆಗೆ  ಮೂವರೂ ಹಾವಿಗೆ ಹಿಂಸೆ ಕೊಡುವ ಸಂಪೂರ್ಣ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.


ಸೇಡು ತೀರಿಸಿಕೊಳ್ಳಲು ಕೃತ್ಯ


ಈ ವಿಡಿಯೋದಲ್ಲಿ ಮೋಹನ್ ಹಾವನ್ನು ಹಿಡಿದುಕೊಂಡಿದ್ದಾನೆ. ಹಾವು ನನಗೆ ಕಚ್ಚಿದೆ ಎಂದು ಆತ ಹೇಳಿಕೊಂಡಿದ್ದು, ತಾನೂ ಅದಕ್ಕೆ ಕಚ್ಚಿ ಸೇಡು ತೀರಿಸಿಕೊಳ್ಳುತ್ತೇನೆ ಎಂದು ತಾನೂ ಹಾವನ್ನು ಕಚ್ಚಿ ಹಿಂಸಿಸಿದ್ದಾನೆ. ಈ ಸಂಪೂರ್ಣ ವೀಡಿಯೊವನ್ನು ಅವರ ಇಬ್ಬರು ಸ್ನೇಹಿತರು ರೆಕಾರ್ಡ್ ಮಾಡಿದ್ದಾರೆ.


ಇದನ್ನೂ ಓದಿ: Crime News: ತಮ್ಮನ ಕಪಾಳಕ್ಕೆ ಹೊಡೆದ ಯುವಕನ ಕೊಂದೇ ಬಿಟ್ಟ ಅಣ್ಣ! ಅಷ್ಟಕ್ಕೂ ಆಗಿದ್ದೇನು ಗೊತ್ತಾ?


ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ದುರುಳರು


ಹಾವನ್ನು ಹಿಂಸಿಸಿದಲ್ಲದೆ, ಅದನ್ನು ವಿಡಿಯೋ ಮಾಡಿದ್ದಾರೆ. ಫೇಸ್​ಬುಕ್​ನಲ್ಲಿ ಲೈಕ್‌ಗಳನ್ನು ಪಡೆದುಕೊಳ್ಳಲು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ನಂತರ ಪರಿಸರ ಕಾರ್ಯಕರ್ತರು ಈ ಬಗ್ಗೆ ವನ್ಯಜೀವಿ ಅಪರಾಧ ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಶಂಕಿತರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಕಾಡು ಪ್ರಾಣಿಗಳಿಗೆ ತೊಂದರೆ ಕೊಡುವುದು ಮತ್ತು ಸಾವಿಗೆ ಕಾರಣವಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹಾವು ಕಚ್ಚಿದ್ದಕ್ಕೆ ತಿರುಗಿ ಕಚ್ಚಿದ  12ರ ಬಾಲಕ


ಈ ಹಿಂದೆ ಛತ್ತೀಸ್​ಗಢದ ಜಶ್‌ಪುರ ಜಿಲ್ಲೆಯಲ್ಲೂ ತನಗೆ ಕಚ್ಚಿದ ಹಾವಿಗೆ ಬಾಲಕನೊಬ್ಬ ತಿರುಗಿ ಕಚ್ಚಿದ್ದ. ಆ ಘಟನೆಯಲ್ಲೂ ಹಾವು ಸಾವನ್ನಪ್ಪಿದೆ. ಬುಡಕಟ್ಟು ಜನಾಂಗದ 12 ವರ್ಷದ ದೀಪಕ್​ ಎಂಬ ಬಾಲಕ ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಸಹೋದರಿಯ ಮನೆಗೆ ಹೋಗಿದ್ದ. ಈ ವೇಳೆ ಆಟವಾಡುತ್ತಿದ್ದಾಗ ಆತನ ಕೈಗೆ ಹಾವು ಕಚ್ಚಿದೆ.


ಇದನ್ನೂ ಓದಿ: Pregnant Woman: ಹೊಟ್ಟೆಯಲ್ಲಿ ಗಡ್ಡೆ ಇದ್ದ ಮಹಿಳೆಯನ್ನು ಗರ್ಭಿಣಿ ಅಂತ ಘೋಷಿಸಿದ ಡಾಕ್ಟರ್! 8 ತಿಂಗಳ ಬಳಿಕ ಬಯಲಾಯ್ತು ರಹಸ್ಯ


ಬಾಲಕನ ಕಡಿತಕ್ಕೆ ಸತ್ತ ಹಾವು


ಹಾವು ತನ್ನ ಕೈ ಕಚ್ಚಿದ್ದರಿಂದ ಕೋಪಗೊಂಡ ಬಾಲಕ ಅದೇ ಹಾವನ್ನು ಹಿಡಿದುಕೊಂಡು ಹಲ್ಲುಗಳಿಂದ ಎರಡು ಬಾರಿ ಗಟ್ಟಿಯಾಗಿ ಕಚ್ಚಿದ್ದಾನೆ. ಇದರಿಂದ ಹಾವಿನ ಚರ್ಮ ಕಿತ್ತು ಬಂದಿದ್ದು, ತಕ್ಷಣ ಸಾವನ್ನಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.


ಇನ್ನು ಹಾವು ದೀಪಕ್​ ಕೈಗೆ ಹಾವು ಕಚ್ಚಿದ ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಆತನ ಸಹೋದರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಆತನ ಪ್ರಾಣ ಉಳಿಸಿದ್ದಾರೆ. ವಿಚಿತ್ರವೆಂದರೆ ಈ ಭಾಗದಲ್ಲಿ ಹಾವು ಕಚ್ಚಿದ ತಕ್ಷಣ ಮನುಷ್ಯರೂ ಮರಳಿ ಹಾವಿಗೆ ಕಚ್ಚಿದರೆ ಬದುಕುತ್ತಾರೆ ಎಂಬ ಮೂಢನಂಬಿಕೆ ಇದೆ.

First published: