• Home
 • »
 • News
 • »
 • national-international
 • »
 • Kamal Hassan Car Attack: ಪ್ರಚಾರದ ವೇಳೆ ಮಕ್ಕಳ್ ನೀಧಿ ಮಯ್ಯಂ ಮುಖ್ಯಸ್ಥ-ನಟ ಕಮಲಹಾಸನ್ ಮೇಲೆ ದಾಳಿ

Kamal Hassan Car Attack: ಪ್ರಚಾರದ ವೇಳೆ ಮಕ್ಕಳ್ ನೀಧಿ ಮಯ್ಯಂ ಮುಖ್ಯಸ್ಥ-ನಟ ಕಮಲಹಾಸನ್ ಮೇಲೆ ದಾಳಿ

ಕಮಲಹಾಸನ್.

ಕಮಲಹಾಸನ್.

ಮೊದಲಿಗೆ ತಾನು ನಟ ಕಮಲ್ ಹಾಸನ್ ಅವರ ಅಭಿಮಾನಿ ಎಂದು ಪೊಲೀಸರ ಬಳಿ ಹೇಳಿದ ವ್ಯಕ್ತಿ, ಜನಸಂದಣಿಯಲ್ಲಿ ಕಾರು ಹಾದುಹೋಗುವಾಗ ಕಿಟಕಿ ತೆರೆದು ಹಲ್ಲೆ ನಡೆಸಲು ಪ್ರಯತ್ನಿಸಿದ್ದಾನೆ ಎನ್ನಲಾಗಿದೆ.

 • Share this:

  ಚೆನ್ನೈ (ಮಾರ್ಚ್​ 15); ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮದ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಲು ತೆರಳಿದ್ದ ವೇಳೆ ಅವರ ಮೇಲೆ ಕೆಲವು ಆಗಂತುಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅವರ ಕಾಲಿಗೆ ತೀವ್ರ ಪೆಟ್ಟಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇದೀಗ ತಮಿಳುನಾಡು ರಾಜಕಾರಣದಲ್ಲೂ ನಾಯಕರ ಮೇಲಿನ ಹಲ್ಲೆ ಸಂಪ್ರದಾಯ ಮುಂದುವರೆ ಯುತ್ತಿದೆ. ತಮಿಳುನಾಡಿನಲ್ಲೂ ಚುನಾವಣಾ ಪ್ರಚಾರ ಕಾವು ಪಡೆದಿದ್ದು, ನಟ ಮತ್ತು ಮಕ್ಕಳ್ ನೀಧಿ ಮಯ್ಯಂ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಕಮಲಹಾಸನ್ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ವ್ಯಕ್ತಿಯೋರ್ವ ಅವರ ಕಾರಿನ ಗಾಜನ್ನು ಒಡೆದು ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದ ಎಂಬ ಮಾಹಿತಿಗಳು ಇದೀಗ ಲಭ್ಯವಾಗುತ್ತಿದ್ದು, ದಾಳಿ ನಡೆಸಲು ಮುಂದಾಗಿದ್ದ ವ್ಯಕ್ತಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.


  ಕಮಲಹಾಸನ್​ ಚೆನ್ನೈ ಸನಿಹದ ಕಾಂಚೀಪುರಂ ಜಿಲ್ಲೆಯಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಕಾಂಚೀಪುರಂನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಂತರ ಚೆನೈಗೆ ಹಿಂತಿರುಗುತ್ತಿದ್ದಾಗ ನಟನ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದೆ. ಓರ್ವ ವ್ಯಕ್ತಿ ಅವರ ಕಾರಿನ ಕಿಟಕಿ ತೆರೆದು ಹಲ್ಲೆ ನಡೆಸಲು ಯತ್ನಿಸಿದನೆಂದು ಹೇಳಲಾಗಿದೆ. ಘಟನೆಯಲ್ಲಿ ನಟ ಕಮಲ್ ಹಾಸನ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.


  ಮೊದಲಿಗೆ ತಾನು ನಟ ಕಮಲ್ ಹಾಸನ್ ಅವರ ಅಭಿಮಾನಿ ಎಂದು ಪೊಲೀಸರ ಬಳಿ ಹೇಳಿದ ವ್ಯಕ್ತಿ, ಜನಸಂದಣಿಯಲ್ಲಿ ಕಾರು ಹಾದುಹೋಗುವಾಗ ಕಿಟಕಿ ತೆರೆದು ಹಲ್ಲೆ ನಡೆಸಲು ಪ್ರಯತ್ನಿಸಿದ್ದಾನೆ. ನಂತರ ಕುಡಿದ ಅಮಲಿನಲ್ಲಿದ್ದ ಈ ವ್ಯಕ್ತಿಯ ಮೇಲೆ ಕೆಲವು ಎಂಎನ್‌ಎಂ ಬೆಂಬಲಿಗರು ಮತ್ತು ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ. ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.  ಈ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿರುವ ಮಕ್ಕಳ್ ನೀಧಿ ಮಯ್ಯಂ ಪಕ್ಷದ ಕಾರ್ಯದರ್ಶಿ ಮತ್ತು ಮಾಜಿ ಐಪಿಎಸ್ ಅಧಿಕಾರಿ ಎ.ಜಿ.ಮೌರ್ಯ, "ಕಾಂಚೀಪುರಂ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನಮ್ಮ ನಾಯಕ ಕಮಲಹಾಸನ್ ಮೇಲೆ ಹಲ್ಲೆ ಯತ್ನ ನಡೆಸಲಾಗಿದೆ. ಅ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಆದರೆ, ಇಂತಹ ಘಟನೆಗಳಿಂದ ನಾವು ವಿಚಲಿತರಾಗುವುದಿಲ್ಲ" ಎಂದು ತಿಳಿಸಿದ್ದಾರೆ.


  ಇದನ್ನೂ ಓದಿ: Subramanian Swamy: ಎಲ್ಲಿಗೆ ಬಂತು ತಮಿಳುನಾಡಿನ ಬಿಜೆಪಿಯ ಸ್ಥಿತಿ?; ಕಿಡಿಕಾರಿದ ಸುಬ್ರಮಣಿಯನ್ ಸ್ವಾಮಿ


  ಮತ್ತೊಂದೆಡೆ ಬಂಧಿತ ವ್ಯಕ್ತಿಯ ವಿಚಾರಣೆ ನಡೆಸಿರುವ ಪೊಲೀಸ್​ ಅಧಿಕಾರಿಗಳು, "ಈ ವ್ಯಕ್ತಿಯು ಕಮಲಹಾಸನ್ ಅವರ ಅಭಿಮಾನಿಯಾಗಿದ್ದು, ಅವರಿಗೆ ಹಾನಿ ಮಾಡುವ ಯಾವುದೇ ಉದ್ದೇಶ ಆತನಿಗೆ ಇರಲಿಲ್ಲ. ಅಲ್ಲದೆ, ನಟ ರಾಜಕಾರಣಿ ಕಮಲಹಾಸನ್‌ಗೆ ಮತ್ತು ಅವರ ಕಾರಿಗೆ ಯಾವುದೇ ಹಾನಿಯಾಗಿಲ್ಲ" ಎಂದು ತಿಳಿಸಿದ್ದಾರೆ.


  ಕಮಲ್ ಹಾಸನ್ ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಏಪ್ರಿಲ್ 06 ಕ್ಕೆ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮೇ 02ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

  Published by:MAshok Kumar
  First published: