ಹೈದರಾಬಾದ್: ಮುಖಕ್ಕೆ ಮಾಸ್ಕ್ (Mask) ಹಾಕಿಕೊಂಡು ಕೈಯಲ್ಲಿ ಬಂದೂಕು (Gun) ಹಿಡಿದು, ನಾಲ್ಕೈದು ಮಂದಿ ಪುಂಡರು ಬ್ಯಾಂಕ್‌ಗೆ (Bank) ನುಗ್ಗಿ ಹೈಜಾಕ್ ಮಾಡುವ ಮೂಲಕ, ಕ್ಯಾಷಿಯರ್ ಪಾಯಿಂಟ್ ಖಾಲಿ ಜಾಗದಲ್ಲಿ ಗನ್ ಇಟ್ಟು ಬ್ಯಾಗಿಗೆ ಹಣವನ್ನೆಲ್ಲ ಅದರಲ್ಲಿ ಹಾಕುವಂತೆ ಬೆದರಿಸುತ್ತಿದ್ದರು. ಪೊಲೀಸರಿಗೆ (Police) ಹೇಳಲು ಮುಂದಾದರೆ ಗುಂಡು ಹಾರಿಸಿ ಕೊಲ್ಲಲು ಹಿಂದು ಮುಂದು ನೋಡುತ್ತಿರಲಿಲ್ಲ. ಇಂತದ್ದೆಲ್ಲಾ ಹಳೆಯ ಸಿನಿಮಾಗಳಲ್ಲಿ (Old Cinema) ನಡೆಯುತ್ತಿದ್ದವು. ಆದರೆ ಈಗ ಇಂತಹ ಘಟನೆಗಳು ತೀರಾ ವಿರಳ. ಏಕೆಂದರೆ ಈಗಿನ ತಂತ್ರಜ್ಞಾನ ಯುಗದಲ್ಲಿ ಕಣ್ಗಾವಲು ವ್ಯವಸ್ಥೆ ಅತ್ಯುತ್ತಮವಾಗಿದೆ. ಆದರೂ ಕೆಲವೂ ಪುಂಡರು ದುಡಿದು ತಿನ್ನುವ ಬದಲಿಗೆ ದರೋಡೆ ಮಾಡುವ ಪ್ರಕರಣಗಳು ಹಾಗಾಗ್ಗೆ ಕೇಳಿಬರುತ್ತಿವೆ. ಆದರೆ ಅದೇ ರೀತಿ ಬ್ಯಾಂಕ್ನಲ್ಲಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಆತ ಬಾಂಬ್ ಕಟ್ಟಿಕೊಂಡು ಬ್ಯಾಂಕ್ ದರೋಡೆಗೆ ಮುಂದಾಗಿದ್ದ ಎನ್ನಲಾಗಿದೆ.
ಬಾಂಬ್ ಕಟ್ಟಿಕೊಂಡು ಬ್ಯಾಂಕ್ ಪ್ರವೇಶ
ಹೈದರಾಬಾದ್ನ ಜೀಡಿಮೆಟ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಆದರ್ಶ್ ಬ್ಯಾಂಕ್‌ಗೆ ವ್ಯಕ್ತಿಯೊಬ್ಬರು ದರೋಡೆ ಮಾಡಲು ನುಗ್ಗಿದ್ದಾನೆ. ಬ್ಯಾಂಕ್ ಒಳಗೆ ನುಗ್ಗಿದ ಆತ ಆತ್ಮಾಹುತಿ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅದರಂತೆ, ಅವನು ಬಾಂಬ್ ಸೆಟಪ್ ತೋರಿಸಿ ಬೆದರಿಸಿದ್ದಾನೆ.
ಆರೋಪಿ ಬಂಧನ
ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಜೀಡಿಮೆಟ್ಲ ಪೊಲೀಸರು ಬಾಂಬ್ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯ ಹೆಸರನ್ನು ಶಿವಾಜಿ ಎಂದು ಗುರುತಿಸಲಾಗಿದೆ. ಆತ ಯಾಕೆ ಹಾಗೆ ವರ್ತಿಸಿದ? ಆತನ ಮಾನಸಿಕ ಅಸ್ವಸ್ಥನೇ? ಅಥವಾ ನಿಜವಾಗಿಯೂ ಹಣ ಕದಿಯಲು ಸಂಚು ಮಾಡಿ ಬಂದಿದ್ದನೇ.? ಆತನಿಗೆ ಯಾರಾದರೂ ಬ್ರೈನ್ ವಾಶ್ ಮಾಡಿ ಈ ರೀತಿಯ ಕೆಲಸ ಮಾಡಲು ಪ್ರೋತ್ಸಾಹಿಸಿದ್ದಾರೆಯೇ ಎಂಬ ವಿವರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ